ಆಯಿ ಶ್ರೀ ಸೋನಾಲ್ ಮಾತಾ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ವಿಡಿಯೊ ಸಮಾವೇಶ ಮೂಲಕ ಮಾಡಿದ ಭಾಷಣದ ಕನ್ನಡ ಅವತರಣಿಕೆ
January 13th, 12:00 pm
ಪ್ರಸ್ತುತ ಆಧ್ಯಾತ್ಮಿಕ ನಾಯಕ (ಗಾದಿಪತಿ) ಪೂಜ್ಯ ಕಾಂಚನ್ ಮಾ, ಮತ್ತು ಆಡಳಿತಾಧಿಕಾರಿ ಪೂಜ್ಯ ಗಿರೀಶ್ ಆಪಾ! ಇಂದು ಈ ಶುಭ ಮಾಸದಲ್ಲಿ, ನಾವೆಲ್ಲರೂ ಆಯಿ ಶ್ರೀ ಸೋನಾಲ್ ಮಾ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದ್ದೇವೆ. ತಾಯಿ ಸೋನಾಲ್ ಅವರ ಆಶೀರ್ವಾದದ ಕೃಪೆಯಲ್ಲಿ ಈ ಪವಿತ್ರ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಲು ಅವಕಾಶ ಸಿಕ್ಕಿರುವುದು ನಿಜಕ್ಕೂ ನನ್ನ ಪಾಲಿಗೆ ಒಂದು ವಿಶೇಷ ಕ್ಷಣವಾಗಿದೆ. ಇಡೀ ಚರಣ್ ಸಮುದಾಯಕ್ಕೆ, ನಿರ್ವಾಹಕರಿಗೆ ಮತ್ತು ಸೋನಲ್ ಮಾ ಅವರ ಭಕ್ತರಿಗೆ ಅಭಿನಂದನೆಗಳು. ಚರಣ್ ಸಮುದಾಯಕ್ಕೆ ಪೂಜ್ಯ, ಶಕ್ತಿ ಮತ್ತು ಸಂಪ್ರದಾಯಗಳ ಕೇಂದ್ರವಾಗಿ ಮಾಢಡಾ ಧಾಮ್ ವಿಶೇಷ ಸ್ಥಾನವನ್ನು ಹೊಂದಿದೆ. ನಾನು ವಿನಯಪೂರ್ವಕವಾಗಿ ಶ್ರೀ ಆಯಿಯ ಪಾದಗಳಿಗೆ ನನ್ನನ್ನು ಅರ್ಪಿಸುತ್ತೇನೆ ಮತ್ತು ಅವರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.ಪ್ರಧಾನಮಂತ್ರಿ ಅವರು ಆಯಿ ಶ್ರೀ ಸೋನಾಲ್ ಮಾತಾ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ವೀಡಿಯೊ ಸಂದೇಶದ ಮೂಲಕ ಉದ್ದೇಶಿಸಿ ಮಾತನಾಡಿದರು
January 13th, 11:30 am
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಆಯಿ ಶ್ರೀ ಸೋನಲ್ ಮಾತಾ ಅವರ ಜನ್ಮಶತಮಾನೋತ್ಸವವು ಪವಿತ್ರವಾದ ಪೌಷ ಮಾಸದಲ್ಲಿ ನಡೆಯುತ್ತಿದ್ದು, ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು, ಸೋನಲ್ ಮಾತಾ ಅವರ ಆಶೀರ್ವಾದಕ್ಕೆ ಪಾತ್ರರಾಗಿರುವುದು ಒಂದು ಸೌಭಾಗ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಇಡೀ ಚರಣ್ ಸಮುದಾಯ ಮತ್ತು ಎಲ್ಲಾ ಆಡಳಿತಗಾರನ್ನು ಅಭಿನಂದಿಸಿದ ಪ್ರಧಾನಿ ಮೋದಿ, “ಮದಡಾ ಧಾಮವು ಚರಣ್ ಸಮುದಾಯದ ಶ್ರದ್ಧೆ, ಶಕ್ತಿ, ಆಚರಣೆ ಮತ್ತು ಸಂಪ್ರದಾಯಗಳ ಕೇಂದ್ರವಾಗಿದೆ. ನಾನು ಶ್ರೀ ಆಯಿಯ ಪಾದಗಳಿಗೆ ನಮಸ್ಕರಿಸುತ್ತೇನೆ ಮತ್ತು ನನ್ನ ನಮನವನ್ನು ಸಲ್ಲಿಸುತ್ತೇನೆ” ಎಂದರು.