27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 508 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
August 06th, 11:30 am
ಭಾರತವು ಅಭಿವೃದ್ಧಿಯ ಗುರಿಯತ್ತ ಸಾಗುತ್ತಿರುವುದರಿಂದ ತನ್ನ 'ಅಮೃತ ಕಾಲ' (ಸುವರ್ಣ ಯುಗ) ದ ಆರಂಭದಲ್ಲಿದೆ. ಹೊಸ ಶಕ್ತಿ, ಹೊಸ ಸ್ಫೂರ್ತಿ ಮತ್ತು ಹೊಸ ಸಂಕಲ್ಪವಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯ ಆರಂಭವಾಗಿದೆ. ಭಾರತದ ಸರಿಸುಮಾರು 1300 ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಈಗ 'ಅಮೃತ್ ಭಾರತ್ ರೈಲ್ವೆ ನಿಲ್ದಾಣಗಳು' ಎಂದು ಅಭಿವೃದ್ಧಿಪಡಿಸಲಾಗುವುದು ಮತ್ತು ಅವುಗಳನ್ನು ಪುನರಾಭಿವೃದ್ಧಿ ಮತ್ತು ಆಧುನೀಕರಿಸಲಾಗುವುದು. ಇಂದು, 508 ಅಮೃತ್ ಭಾರತ್ ನಿಲ್ದಾಣಗಳಿಗೆ ಪುನರಾಭಿವೃದ್ಧಿ ಕಾರ್ಯ ಪ್ರಾರಂಭವಾಗಿದೆ. ಈ 508 ಅಮೃತ್ ಭಾರತ್ ನಿಲ್ದಾಣಗಳ ನಿರ್ಮಾಣಕ್ಕೆ ಅಂದಾಜು 25,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು. ಈ ಅಭಿಯಾನವು ದೇಶದ ಮೂಲಸೌಕರ್ಯಕ್ಕೆ, ರೈಲ್ವೆಗೆ ಮತ್ತು ಮುಖ್ಯವಾಗಿ ನನ್ನ ದೇಶದ ಸಾಮಾನ್ಯ ನಾಗರಿಕರಿಗೆ ಎಷ್ಟು ಮಹತ್ವದ್ದಾಗಿದೆ ಎಂದು ನೀವು ಊಹಿಸಬಹುದು. ಈ ಯೋಜನೆಯ ಪ್ರಯೋಜನಗಳನ್ನು ದೇಶದ ಬಹುತೇಕ ಎಲ್ಲಾ ರಾಜ್ಯಗಳು ಅನುಭವಿಸಲಿವೆ. ಉದಾಹರಣೆಗೆ, ಉತ್ತರ ಪ್ರದೇಶದ 55 ಅಮೃತ್ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಸುಮಾರು 4,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು. ರಾಜಸ್ಥಾನದಲ್ಲಿ 55 ರೈಲ್ವೆ ನಿಲ್ದಾಣಗಳನ್ನು ಅಮೃತ್ ಭಾರತ್ ನಿಲ್ದಾಣಗಳಾಗಿ ಪರಿವರ್ತಿಸಲಾಗುವುದು. ಮಧ್ಯಪ್ರದೇಶದಲ್ಲಿ, 34 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ಸುಮಾರು 1,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು. ಮಹಾರಾಷ್ಟ್ರದ 44 ನಿಲ್ದಾಣಗಳ ಅಭಿವೃದ್ಧಿಗೆ 2,500 ಕೋಟಿ ರೂ. ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳು ತಮ್ಮ ಪ್ರಮುಖ ನಿಲ್ದಾಣಗಳನ್ನು ಅಮೃತ್ ಭಾರತ್ ನಿಲ್ದಾಣಗಳಾಗಿ ಅಭಿವೃದ್ಧಿಪಡಿಸಲಿವೆ. 'ಅಮೃತ್ ಕಾಲ್' ದಲ್ಲಿನ ಈ ಐತಿಹಾಸಿಕ ಅಭಿಯಾನದ ಆರಂಭದಲ್ಲಿ, ನಾನು ರೈಲ್ವೆ ಸಚಿವಾಲಯವನ್ನು ಶ್ಲಾಘಿಸುತ್ತೇನೆ ಮತ್ತು ದೇಶದ ಎಲ್ಲಾ ನಾಗರಿಕರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ದೇಶದಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ
August 06th, 11:05 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐತಿಹಾಸಿಕ ಕ್ರಮವಾಗಿ, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು. 24,470 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದಲ್ಲಿ ಈ 508 ನಿಲ್ದಾಣಗಳನ್ನು ಮರು ಅಭಿವೃದ್ಧಿಪಡಿಸಲಾಗುತ್ತಿದೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳದಲ್ಲಿ 37, ಮಧ್ಯಪ್ರದೇಶದಲ್ಲಿ 34, ಅಸ್ಸಾಂನಲ್ಲಿ 32, ಒಡಿಶಾದಲ್ಲಿ 25, ಪಂಜಾಬ್‌ನಲ್ಲಿ 22, ಗುಜರಾತ್ ಮತ್ತು ತೆಲಂಗಾಣದಲ್ಲಿ ತಲಾ 21, ಜಾರ್ಖಂಡ್‌ನಲ್ಲಿ 20, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 18, ಹರಿಯಾಣದಲ್ಲಿ 15, ಕರ್ನಾಟಕದಲ್ಲಿ 13 ಸೇರಿದಂತೆ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.ದಕ್ಷಿಣ ಕೊರಿಯಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀಯೂನ್ ಸುಕ್-ಯೋಲ್ ಅವರಿಗೆ ಸದಾಶಯ ಮತ್ತು ಶುಭಹಾರೈಕೆಗಳನ್ನು ತಿಳಿಸಿದ ಪ್ರಧಾನಮಂತ್ರಿ
May 10th, 12:52 pm
ದಕ್ಷಿಣ ಕೊರಿಯಾ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದ ಘನತೆವೆತ್ತ ಶ್ರೀ ಯೂನ್ ಸುಕ್-ಯೋಲ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸದಾಶಯ ಹಾಗು ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.ಕೊರಿಯಾ ಗಣರಾಜ್ಯದ ಅಧ್ಯಕ್ಷರಾಗಿ ಚುನಾಯಿತರಾದ ಘನತೆವೆತ್ತ ಯುನ್ ಸುಕ್-ಯೋಲ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೂರವಾಣಿ ಮೂಲಕ ಸಂಭಾಷಿಸಿದರು
March 17th, 02:50 pm
ಕೊರಿಯಾ ಗಣರಾಜ್ಯದ ಅಧ್ಯಕ್ಷರಾಗಿ ಚುನಾಯಿತರಾದ ಘನತೆವೆತ್ತ ಯುನ್ ಸುಕ್-ಯೋಲ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಜಾನೆ ದೂರವಾಣಿ ಮೂಲಕ ಸಂಭಾಷಿಸಿದರು.ಫೆಬ್ರವರಿ 11ರಂದು ʻಒಂದು ಸಾಗರ ಶೃಂಗಸಭೆʼಯ ಉನ್ನತ ಮಟ್ಟದ ವಿಭಾಗದಲ್ಲಿ ಭಾಗವಹಿಸಿ ಮಾತನಾಡಲಿರುವ ಪ್ರಧಾನಿ
February 10th, 07:42 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 11ರಂದು ಮಧ್ಯಾಹ್ನ 2:30ರ ಸುಮಾರಿಗೆ `ಒಂದು ಸಾಗರ ಶೃಂಗಸಭೆ’ಯ ಉನ್ನತ ಮಟ್ಟದ ವಿಭಾಗವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ. ಶೃಂಗಸಭೆಯ ಉನ್ನತ ಮಟ್ಟದ ವಿಭಾಗವನ್ನು ಉದ್ದೇಶಿಸಿ ಜರ್ಮನಿ, ಬ್ರಿಟನ್, ದಕ್ಷಿಣ ಕೊರಿಯಾ, ಜಪಾನ್, ಕೆನಡಾ ಸೇರಿದಂತೆ ಹಲವಾರು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಸರ್ಕಾರಗಳ ಮುಖ್ಯಸ್ಥರು ಮಾತನಾಡಲಿದ್ದಾರೆ.ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೋರಿಯಾ ಗಣರಾಜ್ಯದ ಘನತೆವೆತ್ತ ಅಧ್ಯಕ್ಷರಾದ ಮೂನ್ ಜೆ ಇನ್ ಅವರ ನಡುವೆ ದೂರವಾಣಿ ಸಂಭಾಷಣೆ
October 21st, 03:53 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕೋರಿಯಾ ಗಣರಾಜ್ಯದ ಘನತೆವೆತ್ತ ಅಧ್ಯಕ್ಷರಾದ ಮೂನ್ ಜೆ ಇನ್ ಅವರು ಇಂದು ಬೆಳಗ್ಗೆ ದೂರವಾಣಿ ಮೂಲಕ ಮಾತನಾಡಿದರು.PM Greets President & People of Republic of Korea on the 70th Anniversary of the Outbreak of the Korean War
June 25th, 07:04 pm
On the occasion of the 70th Anniversary of the outbreak of the Korean War in 1950, Prime Minister of India Shri Narendra Modi paid rich tribute to the bravehearts who sacrificed their lives in the pursuit of peace on the Korean Peninsula.ಪ್ರಧಾನಮಂತ್ರಿಯವರಿಂದ ಅಭಿನಂದನಾ ದೂರವಾಣಿ ಕರೆಗಳ ಸ್ವೀಕಾರ
June 04th, 06:52 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೊರಿಯಾ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ ಮೂನ್ ಜಯಿ ಇನ್ ; ಜಿಂಬಾಬ್ವೆಯ ಅಧ್ಯಕ್ಷ ಘನತೆವೆತ್ತ ಶ್ರೀ ಇ.ಡಿ. ಮನಂಗಗಂಗ್ವ; ಮತ್ತು ಮೊಜಾಂಬಿಕ್ ಅಧ್ಯಕ್ಷ ಘನತೆವೆತ್ತ ಶ್ರೀ ಫಿಲಿಪ್ ಜಕಿಂಟೋ ನ್ಯೂಸಿ ಅವರುಗಳಿಂದ ದೂರವಾಣಿ ಕರೆ ಸ್ವೀಕರಿಸಿದರು, ಅವರೆಲ್ಲರೂ ಇತ್ತೀಚೆಗೆ ಭಾರತದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ವಿಜಯಕ್ಕಾಗಿ ಅಭಿನಂದನೆ ಸಲ್ಲಿಸಿದರು.ಸಿಯೋಲ್ ಶಾಂತಿ ಪ್ರಶಸ್ತಿಗಾಗಿ ಪ್ರಧಾನ ಮಂತ್ರಿಗಳ ಅಂಗೀಕಾರ ಭಾಷಣ
February 22nd, 10:55 am
ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಪಡೆಯುತ್ತಿರುವುದಕ್ಕೆ ನನ್ನ ಹೃದಯ ತುಂಬಿ ಬಂದಿದೆ. ಈ ಪ್ರಶಸ್ತಿ ವೈಯಕ್ತಿಕವಾಗಿ ನನಗೆ ಸಂಬಂಧಿಸಿದ್ದಲ್ಲ, ಸಂಪೂರ್ಣ ಭಾರತೀಯರಿಗೆ ಸಲ್ಲುವಂಥದ್ದು ಎಂದು ನಾನು ನಂಬಿದ್ದೇನೆ. 1.3 ಶತಕೋಟಿ ಭಾರತೀಯರ ಶಕ್ತಿ ಮತ್ತು ಕೌಶಲ್ಯದ ಬಲದಿಂದ 5 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಭಾರತ ಸಾಧಿಸಿದ ಯಶಸ್ಸಿಗೆ ಸಂದ ಗೌರವ ಇದಾಗಿದೆ.ದಕ್ಷಿಣ ಕೊರಿಯಾ ಗಣರಾಜ್ಯದ ಅಧ್ಯಕ್ಷ ಮೂನ್ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ ಹೇಳಿಕೆ
February 22nd, 08:42 am
ಕೊರಿಯಾ ಗಣರಾಜ್ಯದ ಅಧ್ಯಕ್ಷ ಚಂದ್ರನ ಜಂಟಿ ಪತ್ರಿಕಾ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ದೇಶಗಳ ನಡುವಿನ ಸಂಬಂಧಗಳು ಜನರ, ಶಾಂತಿಯ ಮತ್ತು ಸಮೃದ್ಧಿಯ ಹಂಚಿಕೆಯ ದೃಷ್ಟಿಕೋನವನ್ನು ಆಧರಿಸಿದೆ ಎಂದು ಪ್ರಧಾನಿ ಮೋದಿ ಗಮನಿಸಿದರು. ಪ್ರಧಾನಿ ಕೂಡ ಎರಡೂ ದೇಶಗಳ ನಡುವಿನ ಒಡಂಬಡಿಕೆ ಒಪ್ಪಂದವು ಕೌಂಟರ್ ಭಯೋತ್ಪಾದನಾ ವಿರುದ್ಧ ಕ್ರಮಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ತಿಳಿಸಿದೆ. ಭಾರತ ಮತ್ತು ಕೊರಿಯಾದ ರಿಪಬ್ಲಿಕ್ ನಡುವಿನ ವರ್ಧಿತ ವ್ಯಾಪಾರ ಮತ್ತು ಸಂಬಂಧಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಪ್ರಧಾನಿ ಮೋದಿ 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು $ 50 ಡಾಲರ್ ಗೆ ತೆಗೆದುಕೊಳ್ಳುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.Indian community all over the world are the country’s ‘Rashtradoots’: PM Modi
February 21st, 06:01 pm
At the community programme in Seoul, South Korea, PM Modi appreciated the members of Indian community for their contributions. PM Modi termed them be true 'Rashtradoots' (ambassadors of the country). Addressing the gathering, the PM also highlighted the strong India-South Korea ties. He also spoke about India's growth story in the last four and half years.ಕೊರಿಯಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
February 21st, 06:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕೊರಿಯಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.ಸಿಯೋಲ್ ನ ಯೋನ್ಸೆ ವಿಶ್ವ ವಿದ್ಯಾಲಯದಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನ ಮಂತ್ರಿಗಳು
February 21st, 01:01 pm
ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಇಂದು ಸಿಯೋಲ್ ನ ಯೋನ್ಸೆ ವಿಶ್ವ ವಿದ್ಯಾಲಯದಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆಯನ್ನು ಅನಾವರಣಗೊಳಿಸಿದರು.ರಿಪಬ್ಲಿಕ್ ಆಫ್ ಕೊರಿಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಮತ್ತು ಕೊರಿಯಾ ವ್ಯಾಪಾರ ಕುರಿತ ವಿಚಾರ ಸಂಕಿರಣದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
February 21st, 10:55 am
ಎಲ್ಲರಿಗೂ ಮಧ್ಯಾಹ್ನದ ಶುಭಾಶಯಗಳು. ಸಿಯೋಲ್ ನಲ್ಲಿ ನಿಮ್ಮನ್ನು ಭೇಟಿಯಾಗಿ ಸಂತೋಷವಾಗಿದೆ. ಕೇವಲ 12 ತಿಂಗಳಲ್ಲಿ ಕೋರಿಯಾದ ಉದ್ಯಮ ವಲಯದ ನಾಯಕರ ಜತೆ ಇದು ಮೂರನೇ ಸಮಾಲೋಚನಾ ಸಭೆಯಾಗಿದೆ. ಕೊರಿಯಾದ ಉದ್ಯಮಿಗಳು ಭಾರತದ ಬಗ್ಗೆ ಹೆಚ್ಚು ಗಮನಹರಿಸಲು ಎನ್ನುವುದು ನನ್ನ ಇಚ್ಛೆಯಾಗಿದೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಲೂ ಕೊರಿಯಾಗೆ ಭೇಟಿ ನೀಡಿದ್ದೆ. ಆರ್ಥಿಕ ಬೆಳವಣಿಗೆಗೆ ಕೊರಿಯಾ ನನಗೆ ಇಂದಿಗೂ ಮಾದರಿಯಾಗಿದೆ.ಕೊರಿಯಾ ಗಣರಾಜ್ಯಕ್ಕೆ ಆಗಮಿಸಿದ ಪ್ರಧಾನಮಂತ್ರಿ ಮೋದಿ
February 21st, 08:26 am
ಪ್ರಧಾನಿ ನರೇಂದ್ರ ಮೋದಿ ಅವರು ಸಿಯೋಲ್ ಗೆ ಆಗಮಿಸಿದರು , ಕೊರಿಯಾದ ಗಣರಾಜ್ಯಕ್ಕೆ ಭೇಟಿ ನೀಡಿದರು. ಕೊರಿಯಾ ಗಣರಾಜ್ಯದೊಂದಿಗೆ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಉತ್ತೇಜಿಸುವ ಉದ್ದೇಶದಿಂದ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.ರಿಪಬ್ಲಿಫ್ ಕೊರಿಯಾಕ್ಕೆ ತೆರಳುವ ಮೊದಲು ಪ್ರಧಾನ ಮಂತ್ರಿ ಅವರ ಹೇಳಿಕೆ
February 20th, 02:30 pm
ನಾನು ರಿಪಬ್ಲಿಕ್ ಆಫ್ ಕೊರಿಯಾಕ್ಕೆ ಅಧ್ಯಕ್ಷರಾದ ಮೂನ್ ಜೆ-ಇನ್ ಅವರ ಆಹ್ವಾನದ ಮೇರೆಗೆ ತೆರಳುತ್ತಿದ್ದೇನೆ. ರಿಪಬ್ಲಿಕ್ ಆಫ್ ಕೊರಿಯಾಕ್ಕೆ ಇದು ಇದು ನನ್ನ ಎರಡನೇ ಭೇಟಿ ಮತ್ತು ಅಧ್ಯಕ್ಷರಾದ ಮೂನ್ ಜೊತೆ ನನ್ನ ಎರಡನೇ ಸಭೆ.ಕೊರಿಯಾ ಗಣತಂತ್ರದ ಪ್ರಥಮ ಮಹಿಳೆಯನ್ನು ಭೇಟಿಯಾದ ಪ್ರಧಾನಮಂತ್ರಿ
November 05th, 05:53 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೊರಿಯಾ ಗಣತಂತ್ರದ ಪ್ರಥಮ ಮಹಿಳೆ, ಗೌರವಾನ್ವಿತ ಶ್ರೀಮತಿ . ಕಿಂ ಜಂಗ್ ಸೂಕ್ ಅವರನ್ನು ಇಂದು ಭೇಟಿಯಾದರು.ಕೊರಿಯಾದ ಅಧ್ಯಕ್ಷರು ಭಾರತ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಮತ್ತು ಕೊರಿಯಾ ಗಣರಾಜ್ಯದ ನಡುವೆ ಸಹಿ ಹಾಕಲಾದ ತಿಳಿವಳಿಕೆ ಒಪ್ಪಂದ/ದಸ್ತಾವೇಜುಗಳ ಪಟ್ಟಿ
July 10th, 02:46 pm
ಕೊರಿಯಾದ ಅಧ್ಯಕ್ಷರು ಭಾರತ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಮತ್ತು ಕೊರಿಯಾ ಗಣರಾಜ್ಯದ ನಡುವೆ ಸಹಿ ಹಾಕಲಾದ ತಿಳಿವಳಿಕೆ ಒಪ್ಪಂದ/ದಸ್ತಾವೇಜುಗಳ ಪಟ್ಟಿದಕ್ಷಿಣ ಕೊರಿಯಾದ ಅಧ್ಯಕ್ಷರ ಜತೆ ಜಂಟಿ ಪತ್ರಿಕಾ ಸಭೆಯಲ್ಲಿ ಪ್ರಧಾನಮಂತ್ರಿಯವರ ಹೇಳಿಕೆ
July 10th, 02:30 pm
ದಕ್ಷಿಣ ಕೊರಿಯಾದ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ ಕೊರಿಯನ್ ಕಂಪೆನಿಗಳ ಹೂಡಿಕೆಯನ್ನು ಸ್ವಾಗತಿಸಿದರು ಮತ್ತು ಅಂತಹ ಕ್ರಮಗಳು 'ಮೇಕ್ ಇನ್ ಇಂಡಿಯಾ' ಉಪಕ್ರಮವನ್ನು ಬಲಪಡಿಸಿದ್ದು, ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಹೇಳಿದರು. ಎರಡೂ ದೇಶಗಳ ನಡುವಿನ ವಿಶೇಷ ಕಾರ್ಯತಂತ್ರದ ಸಹಭಾಗಿತ್ವವನ್ನು ಹೆಚ್ಚಿಸುವ ಬಗ್ಗೆ ಪ್ರಧಾನಿ ಮಾತನಾಡಿದರು.ಪ್ರಧಾನಿ ಮೋದಿ, ದಕ್ಷಿಣ ಕೊರಿಯಾದ ಅಧ್ಯಕ್ಷರು ಮಹಾತ್ಮಾ ಗಾಂಧಿಗೆ ಗೌರವ ಸಲ್ಲಿಸಿದರು
July 09th, 09:40 pm
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇಂದು ಮಹಾತ್ಮಾ ಗಾಂಧಿಗೆ ಹೊಸದಿಲ್ಲಿಯಲ್ಲಿ ಗಾಂಧಿ ಸ್ಮೃತಿಗೆ ಹೂವಿನ ಗೌರವ ಸಲ್ಲಿಸಿದ್ದಾರೆ.