ದೆಹಲಿಯ ಕೆಂಪು ಕೋಟೆಯಲ್ಲಿ ಇಂಡಿಯಾ ಆರ್ಟ್, ಆರ್ಕಿಟೆಕ್ಚರ್ ಮತ್ತು ಡಿಸೈನ್ ಬಿನಾಲೆ 2023 ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ
December 08th, 06:00 pm
ಕೆಂಪು ಕೋಟೆಯ ಈ ಅಂಗಳವು ಸ್ವತಃ ಐತಿಹಾಸಿಕವಾಗಿದೆ. ಈ ಕೋಟೆ ಕೇವಲ ಕಟ್ಟಡವಲ್ಲ; ಇದು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಸ್ವಾತಂತ್ರ್ಯದ ಮೊದಲು ಮತ್ತು ನಂತರ ಹಲವಾರು ತಲೆಮಾರುಗಳು ಕಳೆದಿವೆ, ಆದರೆ ಕೆಂಪು ಕೋಟೆಯು ಸ್ಥಿರ ಮತ್ತು ಅಳಿಸಲಾಗದು. ಈ ವಿಶ್ವ ಪರಂಪರೆಯ ತಾಣವಾದ ಕೆಂಪು ಕೋಟೆಗೆ ನಿಮ್ಮೆಲ್ಲರನ್ನೂ ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ.ದೆಹಲಿಯ ಕೆಂಪು ಕೋಟೆಯಲ್ಲಿ ಮೊದಲ ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸದ ದ್ವೈವಾರ್ಷಿಕ ವಸ್ತುಪ್ರದರ್ಶನ ಅಥವಾ ಉತ್ಸವ-2023 ಉದ್ಘಾಟಿಸಿದ ಪ್ರಧಾನ ಮಂತ್ರಿ
December 08th, 05:15 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ಕೆಂಪುಕೋಟೆಯಲ್ಲಿಂದು ನಡೆಯುತ್ತಿರುವ ಮೊದಲ ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸದ ದ್ವೈವಾರ್ಷಿಕ ವಸ್ತುಪ್ರದರ್ಶನ(ಐಎಎಡಿಬಿ) ಅಥವಾ ಉತ್ಸವ-2023 ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರು ಕೆಂಪುಕೋಟೆಯಲ್ಲಿ 'ಆತ್ಮನಿರ್ಭರ್ ಭಾರತ್ ಸೆಂಟರ್ ಫಾರ್ ಡಿಸೈನ್' ಮತ್ತು ವಿದ್ಯಾರ್ಥಿಗಳ ವಸ್ತುಪ್ರದರ್ಶನ-ಸಮುನ್ನತಿಯನ್ನು ಸಹ ಉದ್ಘಾಟಿಸಿದರು. ಕಾರ್ಯಕ್ರಮದ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿದರು. ನಂತರ ಅವರು ವಸ್ತುಪ್ರದರ್ಶನ ವೀಕ್ಷಿಸಿದರು. ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸ ವಸ್ತುಪ್ರದರ್ಶನ((ಐಎಎಡಿಬಿ)ವು ದೆಹಲಿಯ ಸಾಂಸ್ಕೃತಿಕ ಸ್ಥಳಕ್ಕೆ ಪೀಠಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ.ಪ್ರಧಾನಮಂತ್ರಿಯವರು ಸಿಂಧುದುರ್ಗದಲ್ಲಿ ನೌಕಾಪಡೆಯ ದಿನಾಚರಣೆಯ ದೃಶ್ಯಾವಳಿಗಳನ್ನು ಹಂಚಿಕೊಂಡಿದ್ದಾರೆ.
December 04th, 08:28 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ನೌಕಾಪಡೆಯ ದಿನಾಚರಣೆಯ ದೃಶ್ಯಾವಳಿಗಳನ್ನು ಹಂಚಿಕೊಂಡಿದ್ದಾರೆ.ಮಹಾರಾಷ್ಟ್ರದ ಸಿಂಧುದುರ್ಗ್ ನಲ್ಲಿರುವ ರಾಜ್ ಕೋಟ್ ಫೋರ್ಟ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪ್ರಧಾನಮಂತ್ರಿಗಳಿಂದ ಅನಾವರಣ
December 04th, 08:00 pm
ಮಹಾರಾಷ್ಟ್ರ ರಾಜ್ಯದ ಸಿಂಧುದುರ್ಗ್ ನ ರಾಜ್ ಕೋಟ್ ಫೋರ್ಟ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಪ್ರಧಾನಮಂತ್ರಿ ಶ್ರೀ.ನರೇಂದ್ರ ಮೋದಿ ಅನಾವರಣಗೊಳಿಸಿದರು. ಶ್ರೀ ಮೋದಿ ಅವರು ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ, ಛಾಯಾಚಿತ್ರಗಳ ಗ್ಯಾಲರಿ ವೀಕ್ಷಿಸಿದರು.ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ನಡೆದ ʻನೌಕಾಪಡೆ ದಿನಾಚರಣೆ-2023ʼ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ
December 04th, 04:35 pm
ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ರಮೇಶ್ ಅವರೇ, ಮುಖ್ಯಮಂತ್ರಿ ಶ್ರೀ ಏಕನಾಥ್ ಅವರೇ, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ರಾಜನಾಥ್ ಸಿಂಗ್ ಅವರೇ, ಶ್ರೀ ನಾರಾಯಣ್ ರಾಣೆ ಅವರೇ, ಉಪಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಅವರೇ, ಶ್ರೀ ಅಜಿತ್ ಪವಾರ್ ಅವರೇ, ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಅವರೇ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರೇ, ನನ್ನ ನೌಕಾ ಪಡೆ ಸ್ನೇಹಿತರೇ ಮತ್ತು ನನ್ನ ಎಲ್ಲಾ ಕುಟುಂಬ ಸದಸ್ಯರೇ!ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ 2023ರ ನೌಕಾಪಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಭಾಗಿ
December 04th, 04:30 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ‘ನೌಕಾಪಡೆಯ ದಿನಾಚರಣೆ 2023’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಿಂಧುದುರ್ಗದ ತರ್ಕರ್ಲಿ ಬೀಚ್‌ನಿಂದ ಭಾರತೀಯ ನೌಕಾಪಡೆಯ ಹಡಗುಗಳು, ಜಲಾಂತರ್ಗಾಮಿ ನೌಕೆಗಳು, ವಿಮಾನಗಳು ಮತ್ತು ವಿಶೇಷ ಪಡೆಗಳ 'ಕಾರ್ಯಾಚರಣೆ ಪ್ರದರ್ಶನಗಳನ್ನು' ಅವರು ವೀಕ್ಷಿಸಿ, ಗೌರವ ರಕ್ಷೆ ಸ್ವೀಕರಿಸಿದರು.ಮಹಾರಾಷ್ಟ್ರಕ್ಕೆ ಡಿಸೆಂಬರ್ 4 ರಂದು ಪ್ರಧಾನಿ ಭೇಟಿ
December 02nd, 04:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ 2023ರ ಡಿಸೆಂಬರ್ 4 ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ಧಾರೆ. ಮಧ್ಯಾಹ್ನ ಸುಮಾರು 4.15ಕ್ಕೆ ಪ್ರಧಾನಮಂತ್ರಿಗಳು ಮಹಾರಾಷ್ಟ್ರದ ಸಿಂಧುದುರ್ಗ್ ತಲುಪಲಿದ್ದು, ರಾಜ್ ಕೋಟ್ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಬಳಿಕ ಅವರು, ‘ನೌಕಾ ದಿನ 2023’ ರ ಅಂಗವಾಗಿ ಸಿಂಧುದುರ್ಗ್ ನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಭಾರತೀಯ ನೌಕಾಪಡೆಯ ಹಡುಗುಗಳು, ಸಬ್ ಮರೀನ್, ವಿಮಾನ ಮತ್ತು ವಿಶೇಷ ಪಡೆಗಳ “ಆಪರೇಷನಲ್ ಡೆಮಾನ್ಸ್ ಟ್ರೇಷನ್ “ (ಕಾರ್ಯನಿರ್ವಹಣಾ ಪ್ರದರ್ಶನ) ಅನ್ನು ಸಿಂಧುದುರ್ಗ್ ನ ತರ್ಕರ್ಲಿ ಬೀಚ್ ನಿಂದ ವೀಕ್ಷಿಸಲಿದ್ದಾರೆ.