ಕಾರ್ಗಿಲ್‌ನಲ್ಲಿ ನಾವು ಕೇವಲ ಯುದ್ಧವನ್ನು ಗೆಲ್ಲಲಿಲ್ಲ; ನಾವು ಸತ್ಯ, ಸಂಯಮ ಮತ್ತು ಸಾಮರ್ಥ್ಯದ ನಂಬಲಾಗದ ಶಕ್ತಿಯನ್ನು ಪ್ರದರ್ಶಿಸಿದ್ದೇವೆ: ಲಡಾಖ್‌ನಲ್ಲಿ ಪ್ರಧಾನಿ ಮೋದಿ

July 26th, 09:30 am

ಲಡಾಖ್‌ನಲ್ಲಿ 25 ನೇ ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಕರ್ತವ್ಯದ ಸಾಲಿನಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ಧೀರರಿಗೆ ಪ್ರಧಾನಿ ಮೋದಿ ನಮನ ಸಲ್ಲಿಸಿದರು. ಕಾರ್ಗಿಲ್‌ನಲ್ಲಿ ನಾವು ಯುದ್ಧವನ್ನು ಗೆದ್ದಿದ್ದಷ್ಟೇ ಅಲ್ಲ, ಸತ್ಯ, ಸಂಯಮ ಮತ್ತು ಶಕ್ತಿಯ ಅದ್ಭುತ ಉದಾಹರಣೆಯನ್ನು ನೀಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ʻಕಾರ್ಗಿಲ್ ವಿಜಯ ದಿನʼದ ಅಂಗವಾಗಿ ಹುತಾತ್ಮ ವೀರ ಯೋಧರಿಗೆ ಪ್ರಧಾನ ಮಂತ್ರಿಗಳು ಗೌರವ ನಮನ ಸಲ್ಲಿಸಿದರು ಮತ್ತು ಲಡಾಖ್‌ನಲ್ಲಿ ನಡೆದ ಶ್ರದ್ಧಾಂಜಲಿ ಸಮಾರಂಭದಲ್ಲಿ ಭಾಗಿಯಾದರು

July 26th, 09:20 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲಡಾಖ್‌ನಲ್ಲಿ ನಡೆದ 25ನೇ ʻಕಾರ್ಗಿಲ್ ವಿಜಯ ದಿನʼದ ಸಂದರ್ಭದಲ್ಲಿ ಕರ್ತವ್ಯದ ವೇಳೆ ಪರಮೋಚ್ಚ ತ್ಯಾಗ ಮಾಡಿದ ವೀರ ಕಲಿಗಳಿಗೆ ಗೌರವ ನಮನ ಸಲ್ಲಿಸಿದರು. ಕಾರ್ಗಿಲ್‌ ವೀರ ಯೋಧರ ಶ್ರದ್ಧಾಂಜಲಿ ಸಮಾರಂಭದಲ್ಲಿ ಪ್ರಧಾನಿ ಭಾಗವಹಿಸಿದರು. ಕಾರ್ಗಿಲ್ ಯುದ್ಧದ ಬಗ್ಗೆ ʻಎನ್‌ಸಿಓʼಗಳ ಸಂಕ್ಷಿಪ್ತ ವಿವರಣೆಯಾದ ʻಗೌರವ್ ಗಾಥಾʼವನ್ನು ಪ್ರಧಾನಮಂತ್ರಿಯವರು ಆಲಿಸಿದರು. ಅಲ್ಲದೆ, ʻಅಮರ್ ಸಂಸ್ಮರಣ್: ನೆನಪಿನ ಗುಡಿಸಲುʼ ಹಾಗೂ ʻವೀರ ಭೂಮಿʼಗೂ ಅವರು ಭೇಟಿ ನೀಡಿದರು.

ರಾಜಸ್ಥಾನದ ಪೋಖ್ರಾನ್ ನಲ್ಲಿ ನಡೆದ 'ವ್ಯಾಯಾಮ ಭಾರತ್ ಶಕ್ತಿ' ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

March 12th, 02:15 pm

ಇಂದು ನಾವು ಇಲ್ಲಿ ನೋಡಿದ್ದನ್ನು, ನಮ್ಮ ಮೂರು ಪಡೆಗಳ ಶೌರ್ಯವು ಗಮನಾರ್ಹವಾಗಿದೆ. ಆಕಾಶದಲ್ಲಿ ಗುಡುಗು... ನೆಲದ ಮೇಲಿನ ಶೌರ್ಯ... ವಿಜಯದ ಮಂತ್ರ ಎಲ್ಲ ದಿಕ್ಕುಗಳಲ್ಲೂ ಪ್ರತಿಧ್ವನಿಸಿತು... ಇದು ನವ ಭಾರತದ ಕರೆ. ಇಂದು, ನಮ್ಮ ಪೋಖ್ರಾನ್ ಮತ್ತೊಮ್ಮೆ ಭಾರತದ ಸ್ವಾವಲಂಬನೆ, ಆತ್ಮವಿಶ್ವಾಸ ಮತ್ತು ಸ್ವಾಭಿಮಾನಕ್ಕೆ ಸಾಕ್ಷಿಯಾಗಿದೆ. ಇದು ಭಾರತದ ಪರಮಾಣು ಶಕ್ತಿಗೆ ಸಾಕ್ಷಿಯಾದ ಪೋಖ್ರಾನ್, ಮತ್ತು ಇಲ್ಲಿಯೇ ನಾವು ಸ್ವದೇಶೀಕರಣದ ಮೂಲಕ ಸಬಲೀಕರಣಕ್ಕೆ ಸಾಕ್ಷಿಯಾಗಿದ್ದೇವೆ. ಇಂದು, ಇಡೀ ರಾಷ್ಟ್ರವು ರಾಜಸ್ಥಾನದ ಶೌರ್ಯದ ಭೂಮಿಯಿಂದ ಭಾರತದ ಶಕ್ತಿಯ ಹಬ್ಬವನ್ನು ಆಚರಿಸುತ್ತದೆ, ಆದರೆ ಅದರ ಪ್ರತಿಧ್ವನಿಗಳು ಭಾರತದಲ್ಲಿ ಮಾತ್ರ ಕೇಳುವುದಿಲ್ಲ, ಅವು ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತವೆ.

ರಾಜಸ್ಥಾನದ ಪೋಖ್ರಾನ್ ನಲ್ಲಿ ತ್ರಿಪಕ್ಷೀಯ ಗುಂಡಿನ ದಾಳಿ ಮತ್ತು ಕುಶಲತೆ ಸಮರಾಭ್ಯಾಸ 'ಭಾರತ್ ಶಕ್ತಿ'ಗೆ ಸಾಕ್ಷಿಯಾದ ಪ್ರಧಾನಿ

March 12th, 01:45 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನದ ಪೋಖ್ರಾನ್ ನಲ್ಲಿ ತ್ರಿ-ಸೇವೆಗಳ ಲೈವ್ ಫೈರ್ ಮತ್ತು ಕುಶಲತೆ ವ್ಯಾಯಾಮದ ರೂಪದಲ್ಲಿ ದೇಶೀಯ ರಕ್ಷಣಾ ಸಾಮರ್ಥ್ಯಗಳ ಸಂಯೋಜಿತ ಪ್ರದರ್ಶನಕ್ಕೆ ಸಾಕ್ಷಿಯಾದರು. 'ಭಾರತ್ ಶಕ್ತಿ' ದೇಶದ ಆತ್ಮನಿರ್ಭರ ಉಪಕ್ರಮದ ಆಧಾರದ ಮೇಲೆ ದೇಶದ ಪರಾಕ್ರಮದ ಪ್ರದರ್ಶನವಾಗಿ ದೇಶೀಯ ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ವೇದಿಕೆಗಳ ಶ್ರೇಣಿಯನ್ನು ಪ್ರದರ್ಶಿಸಲಿದೆ.

ಕಾರ್ಗಿಲ್ ವಿಜಯ್ ದಿನದ ಅಂಗವಾಗಿ ಯೋಧರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

July 26th, 09:18 am

ನಮ್ಮ ರಾಷ್ಟ್ರವನ್ನು ರಕ್ಷಿಸಲು ಕಾರ್ಗಿಲ್‌ ನಲ್ಲಿ ಧೈರ್ಯದಿಂದ ಹೋರಾಡಿದ ಪರಾಕ್ರಮಿಗಳ ಪರಮೊಚ್ಚ ತ್ಯಾಗಕ್ಕಾಗಿ ಎಲ್ಲ ವೀರ ಯೋಧರಿಗೆ

India is a spirit where the nation is above the self: PM Modi

December 19th, 03:15 pm

PM Modi attended function marking Goa Liberation Day. PM Modi noted that even after centuries and the upheaval of power, neither Goa forgot its Indianness, nor did the rest of India forgot Goa. This is a relationship that has only become stronger with time. The people of Goa kept the flame of freedom burning for the longest time in the history of India.

ಗೋವಾದಲ್ಲಿ ಜರುಗಿದ ಗೋವಾ ವಿಮೋಚನಾ ದಿನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಭಾಗಿ

December 19th, 03:12 pm

ಗೋವಾದಲ್ಲಿ ಜರುಗಿದ ಗೋವಾ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ‘ಆಪರೇಷನ್ ವಿಜಯ್’ ಯೋಧರನ್ನು ಪ್ರಧಾನಿ ಸನ್ಮಾನಿಸಿದರು. ನವೀಕರಿಸಿದ ಫೋರ್ಟ್ ಅಗುಡಾ ಜೈಲ್ ಮ್ಯೂಸಿಯಂ, ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಬ್ಲಾಕ್, ನ್ಯೂ ಸೌತ್ ಗೋವಾ ಜಿಲ್ಲಾ ಆಸ್ಪತ್ರೆ, ಮೋಪಾ ವಿಮಾನ ನಿಲ್ದಾಣದಲ್ಲಿ ವೈಮಾನಿಕ ಕೌಶಲ್ಯ ಅಭಿವೃದ್ಧಿ ಕೇಂದ್ರ ಮತ್ತು ದಾಬೋಲಿಮ್-ನವೇಲಿಮ್, ಮಾರ್ಗೋವಾದಲ್ಲಿ ಗ್ಯಾಸ್ ಇನ್ಸುಲೇಟೆಡ್ ಸಬ್‌ಸ್ಟೇಷನ್ ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಅವರು ಉದ್ಘಾಟಿಸಿದರು. ಅವರು ಗೋವಾದಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಟ್ರಸ್ಟ್‌ನ ಇಂಡಿಯಾ ಇಂಟರ್ ನ್ಯಾಷನಲ್ ಯೂನಿವರ್ಸಿಟಿ ಆಫ್ ಲೀಗಲ್ ಎಜುಕೇಶನ್ ಮತ್ತು ರಿಸರ್ಚ್‌ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನ ಮಂತ್ರಿ ಅವರು ಡಿಸೆಂಬರ್ 19ರಂದು ಗೋವಾಕ್ಕೆ ಭೇಟಿ ನೀಡಲಿದ್ದು, ಗೋವಾ ವಿಮೋಚನಾ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ

December 17th, 04:34 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಡಿಸೆಂಬರ್ 19ರಂದು ಗೋವಾಕ್ಕೆ ಭೇಟಿ ನೀಡಲಿದ್ದು, ಮಧ್ಯಾಹ್ನ 3 ಗಂಟೆಗೆ ಗೋವಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಗೋವಾ ವಿಮೋಚನಾ ದಿನಾಚರಣೆಯ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ‘ಆಪರೇಷನ್ ವಿಜಯ್’ ನ ಯೋಧರನ್ನು ಪ್ರಧಾನ ಮಂತ್ರಿ ಅವರು ಸನ್ಮಾನಿಸಲಿದ್ದಾರೆ. ಗೋವಾವನ್ನು ಪೋರ್ಚುಗೀಸ್ ಆಳ್ವಿಕೆಯಿಂದ ವಿಮೋಚನೆಗೊಳಿಸಿದ ಭಾರತೀಯ ಸಶಸ್ತ್ರ ಪಡೆಗಳು ಕೈಗೊಂಡ 'ಆಪರೇಷನ್ ವಿಜಯ್' ಯಶಸ್ಸನ್ನು ಸ್ಮರಿಸಲು ಪ್ರತಿ ವರ್ಷ ಡಿಸೆಂಬರ್ 19 ರಂದು ಗೋವಾ ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ.

50ನೇ ವಿಜಯ್ ದಿವಸ್‌ ಅಂಗವಾಗಿ ಮುಕ್ತಿಜೋಧರು, ಬಿರಂಗನರು ಹಾಗೂ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸಿದ ಪ್ರಧಾನಿ

December 16th, 12:07 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 50ನೇ ವಿಜಯ್ ದಿವಸ್ ಅಂಗವಾಗಿ ಮುಕ್ತಿಜೋಧರು, ಬಿರಂಗನರು ಹಾಗೂ ಭಾರತೀಯ ಸಶಸ್ತ್ರ ಪಡೆಗಳ ವೀರರ ಮಹಾನ್ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸಿದ್ದಾರೆ. ಈ ಸಂದರ್ಭದಲ್ಲಿ ಢಾಕಾದಲ್ಲಿ ರಾಷ್ಟ್ರಪತಿ ಅವರ ಉಪಸ್ಥಿತಿಯು ಪ್ರತಿಯೊಬ್ಬ ಭಾರತೀಯರ ಪಾಲಿಗೂ ವಿಶೇಷ ಹಾಗೂ ಮಹತ್ವಪೂರ್ಣವಾದುದು ಎಂದು ಶ್ರೀ ಮೋದಿ ಹೇಳಿದ್ದಾರೆ.

ಇದು ಭಾರತದ ಬೆಳವಣಿಗೆಯ ಕಥೆಯ ತಿರುವು: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ

November 28th, 11:30 am

ಇಂದು ಮತ್ತೊಮ್ಮೆ ನಾವು ಮನದ ಮಾತಿನಲ್ಲಿ ಒಗ್ಗೂಡುತ್ತಿದ್ದೇವೆ. 2 ದಿನಗಳ ನಂತರ ಡಿಸೆಂಬರ್ ತಿಂಗಳು ಆರಂಭವಾಗುತ್ತಿದೆ. ಡಿಸೆಂಬರ್ ಬರುತ್ತಿದ್ದಂತೆ ಮಾನಸಿಕವಾಗಿ ನಮಗೆ ಅಂತೂ ವರ್ಷ ಮುಗಿಯಿತು ಎಂದೆನ್ನಿಸುತ್ತದೆ. ಇದು ವರ್ಷದ ಕೊನೆಯ ಮಾಸವಾಗಿದೆ. ನವ ವರ್ಷಕ್ಕೆ ಹೊಸ ಯೋಜನೆಗಳನ್ನು ಹೆಣೆಯಲಾರಂಭಿಸುತ್ತೇವೆ. ಇದೇ ತಿಂಗಳು ನೌಕಾಪಡೆ ದಿನ ಮತ್ತು ಸಶಸ್ತ್ರ ಪಡೆಗಳ ಧ್ವಜ ದಿನವನ್ನೂ ದೇಶ ಆಚರಿಸುತ್ತದೆ. ಡಿಸೆಂಬರ್ 16 ರಂದು 1971 ನೇ ವರ್ಷದಲ್ಲಿ ನಡೆದ ಯುದ್ಧದ ಸ್ವರ್ಣ ಜಯಂತಿಯನ್ನು ದೇಶ ಆಚರಿಸುತ್ತಿದೆ ಎಂದು ನಮಗೆಲ್ಲ ತಿಳಿದಿದೆ. ನಾನು ಈ ಎಲ್ಲ ಸಂದರ್ಭಗಳಲ್ಲಿ ದೇಶದ ಸುರಕ್ಷತಾ ಬಲವನ್ನು ಸ್ಮರಿಸುತ್ತೇನೆ. ನಮ್ಮ ಯೋಧರನ್ನು ಸ್ಮರಿಸುತ್ತೇನೆ ಹಾಗೂ ವಿಶೇಷವಾಗಿ ಇಂಥ ಯೋಧರಿಗೆ ಜನ್ಮ ನೀಡಿದ ವೀರ ಮಾತೆಯರನ್ನು ಸ್ಮರಿಸುತ್ತೇನೆ. ಎಂದಿನಂತೆ ಈ ಬಾರಿಯೂ ನನಗೆ ನಮೋ ಆಪ್ ನಲ್ಲಿ ಮತ್ತು ಮೈ ಗೌ ನಲ್ಲಿ ನಿಮ್ಮ ಹಲವಾರು ಸಲಹೆ ಸೂಚನೆಗಳು ದೊರೆತಿವೆ. ನೀವು ನನ್ನನ್ನು ನಿಮ್ಮ ಕುಟುಂಬ ಸದಸ್ಯನಂತೆ ಪರಿಗಣಿಸಿ ಸುಖ ದುಖಃಗಳನ್ನು ಹಂಚಿಕೊಂಡಿದ್ದೀರಿ. ಇದರಲ್ಲಿ ಬಹಳಷ್ಟು ಯುವಜನತೆ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರೂ ಇದ್ದಾರೆ. ಮನದ ಮಾತಿನ ನಮ್ಮ ಈ ಕುಟುಂಬ ನಿರಂತರವಾಗಿ ವೃದ್ಧಿಸುತ್ತಿದೆ ಮತ್ತು ಮನಸ್ಸುಗಳು ಬೆರೆಯುತ್ತಿವೆ ಗುರಿಯೊಂದಿಗೂ ಬೆಸೆಯುತ್ತಿವೆ ಎಂದು ನನಗೆ ಬಹಳ ಸಂತೋಷವೆನಿಸುತ್ತದೆ. ಗಾಢವಾಗಿ ಬೇರೂರುತ್ತಿರುವ ನಮ್ಮ ಸಂಬಂಧಗಳು ನಮ್ಮ ನಡುವೆ ನಿರಂತರವಾಗಿ ಸಕಾರಾತ್ಮಕತೆಯನ್ನು ಪ್ರವಹಿಸುತ್ತಿವೆ.

ವಿಶ್ವಯುದ್ಧಗಳಲ್ಲಿ ಇಟಲಿಯಲ್ಲಿ ಹೋರಾಡಿದ ಭಾರತೀಯ ಸೈನಿಕರ ಸ್ಮರಣಾರ್ಥ ಸಿಖ್ ಸಮುದಾಯ ಮತ್ತು ವಿವಿಧ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

October 30th, 12:55 am

ಮೊದಲ ವಿಶ್ವ ಯುದ್ಧ ಮತ್ತು ಎರಡನೇ ವಿಶ್ವ ಯುದ್ಧದಲ್ಲಿ ಇಟಲಿಯಲ್ಲಿ ಹೋರಾಡಿದ ಸಿಖ್ ಸಮುದಾಯ ಮತ್ತು ಇತರೆ ಸಂಸ್ಥೆಗಳನ್ನೊಳಗೊಂಡ ವಿವಿಧ ಸಂಘಟನೆಗಳ ಸಮುದಾಯದ ಪ್ರತಿನಿಧಿಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ಮಾಡಿದರು ಮತ್ತು ಸಂವಾದ ನಡೆಸಿದರು.

ಮನ್ ಕಿ ಬಾತ್' ಸಕಾರಾತ್ಮಕತೆ ಮತ್ತು ಸೂಕ್ಷ್ಮತೆಯನ್ನು ಹೊಂದಿದೆ. ಇದು ಸಾಮೂಹಿಕ ಪಾತ್ರವನ್ನು ಹೊಂದಿದೆ:ಪ್ರಧಾನಿ ಮೋದಿ

July 25th, 09:44 am

ಮನ್ ಕಿ ಬಾತ್ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಟೋಕಿಯೊ ಒಲಿಂಪಿಕ್ಸ್‌ಗಾಗಿ ಭಾರತದ ತುಕಡಿಯೊಂದಿಗೆ ನಡೆಸಿದ ಸಂವಾದವನ್ನು ನೆನಪಿಸಿಕೊಂಡರು ಮತ್ತು ದೇಶವಾಸಿಗಳು ಅವರನ್ನು ಬೆಂಬಲಿಸುವಂತೆ ಕರೆ ನೀಡಿದರು . ಅಮೃತ್ ಮಹೋತ್ಸವ ಕುರಿತು ಮಾತನಾಡಿದ ಪ್ರಧಾನಿ ಮೋದಿ ಅವರು ವಿಶೇಷ ವೆಬ್‌ಸೈಟ್ ಬಗ್ಗೆ ಪ್ರಸ್ತಾಪಿಸಿದರು, ಅಲ್ಲಿ ದೇಶಾದ್ಯಂತದ ನಾಗರಿಕರು ತಮ್ಮದೇ ಗೀತೆಯಲ್ಲಿ ರಾಷ್ಟ್ರಗೀತೆ ದಾಖಲಿಸಬಹುದು. ಅವರು ದೇಶದಾದ್ಯಂತ ಹಲವಾರು ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಂಡರು, ನೀರಿನ ಸಂರಕ್ಷಣೆಯ ಮಹತ್ವವನ್ನು ಮತ್ತು ಹೆಚ್ಚಿನದನ್ನು ಎತ್ತಿ ತೋರಿಸಿದರು!

ಬಾಂಗ್ಲಾದೇಶ ರಾಷ್ಟ್ರೀಯ ದಿನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭಾಷಣ

March 26th, 04:26 pm

PM Modi took part in the National Day celebrations of Bangladesh in Dhaka. He awarded Gandhi Peace Prize 2020 posthumously to Bangabandhu Sheikh Mujibur Rahman. PM Modi emphasized that both nations must progress together for prosperity of the region and and asserted that they must remain united to counter threats like terrorism.

ರಾಷ್ಟ್ರೀಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ

March 26th, 04:24 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವಾನ್ವಿತ ಅತಿಥಿಯಾಗಿ ಎರಡು ದಿನಗಳ ಬಾಂಗ್ಲಾದೇಶದ ತಮ್ಮ ಭೇಟಿಯ ವೇಳೆ, ಬಾಂಗ್ಲಾದೇಶದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಮಹಮ್ಮದ್ ಅಬ್ದುಲ್ ಹಮೀದ್; ಬಾಂಗ್ಲಾದೇಶದ ಪ್ರಧಾನಮಂತ್ರಿ ಘನತೆವೆತ್ತ ಶೇಖ್ ಹಸೀನಾ; ಶೇಖ್ ಮುಜಿಬುರ್ ರೆಹಮಾನ್ ಅವರ ಕಿರಿಯ ಪುತ್ರಿ ಮಾನ್ಯ ಶೇಖ್ ರೆಹಾನಾ; ಮುಜೀಬ್ ಬೋರ್ಶೋ ಆಚರಣೆಯ ರಾಷ್ಟ್ರೀಯ ಅನುಷ್ಠಾನ ಸಮಿತಿಯ ಮುಖ್ಯ ಸಂಯೋಜಕ, ಡಾ. ಕಮಲ್ ಅಬ್ದುಲ್ ನಾಸರ್ ಚೌಧರಿ ಮತ್ತು ಇತರ ಗಣ್ಯರೊಂದಿಗೆ ಬಾಂಗ್ಲಾದೇಶದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದಲ್ಲಿ ಭಾಗಿಯಾಗಿದ್ದರು. ಬಾಂಗ್ಲಾದೇಶದ ಪಿತಾಮಹ ಬಂಗಬಂಧು ಶೇಖ್ ಮುಜಿಬರ್ ರೆಹಮಾನ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ನಡೆದ ಈ ಕಾರ್ಯಕ್ರಮ ತೇಜ್ ಗಾವ್ ನ ರಾಷ್ಟ್ರೀಯ ಪರೇಡ್ ಚೌಕದಲ್ಲಿ ಜರುಗಿತು.

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ಮನ್ ಕಿ ಬಾತ್ 2.0’ - 21ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ

February 28th, 11:00 am

During Mann Ki Baat, PM Modi, while highlighting the innovative spirit among the country's youth to become self-reliant, said, Aatmanirbhar Bharat has become a national spirit. PM Modi praised efforts of inpiduals from across the country for their innovations, plantation and biopersity conservation in Assam. He also shared a unique sports commentary in Sanskrit.

ರಕ್ಷಣಾ ವಲಯದಲ್ಲಿ ಬಜೆಟ್ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ವೆಬಿನಾರ್‌ನಲ್ಲಿ ಪ್ರಧಾನ ಮಂತ್ರಿಯವರ ಭಾಷಣ

February 22nd, 11:07 am

ರಕ್ಷಣಾ ವಲಯದಲ್ಲಿ ಕೇಂದ್ರ ಬಜೆಟ್ ಪ್ರಸ್ತಾವಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವೆಬಿನಾರ್‌ನಲ್ಲಿ ಮಾತನಾಡಿದರು. ದೇಶದ ರಕ್ಷಣಾ ವಲಯವನ್ನು ಸ್ವಾವಲಂಬಿಯಾಗಿ ಮಾಡುವ ಮಹತ್ವದ ವಿಷಯದ ಮೇಲೆ ಗಮನ ಕೇಂದ್ರೀಕರಿಸುತ್ತಿರುವುದರಿಂದ, ಈ ವೆಬಿನಾರ್‌ ಹೆಚ್ಚಿನ ಪ್ರಾಧಾನ್ಯತೆ ಪಡೆದಿದೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು.

ರಕ್ಷಣಾ ವಲಯದಲ್ಲಿ ಆಯ-ವ್ಯಯ ಪ್ರಸ್ತಾವಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ವೆಬಿನಾರ್‌ನಲ್ಲಿ ಪ್ರಧಾನಿ ಭಾಷಣ

February 22nd, 11:06 am

ರಕ್ಷಣಾ ವಲಯದಲ್ಲಿ ಕೇಂದ್ರ ಬಜೆಟ್ ಪ್ರಸ್ತಾವಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವೆಬಿನಾರ್‌ನಲ್ಲಿ ಮಾತನಾಡಿದರು. ದೇಶದ ರಕ್ಷಣಾ ವಲಯವನ್ನು ಸ್ವಾವಲಂಬಿಯಾಗಿ ಮಾಡುವ ಮಹತ್ವದ ವಿಷಯದ ಮೇಲೆ ಗಮನ ಕೇಂದ್ರೀಕರಿಸುತ್ತಿರುವುದರಿಂದ, ಈ ವೆಬಿನಾರ್‌ ಹೆಚ್ಚಿನ ಪ್ರಾಧಾನ್ಯತೆ ಪಡೆದಿದೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು.

ಚೆನ್ನೈಯಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ/ ಹಸ್ತಾಂತರ/ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಭಾಷಣ

February 14th, 11:31 am

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, “ ಈ ಯೋಜನೆಗಳು ನಾವಿನ್ಯತೆ ಮತ್ತು ಸ್ಥಳೀಯ ಅಭಿವೃದ್ಧಿಯ ಸಂಕೇತ. ಇವುಗಳಿಂದ ತಮಿಳುನಾಡು ಮತ್ತಷ್ಟು ಪ್ರಗತಿಯಾಗಲಿದೆ” 630 ಕಿಲೋಮೀಟರ್ ಅನಿಕಟ್ ಕಾಲುವೆ ವ್ಯವಸ್ಥೆಯ ಆಧುನೀಕರಣಕ್ಕೆ ಇಂದು ಶಿಲಾನ್ಯಾಸ ನೆರವೇರಿಸಿದ್ದು, ಇದರಿಂದ ತಂಜಾವೂರು ಮತ್ತು ಪುದುಕೊಟ್ಟಾಯ್ ಭಾಗಕ್ಕೆ ಹೆಚ್ಚಿನ ರೀತಿಯಲ್ಲಿ ನೆರವು ದೊರೆಯಲಿದೆ. ಮುಂಬರುವ ದಿನಗಳಲ್ಲಿ ಇದರ ಪರಿಣಾಮ ಅತ್ಯಂತ ದೊಡ್ಡದಾಗಿರಲಿದೆ. ಇದರಿಂದ 2.27 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ಸೌಲಭ್ಯವನ್ನು ವಿಸ್ತರಿಸಲಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ತಮಿಳುನಾಡಿನಲ್ಲಿ ಪ್ರಮುಖ ಯೋಜನೆಗಳ ಶಂಕುಸ್ಥಾಪನೆ ಹಾಗು ಉದ್ಘಾಟನೆ

February 14th, 11:30 am

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, “ ಈ ಯೋಜನೆಗಳು ನಾವಿನ್ಯತೆ ಮತ್ತು ಸ್ಥಳೀಯ ಅಭಿವೃದ್ಧಿಯ ಸಂಕೇತ. ಇವುಗಳಿಂದ ತಮಿಳುನಾಡು ಮತ್ತಷ್ಟು ಪ್ರಗತಿಯಾಗಲಿದೆ” 630 ಕಿಲೋಮೀಟರ್ ಅನಿಕಟ್ ಕಾಲುವೆ ವ್ಯವಸ್ಥೆಯ ಆಧುನೀಕರಣಕ್ಕೆ ಇಂದು ಶಿಲಾನ್ಯಾಸ ನೆರವೇರಿಸಿದ್ದು, ಇದರಿಂದ ತಂಜಾವೂರು ಮತ್ತು ಪುದುಕೊಟ್ಟಾಯ್ ಭಾಗಕ್ಕೆ ಹೆಚ್ಚಿನ ರೀತಿಯಲ್ಲಿ ನೆರವು ದೊರೆಯಲಿದೆ. ಮುಂಬರುವ ದಿನಗಳಲ್ಲಿ ಇದರ ಪರಿಣಾಮ ಅತ್ಯಂತ ದೊಡ್ಡದಾಗಿರಲಿದೆ. ಇದರಿಂದ 2.27 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ಸೌಲಭ್ಯವನ್ನು ವಿಸ್ತರಿಸಲಿದೆ ಎಂದು ಹೇಳಿದರು.

ದೆಹಲಿಯ ಕಾರ್ಯಪ್ಪ ಮೈದಾನದಲ್ಲಿ ನಡೆದ ಎನ್ ಸಿಸಿ ಸಮಾವೇಶ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

January 28th, 12:07 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಕಾರ್ಯಪ್ಪ ಮೈದಾನದಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್(ಎನ್ ಸಿಸಿ) ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಕೇಂದ್ರ ರಕ್ಷಣಾ ಸಚಿವರು, ರಕ್ಷಣಾ ಪಡೆಗಳ ಮುಖ್ಯಸ್ಥರು ಮತ್ತು ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಧಾನಮಂತ್ರಿ ಅವರು ಎನ್ ಸಿಸಿ ಕೆಡೆಟ್ ಗಳ ಪಥಸಂಚಲನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾದರು.