ತ್ರಿಶೂರಿನ ಶ್ರೀ ಸೀತಾ ರಾಮಸ್ವಾಮಿ ದೇವಸ್ಥಾನದ ಕಾರ್ಯಕ್ರಮ ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಪ್ರಧಾನ ಮಂತ್ರಿ ಭಾಷಣ
April 25th, 09:21 pm
ತ್ರಿಶೂರ್ ಪೂರಂ ಹಬ್ಬದ ಸಂದರ್ಭದಲ್ಲಿ ಕೇರಳ ಮತ್ತು ತ್ರಿಶೂರಿನ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಅಭಿನಂದನೆಗಳು. ತ್ರಿಶೂರ್ ಅನ್ನು ಕೇರಳದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲಾಗುತ್ತದೆ. ಎಲ್ಲಿ ಸಂಸ್ಕೃತಿ, ಸಂಪ್ರದಾಯ, ಕಲೆಗಳೂ ಇರುತ್ತವೆಯೋ ಅಲ್ಲಿ ಆಧ್ಯಾತ್ಮದ ಜತೆಗೆ ತತ್ವಜ್ಞಾನವೂ ಇರುತ್ತದೆ. ಹಬ್ಬಗಳ ಜತೆಗೆ ಸಂಭ್ರಮವೂ ಇದೆ. ತ್ರಿಶೂರ್ ಈ ಪರಂಪರೆ ಮತ್ತು ಅಸ್ಮಿತೆಯನ್ನು ಜೀವಂತವಾಗಿರಿಸುತ್ತಿರುವುದಕ್ಕೆ ನನಗೆ ಸಂತಸವಾಗಿದೆ. ಶ್ರೀ ಸೀತಾರಾಮಸ್ವಾಮಿ ದೇವಸ್ಥಾನವು ಅನೇಕ ವರ್ಷಗಳಿಂದ ಈ ದಿಕ್ಕಿನಲ್ಲಿ ಕ್ರಿಯಾತ್ಮಕ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ದೇವಾಲಯವನ್ನು ಈಗ ಹೆಚ್ಚು ದೈವಿಕ ಮತ್ತು ಭವ್ಯವಾಗಿ ಮಾಡಲಾಗಿದೆ ಎಂದು ನನಗೆ ತಿಳಿದುಬಂತು. ಈ ಸಂದರ್ಭದಲ್ಲಿ ಚಿನ್ನದ ಹೊದಿಕೆಯ ಗರ್ಭಗುಡಿಯನ್ನು ಶ್ರೀ ಸೀತಾರಾಮ, ಭಗವಾನ್ ಅಯ್ಯಪ್ಪ ಮತ್ತು ಭಗವಾನ್ ಶಿವನಿಗೆ ಸಮರ್ಪಿಸಲಾಗುತ್ತಿದೆ.ಕೇರಳದ ತ್ರಿಶೂರ್ ನ ಶ್ರೀ ಸೀತಾರಾಮ ಸ್ವಾಮಿ ದೇವಸ್ಥಾನದ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ
April 25th, 09:20 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ತ್ರಿಶೂರ್ ನ ಶ್ರೀ ಸೀತಾರಾಮ ಸ್ವಾಮಿ ದೇವಸ್ಥಾನದ ಕಾರ್ಯಕ್ರಮವನ್ನುದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಭಾಷಣ ಮಾಡಿದರು. ತ್ರಿಶೂರ್ ಪೂರಂ ಹಬ್ಬದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಎಲ್ಲರಿಗೂ ಶುಭ ಕೋರಿದರು."ಯಶಸ್ವಿ ಭಾರತ ಪರಿಕ್ರಮ ಪಾದಯಾತ್ರೆ ಬಳಿಕ ಪ್ರಧಾನಮಂತ್ರಿಯವರನ್ನು ಭೇಟಿಯಾದ ಶ್ರೀ ಸೀತಾರಾಂ ಕೆದಿಲಾಯ "
August 11th, 06:01 pm
ತಾವು ಕೈಗೊಂಡಿದ್ದ ಭಾರತ ಪರಿಕ್ರಮ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ ತರುವಾಯ ಶ್ರೀ ಸೀತಾರಾಂ ಕೆದಿಲಾಯ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಶ್ರೀ ಕೆದಿಲಾಯ ಅವರ ಪ್ರಕಾರ, ಅವರು 2012ರ ಆಗಸ್ಟ್ 9ರಂದು ಕನ್ಯಾಕುಮಾರಿಯಿಂದ ಭಾರತ ಪರಿಕ್ರಮ ಯಾತ್ರೆ ಆರಂಭಿಸಿ, ಈ ವರ್ಷ ಜುಲೈ 9ರಂದು ಕನ್ಯಾಕುಮಾರಿಯಲ್ಲೇ ತಮ್ಮ ಯಾತ್ರೆ ಪೂರ್ಣಗೊಳಿಸಿದ್ದರು.