ಡಿಸೆಂಬರ್ 17 ರಂದು ರಾಜಸ್ಥಾನಕ್ಕೆ ಪ್ರಧಾನಮಂತ್ರಿ ಭೇಟಿ

December 16th, 03:19 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಸೆಂಬರ್ 17ರಂದು ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅವರು ರಾಜಸ್ಥಾನ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಆಯೋಜಿಸಿರುವ ‘ಏಕ ವರ್ಷ-ಪರಿಣಾಮ ಉತ್ಕರ್ಷ್‌’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಪ್ರಧಾನಿ ಅವರು ರಾಜಸ್ಥಾನದ ಜೈಪುರದಲ್ಲಿ ಸುಮಾರು 46,300 ಕೋಟಿ ರೂ. ಮೌಲ್ಯದ ಇಂಧನ, ರಸ್ತೆ, ರೈಲ್ವೆ ಮತ್ತು ನೀರಿಗೆ ಸಂಬಂಧಿಸಿದ 24 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ರಾಜಸ್ಥಾನದ ಜೈಪುರದಲ್ಲಿ “ರೈಸಿಂಗ್ ರಾಜಸ್ಥಾನ್ ಗ್ಲೋಬಲ್ ಇನ್ವೆಸ್ಟ್ ಮೆಂಟ್ ಸಮ್ಮಿಟ್ 2024”ರ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

December 09th, 11:00 am

ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಹರಿಭಾವು ಬಗಡೆ ಜಿ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಜಿ ಶರ್ಮಾ, ರಾಜಸ್ಥಾನ ಸರ್ಕಾರದ ಸಚಿವರೆ, ಸಂಸದರೆ, ವಿಧಾನಸಭೆ ಸದಸ್ಯರೆ, ಉದ್ಯಮ ಸಹೋದ್ಯೋಗಿಗಳೆ, ವಿವಿಧ ರಾಯಭಾರಿಗಳೆ, ರಾಯಭಾರಿ ಪ್ರತಿನಿಧಿಗಳೆ, ಇತರೆ ಗಣ್ಯರೆ, ಮಹಿಳೆಯರು ಮತ್ತು ಮಹನೀಯರೆ,

ರೈಸಿಂಗ್ ರಾಜಸ್ಥಾನ ಜಾಗತಿಕ ಹೂಡಿಕೆ ಶೃಂಗಸಭೆ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

December 09th, 10:34 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನದ ಜೈಪುರದ ಜೈಪುರ ವಸ್ತುಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿ (ಜೆಇಸಿಸಿ) ರೈಸಿಂಗ್ ರಾಜಸ್ಥಾನ ಜಾಗತಿಕ ಹೂಡಿಕೆ ಶೃಂಗಸಭೆ 2024 ಮತ್ತು ರಾಜಸ್ಥಾನ ಗ್ಲೋಬಲ್ ಬಿಸಿನೆಸ್ ಎಕ್ಸ್ ಪೋವನ್ನು ಉದ್ಘಾಟಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಜಸ್ಥಾನದ ಯಶಸ್ಸಿನ ಪಯಣದಲ್ಲಿ ಇಂದು ಮತ್ತೊಂದು ವಿಶೇಷ ದಿನವಾಗಿದೆ ಎಂದರು. ಪಿಂಕ್ ಸಿಟಿ ಜೈಪುರದಲ್ಲಿ ನಡೆಯುತ್ತಿರುವ ರೈಸಿಂಗ್ ರಾಜಸ್ಥಾನ್ ಗ್ಲೋಬಲ್ ಇನ್ವೆಸ್ಟ್ಮೆಂಟ್ ಶೃಂಗಸಭೆ 2024ಕ್ಕೆ ಆಗಮಿಸಿರುವ ಎಲ್ಲ ಉದ್ಯಮ ಮತ್ತು ವಾಣಿಜ್ಯ ಮುಖಂಡರು, ಹೂಡಿಕೆದಾರರು, ಪ್ರತಿನಿಧಿಗಳನ್ನು ಅವರು ಅಭಿನಂದಿಸಿದರು. ಈ ಭವ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಅವರು ರಾಜಸ್ಥಾನ ಸರ್ಕಾರವನ್ನೂ ಅಭಿನಂದಿಸಿದರು.

The BJP has entered the electoral field in Jharkhand with the promise of Suvidha, Suraksha, Sthirta, Samriddhi: PM Modi in Garhwa

November 04th, 12:21 pm

Prime Minister Narendra Modi today addressed a massive election rally in Garhwa, Jharkhand. Addressing the gathering, the PM said, This election in Jharkhand is taking place at a time when the entire country is moving forward with a resolution to become developed by 2047. The coming 25 years are very important for both the nation and Jharkhand. Today, there is a resounding call across Jharkhand... ‘Roti, Beti, Maati Ki Pukar, Jharkhand Mein…Bhajpa, NDA Sarkar’.”

PM Modi campaigns in Jharkhand’s Garhwa and Chaibasa

November 04th, 11:30 am

Prime Minister Narendra Modi today addressed massive election rallies in Garhwa and Chaibasa, Jharkhand. Addressing the gathering, the PM said, This election in Jharkhand is taking place at a time when the entire country is moving forward with a resolution to become developed by 2047. The coming 25 years are very important for both the nation and Jharkhand. Today, there is a resounding call across Jharkhand... ‘Roti, Beti, Maati Ki Pukar, Jharkhand Mein…Bhajpa, NDA Sarkar’.”

Today our MSMEs have a great opportunity to become a strong part of the global supply chain: PM Modi

February 27th, 06:30 pm

Prime Minister Narendra Modi participated in the program ‘Creating the Future – Digital Mobility for Automotive MSME Entrepreneurs’ in Madurai, Tamil Nadu today and addressed thousands of MSMEs entrepreneurs working in the motive sector. Addressing the event, the Prime Minister mentioned that 7 percent of the country’s GDP comes from the mobile industry which makes it a major part of the nation’s nomy. The Prime Minister also acknowledged the role of the mobile industry in promoting manufacturing and innovation.

ತಮಿಳುನಾಡಿನ ಮಧುರೈನಲ್ಲಿ ನಡೆದ 'ಡಿಜಿಟಲ್ ಮೊಬಿಲಿಟಿ – ಆಟೋಮೋಟಿವ್ ಎಂಎಸ್‌ಎಂಇ ಉದ್ಯಮಿಗಳಿಗೆ ಭವಿಷ್ಯ ಸೃಷ್ಟಿʼ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿಗಳು

February 27th, 06:13 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನ ಮಧುರೈನಲ್ಲಿ ನಡೆದ ' ಡಿಜಿಟಲ್ ಮೊಬಿಲಿಟಿ – ಟೋಮೋಟಿವ್ ಎಂಎಸ್‌ಎಂಇ ಉದ್ಯಮಿಗಳಿಗೆ ಭವಿಷ್ಯ ಸೃಷ್ಟಿʼ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಮತ್ತು ವಾಹನ ವಲಯದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (ಎಂಎಸ್‌ಎಂಇ) ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಗಾಂಧಿಗ್ರಾಮದಲ್ಲಿ ತರಬೇತಿ ಪಡೆದ ಮಹಿಳಾ ಉದ್ಯಮಿಗಳು ಮತ್ತು ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಗ್ರೀಸ್‌ನ ಅಥೆನ್ಸ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ

August 25th, 09:30 pm

ಸಂಭ್ರಮದ ವಾತಾವರಣ, ಹಬ್ಬದ ಉತ್ಸಾಹ ಇದ್ದಾಗ, ಥಟ್ಟನೆ ಯಾರೊಬ್ಬರೂ ತಮ್ಮ ಕುಟುಂಬ ಸದಸ್ಯರ ನಡುವೆ ಇರಲು ಬಯಸುತ್ತಾರೆ. ನಾನು ಕೂಡ ಇಂದು ನನ್ನ ಕುಟುಂಬ ಸದಸ್ಯರ ನಡುವೆ ಬಂದಿದ್ದೇನೆ. ಇದು ಶ್ರಾವಣ ಮಾಸ. ಒಂದು ರೀತಿಯಲ್ಲಿ ಶಿವನ ತಿಂಗಳು ಎಂದು ಪರಿಗಣಿಸಲಾಗಿದೆ, ಮತ್ತು ನಮ್ಮ ದೇಶವು ಈ ಪವಿತ್ರ ತಿಂಗಳಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಚಂದ್ರನ ಕತ್ತಲ ವಲಯವಾದ ದಕ್ಷಿಣ ಧ್ರುವದಲ್ಲಿ ಇಳಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಭಾರತವು ಚಂದ್ರನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದೆ, ಭಾರತ ತನ್ನ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿಸಿದೆ. ಪ್ರಪಂಚದಾದ್ಯಂತ ಅಭಿನಂದನಾ ಸಂದೇಶಗಳು ಹರಿದು ಬರುತ್ತಿವೆ. ಜನರು ತಮ್ಮ ಶುಭ ಹಾರೈಕೆಗಳನ್ನು ಕಳುಹಿಸುತ್ತಿದ್ದಾರೆ. ಜನರು ನಿಮ್ಮನ್ನು ಅಭಿನಂದಿಸುತ್ತಿದ್ದಾರೆ ಎಂದು ನಾನು ದೃಢವಾಗಿ ನಂಬುತ್ತೇನೆ, ಹೌದಲ್ಲವೇ? ನೀವು ಸಹ ಅನೇಕ ಅಭಿನಂದನೆಗಳನ್ನು ಸ್ವೀಕರಿಸುತ್ತಿದ್ದೀರಿ, ಅಲ್ಲವೇ? ಪ್ರತಿಯೊಬ್ಬ ಭಾರತೀಯನಿಗೂ ಅಭಿನಂದನೆಗಳು ಹರಿದುಬರುತ್ತಿವೆ. ಇಡೀ ಸಾಮಾಜಿಕ ಮಾಧ್ಯಮವು ಅಭಿನಂದನಾ ಸಂದೇಶಗಳಿಂದ ತುಂಬಿ ಹೋಗಿದೆ. ಯಶಸ್ಸು ತುಂಬಾ ಮಹತ್ವದ್ದಾಗಿದ್ದಾಗ, ಆ ಯಶಸ್ಸಿನ ಉತ್ಸಾಹವು ಎಲ್ಲೆಡೆ ಸಮಾನವಾಗಿರುತ್ತದೆ. ನೀವು ವಿಶ್ವದ ಯಾವ ಮೂಲೆಯಲ್ಲಾದರೂ ವಾಸಿಸಬಹುದು, ಆದರೆ ಭಾರತವು ನಿಮ್ಮ ಹೃದಯದಲ್ಲಿ ಮಿಡಿಯುತ್ತದೆ ಎಂದು ನಿಮ್ಮ ಮುಖವೇ ನನಗೆ ಹೇಳುತ್ತಿದೆ. ಭಾರತ ನಿಮ್ಮ ಹೃದಯದಲ್ಲಿ ಮಿಡಿಯುತ್ತದೆ, ಭಾರತ ನಿಮ್ಮ ಹೃದಯದಲ್ಲಿ ಮಿಡಿಯುತ್ತದೆ, ಭಾರತ ನಿಮ್ಮ ಮನದಲ್ಲಿ ಮಿಡಿಯುತ್ತದೆ. ಇಂದು, ನಾನು ನಿಮ್ಮೆಲ್ಲರ ನಡುವೆ ಗ್ರೀಸ್‌ನಲ್ಲಿದ್ದೇನೆ, ಮತ್ತೊಮ್ಮೆ, ಚಂದ್ರಯಾನದ ಅದ್ಭುತ ಯಶಸ್ಸಿಗಾಗಿ ನಾನು ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಅಥೆನ್ಸ್ ನಲ್ಲಿ ಭಾರತೀಯ ಸಮುದಾಯದೊಂದಿಗೆ ಪ್ರಧಾನಮಂತ್ರಿ ಅವರ ಸಂವಾದ

August 25th, 09:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಆಗಸ್ಟ್ 25ರಂದು ಅಥೆನ್ಸ್ ನ ಅಥೆನ್ಸ್ ಕನ್ಸರ್ವೇಟರಿಯಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಭಾಷಣ ಮಾಡಿದರು.

ಬ್ರಿಕ್ಸ್-ಆಫ್ರಿಕಾ ಔಟ್‌ ರೀಚ್ ಮತ್ತು ಬ್ರಿಕ್ಸ್ ಪ್ಲಸ್ ಸಂವಾದದಲ್ಲಿ ಪ್ರಧಾನಮಂತ್ರಿ

August 25th, 12:12 am

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 24 ಆಗಸ್ಟ್ 2023 ರಂದು ಜೋಹಾನ್ಸ್ಬರ್ಗ್ನಲ್ಲಿ ಬ್ರಿಕ್ಸ್-ಆಫ್ರಿಕಾ ಔಟ್ರೀಚ್ ಮತ್ತು ಬ್ರಿಕ್ಸ್ ಪ್ಲಸ್ ಸಂವಾದದಲ್ಲಿ ಭಾಗವಹಿಸಿದರು.

ʻಬ್ರಿಕ್ಸ್-ಆಫ್ರಿಕಾ ಔಟ್ರೀಚ್ʼ ಮತ್ತು ʻಬ್ರಿಕ್ಸ್ ಪ್ಲಸ್ʼ ಸಂವಾದದಲ್ಲಿ ಪ್ರಧಾನಮಂತ್ರಿಯವರ ಹೇಳಿಕೆಗಳ ಕನ್ನಡ ಅನುವಾದ

August 24th, 02:38 pm

ಆಫ್ರಿಕಾದ ನೆಲದಲ್ಲಿ, ನನ್ನೆಲ್ಲಾ ಸ್ನೇಹಿತರ ನಡುವೆ ಇಲ್ಲಿರುವುದು ನನಗೆ ಸಂತೋಷ ತಂದಿದೆ.

ನವದೆಹಲಿಯ ಪ್ರಗತಿ ಮೈದಾನದಲ್ಲಿ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮತ್ತು ಸಮಾವೇಶ ಕೇಂದ್ರ (ಐಇಸಿಸಿ) ಸಂಕೀರ್ಣವನ್ನು ಉದ್ಘಾಟಿಸಿ ಪ್ರಧಾನಮಂತ್ರಿಯವರ ಭಾಷಣ

July 26th, 11:28 pm

ಇಂದು, ಈ ದೈವಿಕ ಮತ್ತು ಭವ್ಯವಾದ 'ಭಾರತ ಮಂಟಪ'ವನ್ನು ನೋಡುವಾಗ ಪ್ರತಿಯೊಬ್ಬ ಭಾರತೀಯನು ಸಂತೋಷ, ಸಡಗರ ಮತ್ತು ಹೆಮ್ಮೆಯ ಪ್ರಜ್ಞೆಯಿಂದ ತುಂಬಿದ್ದಾನೆ. 'ಭಾರತ ಮಂಟಪ' ಭಾರತದ ಸಾಮರ್ಥ್ಯ ಮತ್ತು ಹೊಸ ಶಕ್ತಿಗೆ ಸಾಕ್ಷಿಯಾಗಲು ಆಹ್ವಾನವಾಗಿದೆ. 'ಭಾರತ ಮಂಟಪ' ಭಾರತದ ಭವ್ಯತೆ ಮತ್ತು ಅದರ ಇಚ್ಛಾಶಕ್ತಿಯ ದೃಷ್ಟಿಕೋನವಾಗಿದೆ. ಕೊರೋನಾ ಸೋಂಕಿನ ಸವಾಲಿನ ಸಮಯದಲ್ಲಿ ಎಲ್ಲೆಡೆ ಕೆಲಸ ಸ್ಥಗಿತಗೊಂಡಾಗ, ನಮ್ಮ ಕಾರ್ಮಿಕರು ಅದರ ನಿರ್ಮಾಣವನ್ನು ಪೂರ್ಣಗೊಳಿಸಲು ಹಗಲು ರಾತ್ರಿ ಕೆಲಸ ಮಾಡಿದರು.

ನವದೆಹಲಿಯ ಪ್ರಗತಿ ಮೈದಾನದಲ್ಲಿ ಅಂತರಾಷ್ಟ್ರೀಯ ಪ್ರದರ್ಶನ ಮತ್ತು ಸಭಾಂಗಣ (ಐಐಸಿಸಿ) ಸಂಕೀರ್ಣವನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು

July 26th, 06:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಅಂತರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶ ಸಭಾಂಗಣ (ಇಂಟರ್ನ್ಯಾಷನಲ್ ಎಕ್ಸಿಬಿಷನ್-ಕಮ್-ಕನ್ವೆನ್ಷನ್ ಸೆಂಟರ್ - ಐಐಸಿಸಿ) ಸಂಕೀರ್ಣವನ್ನು ಉದ್ಘಾಟಿಸಿದರು. ಅವರು ಜಿ-20 ನಾಣ್ಯ ಮತ್ತು ಜಿ-20 ಅಂಚೆಚೀಟಿಯನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಿದರು. ಸಮಾರಂಭದಲ್ಲಿ, ಡ್ರೋನ್ ಮೂಲಕ ನಡೆಸಲಾದ ವೀಕ್ಷಣಾ ವ್ಯವಸ್ಥೆ ಮೂಲಕ ಕನ್ವೆನ್ಷನ್ ಸೆಂಟರ್ ಗೆ ‘ಭಾರತ ಮಂಟಪ’ ಎಂದು ನಾಮಕರಣ ಮಾಡಲಾಯಿತು ಮತ್ತು ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಪ್ರಧಾನಮಂತ್ರಿ ಭಾಗವಹಿಸಿದರು. ಪ್ರಧಾನಮಂತ್ರಿಯವರ ದೃಷ್ಟಿಕೋನದಂತೆ, ಮತ್ತು ರಾಷ್ಟ್ರೀಯ ಯೋಜನೆಯಾಗಿ ಸುಮಾರು ರೂ 2700 ಕೋಟಿ ವೆಚ್ಚದಲ್ಲಿ ಈ ಸಂಕೀರ್ಣವನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಗತಿಯ ಹಾದಿಯ ಭಾರತವನ್ನು ಜಾಗತಿಕ ವ್ಯಾಪಾರ ತಾಣವಾಗಿ ಉತ್ತೇಜಿಸಲು ಈ ಸಂಕೀರ್ಣ ಸಹಾಯ ಮಾಡುತ್ತದೆ.

ಜಿ20 ರಾಷ್ಟ್ರಗಳ ಇಂಧನ ಸಚಿವರ ಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ವಿಡಿಯೊ ಸಂದೇಶದ ಪಠ್ಯ

July 22nd, 10:00 am

ನಮ್ಮಲ್ಲಿನ ವಿಭಿನ್ನ ನೈಜತೆಗಳನ್ನು ಗಮನಿಸಿದರೆ, ಶಕ್ತಿಯ ಪರಿವರ್ತನೆಗೆ ನಮ್ಮ ಮಾರ್ಗಗಳು ವಿಭಿನ್ನವಾಗಿವೆ. ಆದರೆ, ನಮ್ಮೆಲ್ಲರ ಗುರಿಗಳು ಒಂದೇ ಎಂದು ನಾನು ದೃಢವಾಗಿ ನಂಬುತ್ತೇನೆ. ಹಸಿರು ಇಂಧನದ ಬೆಳವಣಿಗೆ ಮತ್ತು ಶಕ್ತಿ ಪರಿವರ್ತನೆಯಲ್ಲಿ ಭಾರತವು ಮಹತ್ತರವಾದ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಮತ್ತು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ. ನಾವು ನಮ್ಮ ಹವಾಮಾನ ಬದ್ಧತೆಗಳ ಮೇಲೆ ಅಚಲವಾಗಿ ಚಲಿಸುತ್ತಿದ್ದೇವೆ. ಹವಾಮಾನ ಕ್ರಮದಲ್ಲಿ ಭಾರತ ನಾಯಕತ್ವವನ್ನು ತೋರಿಸಿದೆ. ನಾವು ನಮ್ಮ ಪಳೆಯುಳಿಕೆ ರಹಿತ ವಿದ್ಯುತ್ ಸಾಮರ್ಥ್ಯದ ಗುರಿಯನ್ನು ಒಂಬತ್ತು ವರ್ಷಗಳ ಮುಂಚಿತವಾಗಿಯೇ ಸಾಧಿಸಿದ್ದೇವೆ. ನಾವು ಈಗ ಹೆಚ್ಚಿನ ಗುರಿಯನ್ನು ಹೊಂದಿದ್ದೇವೆ. ನಾವು 2030 ರ ವೇಳೆಗೆ ಶೇಕಡಾ 50 ರಷ್ಟು ಪಳೆಯುಳಿಕೆ ರಹಿತ ಸ್ಥಾಪಿತ ಸಾಮರ್ಥ್ಯವನ್ನು ಸಾಧಿಸಲು ಯೋಜಿಸಿದ್ದೇವೆ. ಸೌರ ಮತ್ತು ಪವನ ಶಕ್ತಿಯ ಜಾಗತಿಕ ನಾಯಕರಲ್ಲಿ ಭಾರತವೂ ಸಹ ಇದೆ. ಜಿ20 ಕಾರ್ಯತಂಡದ ಪ್ರತಿನಿಧಿಗಳು ಪಾವಗಡ ಸೋಲಾರ್ ಪಾರ್ಕ್ ಮತ್ತು ಮೊಧೇರಾ ಸೋಲಾರ್ ಗ್ರಾಮಕ್ಕೆ ಭೇಟಿ ನೀಡಿರುವುದು ಸಂತಸ ತಂದಿದೆ. ಶುದ್ಧ ಇಂಧನಕ್ಕೆ ಭಾರತದ ಬದ್ಧತೆಯ ಮಟ್ಟ ಮತ್ತು ಪ್ರಮಾಣವನ್ನು ಅವರು ಸನಿಹದಿಂದ ವೀಕ್ಷಿಸಿದ್ದಾರೆ.

ಜಿ-20 ಇಂಧನ ಸಚಿವರ ಸಮಾವೇಶ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

July 22nd, 09:48 am

ಪ್ರತಿಯೊಂದು ರಾಷ್ಟ್ರವು ವಿಭಿನ್ನವಾದ ವಾಸ್ತವತೆ ಮತ್ತು ಇಂಧನ ಪರಿವರ್ತನೆಯ ಮಾರ್ಗ ಹೊಂದಿದ್ದರೂ ಸಹ, ಪ್ರತಿಯೊಂದು ದೇಶದ ಗುರಿಗಳು ಒಂದೇ ಆಗಿರುತ್ತವೆ. ಹಸಿರು ಬೆಳವಣಿಗೆ ಮತ್ತು ಇಂಧನ ಸ್ಥಿತ್ಯಂತರದಲ್ಲಿ ಭಾರತದ ಪ್ರಯತ್ನಗಳನ್ನು ಪ್ರಸ್ತಾಪಿಸಿದ ಅವರು, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಮತ್ತು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ. ಜತೆಗೆ ಅದು ಹವಾಮಾನ ಬದ್ಧತೆಯ ಕಡೆಗೆ ಬಲವಾಗಿ ಚಲಿಸುತ್ತಿದೆ. ಭಾರತವು ತನ್ನ ಉರವಲು ರಹಿತ ಸ್ಥಾಪಿತ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಗುರಿಯನ್ನು 9 ವರ್ಷಗಳ ಮೊದಲೇ ಸಾಧಿಸಿದೆ, ಇನ್ನೂ ಹೆಚ್ಚಿನ ಗುರಿ ಹೊಂದಿದೆ. 2030ರ ವೇಳೆಗೆ ರಾಷ್ಟ್ರವು 50 ಪ್ರತಿಶತ ಉರವಲುರಹಿತ ಸ್ಥಾಪಿತ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಸಾಧಿಸಲು ಯೋಜಿಸಿದೆ. “ಸೌರ ಮತ್ತು ಪವನ ಶಕ್ತಿ ಉತ್ಪಾದನೆಯ ಜಾಗತಿಕ ನಾಯಕರಲ್ಲಿ ಭಾರತವೂ ಒಂದಾಗಿದೆ”, ಪಾವಗಡ ಸೋಲಾರ್ ಪಾರ್ಕ್ ಮತ್ತು ಮೋದಗೇರಾ ಸೋಲಾರ್ ಪಾರ್ಕ್‌ಗೆ ಭೇಟಿ ನೀಡುವ ಮೂಲಕ ಕಾರ್ಯಕಾರಿ ಗುಂಪಿನ ಪ್ರತಿನಿಧಿಗಳು ಭಾರತದ ಬದ್ಧತೆಯ ಮಟ್ಟ ಮತ್ತು ಪ್ರಮಾಣವನ್ನು ವೀಕ್ಷಿಸುವ ಅವಕಾಶ ಪಡೆದುಕೊಂಡಿದ್ದಾರೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.

ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ʻಸಾಯಿ ಹಿರಾ ಗ್ಲೋಬಲ್ ಕನ್ವೆನ್ಷನ್ ಸೆಂಟರ್ʼ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

July 04th, 11:00 am

ಪುಟ್ಟಪರ್ತಿಗೆ ಹಲವು ಬಾರಿ ಭೇಟಿ ನೀಡುವ ಸೌಭಾಗ್ಯ ನನಗೆ ದೊರೆತಿದೆ. ನಾನು ಮತ್ತೊಮ್ಮೆ ನಿಮ್ಮೆಲ್ಲರ ನಡುವೆ ಇರಲು ಬಯಸಿದ್ದೆ, ನಿಮ್ಮನ್ನು ಭೇಟಿಯಾಗಲು ಮತ್ತು ಇಂದು ಅಲ್ಲಿ ಉಪಸ್ಥಿತರಿರುವ ಮೂಲಕ ಈ ಕಾರ್ಯಕ್ರಮದ ಭಾಗವಾಗಲು ಬಯಸಿದ್ದೆ. ಆದರೆ, ನನ್ನ ಬಿಡುವುರಹಿತ ವೇಳಾಪಟ್ಟಿಯಿಂದಾಗಿ, ನನಗೆ ಇದು ಸಾಧ್ಯವಾಗಲಿಲ್ಲ. ನನ್ನನ್ನು ಆಹ್ವಾನಿಸುವಾಗ, ಭಾಯಿ ರತ್ನಾಕರ್ ಅವರು 'ನೀವು ಒಮ್ಮೆ ಬಂದು ಆಶೀರ್ವಾದ ನೀಡಬೇಕು' ಎಂದು ಹೇಳಿದರು. ರತ್ನಾಕರ್ ಅವರ ಹೇಳಿಕೆಯನ್ನು ಸರಿಪಡಿಸುವ ಅಗತ್ಯವಿದೆ ನಾನು ಭಾವಿಸುತ್ತೇನೆ. ನಾನು ಖಂಡಿತವಾಗಿಯೂ ಅಲ್ಲಿಗೆ ಬರುತ್ತೇನೆ, ಆದರೆ ಆಶೀರ್ವಾದ ನೀಡಲು ಅಲ್ಲ, ಬದಲಾಗಿ ಆಶೀರ್ವಾದ ಪಡೆಯಲು. ತಂತ್ರಜ್ಞಾನದ ಸಹಾಯದಿಂದ ನಾನು ಇಂದು ನಿಮ್ಮೆಲ್ಲರ ನಡುವೆ ಇದ್ದೇನೆ. ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ಜೊತೆ ಸಂಬಂಧ ಹೊಂದಿರುವ ಎಲ್ಲಾ ಸದಸ್ಯರು ಮತ್ತು ಸತ್ಯ ಸಾಯಿ ಬಾಬಾ ಅವರ ಎಲ್ಲಾ ಭಕ್ತರನ್ನು ಇಂದು ಈ ಕಾರ್ಯಕ್ರಮಕ್ಕಾಗಿ ನಾನು ಅಭಿನಂದಿಸುತ್ತೇನೆ. ಈ ಇಡೀ ಕಾರ್ಯಕ್ರಮದಲ್ಲಿ ಶ್ರೀ ಸತ್ಯ ಸಾಯಿ ಅವರ ಸ್ಫೂರ್ತಿ ಮತ್ತು ಆಶೀರ್ವಾದ ನಮ್ಮೊಂದಿಗಿದೆ. ಈ ಪವಿತ್ರ ಸಂದರ್ಭದಲ್ಲಿ ಶ್ರೀ ಸತ್ಯ ಸಾಯಿ ಬಾಬಾ ಅವರ ಧ್ಯೇಯದ ವಿಸ್ತರಣೆಯನ್ನು ನೋಡಿ ನನಗೆ ಸಂತಸವಾಗಿದೆ. ದೇಶವು ʻಶ್ರೀ ಹಿರಾ ಗ್ಲೋಬಲ್ ಕನ್ವೆನ್ಷನ್ ಸೆಂಟರ್ʼ ರೂಪದಲ್ಲಿ ಪ್ರಮುಖ ಚಿಂತಕರ ಚಾವಡಿಯನ್ನು ಪಡೆಯುತ್ತಿದೆ. ನಾನು ಈ ಸಮಾವೇಶ ಕೇಂದ್ರದ ಚಿತ್ರಗಳನ್ನು ಮತ್ತು ಅದರ ಇಣುಕುನೋಟಗಳನ್ನು ಈಗ ಪ್ರದರ್ಶಿಸಲಾದ ಕಿರುಚಿತ್ರದಲ್ಲಿ ನೋಡಿದ್ದೇನೆ. ಇದು ಆಧುನಿಕತೆಯ ಸ್ಪರ್ಶದೊಂದಿಗೆ ಆಧ್ಯಾತ್ಮಿಕ ಅನುಭವವನ್ನು ಒದಗಿಸುತ್ತದೆ. ಇದು ಸಾಂಸ್ಕೃತಿಕ ದೈವತ್ವದ ಜೊತೆಗೆ, ಬೌದ್ಧಿಕ ಭವ್ಯತೆಯನ್ನು ಒಳಗೊಂಡಿದೆ. ಈ ಕೇಂದ್ರವು ಆಧ್ಯಾತ್ಮಿಕ ಸಮ್ಮೇಳನಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಪ್ರಪಂಚದಾದ್ಯಂತದ ವಿವಿಧ ಕ್ಷೇತ್ರಗಳ ವಿದ್ವಾಂಸರು ಮತ್ತು ತಜ್ಞರು ಇಲ್ಲಿ ಒಟ್ಟುಗೂಡುತ್ತಾರೆ. ಈ ಕೇಂದ್ರವು ಯುವಕರಿಗೆ ಹೆಚ್ಚಿನ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ.

ಆಂಧ್ರ ಪ್ರದೇಶದ ಪುಟ್ಟಪರ್ತಿಯಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಾಯಿ ಹಿರಾ ಗ್ಲೋಬಲ್ ಕನ್ವೆನ್ಷನ್ ಸೆಂಟರ್ ಉದ್ಘಾಟಿಸಿದ ಪ್ರಧಾನಿ

July 04th, 10:36 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಂಧ್ರ ಪ್ರದೇಶದ ಪುಟ್ಟಪರ್ತಿಯಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಶ್ರೀ ಸಾಯಿ ಹಿರಾ ಜಾಗತಿಕ ಸಮ್ಮೇಳನ ಸಭಾಂಗಣ (ಗ್ಲೋಬಲ್ ಕನ್ವೆನ್ಷನ್ ಸೆಂಟರ್) ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭವು ವಿಶ್ವದಾದ್ಯಂತದಿಂದ ಆಗಮಿಸಿರುವ ಪ್ರಮುಖ ಗಣ್ಯರು ಮತ್ತು ಭಕ್ತರ ಉಪಸ್ಥಿತಿಗೆ ಸಾಕ್ಷಿಯಾಯಿತು.

ʻಇಂಡಿಯಾ ಟುಡೇ ಕಾನ್‌ಕ್ಲೇವ್ʼನಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

March 18th, 11:17 pm

`ಇಂಡಿಯಾ ಟುಡೇ ಕಾನ್‌ಕ್ಲೇವ್‌ʼನಲ್ಲಿ ನಮ್ಮೊಂದಿಗಿರುವ ಎಲ್ಲ ಗಣ್ಯರಿಗೆ ಶುಭಾಶಯಗಳು! ಡಿಜಿಟಲ್ ಮಾಧ್ಯಮದ ಮೂಲಕ ನಮ್ಮೊಂದಿಗೆ ಸೇರಿದ ಭಾರತ ಮತ್ತು ವಿದೇಶಗಳ ವೀಕ್ಷಕರು ಮತ್ತು ಓದುಗರಿಗೆ ಶುಭಾಶಯಗಳು. ಈ ಸಮಾವೇಶದ ವಿಷಯ - ʻಭಾರತದ ಘಳಿಗೆʼ (ದಿ ಇಂಡಿಯಾ ಮೂಮೆಂಟ್) ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. ಇಂದು, ವಿಶ್ವದ ಪ್ರಮುಖ ಅರ್ಥಶಾಸ್ತ್ರಜ್ಞರು, ವಿಶ್ಲೇಷಕರು, ಚಿಂತಕರು ಇದು ʻಭಾರತದ ಘಳಿಗೆʼ ಎಂದು ಒಗ್ಗಟ್ಟಿನಿಂದ ಹೇಳುತ್ತಿದ್ದಾರೆ. ಆದರೆ ʻಇಂಡಿಯಾ ಟುಡೇ ಸಮೂಹʼವು ಈ ಆಶಾವಾದವನ್ನು ವ್ಯಕ್ತಪಡಿಸಿರುವುದು 'ಮತ್ತಷ್ಟು ವಿಶೇಷ'ವಾಗಿದೆ. ಅಂದಹಾಗೆ, 20 ತಿಂಗಳ ಹಿಂದೆ ನಾನು ಕೆಂಪು ಕೋಟೆಯಿಂದ ಮಾಡಿದ ಭಾಷಣದ ವೇಳೆ – ಭಾರತಕ್ಕೆ ʻಇದು ಸರಿಯಾದ ಸಮಯ, ಇದೇ ಸಮಯʼ ಎಂದು ಹೇಳಿದ್ದೆ. ಆದರೆ ಈ ಸ್ಥಾನವನ್ನು ತಲುಪಲು 20 ತಿಂಗಳುಗಳು ಬೇಕಾಯಿತು. ಆಗಲೂ - ʻಇದು ಭಾರತದ ಘಳಿಗೆʼ ಎಂಬುದೇ ಸ್ಫೂರ್ತಿಯಾಗಿತ್ತು.

ʻಇಂಡಿಯಾ ಟುಡೇ ಕಾನ್‌ಕ್ಲೇವ್‌ʼ ಉದ್ದೇಶಿಸಿ ಪ್ರಧಾನಿ ಭಾಷಣ

March 18th, 08:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ `ಹೋಟೆಲ್ ತಾಜ್ ಪ್ಯಾಲೇಸ್’ನಲ್ಲಿ ನಡೆದ `ಇಂಡಿಯಾ ಟುಡೇ ಕಾನ್‌ಕ್ಲೇವ್‌ʼ ಉದ್ದೇಶಿಸಿ ಮಾತನಾಡಿದರು.

Clear power dues: PM Modi urges states

July 30th, 12:31 pm

PM Modi participated in the Grand Finale marking the culmination of ‘Ujjwal Bharat Ujjwal Bhavishya – Power @2047’. He launched the Revamped Distribution Sector Scheme as well as launched various green energy projects of NTPC. Four different directions were worked together to improve the power system - Generation, Transmission, Distribution and Connection, the PM added.