​​​​​​​ಏಷ್ಯನ್ ಗೇಮ್ಸ್ 2022 ರ ಲಾಂಗ್ ಜಂಪ್ ನಲ್ಲಿ ಶ್ರೀಶಂಕರ್ ಮುರಳಿ ಅವರ ಬೆಳ್ಳಿ ಪದಕ ಗೆಲುವನ್ನು ಸಂಭ್ರಮಿಸಿದ ಪ್ರಧಾನಮಂತ್ರಿ

October 01st, 11:15 pm

ಹಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2022ರಲ್ಲಿ ಲಾಂಗ್ ಜಂಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಶ್ರೀಶಂಕರ್ ಮುರಳಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಭಿನಂದಿಸಿದ್ದಾರೆ.

ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಕಂಚಿನ ಪದಕ ಗೆದ್ದ ಉದ್ದ ಜಿಗಿತಗಾರ ಶ್ರೀಶಂಕರ್ ಮುರಳಿ ಅವರನ್ನು ಅಭಿನಂದಿಸಿದ ಪ್ರಧಾನಿ

June 10th, 07:56 pm

ಪ್ರಧಾನಿ ಟ್ವೀಟ್ ಮಾಡಿ;“ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಶ್ರೀಶಂಕರ್ ಮುರಳಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ! ಅವರ ಗಮನಾರ್ಹ ಪ್ರದರ್ಶನದಿಂದ ಅವರಿಗೆ ಪ್ರತಿಷ್ಠಿತ ಕಂಚಿನ ಪದಕ ಸಿಕ್ಕಿರುವುದು ಮಾತ್ರವಲ್ಲದೆ ಡೈಮಂಡ್ ಲೀಗ್‌ನಲ್ಲಿ ಭಾರತಕ್ಕೆ ಉದ್ದ ಜಿಗಿತದಲ್ಲಿ ಮೊದಲ ಪದಕ ಸಿಕ್ಕಿದೆ. ಅವರಿಗೆ ಅಭಿನಂದನೆಗಳು ಮತ್ತು ಮುಂಬರುವ ಪ್ರಯತ್ನಗಳಿಗೆ ಶುಭಾಶಯಗಳು” ಎಂದು ಪ್ರಧಾನಿ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.