ಮಹಾರಾಷ್ಟ್ರದ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

October 09th, 01:09 pm

ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರೇ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೇ, ಕೇಂದ್ರ ಸಚಿವ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳೇ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವಿಸ್ ಅವರೇ, ಶ್ರೀ ಅಜಿತ್ ಪವಾರ್ ಅವರೇ, ಇತರ ಎಲ್ಲ ಗಣ್ಯರೇ ಮತ್ತು ಮಹಾರಾಷ್ಟ್ರದ ನನ್ನ ಪ್ರಿಯ ಸಹೋದರ ಸಹೋದರಿಯರೇ...

ಮಹಾರಾಷ್ಟ್ರದಲ್ಲಿ 7600 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

October 09th, 01:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಹಾರಾಷ್ಟ್ರದಲ್ಲಿ 7600 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇಂದಿನ ಯೋಜನೆಗಳಲ್ಲಿ ನಾಗ್ಪುರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಯೋಜನೆ ಮತ್ತು ಶಿರಡಿ ವಿಮಾನ ನಿಲ್ದಾಣದಲ್ಲಿ ಹೊಸ ಸಮಗ್ರ ಟರ್ಮಿನಲ್ ಕಟ್ಟಡಕ್ಕೆ ಶಂಕುಸ್ಥಾಪನೆ ಸೇರಿವೆ. ಶ್ರೀ ಮೋದಿ ಅವರು ಮಹಾರಾಷ್ಟ್ರದ 10 ಸರ್ಕಾರಿ ವೈದ್ಯಕೀಯ ಕಾಲೇಜುಗಳ ಕಾರ್ಯಾಚರಣೆಗೆ ಚಾಲನೆ ನೀಡಿದರು ಮತ್ತು ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್) ಮತ್ತು ಮಹಾರಾಷ್ಟ್ರದ ವಿದ್ಯಾ ಸಮೀಕ್ಷಾ ಕೇಂದ್ರ (ವಿಎಸ್ಕೆ) ಗಳನ್ನು ಉದ್ಘಾಟಿಸಿದರು.

ಜಿಪಿಎಐ ಶೃಂಗಸಭೆ, 2023 ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ

December 12th, 05:20 pm

ಕೃತಕ ಬುದ್ಧಿಮತ್ತೆ ಕುರಿತ ಜಾಗತಿಕ ಪಾಲುದಾರಿಕೆ ಶೃಂಗಸಭೆಗೆ ನಾನು ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ. ಮುಂದಿನ ವರ್ಷ ಭಾರತವು ಈ ಶೃಂಗಸಭೆಯ ಅಧ್ಯಕ್ಷತೆ ವಹಿಸಲಿದೆ ಎಂದು ನನಗೆ ಸಂತೋಷವಾಗಿದೆ. ಎಐ ಬಗ್ಗೆ ವಿಶ್ವದಾದ್ಯಂತ ಭಾರಿ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಈ ಶೃಂಗಸಭೆ ನಡೆಯುತ್ತಿದೆ. ಈ ಚರ್ಚೆಯಿಂದಾಗಿ ಧನಾತ್ಮಕ ಮತ್ತು ಋಣಾತ್ಮಕ ಎಲ್ಲಾ ರೀತಿಯ ಅಂಶಗಳು ಮುನ್ನೆಲೆಗೆ ಬರುತ್ತಿವೆ. ಆದ್ದರಿಂದ, ಈ ಶೃಂಗಸಭೆಗೆ ಸಂಬಂಧಿಸಿದ ಪ್ರತಿಯೊಂದು ದೇಶವು ದೊಡ್ಡ ಜವಾಬ್ದಾರಿಯನ್ನು ಹೊಂದಿದೆ. ಈ ಹಿಂದೆ, ನನಗೆ ಅನೇಕ ರಾಜಕೀಯ ಮತ್ತು ಉದ್ಯಮದ ನಾಯಕರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಅವರೊಂದಿಗಿನ ನನ್ನ ಸಭೆಯಲ್ಲಿ ನಾನು ಈ ಶೃಂಗಸಭೆಯ ಬಗ್ಗೆಯೂ ಮಾತನಾಡಿದ್ದೇನೆ. ಪ್ರಸ್ತುತ ಅಥವಾ ಭವಿಷ್ಯದ ಪೀಳಿಗೆಯು ಕೃತಕ ಬುದ್ಧಿಮತ್ತೆಯ ಪ್ರಭಾವದಿಂದ ಸ್ಪರ್ಶಿಸಲ್ಪಟ್ಟಿಲ್ಲ. ನಾವು ಬಹಳ ಎಚ್ಚರಿಕೆಯಿಂದ ಮುಂದುವರಿಯಬೇಕು. ಅದಕ್ಕಾಗಿಯೇ ಈ ಶೃಂಗಸಭೆಯಿಂದ ಹೊರಹೊಮ್ಮುವ ಆಲೋಚನೆಗಳು, ಈ ಶೃಂಗಸಭೆಯಿಂದ ಹೊರಹೊಮ್ಮುವ ಸಲಹೆಗಳು ಇಡೀ ಮಾನವಕುಲದ ಮೂಲಭೂತ ಮೌಲ್ಯಗಳನ್ನು ರಕ್ಷಿಸಲು ಮತ್ತು ನಿರ್ದೇಶನ ನೀಡಲು ಕೆಲಸ ಮಾಡುತ್ತವೆ ಎಂದು ನಾನು ನಂಬುತ್ತೇನೆ.

ʻಕೃತಕ ಬುದ್ಧಿಮತ್ತೆ ಕುರಿತ ಜಾಗತಿಕ ಪಾಲುದಾರಿಕೆʼ(ಜಿಪಿಎಐ) ವಾರ್ಷಿಕ ಶೃಂಗಸಭೆಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿ

December 12th, 05:00 pm

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಡೀ ಜಗತ್ತು ಕೃತಕ ಬುದ್ಧಿಮತ್ತೆಯ ಬಗ್ಗೆ ಚರ್ಚಿಸುತ್ತಿರುವ ಸಮಯದಲ್ಲಿ ಮುಂದಿನ ವರ್ಷ ಭಾರತವು ʻಜಿಪಿಎಐʼ ಶೃಂಗಸಭೆಯ ಅಧ್ಯಕ್ಷತೆ ವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಹೊರಹೊಮ್ಮುತ್ತಿರುವ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳ ಬಗ್ಗೆ ಗಮನ ಸೆಳೆದ ಪ್ರಧಾನಮಂತ್ರಿಯವರು, ಪ್ರತಿ ರಾಷ್ಟ್ರದ ಮೇಲೆ ಇರಬೇಕಾದ ಜವಾಬ್ದಾರಿಯನ್ನು ಒತ್ತಿಹೇಳಿದರು. ʻಎಐʼನ ವಿವಿಧ ಉದ್ಯಮ ನಾಯಕರೊಂದಿಗೆ ಸಂವಾದ ನಡೆಸಿದ್ದನ್ನು ಮತ್ತು ʻಜಿಪಿಎಐʼ ಶೃಂಗಸಭೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದನ್ನು ಸ್ಮರಿಸಿದರು. ಕೃತಕ ಬುದ್ಧಿಮತ್ತೆಯು ಅದು ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ ಪ್ರತಿಯೊಂದು ದೇಶದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ ಪ್ರಧಾನಿಯವರು, ಇದರ ವಿಚಾರದಲ್ಲಿ ಎಚ್ಚರಿಕೆಯಿಂದ ಮುಂದುವರಿಯುವಂತೆ ಸಲಹೆ ನೀಡಿದರು. ʻಜಿಪಿಎಐʼ ಶೃಂಗಸಭೆಯಲ್ಲಿನ ಚರ್ಚೆಯು ಈ ನಿಟ್ಟಿನಲ್ಲಿ ನಿರ್ದೇಶನ ಒದಗಿಸುತ್ತದೆ ಮತ್ತು ಮಾನವೀಯತೆಯ ಮೂಲಭೂತ ಬೇರುಗಳನ್ನು ಭದ್ರಪಡಿಸುತ್ತದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.

ಇಂಡಿಯಾ ಮೊಬೈಲ್ ಕಾಂಗ್ರೆಸ್ ನ 7ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

October 27th, 10:56 am

ಇಂಡಿಯಾ ಮೊಬೈಲ್ ಕಾಂಗ್ರೆಸ್ ನ ಏಳನೇ ಆವೃತ್ತಿಯಲ್ಲಿ ನಿಮ್ಮೊಂದಿಗೆ ಇರುವುದು ಸ್ವತಃ ಒಂದು ಆಹ್ಲಾದಕರ ಅನುಭವವಾಗಿದೆ. 21 ನೇ ಶತಮಾನದ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಈ ಘಟನೆಯು ಲಕ್ಷಾಂತರ ಜನರ ಹಣೆಬರಹವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ನಾವು ಭವಿಷ್ಯದ ಬಗ್ಗೆ ಮಾತನಾಡುವ ಸಮಯವಿತ್ತು, ಅದು ಮುಂದಿನ ದಶಕ, ಅಥವಾ 20-30 ವರ್ಷಗಳ ನಂತರ, ಅಥವಾ ಮುಂದಿನ ಶತಮಾನ. ಆದರೆ ಇಂದು, ಪ್ರತಿದಿನ ತಂತ್ರಜ್ಞಾನದಲ್ಲಿ ತ್ವರಿತ ಬದಲಾವಣೆಗಳಿಂದಾಗಿ, ' ಭವಿಷ್ಯವು ಇಲ್ಲಿ ಮತ್ತು ಈಗ ಇದೆ ' ಎಂದು ನಾವು ಹೇಳುತ್ತೇವೆ. ಕೆಲವೇ ನಿಮಿಷಗಳ ಹಿಂದೆ, ನಾನು ಇಲ್ಲಿನ ಪ್ರದರ್ಶನದಲ್ಲಿ ಕೆಲವು ಮಳಿಗೆಗಳಿಗೆ ಭೇಟಿ ನೀಡಿದ್ದೆ. ಈ ಪ್ರದರ್ಶನದಲ್ಲಿ ನಾನು ಅದೇ ಭವಿಷ್ಯವನ್ನು ನೋಡಿದೆ. ಟೆಲಿಕಾಂ, ತಂತ್ರಜ್ಞಾನ, ಸಂಪರ್ಕ, 6 ಜಿ, ಎಐ(ಕೃತಕ ಬುದ್ದಿಮತ್ತೆ), ಸೈಬರ್ ಭದ್ರತೆ, ಅರೆವಾಹಕಗಳು, ಡ್ರೋನ್ ಗಳು, ಬಾಹ್ಯಾಕಾಶ ಕ್ಷೇತ್ರ, ಆಳ ಸಮುದ್ರ ಪರಿಶೋಧನೆ, ಹಸಿರು ತಂತ್ರಜ್ಞಾನ ಅಥವಾ ಇತರ ಕ್ಷೇತ್ರಗಳು ಆಗಿರಲಿ, ಮುಂಬರುವ ಸಮಯವು ಸಂಪೂರ್ಣವಾಗಿ ವಿಭಿನ್ನವಾಗಿರಲಿದೆ. ಮತ್ತು ಯುವ ಪೀಳಿಗೆಯು ದೇಶದ ಭವಿಷ್ಯವನ್ನು ಮುನ್ನಡೆಸುತ್ತಿದೆ, ನಮ್ಮ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುತ್ತಿದೆ ಎಂಬುದು ನಮಗೆಲ್ಲರಿಗೂ ಸಂತೋಷದ ವಿಷಯವಾಗಿದೆ.

ʻಇಂಡಿಯಾ ಮೊಬೈಲ್ ಕಾಂಗ್ರೆಸ್ʼನ(ಐಎಂಸಿ) 7ನೇ ಆವೃತ್ತಿಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿಗಳು

October 27th, 10:35 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ʻಭಾರತ್ ಮಂಟಪʼದಲ್ಲಿ ʻಇಂಡಿಯಾ ಮೊಬೈಲ್ ಕಾಂಗ್ರೆಸ್ʼನ 7ನೇ ಆವೃತ್ತಿಗೆ (ಐಎಂಸಿ-2023) ಚಾಲನೆ ನೀಡಿದರು. ʻಇಂಡಿಯಾ ಮೊಬೈಲ್ ಕಾಂಗ್ರೆಸ್ʼ ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆಯಾಗಿದ್ದು, 2023ರ ಅಕ್ಟೋಬರ್ 27 ರಿಂದ 29 ರವರೆಗೆ 'ಗ್ಲೋಬಲ್ ಡಿಜಿಟಲ್ ಇನ್ನೋವೇಶನ್' ಎಂಬ ವಿಷಯಾಧಾರಿತವಾಗಿ ನಡೆಯಲಿದೆ. ʻಐಎಂಸಿ-2023ʼ ಪ್ರಮುಖ ಅತ್ಯಾಧುನಿಕ ತಂತ್ರಜ್ಞಾನಗಳ ಡೆವಲಪರ್, ತಯಾರಕ ಮತ್ತು ರಫ್ತುದಾರರಾಗಿ ಭಾರತದ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ದೇಶಾದ್ಯಂತದ ಶಿಕ್ಷಣ ಸಂಸ್ಥೆಗಳಿಗೆ 100 '5ಜಿ ಯೂಸ್ ಕೇಸ್ ಲ್ಯಾಬ್'ಗಳನ್ನು (5ಜಿ ಬಳಕೆ ಪ್ರಯೋಗಾಲಯ) ಪ್ರದಾನ ಮಾಡಿದರು.

With 5G, India is setting a global standard in telecom technology: PM Modi

October 01st, 07:06 pm

Ushering in a new technological era, PM Modi launched 5G services during 6th India Mobile Congress at Pragati Maidan in New Delhi. He said, New India will not remain a mere consumer of technology, but India will play an active role in the development and implementation of that technology.

PM Modi inaugurates 6th India Mobile Congress at Pragati Maidan, New Delhi

October 01st, 12:05 pm

Ushering in a new technological era, PM Modi launched 5G services during 6th India Mobile Congress at Pragati Maidan in New Delhi. He said, New India will not remain a mere consumer of technology, but India will play an active role in the development and implementation of that technology.

ಯಶಸ್ಸಿಗೆ ಒಂದೇ ಒಂದು ಮಂತ್ರವಿದೆ - 'ದೀರ್ಘಾವಧಿಯ ಯೋಜನೆ ಮತ್ತು ನಿರಂತರ ಬದ್ಧತೆ', ಹೇಳಿದ್ದಾರೆ ಪ್ರಧಾನಿ

March 12th, 06:40 pm

ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್‌ನಲ್ಲಿ 11 ನೇ ಖೇಲ್ ಮಹಾಕುಂಭವನ್ನು ಉದ್ಘಾಟಿಸಿದರು. ಕ್ರೀಡೆಯಲ್ಲಿ ಯಶಸ್ಸಿಗೆ 360 ಡಿಗ್ರಿ ವಿಧಾನದ ಅಗತ್ಯವಿದೆ. ಅದೇ ರೀತಿ, ದೇಶದಲ್ಲಿ ಕ್ರೀಡೆಯನ್ನು ಉತ್ತೇಜಿಸಲು ಭಾರತವು ಸಮಗ್ರ ವಿಧಾನದೊಂದಿಗೆ ಕೆಲಸ ಮಾಡುತ್ತಿದೆ. ಖೇಲೋ ಇಂಡಿಯಾ ಕಾರ್ಯಕ್ರಮವು ಅಂತಹ ಚಿಂತನೆಗೆ ಉತ್ತಮ ಉದಾಹರಣೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಅಹಮದಾಬಾದ್‌ನಲ್ಲಿ ʻಗುಜರಾತ್ ಪಂಚಾಯತ್ ಮಹಾಸಮ್ಮೇಳನʼ ಉದ್ದೇಶಿಸಿ ಮಾತನಾಡಿದ ಪ್ರಧಾನಿ

March 12th, 06:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಹ್ಮದಾಬಾದ್‌ನಲ್ಲಿ ʻಗುಜರಾತ್ ಪಂಚಾಯತ್ ಮಹಾಸಮ್ಮೇಳನʼ ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಭಾಗಗಳಿಂದ ಪಂಚಾಯತ್ ರಾಜ್ ಪ್ರತಿನಿಧಿಗಳು ಭಾಗವಹಿಸಿದ್ದರು.

ಪುಣೆಯ ಸಿಂಬಯೊಸಿಸ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿಗಳ ಭಾಷಣ

March 06th, 05:17 pm

ಮಹಾರಾಷ್ಟ್ರ ಘನತೆವೆತ್ತ ರಾಜ್ಯಪಾಲರಾದ ಶ್ರೀ ಭಗತ್ ಸಿಂಗ್ ಕೋಶ್ಯಾರಿ ಜಿ, ಶ್ರೀ ದೇವೇಂದ್ರ ಫಡ್ನವಿಸ್ ಜಿ, ಶ್ರೀ ಸುಭಾಷ್ ದೇಸಾಯಿ, ಸಿಂಬಿಯೊಸಿಸ್ ವಿಶ್ವವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಪ್ರೊಫೆಸರ್ ಎಸ್ ಬಿ ಮಜುಂದಾರ್ ಜಿ, ಪ್ರಧಾನ ನಿರ್ದೇಶಕಿ ಡಾ ವಿದ್ಯಾ ಯೆರವಡೇಕರ್ ಜಿ, ಇಲ್ಲಿ ನೆರೆದಿರುವ ಎಲ್ಲಾ ಅಧ್ಯಾಪಕರು, ಗಣ್ಯ ಅತಿಥಿಗಳು ಮತ್ತು ನನ್ನ ಯುವ ಸಹೋದ್ಯೋಗಿಗಳೇ!

ಪುಣೆಯ ಸಿಂಬಯಾಸಿಸ್‌ ವಿಶ್ವವಿದ್ಯಾಲಯದ ಸುವರ್ಣ ಸಂಭ್ರಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ

March 06th, 01:36 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುಣೆಯಲ್ಲಿರುವ ಸಿಂಬಾಯಸಿಸ್‌ ವಿಶ್ವವಿದ್ಯಾಲಯದ ಸುವರ್ಣ ಸಂಭ್ರಮವನ್ನು ಉದ್ಘಾಟಿಸಿದರು. ಸಿಂಬಾಯಸಿಸ್‌ ಆರೋಗ್ಯ ಧಾಮವನ್ನೂ ಅವರು ಉದ್ಘಾಟಿಸಿದರು. ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ಭಗತ್‌ ಸಿಂಗ್‌ ಕೋಶಿಯಾರಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಡೆನ್ಮಾರ್ಕ್ ಪ್ರಧಾನ ಮಂತ್ರಿಯವರ ಭಾರತ ಭೇಟಿಯ ಸಮಯದಲ್ಲಿ ವಿನಿಮಯ ಮಾಡಿಕೊಳ್ಳಲಾದ ತಿಳಿವಳಿಕೆ ಒಪ್ಪಂದಗಳು/ ಒಪ್ಪಂದಗಳ ಪಟ್ಟಿ

October 09th, 03:54 pm

ಡೆನ್ಮಾರ್ಕ್ ಪ್ರಧಾನ ಮಂತ್ರಿಯವರ ಭಾರತ ಭೇಟಿಯ ಸಮಯದಲ್ಲಿ ವಿನಿಮಯ ಮಾಡಿಕೊಳ್ಳಲಾದ ತಿಳಿವಳಿಕೆ ಒಪ್ಪಂದಗಳು/ ಒಪ್ಪಂದಗಳ ಪಟ್ಟಿ

ಡೆನ್ಮಾರ್ಕ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀಮತಿ ಮಿಟ್ಟೆ ಫ್ರೆಡ್ರಿಕ್ಸೆನ್ ರೊಂದಿಗೆ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಪ್ರಧಾನಮಂತ್ರಿ ಮೋದಿ ಅವರ ಭಾಷಣದ ಕನ್ನಡ ಭಾಷಾಂತರ

October 09th, 01:38 pm

ಕರೋನಾ ಸಾಂಕ್ರಾಮಿಕದ ಆರಂಭಕ್ಕೂ ಮೊದಲು, ಈ ಹೈದರಾಬಾದ್ ಹೌಸ್ ಸರ್ಕಾರದ ಮುಖ್ಯಸ್ಥರು ಮತ್ತು ದೇಶಗಳ ಮುಖ್ಯಸ್ಥರ ನಿಯಮಿತ ಆಗಮನಕ್ಕೆ ಸಾಕ್ಷಿಯಾಗುತ್ತಿತ್ತು. ಆದರೆ, ಕಳೆದ 18-20 ತಿಂಗಳುಗಳಿಂದ ಈ ಪದ್ಧತಿ ಸ್ಥಗಿತಗೊಂಡಿದೆ. ಇಂದು ಡ್ಯಾನಿಶ್ ಪ್ರಧಾನಮಂತ್ರಿಯವರ ಭೇಟಿಯೊಂದಿಗೆ ಹೊಸ ಆರಂಭವನ್ನು ಪಡೆಯುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ.

ಕೊವಿನ್ ಜಾಗತಿಕ ಸಮಾವೇಶ 2021 ರಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

July 05th, 03:08 pm

ಕೋವಿಡ್ -19 ವಿರುದ್ಧದ ನಮ್ಮ ಹೋರಾಟದಲ್ಲಿ ತಂತ್ರಜ್ಞಾನ ಸಮಗ್ರ ಭಾಗ. ಅದೃಷ್ಟವಶಾತ್, ಸಾಫ್ಟ್ ವೇರ್ ಕ್ಷೇತ್ರ ಸಂಪನ್ಮೂಲಗಳ ಕೊರತೆ ಇಲ್ಲದ ಕ್ಷೇತ್ರಗಳಲ್ಲೊಂದು. ಅದರಿಂದಾಗಿ ನಾವು ನಮ್ಮ ಕೋವಿಡ್ ಪತ್ತೆ ಮತ್ತು ನಿಗಾ ಆಪ್ ನ್ನು ಅದು ತಾಂತ್ರಿಕವಾಗಿ ಅನುಷ್ಠಾನ ಯೋಗ್ಯ ಎಂದಾದ ಕೂಡಲೇ ಮುಕ್ತ ಮೂಲವನ್ನಾಗಿ ಮಾಡಿದೆವು. ಸುಮಾರು 200 ಮಿಲಿಯನ್ ಬಳಕೆದಾರರೊಂದಿಗೆ ಈ “ಆರೋಗ್ಯ ಸೇತು” ಆಪ್ ಅಭಿವೃದ್ಧಿ ಮಾಡುವವರಿಗೆ ತಕ್ಷಣವೇ ಲಭ್ಯವಾಗುವ ಪ್ಯಾಕೇಜ್ ಆಗಿದೆ. ಭಾರತದಲ್ಲಿ ಬಳಕೆಯಾಗುತ್ತಿರುವುದರಿಂದ, ವೇಗ ಮತ್ತು ಪ್ರಮಾಣಕ್ಕೆ ಸಂಬಂಧಿಸಿ ಅದು ನೈಜ ಜಗತ್ತಿನಲ್ಲಿ ಪರೀಕ್ಷಿಸಲ್ಪಟ್ಟಿರುವ ಬಗ್ಗೆ ನಿಮಗೆ ಖಾತ್ರಿ ಇರಬಹುದು.

ಕೋವಿಡ್-19 ಅನ್ನು ಮಣಿಸಲು ಭಾರತವು ಕೋ-ವಿನ್ ವೇದಿಕೆಯನ್ನು ಡಿಜಿಟಲ್ ಸಾರ್ವಜನಿಕ ಒಳಿತಾಗಿ ಜಗತ್ತಿಗೆ ಒದಗಿಸುತ್ತಿದ್ದು, ಪ್ರಧಾನಮಂತ್ರಿ ಕೋ-ವಿನ್ ಜಾಗತಿಕ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದರು

July 05th, 03:07 pm

ಕೋವಿಡ್-19 ನಿಗ್ರಹಕ್ಕಾಗಿ ಭಾರತ ಕೋವಿನ್ ವೇದಿಕೆಯನ್ನು ಡಿಜಿಟಲ್ ಸಾರ್ವಜನಿಕ ಒಳಿತಿಗಾಗಿ ಜಗತ್ತಿಗೆ ನೀಡುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕೋವಿನ್ ಜಾಗತಿಕ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದರು.

PM to address Grand Finale of Smart India Hackathon 2020

July 31st, 01:12 pm

Prime Minister Shri Narendra Modi will address the Grand Finale of Smart India Hackathon 2020 on 1st August via video conferencing. He will also be interacting with students on the occasion.

ಅಲಪುಳಾ , ಅಟ್ಟಿಂಗಲ್ , ಮಾವೆಲಿಕ್ಕರ , ಕೊಲ್ಲಮ್ ಮತ್ತು ಪಟ್ಟಣಂತಿಟ್ಟ ನ ಬೂತ್ ಕಾರ್ಯಕರ್ತರೊಂದಿಗೆ ಪ್ರಧಾನಮಂತ್ರಿ ಸಂವಾದ

December 14th, 04:30 pm

ಕೇರಳದ ಅಲಪುಳಾ , ಅಟ್ಟಿಂಗಲ್ , ಮಾವೆಲಿಕ್ಕರ , ಕೊಲ್ಲಮ್ ಮತ್ತು ಪಟ್ಟಣಂತಿಟ್ಟ ನ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಪ್ರಧಾನಮಂತ್ರಿ ಇಂದು ಸಂವಾದ ನಡೆಸಿದರು

Innovation has the power to overcome the challenges our world faces: PM Modi at Smart India Hackathon

March 30th, 09:27 pm

Addressing the Grand Finale of Smart India Hackathon 2018, PM Narendra Modi said that he was glad to see the younger generation immerse themselves in nation building. Such efforts, he said, gave strength to the efforts to build a New India.

PM addresses Grand Finale of the Smart India Hackathon-2018

March 30th, 09:20 pm

Addressing the Grand Finale of Smart India Hackathon 2018, PM Narendra Modi said that he was glad to see the younger generation immerse themselves in nation building. Such efforts, he said, gave strength to the efforts to build a New India.