ಪಿಎಂ-ಸೂರಜ್ ಪೋರ್ಟಲ್ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ
March 13th, 04:30 pm
ಸಾಮಾಜಿಕ ನ್ಯಾಯ ಸಚಿವ ಶ್ರೀ ವೀರೇಂದ್ರ ಕುಮಾರ್ ಅವರೇ, ದೇಶದ ಮೂಲೆ ಮೂಲೆಗಳಿಂದ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು, ನಮ್ಮ ನೈರ್ಮಲ್ಯ ಕಾರ್ಮಿಕರ ಸಹೋದರ ಸಹೋದರಿಯರೇ, ಇತರ ಗಣ್ಯರು, ಮಹಿಳೆಯರೇ ಮತ್ತು ಮಹನೀಯರೇ! ದೇಶದ ಸುಮಾರು 470 ಜಿಲ್ಲೆಗಳ ಸುಮಾರು 3 ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದಾರೆ. ನಾನು ಎಲ್ಲರಿಗೂ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ.PM addresses program marking nationwide outreach for credit support to disadvantaged sections
March 13th, 04:00 pm
Prime Minister Narendra Modi addressed a program marking nationwide outreach for credit support to disadvantaged sections via video conferencing. Addressing the occasion, the Prime Minister acknowledged the virtual presence of about 3 lakh people from 470 districts and expressed gratitude. Prime Minister Modi underlined that the nation is witnessing another huge occasion towards the welfare dalits, backward and deprived sections.Free Foodgrains for 81.35 crore beneficiaries for five years: Cabinet Decision
November 29th, 02:26 pm
The Cabinet led by Prime Minister has decided that the Central government will provide free food grains to about 81.35 crore beneficiaries under the Pradhan Mantri Garib Kalyan Anna Yojana (PMGKAY) for a period of five years with effect from 1st January, 2024.ರಾಷ್ಟ್ರವ್ಯಾಪಿ ಮೆಗಾ ಸೈಕ್ಲೋಥಾನ್ ನಲ್ಲಿ ಭಾಗವಹಿಸಿದವರಿಗೆ ಪ್ರಧಾನಮಂತ್ರಿಯವರಿಂದ ಅಭಿನಂದನೆ
February 15th, 10:19 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರವ್ಯಾಪಿ ಮೆಗಾ ಸೈಕ್ಲೋಥಾನ್ ಕೂಟದಲ್ಲಿ ಭಾಗವಹಿಸಿದ ಮತ್ತು ಆರೋಗ್ಯಕರ ಜೀವನದ ಬಗ್ಗೆ ಜಾಗೃತಿ ಮೂಡಿಸಿದ ಎಲ್ಲರನ್ನು ಅಭಿನಂದಿಸಿದರು.ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ರಾಜ್ಯಸಭೆಯಲ್ಲಿ ಪ್ರಧಾನಿ ಮಂತ್ರಿ ಅವರಿಂದ ಉತ್ತರ
February 09th, 02:15 pm
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆಯಲ್ಲಿ ಭಾಗವಹಿಸುತ್ತಿರುವಾಗ, ನಾನು ಗೌರವಾನ್ವಿತ ರಾಷ್ಟ್ರಪತಿಗಳಿಗೆ ನನ್ನ ವಿನಮ್ರ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ನಾನು ಅವರನ್ನು ಅಭಿನಂದಿಸುತ್ತೇನೆ. ಗೌರವಾನ್ವಿತ ಸಭಾಪತಿಗಳೆ, ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುವಾಗ, ಅವರು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ನೀಲನಕ್ಷೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ನಿರ್ಣಯಗಳಿಗೆ ಮಾರ್ಗಸೂಚಿಯನ್ನು ಪ್ರಸ್ತುತಪಡಿಸಿದ್ದಾರೆ.ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಮಂತ್ರಿಯವರ ಉತ್ತರ
February 09th, 02:00 pm
ಸಂಸತ್ತಿನಲ್ಲಿ ರಾಷ್ಟ್ರಪತಿಯವರು ಮಾಡಿದ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಉತ್ತರ ನೀಡಿದರು. “ಅಭಿವೃದ್ದಿ ಹೊಂದಿದ ಭಾರತ”ದ ದೃಷ್ಟಿಕೋನವನ್ನು ರಾಷ್ಟ್ರಪತಿ ಜೀ ಅವರು ತಮ್ಮ ಭಾಷಣದಲ್ಲಿ ಪ್ರತಿಬಿಂಬಿಸಿದ್ದು, ಅದಕ್ಕಾಗಿ ಪ್ರಧಾನಮಂತ್ರಿ ಅವರು ಧನ್ಯವಾದಗಳನ್ನು ಸಲ್ಲಿಸಿದರು.90ನೇ ಇಂಟರ್ ಪೋಲ್ ಮಹಾಧಿವೇಶನ ಉದ್ದೇಶಿಸಿ ಪ್ರಧಾನಮಂತ್ರಿ ಮಾಡಿದ ಭಾಷಣ
October 18th, 01:40 pm
90ನೇ ಇಂಟರ್‌ಪೋಲ್ ಮಹಾಸಭೆಗೆ ನಾನು ಎಲ್ಲರಿಗೂ ಆತ್ಮೀಯ ಸ್ವಾಗತ ಕೋರುತ್ತೇನೆ. ಭಾರತ ಮತ್ತು ಇಂಟರ್ ಪೋಲ್ ಎರಡಕ್ಕೂ ಮಹತ್ವದ ಸಮಯದಲ್ಲಿ ನೀವು ಇಲ್ಲಿಗೆ ಬಂದಿರುವುದು ಉತ್ತಮವಾಗಿದೆ. ಭಾರತವು 2022 ರಲ್ಲಿ 76ನೇ ಸ್ವಾತಂತ್ರ್ಯವನ್ನು ಆಚರಿಸಿಕೊಳ್ಳುತ್ತಿದೆ. ಇದು ನಮ್ಮ ಜನರು, ಸಂಸ್ಕೃತಿ ಮತ್ತು ಸಾಧನೆಗಳ ಆಚರಣೆಯಾಗಿದೆ. ನಾವು ಎಲ್ಲಿಂದ ಬಂದಿದ್ದೇವೆಂದು ಹಿಂತಿರುಗಿ ನೋಡುವ ಮತ್ತು ನಾವು ಎಲ್ಲಿಗೆ ಹೋಗಬೇಕೆಂದು ಮುಂದೆ ನೋಡುವ ಸಮಯ ಇದಾಗಿದೆ. ಇಂಟರ್ ಪೋಲ್ ಕೂಡ ಐತಿಹಾಸಿಕ ಮೈಲಿಗಲ್ಲಿನ ಸನಿಹದಲ್ಲಿದೆ. 2023 ರಲ್ಲಿ ಇಂಟರ್ ಪೋಲ್ ತನ್ನ ಸ್ಥಾಪನೆಯ 100 ವರ್ಷಗಳನ್ನು ಆಚರಿಸಲಿದೆ. ಇದು ಆನಂದಿಸುವ ಮತ್ತು ಪ್ರತಿಬಿಂಬಿಸಲು ಉತ್ತಮ ಮ ಸಮಯವಾಗಿದೆ. ಹಿನ್ನಡೆಗಳಿಂದ ಕಲಿತು, ವಿಜಯಗಳನ್ನು ಆಚರಿಸುವ ಜೊತೆಗೆ ಭವಿಷ್ಯವನ್ನು ಭರವಸೆಯಿಂದ ನೋಡಬೇಕಾಗಿದೆ.ನವದೆಹಲಿಯ ಪ್ರಗತಿ ಮೈದಾನದಲ್ಲಿ 90ನೇ ಇಂಟರ್ ಪೋಲ್ ಮಹಾಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ
October 18th, 01:35 pm
ನವದೆಹಲಿಯಲ್ಲಿ ನಡೆದ 90ನೇ ಇಂಟರ್ ಪೋಲ್ ಮಹಾಧಿವೇಶನ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಎಲ್ಲ ಗಣ್ಯರಿಗೆ ಆತ್ಮೀಯ ಸ್ವಾಗತ ಕೋರಿದರು. ಭಾರತವು ತನ್ನ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿದೆ, ಇದು ಜನರು ಮತ್ತು ಸಂಸ್ಕೃತಿಗಳ ಆಚರಣೆಯಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇಂಟರ್ ಪೋಲ್ ಬರುವ 2023ರಲ್ಲಿ ತನ್ನ ಶತಮಾನೋತ್ಸವ ಆಚರಿಸಲಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ಇದು ಆತ್ಮಾವಲೋಕನದ ಸಮಯವಾಗಿದ್ದು, ಭವಿಷ್ಯವನ್ನು ನಿರ್ಧರಿಸುವ ಸಮಯವೂ ಆಗಿದೆ ಎಂದು ಅವರು ಹೇಳಿದರು. ಸೋಲಿನಿಂದ ಕಲಿಯಲು ಮತ್ತು ಭವಿಷ್ಯದ ಬಗ್ಗೆ ಭರವಸೆಯಿಂದ ನೋಡಲು ಸಂತೋಷಪಡಲು ಮತ್ತು ಪ್ರತಿಬಿಂಬಿಸಲು ಇದು ಉತ್ತಮ ಸಮಯ ಎಂದು ಶ್ರೀ ಮೋದಿ ಹೇಳಿದರು.ಕೆನಡಾದಲ್ಲಿ ಸನಾತನ ಮಂದಿರ ಸಾಂಸ್ಕೃತಿಕ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಟಿಪ್ಪಣಿಗಳ ಕನ್ನಡ ಅನುವಾದ
May 02nd, 08:33 am
ನಿಮ್ಮೆಲ್ಲರಿಗೂ ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಗುಜರಾತ್ ದಿನದ ಶುಭಾಶಯಗಳು. ಕೆನಡಾದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಭಾರತೀಯ ಮೌಲ್ಯಗಳನ್ನು ಜೀವಂತವಾಗಿರಿಸುವಲ್ಲಿ ಒಂಟಾರಿಯೊ ಮೂಲದ ಸನಾತನ ಮಂದಿರ ಸಾಂಸ್ಕೃತಿಕ ಕೇಂದ್ರವು ನಿರ್ವಹಿಸಿದ ಪಾತ್ರದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಕೆನಡಾಕ್ಕೆ ನಾನು ನೀಡಿದ ಭೇಟಿಗಳಲ್ಲಿ ನಾನು ಇದನ್ನು ಅನುಭವಿಸಿದ್ದೇನೆ, ನಿಮ್ಮ ಈ ಪ್ರಯತ್ನಗಳಲ್ಲಿ ನೀವು ಎಷ್ಟು ಸಫಲರಾಗಿದ್ದೀರಿ ಮತ್ತು ನಿಮ್ಮ ಬಗ್ಗೆ ನೀವು ಹೇಗೆ ಸಕಾರಾತ್ಮಕ ಪ್ರಭಾವ ಬೀರಿದ್ದೀರಿ ಎಂಬುದನ್ನು ನಾನು ನೋಡಿದ್ದೇನೆ.ಕೆನಡಾದ ಒಂಟಾರಿಯೊದ ಸನಾತನ ಸಾಂಸ್ಕೃತಿ ಕೇಂದ್ರವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ
May 01st, 09:33 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೆನಡಾದ ಒಂಟಾರಿಯೊದ ಮಾರ್ಕ್ ಹಮ್ ನಲ್ಲಿನ ಸನಾತನ ಮಂದಿರ ಸಾಂಸ್ಕೃತಿಕ ಕೇಂದ್ರ(ಎಸ್ಎಂಸಿಸಿ)ದಲ್ಲಿ ಸರ್ದಾರ್ ಪಟೇಲ್ ಪ್ರತಿಮೆ ಅನಾವರಣ ಸಂದರ್ಭವನ್ನುದ್ದೇಶಿಸಿ ವಿಡಿಯೊ ಸಂದೇಶದ ಮೂಲಕ ಭಾಷಣ ಮಾಡಿದರು.ರಾಷ್ಟ್ರೀಯ ಏಕತಾ ದಿನದಂದು ಪ್ರಧಾನ ಮಂತ್ರಿ ಅವರ ಭಾಷಣದ ಇಂಗ್ಲೀಷ್ ಅವತರಣಿಕೆ.
October 31st, 09:41 am
ರಾಷ್ಟ್ರೀಯ ಏಕತಾ ದಿನದಂದು ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳು!. ಇಂದು ದೇಶವು ರಾಷ್ಟ್ರೀಯ ನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸುತ್ತಿದೆ. ಪಟೇಲ್ ಅವರು “ಏಕ್ ಭಾರತ್, ಶ್ರೇಷ್ಠ ಭಾರತ್” ಗಾಗಿ ತಮ್ಮ ಬದುಕಿನ ಪ್ರತೀ ಕ್ಷಣವನ್ನೂ ಮುಡಿಪಾಗಿಟ್ಟಿದ್ದರು.ರಾಷ್ಟ್ರೀಯ ಏಕತಾ ದಿನದಂದು ರಾಷ್ಟ್ರವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ
October 31st, 09:40 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ರಾಷ್ಟ್ರೀಯ ಏಕತಾ ದಿನದ ತಮ್ಮ ಭಾಷಣದಲ್ಲಿ ದೇಶವಾಸಿಗಳಿಗೆ ಶುಭ ಕೋರಿದ್ದಾರೆ. ‘ಏಕ ಭಾರತ್ ಶ್ರೇಷ್ಠ ಭಾರತ್’ ಆದರ್ಶಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಸರ್ದಾರ್ ಪಟೇಲ್ ಅವರಿಗೆ ಪ್ರಧಾನಿ ಗೌರವ ನಮನ ಸಲ್ಲಿಸಿದರು. ಸರ್ದಾರ್ ಪಟೇಲ್ ಅವರು ಕೇವಲ ಐತಿಹಾಸಿಕ ವ್ಯಕ್ತಿಯಲ್ಲ, ಅವರು ದೇಶದ ಪ್ರತಿಯೊಬ್ಬರ ಹೃದಯದಲ್ಲೂ ನೆಲೆಸಿದ್ದಾರೆ ಮತ್ತು ಅವರ ಏಕತೆಯ ಸಂದೇಶವನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಜನರಲ್ಲಿ ಒಗ್ಗಟ್ಟಿನ ಬಿರುಕಿಲ್ಲದ ಏಕತೆಯ ಭಾವನೆಯ ನೈಜ ಸಂಕೇತವಾಗಿದ್ದಾರೆ. ದೇಶದ ಪ್ರತಿಯೊಂದು ಮೂಲೆ ಮೂಲೆಯಲ್ಲೂ ರಾಷ್ಟ್ರೀಯ ಏಕತಾ ಪರೇಡ್ ಗಳು ನಡೆಯುತ್ತಿವೆ ಮತ್ತು ಏಕತಾ ಪ್ರತಿಮೆಯ ಜಾಗದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅದೇ ಭಾವನೆ ಪ್ರತಿಫಲನಗೊಳ್ಳುತ್ತಿದೆ ಎಂದು ಹೇಳಿದರು.ಶಾಂಘೈ ಸಹಕಾರ ಸಂಘಟನೆ ಮಂಡಳಿಯ ರಾಜ್ಯ ಮುಖ್ಯಸ್ಥರ 21 ನೇ ಸಭೆಯಲ್ಲಿ ವರ್ಚುವಲ್ ಮೂಲಕ ಪಾಲ್ಗೊಂಡ ಪ್ರಧಾನಮಂತ್ರಿ
September 17th, 05:21 pm
ಶಾಂಘೈ ಸಹಕಾರ ಸಂಘಟನೆ [ಸಿ.ಎಸ್.ಒ] ಮಂಡಳಿಯ ರಾಜ್ಯ ಮುಖ್ಯಸ್ಥರ 21 ನೇ ಸಭೆ ಮತ್ತು ಆಪ್ಘಾನಿಸ್ತಾನ ಕುರಿತ ಜಂಟಿ ಎಸ್.ಸಿ.ಒ-ಸಿ.ಎಸ್.ಟಿ.ಒ ಔಟ್ ರೀಚ್ ಅಧಿವೇಶನದಲ್ಲಿ ಪ್ರಧಾನಮಂತ್ರಿ ಅವರು ವಿಡಿಯೋ ಸಂದೇಶದ ಮೂಲಕ ಪಾಲ್ಗೊಂಡಿದ್ದರು.ಆಪ್ಘಾನಿಸ್ತಾನ ಕುರಿತ ಎಸ್ ಸಿ ಒ –ಸಿ ಎಸ್ ಟಿ ಒ ಔಟ್‌ರೀಚ್ ಶೃಂಗಸಭೆಯಲ್ಲಿ ಪ್ರಧಾನಿಯವರ ಭಾಷಣ
September 17th, 05:01 pm
ಅಫ್ಘಾನಿಸ್ತಾನದ ಪರಿಸ್ಥಿತಿಯ ಕುರಿತು ಎಸ್‌ಸಿಒ ಮತ್ತು ಸಿ.ಎಸ್.ಟಿ. ನಡುವೆ ವಿಶೇಷ ಸಭೆಯನ್ನು ಆಯೋಜಿಸಿದ್ದಕ್ಕಾಗಿ ಅಧ್ಯಕ್ಷ ರೆಹಮಾನ್ ಅವರಿಗೆ ಧನ್ಯವಾದ ಹೇಳುವ ಮೂಲಕ ನನ್ನ ಮಾತು ಆರಂಭಿಸುತ್ತೇನೆ.ಯುವ ಕಲಾವಿದರ ವರ್ಣ ಚಿತ್ರಗಳು ಮತ್ತು ಸಾರ್ವಜನಿಕ ಆರೋಗ್ಯ ಕುರಿತ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ
August 26th, 06:02 pm
ಬೆಂಗಳೂರಿನ ವಿದ್ಯಾರ್ಥಿ ಸ್ಟೀವನ್ ಹ್ಯಾರೀಸ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪತ್ರ ಬರೆದು ವರ್ಣ ಚಿತ್ರಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 20 ವರ್ಷದ ಯುವ ಕಲಾವಿದ ಪ್ರಧಾನಮಂತ್ರಿ ಅವರ ಎರಡು ಸುಂದರ ವರ್ಣ ಭಾವಚಿತ್ರಗಳನ್ನು ರಚಿಸಿ, ಜತೆಗೆ ಪತ್ರವೊಂದನ್ನು ಪ್ರಧಾನಮಂತ್ರಿ ಅವರಿಗೆ ಕಳುಹಿಸಿದ್ದರು. ಪ್ರಧಾನಮಂತ್ರಿ ಅವರು ಉತ್ತೇಜನ ಮತ್ತು ಪ್ರಶಂಸೆಯೊಂದಿಗೆ ಅವರಿಗೆ ಉತ್ತರ ನೀಡಿದ್ದಾರೆ.ಮಧ್ಯ ಪ್ರದೇಶದಲ್ಲಿಯ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನಾದ ಫಲಾನುಭವಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
August 07th, 10:55 am
ಮಧ್ಯ ಪ್ರದೇಶದ ರಾಜ್ಯಪಾಲರು ಮತ್ತು ನನ್ನ ಬಹಳ ಹಳೆಯ ಸಹೋದ್ಯೋಗಿ ಶ್ರೀ ಮಂಗೂಭಾಯಿ ಪಟೇಲ್. ಅವರು ತಮ್ಮ ಇಡೀ ಬದುಕನ್ನು ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ, ಬುಡಕಟ್ಟು ಸಮಾಜದ ಉತ್ಥಾನಕ್ಕಾಗಿ ಕಳೆದವರು, ಇಂತಹವರು ಮಧ್ಯಪ್ರದೇಶದ ರಾಜ್ಯಪಾಲ ಶ್ರೀ ಮಂಗೂಭಾಯಿ ಅವರು. ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್, ರಾಜ್ಯ ಸರಕಾರದ ಇತರ ಎಲ್ಲಾ ಸಚಿವರೇ, ಸಂಸದರೇ, ಶಾಸಕರೇ ಮತ್ತು ಮಧ್ಯ ಪ್ರದೇಶದ ವಿವಿಧ ಭಾಗಗಳಿಂದ ಈ ಕಾರ್ಯಕ್ರಮಕ್ಕೆ ಸೇರ್ಪಡೆಗೊಡಿರುವ ಎಲ್ಲಾ ಸಹೋದರಿಯರೇ ಮತ್ತು ಸಹೋದರರೇ!.ಮಧ್ಯಪ್ರದೇಶದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ [ಪಿ.ಎಂ.ಜಿ.ಕೆ.ಎ.ವೈ] ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
August 07th, 10:54 am
ಮಧ್ಯಪ್ರದೇಶದಲ್ಲಿನ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನಾ ಯೋಜನೆ [ಪಿ.ಎಂ.ಜಿ.ಕೆ.ಎ.ವೈ] ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಸಂವಾದ ನಡೆಸಿದರು. ಈ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಹೆಚ್ಚಿನ ಜಾಗೃತಿ ಮೂಡಿಸುತ್ತಿದ್ದು, ಯಾವುದೇ ಅರ್ಹವ್ಯಕ್ತಿ ಸೌಲಭ್ಯದಿಂದ ವಂಚಿತರಾಗುವುದಿಲ್ಲ ಎಂದು ಹೇಳಿದರು.ಕೋವಿಡ್-19 ಕುರಿತು ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಪ್ರಧಾನಿ ಸಂವಾದ
July 28th, 07:46 pm
ಕೋವಿಡ್ -19 ಪರಿಸ್ಥಿತಿಯನ್ನು ಕುರಿತು ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.ಇಂತಹ ನಕಾರಾತ್ಮಕ ಮನೋಭಾವವನ್ನು ಸಂಸತ್ತಿನಲ್ಲಿ ನೋಡಿಲ್ಲ: ರಾಜ್ಯಸಭೆಯಲ್ಲಿ ಪ್ರಧಾನಿ
July 19th, 12:42 pm
ರಾಜ್ಯಸಭೆಯಲ್ಲಿ ಹೊಸ ಮಂತ್ರಿಗಳನ್ನು ಪರಿಚಯಿಸಿದ ಪ್ರಧಾನಿ ಮೋದಿ, ಸಾಮಾನ್ಯ ಕುಟುಂಬಗಳಿಂದ ಬಂದ ಗ್ರಾಮೀಣ ಭಾರತದ ಜನರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂಬುದು ಹೆಮ್ಮೆಯ ವಿಷಯವಾಗಿದೆ. ಆದರೆ ಕೆಲವರು ಮಂತ್ರಿಗಳನ್ನು ಪರಿಚಯಿಸಲು ಬಯಸುವುದಿಲ್ಲ. ಮಹಿಳಾ ಮಂತ್ರಿಗಳನ್ನು ಸದನಕ್ಕೆ ಪರಿಚಯಿಸಲು ಅವರು ಬಯಸುವುದಿಲ್ಲವಾದ್ದರಿಂದ ಅದು ಮಹಿಳಾ ವಿರೋಧಿ ಮನಸ್ಥಿತಿ. ಎಂದರುಹಲವಾರು ಮಹಿಳೆಯರು, ಎಸ್ಸಿ, ಎಸ್‌ಟಿ ಸಮುದಾಯಕ್ಕೆ ಸೇರಿದ ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂಬುದು ಎಲ್ಲರಿಗೂ ಹೆಮ್ಮೆ ತಂದಿದೆ : ಪ್ರಧಾನಿ ಮೋದಿ
July 19th, 11:12 am
ಲೋಕಸಭೆಯಲ್ಲಿ ಹೊಸ ಮಂತ್ರಿಗಳನ್ನು ಪರಿಚಯಿಸಿದ ಪ್ರಧಾನಿ ಮೋದಿ, ಹಲವಾರು ಮಹಿಳೆಯರು, ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಸೇರಿದ ಹಲವಾರು ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಎಲ್ಲರಿಗೂ ಹೆಮ್ಮೆ ಪಡಬೇಕು ಎಂದು ಹೇಳಿದರು. ಹೇಗಾದರೂ, ಕೋಲಾಹಲವನ್ನು ನೋಡಿದ ಅವರು, ಹೆಚ್ಚಿನ ಮಹಿಳೆಯರು, ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯದ ಸದಸ್ಯರು ಮಂತ್ರಿಗಳಾಗುತ್ತಿದ್ದಾರೆ ಎಂದು ಕೆಲವರು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತೋರುತ್ತದೆ.