ಪ್ರಧಾನ ಮಂತ್ರಿಯವರ ‘ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ’ ಕರೆಗೆ ಆಧ್ಯಾತ್ಮಿಕ ಮುಖಂಡರ ಬೆಂಬಲ
November 17th, 02:14 pm
‘ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ’ಯ ಮೂಲಕ ಆತ್ಮನಿರ್ಭರ ಭಾರತ ಆಂದೋಲನವನ್ನು ಜನಪ್ರಿಯಗೊಳಿಸಲು ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಆಧ್ಯಾತ್ಮಿಕ ಮುಖಂಡರಿಗೆ ಮಾಡಿದ ಮನವಿಗೆ ದೇಶದ ಪ್ರಮುಖ ಆಧ್ಯಾತ್ಮಿಕ ನಾಯಕರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಧಾನ ಮಂತ್ರಿಯವರ ಮನವಿಗೆ ‘ಸಂತ ಸಮಾಜವು ಬಹಳ ಉತ್ಸಾಹದಿಂದ ಪ್ರತಿಕ್ರಿಯಿಸಿದೆ. ಆತ್ಮನಿರ್ಭರ ಭಾರತಕ್ಕಾಗಿ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಲು ಮತ್ತು ಜನಪ್ರಿಯಗೊಳಿಸಲು ಆಧ್ಯಾತ್ಮಿಕ ನಾಯಕರು ಸಾರ್ವಜನಿಕ ಬದ್ಧತೆಯೊಂದಿಗೆ ಮುಂದೆ ಬಂದಿದ್ದಾರೆ ಮತ್ತು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.ಆತ್ಮನಿರ್ಭರ ಭಾರತಕ್ಕಾಗಿ ಸ್ಥಳೀಯ ಉತ್ಪನ್ನ (‘ವೋಕಲ್ ಫಾರ್ ಲೋಕಲ್’) ಜನಪ್ರಿಯಗೊಳಿಸಲು ಸಹಕರಸುವಂತೆ ಆಧ್ಯಾತ್ಮಿಕ ನಾಯಕರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ
November 16th, 12:50 pm
ದೇಶದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಭಕ್ತಿ ಚಳವಳಿ ಭದ್ರ ಬುನಾದಿ ಹಾಕಿಕೊಟ್ಟಿತ್ತು, ಅಂತೆಯೇ ಇಂದು ಆತ್ಮನಿರ್ಭರ ಭಾರತ ನಿರ್ಮಾಣಕ್ಕಾಗಿ ನಮ್ಮ ದೇಶದ ಎಲ್ಲಾ ಸಂತರು, ಮಹಾತ್ಮರು, ಮಹಂತರು ಮತ್ತು ಆಚಾರ್ಯರು ಭದ್ರ ತಳಹದಿ ಒದಗಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.PM Modi requests spiritual leaders to promote Aatmanirbhar Bharat by going vocal for local
November 16th, 12:46 pm
PM Modi unveiled ‘Statue of Peace’ to mark the 151st birth anniversary celebrations of Jainacharya Shree Vijay Vallabh Surishwer Ji Maharaj. Reiterating his stress on ‘vocal for local’ Shri Modi requested that as happened during the freedom struggle, all the spiritual leaders should amplify the message of Aatmanirbhar Bharat.ಜೈನಾಚಾರ್ಯ ಶ್ರೀ ವಿಜಯ ವಲ್ಲಭ ಸುರೀಶ್ವರ್ ಜಿ ಮಹಾರಾಜ್ ಅವರ 151 ನೇ ಜಯಂತಿಯ ಸ್ಮರಣಾರ್ಥ ‘ಶಾಂತಿ ಪ್ರತಿಮೆ’ ಅನಾವರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ
November 16th, 12:45 pm
ಜೈನಾಚಾರ್ಯ ಶ್ರೀ ವಿಜಯ ವಲ್ಲಭ ಸುರೀಶ್ವರ್ ಜಿ ಮಹಾರಾಜ್ ಅವರ 151 ನೇ ಜಯಂತಿಯ ಸ್ಮರಣಾರ್ಥ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ‘ಶಾಂತಿ ಪ್ರತಿಮೆ’ ಅನಾವರಣಗೊಳಿಸಿದರು. ಜೈನಾಚಾರ್ಯರ ಗೌರವಾರ್ಥವಾಗಿ ಅನಾವರಣಗೊಳಿಸಿದ ಈ ಪ್ರತಿಮೆಗೆ ‘ಶಾಂತಿ ಪ್ರತಿಮೆ’ ಎಂದು ಹೆಸರಿಸಲಾಗಿದೆ. 151 ಇಂಚು ಎತ್ತರದ ಪ್ರತಿಮೆಯನ್ನು ಅಷ್ಟಾಧಾತು ಅಂದರೆ ಅಷ್ಟ ಲೋಹಗಳಿಂದ ತಯಾರಿಸಲಾಗಿದ್ದು, ತಾಮ್ರವನ್ನು ಪ್ರಮುಖವಾಗಿ ಬಳಸಲಾಗಿದೆ. ರಾಜಸ್ಥಾನದ ಪಾಲಿಯಲ್ಲಿರುವ ಜೆತ್ಪುರದ ವಿಜಯ ವಲ್ಲಭ ಸಾಧನಾ ಕೇಂದ್ರದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.ಜೈನಾಚಾರ್ಯ ಶ್ರೀ ವಿಜಯ ವಲ್ಲಭ ಸುರೀಶ್ವರ್ ಜಿ ಮಹಾರಾಜ್ ಅವರ 151 ನೇ ಜಯಂತಿಯ ಅಂಗವಾಗಿ ನವೆಂಬರ್ 16 ರಂದು ಪ್ರಧಾನಿ ಮೋದಿಯವರಿಂದ ‘ಶಾಂತಿ ಪ್ರತಿಮೆ’ ಅನಾವರಣ
November 14th, 06:06 pm
ಜೈನಾಚಾರ್ಯ ಶ್ರೀ ವಿಜಯ ವಲ್ಲಭ ಸುರೀಶ್ವರ್ ಜಿ ಮಹಾರಾಜ್ ಅವರ 151 ನೇ ಜಯಂತಿಯ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 16, 2020 ರಂದು ಮಧ್ಯಾಹ್ನ 12.30 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ‘ಶಾಂತಿ ಪ್ರತಿಮೆ’ ಅನಾವರಣಗೊಳಿಸಲಿದ್ದಾರೆ.