ಗುಜರಾತ್ ನ ಗಾಂಧಿನಗರದಲ್ಲಿ ಭಾರತದ ಸುಜುಕಿಯ 40ನೇ ವರ್ಷದ ಸ್ಮರಣಾರ್ಥವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ

August 28th, 08:06 pm

ಗುಜರಾತ್ ನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಹರಿಯಾಣದ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್ ಜೀ, ಉಪ ಮುಖ್ಯಮಂತ್ರಿ ಶ್ರೀ ಕೃಷ್ಣ ಚೌಟಾಲಾ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಶ್ರೀ ಸಿ.ಆರ್. ಪಾಟೀಲ್, ಸುಜುಕಿ ಮೋಟಾರ್ ಕಾರ್ಪೊರೇಷನ್ ನ ಹಿರಿಯ ಅಧಿಕಾರಿಗಳೇ, ಭಾರತದಲ್ಲಿನ ಜಪಾನ್ ರಾಯಭಾರಿಯವರೇ, ಮಾರುತಿ-ಸುಜುಕಿಯ ಹಿರಿಯ ಅಧಿಕಾರಿಗಳೇ, ಇತರ ಎಲ್ಲ ಗಣ್ಯರು, ಮಹಿಳೆಯರು ಮತ್ತು ಮಹನೀಯರೇ!

ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿಂದು ಭಾರತದಲ್ಲಿ ಸುಜುಕಿಯ 40ನೇ ವರ್ಷಗಳ ಕಾರ್ಯಾಚರಣೆ, ಸ್ಮರಣಾರ್ಥ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ

August 28th, 05:08 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಭಾರತದಲ್ಲಿ ಸುಜುಕಿಯ 40 ವರ್ಷಗಳ ಕಾರ್ಯಾಚರಣೆ ಅಂಗವಾಗಿ ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಭಾರತದಲ್ಲಿನ ಜಪಾನ್ ರಾಯಭಾರಿ ಮಾನ್ಯ ಶ್ರೀ ಸತೋಶಿ ಸುಜುಕಿ, ಗುಜರಾತ್ ಮುಖ್ಯಮಂತ್ರಿ ಮಾನ್ಯ ಶ್ರೀ ಭೂಪೇಂದ್ರ ಪಟೇಲ್, ಸಂಸದ ಶ್ರೀ ಸಿ.ಆರ್.ಪಾಟೀಲ್, ರಾಜ್ಯ ಸಚಿವ ಶ್ರೀ ಜಗದೀಶ್ ಪಾಂಚಾಲ್, ಸುಜುಕಿ ಮೋಟಾರ್ ಕಾರ್ಪೊರೇಷನ್ ಮಾಜಿ ಅಧ್ಯಕ್ಷರಾದ ಶ್ರೀ ಒ. ಸುಜುಕಿ, ಸುಜುಕಿ ಮೋಟಾರ್ ಕಾರ್ಪೊರೇಷನ್ ಅಧ್ಯಕ್ಷ ಶ್ರೀ ಟಿ. ಸುಜುಕಿ ಮತ್ತು ಮಾರುತಿ-ಸುಜುಕಿಯ ಅಧ್ಯಕ್ಷ ಶ್ರೀ ಆರ್.ಸಿ ಭಾರ್ಗವ ಉಪಸ್ಥಿತರಿದ್ದರು. ಹರಿಯಾಣದ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು ಮತ್ತು ಜಪಾನಿನ ಪ್ರಧಾನ ಮಂತ್ರಿ ಮಾನ್ಯ ಶ್ರೀ ಫುಮಿಯೋ ಕಿಶಿದಾ ಅವರ ವೀಡಿಯೊ ಸಂದೇಶವನ್ನು ಸಹ ಪ್ರದರ್ಶಿಸಲಾಯಿತು.

ಸುಜುಕಿ ಮೋಟಾರ್ ಕಾರ್ಪೊರೇಶನ್‌ನ ಹಿರಿಯ ಸಲಹೆಗಾರ ಶ್ರೀ ಒಸಾಮು ಸುಜುಕಿ ಅವರೊಂದಿಗೆ ಪ್ರಧಾನ ಮಂತ್ರಿಯವರ ಸಭೆ

May 23rd, 12:37 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 23 ಮೇ 2022 ರಂದು ಟೋಕಿಯೊದಲ್ಲಿ ಸುಜುಕಿ ಮೋಟಾರ್ ಕಾರ್ಪೊರೇಶನ್‌ನ ಹಿರಿಯ ಸಲಹೆಗಾರ ಶ್ರೀ ಒಸಾಮು ಸುಜುಕಿ ಅವರನ್ನು ಭೇಟಿಯಾದರು. ಸಭೆಯಲ್ಲಿ, ಪ್ರಧಾನಮಂತ್ರಿಯವರು ಶ್ರೀ. ಸುಜುಕಿಯವರ ಸಹಯೋಗ ಮತ್ತು ಭಾರತದಲ್ಲಿ ಅವರ ಕೊಡುಗೆಯನ್ನು ಸ್ಮರಿಸಿದರು ಮತ್ತು ಭಾರತದ ವಾಹನ ಉದ್ಯಮದಲ್ಲಿ ಸುಜುಕಿ ಮೋಟಾರ್ಸ್‌ ನ ಪರಿವರ್ತನೆಯ ಪಾತ್ರವನ್ನು ಶ್ಲಾಘಿಸಿದರು. ಸುಜುಕಿ ಮೋಟಾರ್ ಗುಜರಾತ್ ಪ್ರೈವೇಟ್‌ ಲಿಮಿಟೆಡ್ ಮತ್ತು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಸಂಸ್ಥೆಗಳು ವಾಹನ ಮತ್ತು ವಾಹನ ಬಿಡಿಭಾಗಗಳ ವಲಯದಲ್ಲಿ ಉತ್ಪಾದಕತೆ ಸಂಬಂಧಿತ ಉತ್ತೇಜನ (ಪಿಎಲ್‌ಐ) ಯೋಜನೆಯಡಿ ಅನುಮೋದಿಸಲಾದ ಅರ್ಜಿದಾರರಲ್ಲಿ ಸೇರಿರುವುದನ್ನು ಶ್ಲಾಘಿಸಿದರು.