ಸುಬ್ರಮಣ್ಯ ಭಾರತಿ ಅವರಿಗೆ ನಮನ ಸಲ್ಲಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
December 11th, 10:27 am
ಕವಿ ಮತ್ತು ಬರಹಗಾರ ಸುಬ್ರಮಣ್ಯ ಭಾರತಿ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದರು.ಮಹಾನ್ ತಮಿಳು ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಬ್ರಹ್ಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ ಸಂಕಲನ 2024ರ ಡಿಸೆಂಬರ್ 11 ರಂದು ಪ್ರಧಾನಮಂತ್ರಿ ಅವರಿಂದ ಬಿಡುಗಡೆ
December 10th, 05:12 pm
ಸುಬ್ರಮಣ್ಯ ಭಾರತಿಯವರ ಬರಹಗಳು ಜನರಲ್ಲಿ ದೇಶಪ್ರೇಮವನ್ನು ತುಂಬುವ ಜೊತೆಗೆ, ಜನಸಾಮಾನ್ಯರು ಅರ್ಥೈಸಿಕೊಳ್ಳಬಹುದಾದ ಸರಳ ಭಾಷೆಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ದೇಶದ ಆಧ್ಯಾತ್ಮಿಕ ಪರಂಪರೆಯ ಸಾರವನ್ನು ಹೇಳಿವೆ. ಸೀನಿ ವಿಶ್ವನಾಥನ್ ಅವರು ಸಂಕಲನ ಮಾಡಿ ಸಂಪಾದಿಸಿರುವ ಸುಬ್ರಹ್ಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ 23 ಸಂಪುಟಗಳನ್ನು ಅಲಯನ್ಸ್ ಪ್ರಕಾಶನ ಪ್ರಕಟಿಸಿದೆ. ಇದು ಸುಬ್ರಮಣ್ಯ ಭಾರತಿಯವರ ಬರಹಗಳ ಆವೃತ್ತಿಗಳು, ವಿವರಣೆಗಳು, ದಾಖಲೆಗಳು, ಹಿನ್ನೆಲೆ ಮಾಹಿತಿ ಮತ್ತು ತಾತ್ವಿಕ ಪ್ರಸ್ತುತಿಗಳ ವಿವರಗಳನ್ನು ಒಳಗೊಂಡಿದೆ.