We launched the SVAMITVA Yojana to map houses and lands using drones, ensuring property ownership in villages: PM
January 18th, 06:04 pm
PM Modi distributed over 65 lakh property cards under the SVAMITVA Scheme to property owners across more than 50,000 villages in over 230 districts across 10 states and 2 Union Territories. Reflecting on the scheme's inception five years ago, he emphasised its mission to ensure rural residents receive their rightful property documents. He expressed that the government remains committed to realising Gram Swaraj at the grassroots level.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ಸ್ವಾಮಿತ್ವ” ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು
January 18th, 05:33 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ 230 ಕ್ಕೂ ಹೆಚ್ಚು ಜಿಲ್ಲೆಗಳ ಸುಮಾರು 50000 ಕ್ಕೂ ಹೆಚ್ಚು ಹಳ್ಳಿಗಳ ಆಸ್ತಿ ಮಾಲೀಕರಿಗೆ “ಸ್ವಾಮಿತ್ವ”(ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಗ್ರಾಮಗಳ ಸಮೀಕ್ಷೆ ಮತ್ತು ನಕ್ಷೆ ರಚನೆ) ಯೋಜನೆಯಡಿ 65 ಲಕ್ಷಕ್ಕೂ ಹೆಚ್ಚು ಆಸ್ತಿ ಕಾರ್ಡ್‌ಗಳನ್ನು ವಿಡಿಯೊ ಸಮಾವೇಶ ಮೂಲಕ ವಿತರಿಸಿದರು. ಈ ಕಾರ್ಯಕ್ರಮದ ಸಂದರ್ಭದಲ್ಲಿ, “ಸ್ವಾಮಿತ್ವ” ಯೋಜನೆಗೆ ಸಂಬಂಧಿಸಿದ ಅನುಭವಗಳನ್ನು ತಿಳಿದುಕೊಳ್ಳಲು ಅವರು ಐದು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.ಸ್ವಾಮಿತ್ವ ಯೋಜನೆಯಡಿ 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 65 ಲಕ್ಷಕ್ಕೂ ಹೆಚ್ಚು ಆಸ್ತಿ ಕಾರ್ಡ್ ಗಳನ್ನು ವಿತರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
January 18th, 12:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 230 ಕ್ಕೂ ಹೆಚ್ಚು ಜಿಲ್ಲೆಗಳ 50,000 ಕ್ಕೂ ಹೆಚ್ಚು ಹಳ್ಳಿಗಳ ಆಸ್ತಿ ಮಾಲೀಕರಿಗೆ ಸ್ವಾಮಿತ್ವ ಯೋಜನೆಯಡಿ 65 ಲಕ್ಷಕ್ಕೂ ಹೆಚ್ಚು ಆಸ್ತಿ ಕಾರ್ಡ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ಭಾರತದ ಹಳ್ಳಿಗಳು ಮತ್ತು ಗ್ರಾಮೀಣ ಪ್ರದೇಶಗಳಿಗೆ ಚರಿತ್ರಾರ್ಹ ದಿನವಾಗಿದೆ ಎಂದರಲ್ಲದೆ ಈ ಸಂದರ್ಭದಲ್ಲಿ ಎಲ್ಲಾ ಫಲಾನುಭವಿಗಳು ಮತ್ತು ನಾಗರಿಕರಿಗೆ ಶುಭ ಕೋರಿದರು.ಪರಿವರ್ತಕ ಸ್ವಾಮಿತ್ವ ಯೋಜನೆಯ ಬಗ್ಗೆ ಮಾಹಿತಿಯ ಎಳೆಯನ್ನು ಹಂಚಿಕೊಂಡ ಪ್ರಧಾನಮಂತ್ರಿ
January 18th, 10:07 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪರಿವರ್ತಕ ಸ್ವಾಮಿತ್ವ ಯೋಜನೆಯ ಬಗ್ಗೆ ಮಾಹಿತಿಯ ಎಳೆಯನ್ನು ಹಂಚಿಕೊಂಡರು.ಸ್ವಾಮಿತ್ವ ಯೋಜನೆಯಡಿ 65 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಜನವರಿ 18 ರಂದು ಪ್ರಧಾನಮಂತ್ರಿ ಅವರಿಂದ ಆಸ್ತಿ ಕಾರ್ಡ್ ಗಳ ವಿತರಣೆ
January 16th, 08:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 18 ರಂದು ಮಧ್ಯಾಹ್ನ 12:30ರ ಸುಮಾರಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 230ಕ್ಕೂ ಹೆಚ್ಚು ಜಿಲ್ಲೆಗಳ 50000ಕ್ಕೂ ಹೆಚ್ಚು ಹಳ್ಳಿಗಳಲ್ಲಿನ ಆಸ್ತಿ ಮಾಲೀಕರಿಗೆ ಸ್ವಾಮಿತ್ವ ಯೋಜನೆಯಡಿ 65 ಲಕ್ಷಕ್ಕೂ ಹೆಚ್ಚು ಆಸ್ತಿ ಕಾರ್ಡ್ ಗಳನ್ನು ವಿತರಿಸಲಿದ್ದಾರೆ.ಸ್ವಾಮಿತ್ವ ಯೋಜನೆಯಡಿ ಆಸ್ತಿ ಮಾಲೀಕರಿಗೆ 50 ಲಕ್ಷಕ್ಕೂ ಹೆಚ್ಚು ಪ್ರಾಪರ್ಟಿ ಕಾರ್ಡ್ ವಿತರಿಸಲಿರುವ ಪ್ರಧಾನಮಂತ್ರಿ
December 26th, 04:50 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 200 ಜಿಲ್ಲೆಗಳ 46,000 ಕ್ಕೂ ಹೆಚ್ಚು ಗ್ರಾಮಗಳ ಆಸ್ತಿ ಮಾಲೀಕರಿಗೆ ಸ್ವಾಮಿತ್ವ (SVAMITVA) ಯೋಜನೆಯಡಿ 50 ಲಕ್ಷ ಪ್ರಾಪರ್ಟಿ ಕಾರ್ಡ್‌ಗಳನ್ನು ಡಿಸೆಂಬರ್ 27 ರಂದು ಮಧ್ಯಾಹ್ನ 12:30 ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿತರಿಸಲಿದ್ದಾರೆ.ಸುಪ್ರೀಂ ಕೋರ್ಟ್‌ನಲ್ಲಿ ಆಯೋಜಿತವಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
November 26th, 08:15 pm
ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಜಿ, ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಜಿ, ಸೂರ್ಕಕಾಂತ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ಅರ್ಜುನ್ ರಾಮ್ ಮೇಘವಾಲ್ ಜಿ, ಅಟಾರ್ನಿ ಜನರಲ್ ಶ್ರೀ ವೆಂಕಟರಮಣಿ ಜಿ, ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಜಿ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀ ಕಪಿಲ್ ಸಿಬಲ್ ಜಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ಮಾಜಿ ಮುಖ್ಯ ನ್ಯಾಯಮೂರ್ತಿಗಳು, ಇತರೆ ಗೌರವಾನ್ವಿತ ಅತಿಥಿಗಳು, ಗೌರವಾನ್ವಿತ ಮಹಿಳೆಯರು ಮತ್ತು ಮಹನೀಯರೇ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ವೋಚ್ಛ ನ್ಯಾಯಾಲಯದಲ್ಲಿ ನಡೆದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದರು
November 26th, 08:10 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಸರ್ವೋಚ್ಛ ನ್ಯಾಯಾಲಯದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಶ್ರೀ ಸಂಜೀವ್ ಖನ್ನಾ, ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಶ್ರೀ ಸೂರ್ಯಕಾಂತ್, ಕಾನೂನು ಮತ್ತು ನ್ಯಾಯ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್, ಭಾರತದ ಅಟಾರ್ನಿ ಜನರಲ್ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.Double engine govt of Madhya Pradesh is committed to the welfare of the people: PM Modi
February 29th, 04:07 pm
The Prime Minister, Shri Narendra Modi addressed the ‘Viksit Bharat Viksit Madhya Pradesh’ program today via video conferencing. During the programme, the Prime Minister laid the foundation stone and dedicated to the nation multiple development projects worth about Rs 17,000 crores across Madhya Pradesh. The projects cater to many important sectors including irrigation, power, road, rail, water supply, coal, and industry, among others. The Prime Minister also launched the Cyber Tehsil project in Madhya Pradesh.‘ವಿಕಸಿತ ಭಾರತ ವಿಕಸಿತ ಮಧ್ಯಪ್ರದೇಶ’ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
February 29th, 04:06 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ‘ವಿಕ್ಷಿತ್ ಭಾರತ್ ವಿಕ್ಷಿತ್ ಮಧ್ಯಪ್ರದೇಶ’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಮಧ್ಯಪ್ರದೇಶ ರಾಜ್ಯಾದ್ಯಂತ ಸುಮಾರು 17,000 ಕೋಟಿ ರೂಪಾಯಿ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಎಲ್ಲಾ ಯೋಜನೆಗಳು ನೀರಾವರಿ, ವಿದ್ಯುತ್, ರಸ್ತೆ, ರೈಲು, ನೀರು ಸರಬರಾಜು, ಕಲ್ಲಿದ್ದಲು ಮತ್ತು ಕೈಗಾರಿಕೆ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿವೆ. ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು ಮಧ್ಯಪ್ರದೇಶದಲ್ಲಿ ಸೈಬರ್ ತೆಹಸಿಲ್ ಯೋಜನೆಗೆ ಚಾಲನೆ ನೀಡಿದರು.ಮಧ್ಯಪ್ರದೇಶದ ಝಬುವಾದಲ್ಲಿ ಸುಮಾರು 7300 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ
February 11th, 07:35 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಜಬುವಾದಲ್ಲಿ ಸುಮಾರು 7300 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದರು. ಇಂದಿನ ಈ ಅಭಿವೃದ್ಧಿ ಯೋಜನೆಗಳು ಈ ಪ್ರದೇಶದಲ್ಲಿರುವ ಗಮನಾರ್ಹ ಸಂಖ್ಯೆಯ ಬುಡಕಟ್ಟು ಜನತೆಗೆ ಪ್ರಯೋಜನ ಒದಗಿಸುತ್ತವೆ, ನೀರು ಸರಬರಾಜು ಮತ್ತು ಕುಡಿಯುವ ನೀರು ಪೂರೈಕೆಯನ್ನು ಬಲಪಡಿಸುತ್ತವೆ. ಜೊತೆಗೆ, ಮಧ್ಯಪ್ರದೇಶದಲ್ಲಿ ರಸ್ತೆ, ರೈಲು, ವಿದ್ಯುತ್ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಉತ್ತೇಜನ ನೀಡುತ್ತವೆ. ಪ್ರಧಾನಮಂತ್ರಿಯವರು ʻವಿಶೇಷವಾಗಿ ಹಿಂದುಳಿದ ಬುಡಕಟ್ಟು ಜನಾಂಗʼದ ಸುಮಾರು 2 ಲಕ್ಷ ಮಹಿಳಾ ಫಲಾನುಭವಿಗಳಿಗೆ ʻಆಧಾರ್ ಅನುದಾನʼದ ಮಾಸಿಕ ಕಂತನ್ನು ವಿತರಿಸಿದರು, ʻಸ್ವಾಮಿತ್ವʼ ಯೋಜನೆಯ ಫಲಾನುಭವಿಗಳಿಗೆ 1.75 ಲಕ್ಷ ಹಕ್ಕುಪತ್ರಗಳನ್ನು ವಿತರಿಸಿದರು ಹಾಗೂ ʻಪ್ರಧಾನ ಮಂತ್ರಿ ಆದರ್ಶ ಗ್ರಾಮʼ ಯೋಜನೆಯಡಿ 559 ಗ್ರಾಮಗಳಿಗೆ 55.9 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದರು.ಫೆಬ್ರವರಿ 11 ರಂದು ಪ್ರಧಾನಮಂತ್ರಿಯವರು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ
February 09th, 05:25 pm
ಪ್ರಧಾನಮಂತ್ರಿಯವರು ಕೈಗೊಂಡ ಅನೇಕ ಉಪಕ್ರಮಗಳಿಗೆ ಅಂತ್ಯೋದಯ ದೃಷ್ಟಿಕೋನವು ಮಾರ್ಗದರ್ಶಿಯಾಗಿದೆ. ಸ್ವಾತಂತ್ರ್ಯದ ಹಲವಾರು ದಶಕಗಳ ನಂತರವೂ ಈ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗದ ಪ್ರಮುಖ ವಿಭಾಗಗಳಿಗೆ, ಬುಡಕಟ್ಟು ಸಮುದಾಯಕ್ಕೆ ಅಭಿವೃದ್ಧಿಯ ಪ್ರಯೋಜನಗಳು ತಲುಪುವುದನ್ನು ಖಾತ್ರಿಪಡಿಸುವುದು ಪ್ರಮುಖ ಕೇಂದ್ರೀಕೃತ ಕ್ಷೇತ್ರಗಳ ಯೋಜನೆಗಳಲ್ಲಿ ಒಂದಾಗಿದೆ. ಇದಕ್ಕೆ ಅನುಗುಣವಾಗಿ, ಈ ಪ್ರದೇಶದ ಗಮನಾರ್ಹ ಬುಡಕಟ್ಟು ಜನಸಂಖ್ಯೆಗೆ ಅನುಕೂಲವಾಗುವಂತಹ ಬಹು ಉಪಕ್ರಮಗಳನ್ನು ಪ್ರಧಾನಮಂತ್ರಿ ಸಮರ್ಪಿಸಲಿದ್ದಾರೆ ಮತ್ತು ಅಡಿಪಾಯ ಹಾಕಲಿದ್ದಾರೆ.ಮಧ್ಯಪ್ರದೇಶ, ಕೇರಳ, ದಾದ್ರಾ ಮತ್ತು ನಗರ್ ಹವೇಲಿ ಹಾಗೂ ಡಮನ್ ಮತ್ತು ಡಿಯುಗೆ ಏಪ್ರಿಲ್ 24 ಮತ್ತು 15ರಂದು ಭೇಟಿ ನೀಡಲಿರುವ ಪ್ರಧಾನಮಂತ್ರಿ
April 21st, 03:02 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಏಪ್ರಿಲ್ 24 ಮತ್ತು 25ರಂದು ಮಧ್ಯಪ್ರದೇಶ, ಕೇರಳ, ದಾದ್ರಾ ಮತ್ತು ನಗರ್ ಹವೇಲಿ ಹಾಗೂ ಡಮನ್ ಮತ್ತು ಡಿಯುಗೆ ಭೇಟಿ ನೀಡಲಿದ್ದಾರೆ.We should increase efforts to improve the ease of justice for the common citizen through AI: PM Modi
April 14th, 03:00 pm
PM Modi addressed the Platinum Jubilee Celebrations of the Guwahati High Court, stating that the High Court had it's own heritage and identity. He also launched the Assam Cop app which would facilitate accused and vehicle searches from the CCTNS and VAHAN national register.ಅಸ್ಸಾಂನ ಗುವಾಹಟಿಯ ಶ್ರೀಮಂತ ಶಂಕರದೇವ್ ಕಲಾಕ್ಷೇತ್ರದಲ್ಲಿ ಗುವಾಹಟಿ ಹೈಕೋರ್ಟ್ ನ ಅಮೃತ ಮಹೋತ್ಸವ ಆಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ
April 14th, 02:45 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಗುವಾಹಟಿಯ ಶ್ರೀಮಂತ ಶಂಕರದೇವ್ ಕಲಾಕ್ಷೇತ್ರದಲ್ಲಿ ಗುವಾಹಟಿ ಹೈಕೋರ್ಟ್ ನ ಅಮೃತ ಮಹೋತ್ಸವ ಆಚರಣೆಯ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಅಸ್ಸಾಂ ಪೊಲೀಸರು ವಿನ್ಯಾಸಗೊಳಿಸಿದ 'ಅಸ್ಸಾಂ ಕಾಪ್' ಮೊಬೈಲ್ ಅಪ್ಲಿಕೇಷನ್ ಗೆ ಚಾಲನೆ ನೀಡಿದರು. ಅಪರಾಧ ಮತ್ತು ಕ್ರಿಮಿನಲ್ ಜಾಲ ಪತ್ತೆ ವ್ಯವಸ್ಥೆ (ಸಿಸಿಟಿಎನ್ಎಸ್) ಮತ್ತು ವಾಹನ್ ರಾಷ್ಟ್ರೀಯ ನೋಂದಣಿ ದತ್ತಾಂಶದಿಂದ ಆರೋಪಿಗಳು ಮತ್ತು ವಾಹನ ಶೋಧಕ್ಕೆ ಈ ಆಪ್ ಅನುಕೂಲ ಮಾಡಿಕೊಡುತ್ತದೆ.ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳು ಈಗ ಆರ್ಥಿಕ ಚಟುವಟಿಕೆಗಳ ಕೇಂದ್ರವಾಗುತ್ತಿವೆ: ಪ್ರಧಾನಿ ಮೋದಿ
September 20th, 08:46 pm
ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಬಿಜೆಪಿಯ ಮೇಯರ್‌ಗಳು ಮತ್ತು ಉಪಮೇಯರ್‌ಗಳ ಕೌನ್ಸಿಲ್ ಅನ್ನು ಉದ್ದೇಶಿಸಿ ಮಾತನಾಡಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಅಹಮದಾಬಾದ್ ನಗರಕ್ಕಾಗಿ ಪುರಸಭೆಯ ಮೂಲಕ ಕೆಲಸ ಮಾಡುವುದರಿಂದ ಹಿಡಿದು ಉಪಪ್ರಧಾನಿಯಾಗುವವರೆಗಿನ ಪ್ರಯಾಣವನ್ನು ಎತ್ತಿ ತೋರಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು.ಗುಜರಾತ್‌ನಲ್ಲಿ ಬಿಜೆಪಿಯ ಮೇಯರ್‌ಗಳು ಮತ್ತು ಉಪಮೇಯರ್‌ಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
September 20th, 10:30 am
ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಬಿಜೆಪಿಯ ಮೇಯರ್‌ಗಳು ಮತ್ತು ಉಪಮೇಯರ್‌ಗಳ ಕೌನ್ಸಿಲ್ ಅನ್ನು ಉದ್ದೇಶಿಸಿ ಮಾತನಾಡಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಅಹಮದಾಬಾದ್ ನಗರಕ್ಕಾಗಿ ಪುರಸಭೆಯ ಮೂಲಕ ಕೆಲಸ ಮಾಡುವುದರಿಂದ ಹಿಡಿದು ಉಪಪ್ರಧಾನಿಯಾಗುವವರೆಗಿನ ಪ್ರಯಾಣವನ್ನು ಎತ್ತಿ ತೋರಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು.ಪಂಚಾಯತ್ ರಾಜ್ ದಿನದಂದು ಗ್ರಾಮಸಭೆಗಳನ್ನು ಉದ್ದೇಶಿಸಿ ಪ್ರಧಾನ ಮಂತ್ರಿಗಳ ಭಾಷಣ
April 24th, 11:31 am
ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ ಜಿ, ನನ್ನ ಸಂಪುಟ ಸಹೋದ್ಯೋಗಿ ಗಿರಿರಾಜ್ ಸಿಂಗ್ ಜಿ, ಈ ಮಣ್ಣಿನ ಮಗ ಮತ್ತು ನನ್ನ ಸಹೋದ್ಯೋಗಿ ಡಾ. ಜಿತೇಂದ್ರ ಸಿಂಗ್ ಜಿ, ಶ್ರೀ ಕಪಿಲ್ ಮೊರೇಶ್ವರ್ ಪಾಟೀಲ್ ಜಿ, ನನ್ನ ಸಂಸದೀಯ ಸಹೋದ್ಯೋಗಿ ಶ್ರೀ ಜುಗಲ್ ಕಿಶೋರ್ ಜಿ, ಜಮ್ಮು-ಕಾಶ್ಮೀರ ಸೇರಿದಂತೆ ಇಡೀ ದೇಶದಿಂದ ಸಂಪರ್ಕ ಹೊಂದಿರುವ ಪಂಚಾಯತ್ ರಾಜ್ ಸಂಸ್ಥೆಗಳ ಎಲ್ಲಾ ಸಾರ್ವಜನಿಕ ಪ್ರತಿನಿಧಿಗಳೆ, ಸಹೋದರ ಸಹೋದರಿಯರೆ!ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಆಚರಣೆಯಲ್ಲಿ ಭಾಗವಹಿಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ
April 24th, 11:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು `ರಾಷ್ಟ್ರೀಯ ಪಂಚಾಯತ್ ರಾಜ್ ದಿನ’ದ ಆಚರಣೆಯಲ್ಲಿ ಭಾಗವಹಿಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ದೇಶಾದ್ಯಂತದ ಎಲ್ಲಾ ಗ್ರಾಮ ಸಭೆಗಳನ್ನುದ್ದೇಶಿಸಿ ಮಾತನಾಡಿದರು. ಸಾಂಬಾ ಜಿಲ್ಲೆಯ ಪಲ್ಲಿ ಪಂಚಾಯಿತಿಗೆ ಭೇಟಿ ಅವರು ನೀಡಿದರು. ಸುಮಾರು 20,000 ಕೋಟಿ ರೂ.ಗಳ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಿದರು. ʻಅಮೃತ ಸರೋವರʼ ಯೋಜನೆಗೂ ಅವರು ಚಾಲನೆ ನೀಡಿದರು. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ, ಕೇಂದ್ರ ಸಚಿವರಾದ ಶ್ರೀ ಗಿರಿರಾಜ್ ಸಿಂಗ್, ಡಾ. ಜಿತೇಂದ್ರ ಸಿಂಗ್ ಮತ್ತು ಶ್ರೀ ಕಪಿಲ್ ಮೊರೇಶ್ವರ್ ಪಾಟೀಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಭಾರತದ ಹಳ್ಳಿಗಳ ಜನರ ಕಲ್ಯಾಣಕ್ಕಾಗಿ ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಳ್ಳುವುದೇ ನಮ್ಮ ಉತ್ತಮ ಆಡಳಿತದ ಪ್ರಯತ್ನಗಳ ಮೂಲ ಆಂಶವಾಗಿದೆ : ಪ್ರಧಾನಮಂತ್ರಿ
April 24th, 11:28 am
ಭಾರತದ ಹಳ್ಳಿಗಳ ಜನರ ಕಲ್ಯಾಣಕ್ಕಾಗಿ ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಳ್ಳುವುದೇ ನಮ್ಮ ಉತ್ತಮ ಆಡಳಿತದ ಪ್ರಯತ್ನಗಳ ಮೂಲ ಆಂಶವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇದಕ್ಕಾಗಿ ಸ್ವಮಿತ್ವ ಯೋಜನೆಯ ಉದಾಹರಣೆಯನ್ನು ಪ್ರಧಾನಮಂತ್ರಿಯವರು ನೀಡಿದ್ದಾರೆ ಮತ್ತು ಅದು ಉತ್ತಮ ಫಲಿತಾಂಶವನ್ನು ಕೂಡಾ ನೀಡಿದೆ.