ಶ್ರೀ ಅರಬಿಂದೋ ಅವರ ಜನ್ಮ ದಿನದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಗೌರವ ನಮನ

August 15th, 11:43 am

ತತ್ವಜ್ಞಾನಿ, ಚಿಂತಕರು ಮತ್ತು ಆಧ್ಯಾತ್ಮಿಕ ಗುರು ಶ್ರೀ ಅರಬಿಂದೋ ಅವರ ಜನ್ಮ‌ ದಿನದಂದು ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ.

ಶ್ರೀಲ ಪ್ರಭುಪಾದ ಜೀ ಅವರ 150ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

February 08th, 01:00 pm

ಈ ಪವಿತ್ರ ಸಂದರ್ಭದಲ್ಲಿ ನೆರೆದಿದ್ದ ಎಲ್ಲ ಪೂಜ್ಯ ಸಾಧುಗಳು, ಆಚಾರ್ಯ ಗೌಡಿಯಾ ಮಿಷನ್ ನ ಪೂಜ್ಯ ಭಕ್ತಿ ಸುಂದರ್ ಸನ್ಯಾಸಿ ಜೀ, ನನ್ನ ಸಂಪುಟ ಸಹೋದ್ಯೋಗಿಗಳಾದ ಅರ್ಜುನ್ ರಾಮ್ ಮೇಘವಾಲ್ ಜೀ, ಮೀನಾಕ್ಷಿ ಲೇಖಿ ಜೀ, ರಾಷ್ಟ್ರ ಮತ್ತು ಪ್ರಪಂಚದಾದ್ಯಂತದ ಶ್ರೀಕೃಷ್ಣನ ಭಕ್ತರು, ಗೌರವಾನ್ವಿತ ಅತಿಥಿಗಳು, ಮಹಿಳೆಯರೇ ಮತ್ತು ಮಹನೀಯರೇ!

ಶ್ರೀಲ ಪ್ರಭುಪಾದ ಜೀ ಅವರ 150 ನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಮಾತನಾಡಿದರು

February 08th, 12:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಶ್ರೀಲ ಪ್ರಭುಪಾದ ಜೀ ಅವರ 150 ನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಆಚಾರ್ಯ ಶ್ರೀಲ ಪ್ರಭುಪಾದರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು ಮತ್ತು ಅವರ ಗೌರವಾರ್ಥವಾಗಿ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು. ಗೌಡಿಯ ಮಿಷನ್‌ ಸಂಸ್ಥಾಪಕರಾದ ಆಚಾರ್ಯ ಶ್ರೀಲ ಪ್ರಭುಪಾದರು ವೈಷ್ಣವ ಪಂಥದ ಮೂಲಭೂತ ತತ್ವಗಳನ್ನು ಸಂರಕ್ಷಿಸುವಲ್ಲಿ ಮತ್ತು ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು.

ಶ್ರೀ ಅರಬಿಂದೋ ಅವರ 150 ನೇ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ

December 13th, 06:52 pm

ಶ್ರೀ ಅರಬಿಂದೋ ಅವರ 150 ನೇ ಜನ್ಮ ವಾರ್ಷಿಕೋತ್ಸವದ ವರ್ಷದ ಈ ಮಹತ್ವದ ಕಾರ್ಯಕ್ರಮದಲ್ಲಿ ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಈ ಶುಭ ಸಂದರ್ಭದಲ್ಲಿ, ನಾನು ಎಲ್ಲಾ ದೇಶವಾಸಿಗಳಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಶ್ರೀ ಅರಬಿಂದೋ ಅವರ 150 ನೇ ಜನ್ಮ ವಾರ್ಷಿಕೋತ್ಸವವು ಇಡೀ ದೇಶಕ್ಕೆ ಒಂದು ಐತಿಹಾಸಿಕ ಸಂದರ್ಭವಾಗಿದೆ. ಅವರ ಸ್ಫೂರ್ತಿ ಮತ್ತು ಆಲೋಚನೆಗಳನ್ನು ನಮ್ಮ ಹೊಸ ಪೀಳಿಗೆಗೆ ಕೊಂಡೊಯ್ಯುವ ಸಲುವಾಗಿ ಈ ಇಡೀ ವರ್ಷವನ್ನು ವಿಶೇಷವಾಗಿ ಆಚರಿಸಲು ದೇಶವು ನಿರ್ಧರಿಸಿದೆ. ಇದಕ್ಕಾಗಿ ವಿಶೇಷ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತು. ಸಂಸ್ಕೃತಿ ಸಚಿವಾಲಯದ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತಿದೆ. ಈ ಅನುಕ್ರಮದಲ್ಲಿ, ಮಹರ್ಷಿಯು ಸ್ವತಃ ತಪಸ್ಸು ಮಾಡಿದ ಪುದುಚೇರಿ ಭೂಮಿಯಲ್ಲಿ, ಇಂದು ರಾಷ್ಟ್ರವು ಅವರಿಗೆ ಮತ್ತೊಂದು ಕೃತಜ್ಞತೆಯ ಗೌರವವನ್ನು ಸಲ್ಲಿಸುತ್ತಿದೆ. ಇಂದು ಶ್ರೀ ಅರಬಿಂದೋ ಅವರ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಶ್ರೀ ಅರವಿಂದರ ಜೀವನ ಮತ್ತು ಬೋಧನೆಗಳಿಂದ ಸ್ಫೂರ್ತಿ ಪಡೆದು, ರಾಷ್ಟ್ರದ ಈ ಪ್ರಯತ್ನಗಳು ನಮ್ಮ ನಿರ್ಣಯಗಳಿಗೆ ಹೊಸ ಸ್ಫೂರ್ತಿ ಮತ್ತು ಶಕ್ತಿಯನ್ನು ನೀಡುತ್ತವೆ ಎಂದು ನನಗೆ ಖಾತ್ರಿಯಿದೆ.

PM addresses programme commemorating Sri Aurobindo’s 150th birth anniversary via video conferencing

December 13th, 06:33 pm

The Prime Minister, Shri Narendra Modi addressed a programme celebrating Sri Aurobindo’s 150th birth anniversary via video conferencing today in Kamban Kalai Sangam, Puducherry under the aegis of Azadi ka Amrit Mahotsav. The Prime Minister also released a commemorative coin and postal stamp in honour of Sri Aurobindo.