ಭಾರತದ ಪ್ರಧಾನ ಮಂತ್ರಿಯ ಮಯನ್ಮಾರ್ ಭೇಟಿಯ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಭಾರತ-ಮಯನ್ಮಾರ್ ಜಂಟಿ ಹೇಳಿಕೆ

September 06th, 10:26 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚೈನಾದ ಕ್ಸಿಮೆನ್ ನಲ್ಲಿ 2017ರ ಸೆಪ್ಟೆಂಬರ್ 3-5ರವರೆಗೆ ನಡೆಯಲಿರುವ 9ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಮಂತ್ರಿಯವರು 2017ರ ಸೆಪ್ಟೆಂಬರ್ 5-7ರವರೆಗೆ ಮ್ಯಾನ್ಮಾರ್ ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಈ ಭೇಟಿಯು ಎರಡು ದೇಶಗಳ ನಾಯಕರ ನಡುವಿನ ನಿರಂತರ ಉನ್ನತ ಮಟ್ಟದ ದ್ವಿಪಕ್ಷೀಯ ಸಂಬಂಧಗಳ ಭಾಗವಾಗಿದೆ

ಮ್ಯಾನ್ಮಾರ್ ದೇಶದ ಸಲಹೆಗಾರ್ತಿ ಆಂಗ್ ಸ್ಯಾನ್ ಸ್ಯೂ ಕಿ ಅವರಿಗೆ ಉಡುಗೊರೆ ನೀಡಿದ ಪ್ರಧಾನಿ

September 06th, 02:03 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮ್ಯಾನ್ಮಾರ್ ದೇಶದ ಸಲಹೆಗಾರ್ತಿ (ಕೌನ್ಸಿಲರ್) ಢಾ ಆಂಗ್ ಸ್ಯಾನ್ ಸ್ಯೂಕಿ ಅವರಿಗೆ, ಅವರೇ 1986ರಲ್ಲಿ ಶಿಮ್ಲಾದ ಭಾರತೀಯ ಮುಂದುವರಿದ ಶಿಕ್ಷಣ ಸಂಸ್ಥೆಗೆ ಫೆಲೋಷಿಪ್ ಗಾಗಿ ಸಲ್ಲಿಸಿದ್ದ ಮೂಲ ಸಂಶೋಧನಾ ಪ್ರಸ್ತಾವನೆಯ ವಿಶೇಷ ಯಥಾಪ್ರತಿಯನ್ನು (ಮರುಸೃಷ್ಟಿ) ಅರ್ಪಿಸಿದರು. ಈ ಸಂಶೋಧನಾ ಪ್ರಸ್ತಾವವು ‘ವಸಾಹತುಶಾಹಿಯಡಿ ಬರ್ಮೀಸ್ ಮತ್ತು ಭಾರತೀಯ ಬೌದ್ಧಿಕ ಸಂಪ್ರದಾಯದ ಅಭಿವೃದ್ಧಿ ಮತ್ತು ಬೆಳವಣಿಗೆ: ತುಲಾನಾತ್ಮಕ ಅಧ್ಯಯನ’ ಎಂಬ ಶೀರ್ಷಿಕೆ ಒಳಗೊಂಡಿದೆ.

ಮಯನ್ಮಾರ್ ರಾಜ್ಯ ಕೌನ್ಸಿಲರ್ ಅನಗ್ ಸನ್ ಸೂಕಿ ಅವರನ್ನು ಪ್ರಧಾನಿ ಭೇಟಿಯಾದರು

September 06th, 10:02 am

ಇಂದು ಮಯನ್ಮಾರ್ ರಾಜ್ಯ ಕೌನ್ಸಿಲರ್ ಹೆಚ್ . ಇ ಅನಗ್ ಸನ್ ಸೂಕಿ ಅವರನ್ನು ಪ್ರಧಾನಿ ಭೇಟಿಯಾದರು . ನಾಯಕರು ಹಲವಾರು ಕ್ಷೇತ್ರಗಳಲ್ಲಿ ಭಾರತ-ಮಯನ್ಮಾರ್ ಸಂಬಂಧಗಳನ್ನು ವಿಸ್ತರಿಸಲು ವ್ಯಾಪಕ ಮಾತುಕತೆ ನಡೆಸಿದರು .