ಮಧ್ಯಪ್ರದೇಶದ ಚಿತ್ರಕೂಟದ ಶ್ರೀ ಸದ್ಗುರು ಸೇವಾ ಸಂಘ ಟ್ರಸ್ಟ್ ನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ

October 27th, 07:57 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಚಿತ್ರಕೂಟದ ಶ್ರೀ ಸದ್ಗುರು ಸೇವಾ ಸಂಘ ಟ್ರಸ್ಟ್ ನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಶ್ರೀ ನರೇಂದ್ರ ಮೋದಿ ಅವರು ರಘುಬೀರ್ ಮಂದಿರದಲ್ಲಿ ಪೂಜೆ ಹಾಗೂ ದರ್ಶನ ಮಾಡಿದರು ಮತ್ತು ಪೂಜಾ ರಾಂಚೋಡ್ ದಾಸ್ ಜಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಅವರು ಶ್ರೀ ರಾಮ್ ಸಂಸ್ಕೃತ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದರು. ಬಳಿಕ ಗುರುಕುಲದ ಚಟುವಟಿಕೆಗಳನ್ನು ಪ್ರದರ್ಶಿಸುವ ಗ್ಯಾಲರಿಯ ನಡಿಗೆ ನಡೆಸಿದರು. ನಂತರ ಅವರು ಸದ್ಗುರು ನೇತ್ರ ಚಿಕಿತ್ಸಾಲಯದ ಕಡೆಗೆ ಸಾಗಿದರು. ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಸ್ತುಪ್ರದರ್ಶನದ ದರ್ಶನ ಪಡೆದರು. ಬಳಿಕ ಸದ್ಗುರು ಮೆಡಿಸಿಟಿಯ ಮಾದರಿಯ ದರ್ಶನವನ್ನೂ ಮಾಡಿದರು.

ಅಕ್ಟೋಬರ್ 27ರಂದು ಮಧ್ಯಪ್ರದೇಶದ ಚಿತ್ರಕೂಟಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

October 26th, 09:14 pm

ಮಧ್ಯಾಹ್ನ 1:45 ರ ಸುಮಾರಿಗೆ ಪ್ರಧಾನಮಂತ್ರಿಯವರು ಸತ್ನಾ ಜಿಲ್ಲೆಯ ಚಿತ್ರಕೂಟಕ್ಕೆ ತಲುಪಲಿದ್ದು, ಶ್ರೀ ಸದ್ಗುರು ಸೇವಾ ಸಂಘ ಟ್ರಸ್ಟ್ ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅವರು ರಘುಬೀರ್ ಮಂದಿರದಲ್ಲಿ ಪೂಜೆ ಮತ್ತು ದರ್ಶನ ನೀಡಲಿದ್ದಾರೆ. ಶ್ರೀ ರಾಮ್ ಸಂಸ್ಕೃತ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ; ದಿವಂಗತ ಶ್ರೀ ಅರವಿಂದ್ ಭಾಯಿ ಮಫತ್ ಲಾಲ್ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಮತ್ತು ಜಾನಕಿಕುಂಡ್ ಚಿಕಿತ್ಸಾಲಯದ ಹೊಸ ವಿಭಾಗವನ್ನು ಉದ್ಘಾಟಿಸಲಿದ್ದಾರೆ.