ಬಿಹಾರದ ಜಮುಯಿಯಲ್ಲಿ ಆಯೋಜಿತವಾಗಿದ್ದ ಜನಜಾತಿಯ ಗೌರವ್ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
November 15th, 11:20 am
ಬಿಹಾರದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೇಕರ್ ಜಿ, ಬಿಹಾರದ ಜನಪ್ರಿಯ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜಿ, ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳಾದ ಜುಯಲ್ ಓರಾಮ್ ಜಿ, ಜಿತನ್ ರಾಮ್ ಮಾಂಝಿ ಜಿ, ಗಿರಿರಾಜ್ ಸಿಂಗ್ ಜಿ, ಚಿರಾಗ್ ಪಾಸ್ವಾನ್ ಜಿ, ಮತ್ತು ಯು ಕೆ ದುರ್ಗಾದಾಸ್ ಜಿ ಮತ್ತು ಇಂದು ನಮ್ಮೆಲ್ಲರ ನಡುವೆ ಬಿರ್ಸಾ ಮುಂಡಾ ಜಿ ಅವರ ವಂಶಸ್ಥರು ಇದ್ದಾರೆ ಎಂಬುದು ನಮ್ಮೆಲ್ಲರ ಸೌಭಾಗ್ಯ. ಇಂದು ಅವರ ಮನೆಯಲ್ಲಿ ಪ್ರಮುಖ ಧಾರ್ಮಿಕ ಆಚರಣೆ ಇದ್ದರೂ. ಅವರ ಕುಟುಂಬ ಧಾರ್ಮಿಕ ವಿಧಿಗಳಲ್ಲಿ ನಿರತರಾಗಿದ್ದರೂ, ಬುಧ್ರಾಮ್ ಮುಂಡಾ ಜಿ ಅವರು ನಮ್ಮೊಂದಿಗೆ ಸೇರಿಕೊಂಡಿದ್ದಾರೆ, ಸಿಧು ಕನ್ಹು ಅವರ ವಂಶಸ್ಥರಾದ ಮಂಡಲ್ ಮುರ್ಮು ಜಿ ಅವರು ನಮ್ಮೊಂದಿಗೆ ಇರುವುದು ನಮಗೆ ಸಮಾನ ಗೌರವವಾಗಿದೆ. ಇಂದು ಭಾರತೀಯ ಜನತಾ ಪಕ್ಷದಲ್ಲಿ ಅತ್ಯಂತ ಹಿರಿಯ ನಾಯಕರಿದ್ದರೆ, ಒಂದು ಕಾಲದಲ್ಲಿ ಲೋಕಸಭೆಯ ಉಪಸ್ಪೀಕರ್ ಆಗಿ ಸೇವೆ ಸಲ್ಲಿಸಿದ ನಮ್ಮ ಕರಿಯ ಮುಂಡಾಜಿ ಅವರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ಎಂದು ಹೇಳಲು ನನಗೆ ಸಂತೋಷದ ವಿಷಯವಾಗಿದೆ. ಇದು ಇನ್ನೂ ನಮಗೆ ಮಾರ್ಗದರ್ಶನ ನೀಡುತ್ತಿದೆ. ಜುಯಲ್ ಓರಾಮ್ ಜಿ ಉಲ್ಲೇಖಿಸಿದಂತೆ, ಅವರು ನನಗೆ ತಂದೆಯಂತಿದ್ದಾರೆ. ಕರಿಯಾ ಮುಂಡಾ ಜಿ ಅವರು ಜಾರ್ಖಂಡ್‌ನಿಂದ ಇಲ್ಲಿಗೆ ವಿಶೇಷವಾಗಿ ಪ್ರಯಾಣಿಸಿದ್ದಾರೆ. ಬಿಹಾರದ ಉಪಮುಖ್ಯಮಂತ್ರಿ ಮತ್ತು ನನ್ನ ಸ್ನೇಹಿತ ವಿಜಯ್ ಕುಮಾರ್ ಸಿನ್ಹಾ ಜಿ, ಸಾಮ್ರಾಟ್ ಚೌಧರಿ ಜಿ, ಬಿಹಾರ ಸರ್ಕಾರದ ಸಚಿವರು, ಸಂಸದರು, ವಿಧಾನಸಭಾ ಸದಸ್ಯರು, ಇತರೆ ಸಾರ್ವಜನಿಕ ಪ್ರತಿನಿಧಿಗಳು, ದೇಶದ ಮೂಲೆ ಮೂಲೆಗಳಿಂದ ಬಂದಿರುವ ಗಣ್ಯ ಅತಿಥಿಗಳು ಮತ್ತು ಜಮುಯಿಯ ನನ್ನ ಪ್ರೀತಿಯ ಸಹೋದರ, ಸಹೋದರಿಯರೆ.ಜನಜಾತಿಯ ಗೌರವ್ ದಿವಸ್ ಸಂದರ್ಭದಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಚಾಲನೆ
November 15th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರದ ಜಮುಯಿಯಲ್ಲಿಂದು ಜನಜಾತಿಯ ಗೌರವ್ ದಿವಸ್ ಅಂಗವಾಗಿ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ, ಸುಮಾರು 6,640 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿದ ಸಿಕ್ಕಿಂ ಮುಖ್ಯಮಂತ್ರಿ
August 27th, 02:06 pm
ಸಿಕ್ಕಿಂ ಮುಖ್ಯಮಂತ್ರಿ ಶ್ರೀ ಪ್ರೇಮ್ ಸಿಂಗ್ ತಮಾಂಗ್ ಅವರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ನಿನ್ನೆ ದೆಹಲಿಯಲ್ಲಿ ಭೇಟಿ ಮಾಡಿದರು.ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಸಿಕ್ಕಿಂ ರಾಜ್ಯಪಾಲರು
August 03rd, 09:53 pm
ಸಿಕ್ಕಿಂ ರಾಜ್ಯಪಾಲರಾದ ಶ್ರೀ ಓಂ ಪ್ರಕಾಶ್ ಮಾಥುರ್ ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿದ ಸಿಕ್ಕಿಂ ರಾಜ್ಯಪಾಲರು
July 18th, 09:35 pm
ಸಿಕ್ಕಿಂ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು.ಸಿಕ್ಕಿಂ ಮುಖ್ಯಮಂತ್ರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು
June 24th, 05:08 pm
ಸಿಕ್ಕಿಂ ಮುಖ್ಯಮಂತ್ರಿ ಶ್ರೀ ಪ್ರೇಮ್ ಸಿಂಗ್ ತಮಾಂಗ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.ಸಿಕ್ಕಿಂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರೇಮ್ ಸಿಂಗ್ ತಮಾಂಗ್ ಅವರಿಗೆ ಪ್ರಧಾನಿ ಅಭಿನಂದನೆ
June 10th, 10:06 pm
ಸಿಕ್ಕಿಂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರೇಮ್ ಸಿಂಗ್ ತಮಾಂಗ್ ಅವರಿಗೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಅಭಿನಂದನೆ ತಿಳಿಸಿದ್ದಾರೆ.ಎನ್‌ಡಿಎ ರಚನೆಯಾದದ್ದು 'ನೇಷನ್ ಫಸ್ಟ್' ತತ್ವದ ಮೇಲೆಯೇ ಹೊರತು ಅಧಿಕಾರಕ್ಕಾಗಿ ಅಲ್ಲ: ಶ್ರೀ ನರೇಂದ್ರ ಮೋದಿ ಜಿ
June 07th, 12:15 pm
ಸಂವಿಧಾನ್ ಸದನದಲ್ಲಿ ನಡೆದ ಎನ್‌ಡಿಎ ಸಂಸದೀಯ ಸಭೆಯಲ್ಲಿ ಮಾತನಾಡಿದ ಶ್ರೀ ನರೇಂದ್ರ ಮೋದಿ ಜಿ, ಎನ್‌ಡಿಎ ಒಂದು ಸಾವಯವ ಮೈತ್ರಿ ಮತ್ತು ಗುಂಪು 'ನೇಷನ್ ಫಸ್ಟ್' ತತ್ವದ ಮೇಲೆ ಕೆಲಸ ಮಾಡಿದೆ ಎಂದು ಹೇಳಿದರು. ಈ ಮೈತ್ರಿಯು ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.ಶ್ರೀ ನರೇಂದ್ರ ಮೋದಿ ಜಿ ಅವರು ಸಂವಿಧಾನ್ ಸದನ್‌ನಲ್ಲಿ ಎನ್‌ಡಿಎ ಸಂಸದೀಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾರೆ
June 07th, 12:05 pm
ಸಂವಿಧಾನ್ ಸದನದಲ್ಲಿ ನಡೆದ ಎನ್‌ಡಿಎ ಸಂಸದೀಯ ಸಭೆಯಲ್ಲಿ ಮಾತನಾಡಿದ ಶ್ರೀ ನರೇಂದ್ರ ಮೋದಿ ಜಿ, ಎನ್‌ಡಿಎ ಒಂದು ಸಾವಯವ ಮೈತ್ರಿ ಮತ್ತು ಗುಂಪು 'ನೇಷನ್ ಫಸ್ಟ್' ತತ್ವದ ಮೇಲೆ ಕೆಲಸ ಮಾಡಿದೆ ಎಂದು ಹೇಳಿದರು. ಈ ಮೈತ್ರಿಯು ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.3ನೇ ಬಾರಿಗೆ ಎನ್‌ಡಿಎ ಗೆಲುವು 140 ಕೋಟಿ ಭಾರತೀಯರ ಗೆಲುವನ್ನು ಪ್ರತಿನಿಧಿಸುತ್ತದೆ: ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ಮೋದಿ
June 04th, 08:45 pm
2024 ರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಬಿಜೆಪಿ ಕೇಂದ್ರದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಭಾರತದ ಜನತೆಗೆ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ, “2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಎನ್‌ಡಿಎ 3 ನೇ ಬಾರಿಗೆ ಜಯಶಾಲಿಯಾಗಲು ಅನುವು ಮಾಡಿಕೊಟ್ಟಿವೆ. ಇದು ‘ವಿಕಸಿತ್ ಭಾರತ್’ ಮತ್ತು ಭಾರತದ ಸಂವಿಧಾನವನ್ನು ರಕ್ಷಿಸುವ ಕಲ್ಪನೆಯ ವಿಜಯವಾಗಿದೆ ಎಂದು ಅವರು ಹೇಳಿದರು. 3ನೇ ಬಾರಿಗೆ ಎನ್‌ಡಿಎ ಗೆಲುವು 140 ಕೋಟಿ ಭಾರತೀಯರ ಗೆಲುವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.2024 ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆಲುವಿನ ನಂತರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ
June 04th, 08:31 pm
2024 ರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಬಿಜೆಪಿ ಕೇಂದ್ರದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಭಾರತದ ಜನತೆಗೆ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ, “2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಎನ್‌ಡಿಎ 3 ನೇ ಬಾರಿಗೆ ಜಯಶಾಲಿಯಾಗಲು ಅನುವು ಮಾಡಿಕೊಟ್ಟಿವೆ. ಇದು ‘ವಿಕಸಿತ್ ಭಾರತ್’ ಮತ್ತು ಭಾರತದ ಸಂವಿಧಾನವನ್ನು ರಕ್ಷಿಸುವ ಕಲ್ಪನೆಯ ವಿಜಯವಾಗಿದೆ ಎಂದು ಅವರು ಹೇಳಿದರು. 3ನೇ ಬಾರಿಗೆ ಎನ್‌ಡಿಎ ಗೆಲುವು 140 ಕೋಟಿ ಭಾರತೀಯರ ಗೆಲುವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.ರೋಜ್‌ಗಾರ್ ಮೇಳದ ಅಡಿ 51,000+ ನೇಮಕ ಪತ್ರಗಳ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
November 30th, 04:30 pm
ದೇಶದ ಲಕ್ಷಗಟ್ಟಲೆ ಯುವಕರಿಗೆ ಸರ್ಕಾರಿ ಉದ್ಯೋಗ ನೀಡುವ ಅಭಿಯಾನ ಮುಂದುವರಿದಿದೆ. ಇಂದು 50 ಸಾವಿರಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗದ ನೇಮಕ ಪತ್ರ ನೀಡಲಾಗಿದೆ. ಈ ನೇಮಕ ಪತ್ರಗಳನ್ನು ಸ್ವೀಕರಿಸುವುದು ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಫಲಿತಾಂಶವಾಗಿದೆ. ನಾನು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ನನ್ನ ಹೃದಯಾಂತರಾಳದಿಂದ ಅಭಿನಂದಿಸುತ್ತೇನೆ.ʻಉದ್ಯೋಗ ಮೇಳ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
November 30th, 04:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಉದ್ಯೋಗ ಮೇಳʼವನ್ನು ಉದ್ದೇಶಿಸಿ ಮಾತನಾಡಿದರು ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಹೊಸದಾಗಿ ಸೇರ್ಪಡೆಗೊಂಡವರಿಗೆ ಸುಮಾರು 51,000 ನೇಮಕಾತಿ ಪತ್ರಗಳನ್ನು ವಿತರಿಸಿದರು. ದೇಶಾದ್ಯಂತ ಆಯ್ಕೆಯಾದ ಅಭ್ಯರ್ಥಿಗಳು ಕಂದಾಯ ಇಲಾಖೆ, ಗೃಹ ವ್ಯವಹಾರಗಳ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಹಣಕಾಸು ಸೇವೆಗಳ ಇಲಾಖೆ, ರಕ್ಷಣಾ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳು / ಇಲಾಖೆಗಳಲ್ಲಿ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳಲಿದ್ದಾರೆ.ಸಿಕ್ಕಿಂ ಮುಖ್ಯಮಂತ್ರಿಯವರೊಂದಿಗೆ ಮಾತನಾಡಿದ ಪ್ರಧಾನಮಂತ್ರಿಯವರು
October 04th, 03:47 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಿಕ್ಕಿಂನ ಮುಖ್ಯಮಂತ್ರಿ ಶ್ರೀ ಪ್ರೇಮ್ ಸಿಂಗ್ ತಮಾಂಗ್ ಅವರೊಂದಿಗೆ ಮಾತನಾಡಿದರು ಮತ್ತು ದುರದೃಷ್ಟವಶಾತ್ ಸಿಕ್ಕಿಂನ ಕೆಲವು ಭಾಗಗಳಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪದ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಅವಲೋಕನಗೈದರು. ಇಂತಹ ಪರಿಸ್ಥಿತಿಯಲ್ಲಿ ಸಾಧ್ಯವಿರುವ ಎಲ್ಲ ರೀತಿಯ ಬೆಂಬಲವನ್ನೂ ನೀಡುವುದಾಗಿ ಅವರು ಭರವಸೆ ನೀಡಿದರು.ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಸಿಕ್ಕಿಂ ರಾಜ್ಯಪಾಲರು
August 02nd, 04:41 pm
ಸಿಕ್ಕಿಂ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯರವರು @narendramodi ಪ್ರಧಾನಿಯನ್ನು ಭೇಟಿಯಾದರು. ಎಂದು ಟ್ವೀಟ್ ಮಾಡಿದೆ.ಅಸ್ಸಾಂನ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ ತೋರಿದ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
May 29th, 12:22 pm
ಅಸ್ಸಾಂ ರಾಜ್ಯಪಾಲ ಶ್ರೀ ಗುಲಾಬ್ ಚಂದ್ ಕಟಾರಿಯಾ ಜೀ, ಮುಖ್ಯಮಂತ್ರಿ ಭಾಯ್ ಹಿಮಂತ ಬಿಸ್ವಾ ಶರ್ಮಾ ಜೀ, ಕೇಂದ್ರ ಸಚಿವ ಸಂಪುಟದ ಸದಸ್ಯರಾದ ಅಶ್ವಿನಿ ವೈಷ್ಣವ್ ಜೀ, ಸರ್ಬಾನಂದ ಸೋನೊವಾಲ್ ಜಿ, ರಾಮೇಶ್ವರ್ ತೆಲಿ ಜಿ, ನಿಸಿತ್ ಪ್ರಮಾಣಿಕ್ ಜಿ, ಜಾನ್ ಬಾರ್ಲಾ ಜೀ, ಇತರ ಎಲ್ಲ ಸಚಿವರು, ಸಂಸದರು, ಶಾಸಕರು ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ!ಗುವಾಹಟಿ ಮತ್ತು ʻನ್ಯೂ ಜಲ್ಪಾಯಿಗುರಿʼಯನ್ನು ಸಂಪರ್ಕಿಸುವ ಅಸ್ಸಾಂನ ಮೊದಲ ʻವಂದೇ ಭಾರತ್ ಎಕ್ಸ್ಪ್ರೆಸ್ʼಗೆ ಹಸಿರು ನಿಶಾನೆ ತೋರಿದ ಪ್ರಧಾನಿ
May 29th, 12:21 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅಸ್ಸಾಂನ ಚೊಚ್ಚಲ ʻವಂದೇ ಭಾರತ್ ಎಕ್ಸ್ಪ್ರೆಸ್ʼಗೆ ಹಸಿರು ನಿಶಾನೆ ತೋರಿದರು. ಈ ʻವಂದೇ ಭಾರತ್ ಎಕ್ಸ್ಪ್ರೆಸ್ʼ ರೈಲು ಗುವಾಹಟಿಯನ್ನು ʻನ್ಯೂ ಜಲ್ಪಾಯಿಗುರಿʼಯೊಂದಿಗೆ ಸಂಪರ್ಕಿಸುತ್ತದೆ ಮತ್ತು ಪ್ರಯಾಣವು ಕೇವಲ 5 ಗಂಟೆ 30 ನಿಮಿಷ ಹಿಡಿಯುತ್ತದೆ. ಪ್ರಧಾನಮಂತ್ರಿಯವರು 182 ರೂಟ್ ಕಿಲೋಮೀಟರ್ಗಳ ಹೊಸ ವಿದ್ಯುದ್ದೀಕರಣಗೊಂಡ ವಿಭಾಗಗಳನ್ನು ಸೇವೆಗೆ ಸಮರ್ಪಿಸಿದರು ಜೊತೆಗೆ, ಅಸ್ಸಾಂನ ʻಲುಮ್ಡಿಂಗ್ʼನಲ್ಲಿ ಹೊಸದಾಗಿ ನಿರ್ಮಿಸಲಾದ ʻಡೆಮುʼ/ ʻಮೆಮುʼ ಶೆಡ್ ಅನ್ನು ಉದ್ಘಾಟಿಸಿದರು.ಸಿಕ್ಕಿಂ ಜನತೆಗೆ ಅವರ ರಾಜ್ಯ ಸ್ಥಾಪನಾ ದಿನದಂದು ಶುಭ ಕೋರಿದ ಪ್ರಧಾನಮಂತ್ರಿ
May 16th, 05:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಕ್ಕಿಂ ಜನತೆಗೆ ಅವರ ರಾಜ್ಯ ಸ್ಥಾಪನಾ ದಿನದಂದು ಶುಭ ಕೋರಿದ್ದಾರೆ. ಸಿಕ್ಕಿಂನ ನಿರಂತರ ಅಭಿವೃದ್ಧಿಗಾಗಿ ಶ್ರೀ ಮೋದಿ ಅವರು ಪ್ರಾರ್ಥಿಸಿದರು.PM condoles deaths in avalanche in Sikkim
April 04th, 06:41 pm
The Prime Minister, Shri Narendra Modi has expressed grief over loss of lives in an avalanche incident in Sikkim.‘ಮನ್ ಕಿ ಬಾತ್’ ಸಾರ್ವಜನಿಕ ಸಹಭಾಗಿತ್ವದ ಅಭಿವ್ಯಕ್ತಿಗೆ ಅದ್ಭುತ ಮಾಧ್ಯಮವಾಗಿದೆ: ಪ್ರಧಾನಿ ಮೋದಿ
February 26th, 11:00 am
ಸ್ನೇಹಿತರೇ, ಇಂದು ಈ ಸಂದರ್ಭದಲ್ಲಿ ನನಗೆ ಲತಾ ಮಂಗೇಶ್ಕರ್, ಲತಾ ದೀದಿಯ ನೆನಪು ಬರುವುದು ಬಹಳ ಸಹಜವಾಗಿದೆ. ಏಕೆಂದರೆ ಈ ಸ್ಪರ್ಧೆ ಪ್ರಾರಂಭವಾದಾಗ, ಲತಾ ಅವರು ದೇಶದ ಜನತೆ ಈ ಸ್ಪರ್ಧೆಯಲ್ಲಿ ಖಂಡಿತವಾಗಿಯೂ ಪಾಲ್ಗೊಳ್ಳಬೇಕೆಂದು ಟ್ವೀಟ್ ಮೂಲಕ ಮನವಿ ಮಾಡಿದ್ದರು.