ಸ್ಕ್ವಾಷ್ ನ ಪ್ರಸಿದ್ಧ ಆಟಗಾರರಾದ ಶ್ರೀ ರಾಜ್ ಮಂಚಂದಾ ಅವರ ನಿಧನಕ್ಕೆ ಪ್ರಧಾನಮಂತ್ರಿಯವರಿಂದ ಸಂತಾಪ ಸೂಚನೆ

December 04th, 03:42 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಶ್ರೀ ರಾಜ್ ಮಂಚಂದಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಶ್ರೀ ಮಂಚಂದಾ ಅವರು ತಮ್ಮ ಸಮರ್ಪಣೆ ಮತ್ತು ಉತ್ಕೃಷ್ಟತೆಗೆ ಹೆಸರುವಾಸಿಯಾದ ಭಾರತೀಯ ಸ್ಕ್ವಾಷ್ ಆಟದ ನಿಜವಾದ ದಂತಕಥೆ ಎಂದು ಶ್ರೀ ಮೋದಿಯವರು ಶ್ಲಾಘಿಸಿದ್ದಾರೆ. ಶ್ರೀ ಮಂಚಂದಾ ಅವರು ಮಿಲಿಟರಿಯಲ್ಲಿ ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಯನ್ನು ಪ್ರಧಾನಿಯವರು ಶ್ಲಾಘಿಸಿದ್ದಾರೆ.

ಮುಂಬರುವ ಲಾಸ್ ಏಂಜಲ್ಸ್ ಒಲಂಪಿಕ್ಸ್ 2028 ರಲ್ಲಿ ಕ್ರಿಕೆಟ್ ಅನ್ನು ಸೇರಿಸುವುದನ್ನು ಸ್ವಾಗತಿಸಿದ ಪ್ರಧಾನಮಂತ್ರಿ

October 16th, 08:18 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೇಸ್‌ಬಾಲ್-ಸಾಫ್ಟ್‌ಬಾಲ್, ಕ್ರಿಕೆಟ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್ ಮತ್ತು ಸ್ಕ್ವಾಷ್‌ಗಳನ್ನು ಲಾಸ್ ಏಂಜಲ್ಸ್ ಒಲಂಪಿಕ್ ಗೇಮ್ಸ್ 2028 ರಲ್ಲಿ ಸೇರಿಸಿಕೊಳ್ಳುವುದನ್ನು ಸ್ವಾಗತಿಸಿದರು. ಕ್ರಿಕೆಟ್‌ ನ ಸೇರ್ಪಡೆಯು ಈ ಅದ್ಭುತ ಕ್ರೀಡೆಯ ಜಾಗತಿಕ ಜನಪ್ರಿಯತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ‌