ರಾಜಸ್ಥಾನದ ಸಿಕಾರ್ ನಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ/ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
July 27th, 12:00 pm
ಖಾತು ಶ್ಯಾಮ್ ಜಿ ಅವರ ಭೂಮಿ ದೇಶದಾದ್ಯಂತದ ಭಕ್ತರಲ್ಲಿ ವಿಶ್ವಾಸ ಮತ್ತು ಭರವಸೆಯನ್ನು ತುಂಬುತ್ತದೆ. ಯೋಧರ ಭೂಮಿಯಾದ ಶೇಖಾವತಿಯಿಂದ ಇಂದು ರಾಷ್ಟ್ರಕ್ಕಾಗಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸುವ ಅವಕಾಶ ನನಗೆ ದೊರೆತಿರುವುದು ನನ್ನ ಅದೃಷ್ಟ. ಇಂದು, ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಭಾಗವಾಗಿ ಸುಮಾರು 18,000 ಕೋಟಿ ರೂಪಾಯಿಗಳನ್ನು ಇಲ್ಲಿಂದ ಲಕ್ಷಾಂತರ ರೈತರ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗಿದೆ. ಈ ಮೊತ್ತವನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ.ರಾಜಸ್ಥಾನದ ಸಿಕಾರ್ ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳು ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ
July 27th, 11:15 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಸ್ಥಾನದ ಸಿಕಾರ್ ನಲ್ಲಿಂದು ಹಲವು ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿದರು. ರಾಷ್ಟ್ರಕ್ಕೆ ಸಮರ್ಪಿಸಲಾದ ಈ ಯೋಜನೆಗಳಲ್ಲಿ 1.25 ಲಕ್ಷಕ್ಕೂ ಅಧಿಕ ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳು(ಪಿಎಂಕೆಎಸ್ ಕೆ)ಗಳ ಲೋಕಾರ್ಪಣೆ, ಸಲ್ಫರ್ ಲೇಪಿತ ಹೊಸ ಬಗೆಯ ಯೂರಿಯಾ – ಯೂರಿಯಾ ಗೋಲ್ಡ್ ಬಿಡುಗಡೆ, 1600ರೈತ ಉತ್ಪನ್ನ ಸಂಸ್ಥೆಗಳು(ಎಫ್ ಪಿಒ)ಗಳನ್ನು ಡಿಜಿಟಲ್ ವ್ಯವಹಾರಕ್ಕೆ ಮುಕ್ತ ಜಾಲ(ಒಎನ್ ಡಿಸಿ) ವೇದಿಕೆಗೆ ತರುವುದು, ಪಿಎಂ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್)ಅಡಿ 8.5 ಕೋಟಿ ಫಲಾನುಭವಿಗಳಿಗೆ 14ನೇ ಕಂತಿನ 17,000 ಕೋಟಿ ರೂ. ಬಿಡುಗಡೆ, ಚಿತ್ತೋರ್ ಗಢ, ಧೋಲಾಪುರ್, ಸಿರೋಹಿ, ಸಿಕಾರ್ ಮತ್ತು ಶ್ರೀಗಂಗಾನಗರಗಳಲ್ಲಿ 5 ಹೊಸ ವೈದ್ಯಕೀಯ ಕಾಲೇಜುಗಳ ಉದ್ಘಾಟನೆ, ಬರಾನ್, ಬುಂಡಿ, ಕರೌಲಿ, ಜುನ್ ಜಹುನು, ಸವಾಯಿ ಮಾಧೋಪುರ್, ಜೈಸಲ್ಮೇರ್, ಟೋಂಕ್ ನಲ್ಲಿ 7 ಹೊಸ ವೈದ್ಯಕೀಯ ಕಾಲೇಜುಗಳಿಗೆ ಶಂಕುಸ್ಥಾಪನೆ, ಉದಯ್ ಪುರ, ಬನ್ಸವಾರ್, ಪ್ರತಾಪ್ ಗಡ್ ಮತ್ತು ಡುಂಗಾರ್ಪುರ ಜಿಲ್ಲೆಗಳಲ್ಲಿ ಮತ್ತು ಜೋಧ್ ಪುರ್ ನ ಕೇಂದ್ರೀಯ ವಿದ್ಯಾಲಯ ತಿವರಿಯಲ್ಲಿ 6 ಏಕಲವ್ಯ ಮಾದರಿ ವಸತಿ ಶಾಲೆಗಳ ಉದ್ಘಾಟನೆಯೂ ಸೇರಿದೆ.