ಗೋರಖ್‌ಪುರ ಸಂಸದ್ ಖೇಲ್ ಮಹಾಕುಂಭದಲ್ಲಿ ಪ್ರಧಾನ ಮಂತ್ರಿ ವೀಡಿಯೊ ಸಂದೇಶ

February 16th, 03:15 pm

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಗೋರಖ್‌ಪುರ ಸಂಸದ ರವಿಕಿಶನ್ ಶುಕ್ಲಾ ಜಿ, ಇಲ್ಲಿ ನೆರೆದಿರುವ ಯುವ ಕ್ರೀಡಾಪಟುಗಳೆ, ತರಬೇತುದಾರರೆ, ಪೋಷಕರೆ ಮತ್ತು ಸಹೋದ್ಯೋಗಿ ಮಿತ್ರರೆ!

ಗೋರಖ್ ಪುರ ಸಂಸದ್ (ವಿಶೇಷ) ಖೇಲ್ (ಕ್ರೀಡೆ) ಮಹಾಕುಂಭವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದ ಪ್ರಧಾನಮಂತ್ರಿ

February 16th, 03:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಗೋರಖ್ ಪುರ ಸಂಸದ್ ಖೇಲ್ ಮಹಾಕುಂಭ ಉದ್ದೇಶಿಸಿ ಭಾಷಣ ಮಾಡಿದರು.

75 ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಪ್ರಾಂಗಣದಿಂದ ದೇಶವನ್ನುದ್ದೇಶಿಸಿ ಮಾತನಾಡಿದರು.

August 15th, 03:02 pm

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪವಿತ್ರ ದಿನವಾದ ಇಂದು, ದೇಶವು ತನ್ನ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ರಾಷ್ಟ್ರ ರಕ್ಷಣೆಯಲ್ಲಿ ಹಗಲಿರುಳು ತಮ್ಮನ್ನು ಸಮರ್ಪಿಸಿಕೊಂಡಿರುವ ವೀರರಿಗೆ ತಲೆಬಾಗಿ ನಮಿಸುತ್ತಿದೆ. ಸ್ವಾತಂತ್ರ್ಯ ಹೋರಾಟವನ್ನು ಒಂದು ಸಾಮೂಹಿಕ ಆಂದೋಲನವನ್ನಾಗಿ ಮಾಡಿದ ಪೂಜ್ಯ ಬಾಪು, ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಥವಾ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಬಿಸ್ಮಿಲ್ ಮತ್ತು ಅಶ್ಫಖುಲ್ಲಾ ಖಾನ್ ರಂತಹ ಮಹಾನ್ ಕ್ರಾಂತಿಕಾರಿಗಳನ್ನು ಒಳಗೊಂಡಂತೆ ಪ್ರತಿಯೊಬ್ಬರನ್ನೂ ದೇಶವು ಸ್ಮರಿಸಿಕೊಳ್ಳುತ್ತಿದೆ; ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಕಿತ್ತೂರಿನ ರಾಣಿ ಚೆನ್ನಮ್ಮ ಅಥವಾ ರಾಣಿ ಗಾಯಿಡಿನ್ಲಿಯು ಅಥವಾ ಮಾತಂಗಿನಿಹಜ್ರಾ ಅವರ ಶೌರ್ಯ; ದೇಶದ ಮೊದಲ ಪ್ರಧಾನಿ ಪಂಡಿತ್ ನೆಹರೂ, ದೇಶವನ್ನು ಒಂದು ರಾಷ್ಟ್ರವಾಗಿ ಒಗ್ಗೂಡಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಭಾರತದ ಭವಿಷ್ಯಕ್ಕೆ ದಿಕ್ಕು ತೋರಿದ ಬಾಬಾ ಸಾಹೇಬ್ ಅಂಬೇಡ್ಕರ್. ಈ ಎಲ್ಲ ಮಹಾನ್ ವ್ಯಕ್ತಿಗಳಿಗೆ ದೇಶ ಚಿರಋಣಿಯಾಗಿದೆ.

ಕೆಂಪುಕೋಟೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ಉದ್ದೇಶಿಸಿ ಪ್ರಧಾನ ಮಂತ್ರಿ ಅವರ ಭಾಷಣ

August 15th, 07:38 am

ನಿಮ್ಮೆಲ್ಲರಿಗೂ ಶುಭಾಶಯಗಳು. ಭಾರತವು ಸ್ವಾತಂತ್ರ್ಯ ಗಳಿಸಿದ ಅಮೃತ ಮಹೋತ್ಸವ ಆಚರಿಸುತ್ತಿರುವ ಸುಸಂದರ್ಭದಲ್ಲಿ ಭಾರತವನ್ನು ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಪ್ರೀತಿಸುವ ವಿಶ್ವದೆಲ್ಲೆಡೆ ಇರುವ ಜನರಿಗೆ 75ನೇ ಸ್ವಾತಂತ್ರ್ಯೋತ್ಸವದ ಶುಭ ಕಾಮನೆಗಳನ್ನು ಅರ್ಪಿಸುತ್ತೇನೆ.

ಭಾರತ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ

August 15th, 07:37 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೆಂಪು ಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡುತ್ತಾ ದೇಶವು ತನ್ನ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿತು. ಭಾಷಣದ ಸಮಯದಲ್ಲಿ, ಪ್ರಧಾನಿ ಮೋದಿ ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು ಮತ್ತು ಭವಿಷ್ಯದ ಯೋಜನೆಗಳನ್ನು ಹಾಕಿದರು. ಅವರು ತಮ್ಮ ಜನಪ್ರಿಯ ಘೋಷಣೆಯಾದ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್ ಅನ್ನು ಸೇರಿಸಿದರು. ಈ ಗುಂಪಿಗೆ ಇತ್ತೀಚಿನ ಪ್ರವೇಶವು ಸಬ್ಕಾ ಪ್ರಯಾಸ್ ಆಗಿದೆ.

Khelo India is an effort to give strength to a mass movement for playing more: PM Modi

January 31st, 05:27 pm

Inaugurating the Khelo India School Games today, the PM said that sports must occupy a central place in the lives of our youth. He said that India did not lack sporting talent and being a youthful nation, it could do wonders in the field of sports.

ಖೇಲೋ ಇಂಡಿಯಾ ಶಾಲಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಭಾಷಣ

January 31st, 05:26 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಖೋಲೋ ಇಂಡಿಯಾ ಶಾಲಾ ಕ್ರೀಡಾಕೂಟದ ಪ್ರಥಮ ಆವೃತ್ತಿಗೆ ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿಂದು ಚಾಲನೆ ನೀಡಿದರು. ಸಭಿಕರನ್ನುದ್ದೇಶಿಸಿ ಭಾಷಣ ಮಾಡಿದ ಅವರು, ನಮ್ಮ ಯುವಕರ ಬದುಕಿನಲ್ಲಿ ಕ್ರೀಡೆ ಕೇಂದ್ರ ಸ್ಥಾನ ಪಡೆಯಬೇಕು ಎಂದು ಹೇಳಿದರು. ವ್ಯಕ್ತಿತ್ವ ವಿಕಾಸಕ್ಕೆ ಕ್ರೀಡೆ ಮಹತ್ವದ ಸಾಧನ ಎಂದೂ ಅವರು ಹೇಳಿದರು.

"ರಾಷ್ಟ್ರೀಯ ಕ್ರೀಡಾ ದಿನದಂದು ಎಲ್ಲ ಕ್ರೀಡಾಪಟುಗಳು ಮತ್ತು ಕ್ರೀಡಾ ಉತ್ಸಾಹಿಗಳಿಗೆ ಪ್ರಧಾನಿ ಅಭಿನಂದನೆ; ಖ್ಯಾತ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಗೆ ಗೌರವ ನಮನ "

August 29th, 11:06 am

ರಾಷ್ಟ್ರೀಯ ಕ್ರೀಡಾ ದಿನದಂದು, ಕ್ರೀಡೆಯಲ್ಲಿ ಹುರುಪು ಮತ್ತು ಉತ್ಸಾಹ ತೋರಿ ಅದನ್ನು ಮುಂದುವರಿಸುತ್ತಿರುವ ಎಲ್ಲ ಕ್ರೀಡಾಪಟುಗಳಿಗೆ ಮತ್ತು ಕ್ರೀಡಾ ಉತ್ಸಾಹಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಭಾರತೀಯ ಹಾಕಿಯಲ್ಲಿ ಅದ್ಭುತ ಕೌಶಲ ಮೆರೆದ ದಂತಕತೆ ಮೇಜರ್ ಧ್ಯಾನ್ ಚಂದ್ ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ. ಕ್ರೀಡೆ ಎಂಬುದು ದೈಹಿಕ, ಮಾನಸಿಕ ಜಾಗೃತಿ ಮತ್ತು ವ್ಯಕ್ತಿತ್ವ ವಿಕಾಸ ಕುರಿತಾದುದಾಗಿದೆ- ಪ್ರಧಾನಿ ಮೋದಿ

ಪರಿವರ್ತನೆಗಾಗಿ ಬೋಧನೆ, ಸಬಲೀಕರಣಕ್ಕಾಗಿ ಶಿಕ್ಷಣ, ಮುನ್ನಡೆಸಲು ಕಲಿಕೆ : ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಮೋದಿ

August 27th, 11:36 am

ಮನ್ ಕಿ ಬಾತ್' ಸಮಯದಲ್ಲಿ ಮೋದಿ ಇತ್ತೀಚಿನ ಹಿಂಸಾಚಾರದ ಘಟನೆಗಳ ಬಗ್ಗೆ ಮಾತನಾಡಿದರು ಮತ್ತು ಅಂತಹ ಕೃತ್ಯಗಳು ಸ್ವೀಕಾರಾರ್ಹವಲ್ಲ ಎಂದು ಪುನರಾವರ್ತಿಸಿದರು. ಭಾರತವು 'ಅಹಿಂಸಾ ಪರಮೋ ಧರ್ಮ'ದ ಭೂಮಿ ಎಂದು ಅವರು ಹೇಳಿದರು. ಶ್ರೀ ಮೋದಿ ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಉತ್ಸವಗಳ ಕುರಿತು ಮಾತನಾಡಿದರು. ಹಬ್ಬಗಳನ್ನು ಸ್ವಚ್ಛತೆಯ ಸಂಕೇತವಾಗಿ ಮಾಡಲು ಜನರನ್ನು ಪ್ರೇರೇಪಿಸಿದರು. ಸಮಾಜ, ಯುವಕರು ಮತ್ತು ಕ್ರೀಡೆಗಳನ್ನು ರೂಪಾಂತರಗೊಳಿಸಲು ಶಿಕ್ಷಕರ ಪ್ರಮುಖ ಪಾತ್ರದ ಬಗ್ಗೆ ಅವರು ಮಾತನಾಡಿದರು .