ʻಜಿ-20 ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆʼಯಲ್ಲಿ ಪ್ರಧಾನ ಮಂತ್ರಿಯವರ ವೀಡಿಯೊ ಸಂದೇಶದ ಪಠ್ಯ
July 21st, 09:06 am
ನಿಮ್ಮ ಕಾರ್ಯಪಡೆಯು ಪ್ರಮುಖ ಆರ್ಥಿಕ ಮತ್ತು ಸಾಮಾಜಿಕ ಅಂಶಗಳಲ್ಲಿ ಒಂದಾದ ಉದ್ಯೋಗದ ಬಗ್ಗೆ ಚರ್ಚಿಸುತ್ತಿದೆ. ನಾವು ಉದ್ಯೋಗ ಕ್ಷೇತ್ರದಲ್ಲಿನ ಕೆಲವು ಮಹತ್ತರ ಬದಲಾವಣೆಗಳ ಹಾದಿಯಲ್ಲಿದ್ದೇವೆ. ಈ ಕ್ಷಿಪ್ರ ಬದಲಾವಣೆಗಳನ್ನು ಪರಿಹರಿಸಲು ನಾವು ಸ್ಪಂದನಶೀಲ ಮತ್ತು ಪರಿಣಾಮಕಾರಿ ಕಾರ್ಯತಂತ್ರಗಳನ್ನು ಸಿದ್ಧಪಡಿಸಬೇಕಾಗಿದೆ. ನಾಲ್ಕನೇ ಕೈಗಾರಿಕಾ ಕ್ರಾಂತಿಯ ಈ ಯುಗದಲ್ಲಿ, ತಂತ್ರಜ್ಞಾನವು ಉದ್ಯೋಗದ ಮೂಲ ಚಾಲಕ ಶಕ್ತಿಯಾಗಿದ್ದು, ಅದು ಹಾಗೆಯೇ ಮುಂದುವರಿಯುತ್ತದೆ. ಕಳೆದ ಬಾರಿ ತಂತ್ರಜ್ಞಾನ-ನೇತೃತ್ವದ ಪರಿವರ್ತನೆಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ತಂತ್ರಜ್ಞಾನ ಆಧರಿತ ಉದ್ಯೋಗಗಳನ್ನು ಸೃಷ್ಟಿಸಿದ ಅನುಭವವನ್ನು ಹೊಂದಿರುವ ದೇಶದಲ್ಲಿ ಈ ಸಭೆ ನಡೆಯುತ್ತಿರುವುದು ನಮ್ಮ ಅದೃಷ್ಟ. ನಿಮ್ಮ ಆತಿಥೇಯ ನಗರವಾದ ಇಂದೋರ್ ಅಂತಹ ರೂಪಾಂತರಗಳ ಹೊಸ ಅಲೆಯನ್ನು ಮುನ್ನಡೆಸುವ ಅನೇಕ ನವೋದ್ಯಮಗಳಿಗೆ ನೆಲೆಯಾಗಿದೆ.ಜಿ-20 ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಮಾವೇಶ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
July 21st, 09:05 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಇಂದೋರ್‌ನಲ್ಲಿಂದು ಜಿ-20 ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಮಾವೇಶ ಉದ್ದೇಶಿಸಿ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದರು.ವಾಷಿಂಗ್ಟನ್ ಡಿಸಿಯಲ್ಲಿ ನಡೆದ 'ಭಾರತ-ಯುಎಸ್‌ಎ: ಭವಿಷ್ಯಕ್ಕಾಗಿ ಕೌಶಲ್ಯ' ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
June 22nd, 11:15 am
ವಾಷಿಂಗ್ಟನ್‌ಗೆ ಬಂದ ಮೇಲೆ ಹಲವಾರು ಯುವ ಮತ್ತು ಸೃಜನಶೀಲ ಮನಸ್ಸುಗಳೊಂದಿಗೆ ಸಂಪರ್ಕ ಸಾಧಿಸಲು ನನಗೆ ಅವಕಾಶ ಸಿಕ್ಕಿರುವುದಕ್ಕೆ ಇಂದು ನನಗೆ ಸಂತೋಷವಾಗಿದೆ. ಭಾರತವು ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದೊಂದಿಗೆ ವಿವಿಧ ಯೋಜನೆಗಳಲ್ಲಿ ಸಹಕರಿಸುತ್ತಿದೆ, ಇದು ಈ ಸ್ಥಳವನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ.ಅಮೇರಿಕದ ಪ್ರಥಮ ಮಹಿಳೆಯೊಂದಿಗೆ "ಭಾರತ ಮತ್ತು ಯುಎಸ್ಎ: ಭವಿಷ್ಯಕ್ಕಾಗಿ ಕೌಶಲ್ಯ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ
June 22nd, 10:57 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಮೇರಿಕದ ಪ್ರಥಮ ಮಹಿಳೆ ಡಾ. ಜಿಲ್ ಬೈಡೆನ್ ಅವರು ವಾಷಿಂಗ್ಟನ್ ಡಿಸಿ ಯ ರಾಷ್ಟ್ರೀಯ ವಿಜ್ಞಾನ ಕೇಂದ್ರದಲ್ಲಿ ಭಾರತ ಮತ್ತು ಯುಎಸ್ಎ: ಭವಿಷ್ಯಕ್ಕಾಗಿ ಕೌಶಲ್ಯ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿದರು.