ಹಗರಣಗಳು ಮತ್ತು ಕಾನೂನುಬಾಹಿರತೆಯನ್ನು ಹೊರತುಪಡಿಸಿ, ಅವರ ವರದಿ ಕಾರ್ಡ್‌ಗಳಲ್ಲಿ ಏನೂ ಇಲ್ಲ: ದರ್ಭಾಂಗಾದಲ್ಲಿ ಪ್ರಧಾನಿ ಮೋದಿ
May 04th, 03:45 pm
ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ದರ್ಭಾಂಗಾದಲ್ಲಿ ರೋಮಾಂಚಕ ಸಭೆಯನ್ನುದ್ದೇಶಿಸಿ ಮಾತನಾಡಿದರು, ಅಲ್ಲಿ ಅವರು ದಿವಂಗತ ಮಹಾರಾಜ ಕಾಮೇಶ್ವರ್ ಸಿಂಗ್ ಜಿ ಅವರಿಗೆ ನಮನ ಸಲ್ಲಿಸಿದರು ಮತ್ತು ಮಿಥಿಲೆಯ ಪವಿತ್ರ ಭೂಮಿ ಮತ್ತು ಅದರ ಜನರನ್ನು ಶ್ಲಾಘಿಸಿದರು.ಬಿಹಾರದ ದರ್ಭಾಂಗಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
May 04th, 03:30 pm
ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ದರ್ಭಾಂಗಾದಲ್ಲಿ ರೋಮಾಂಚಕ ಸಭೆಯನ್ನುದ್ದೇಶಿಸಿ ಮಾತನಾಡಿದರು, ಅಲ್ಲಿ ಅವರು ದಿವಂಗತ ಮಹಾರಾಜ ಕಾಮೇಶ್ವರ್ ಸಿಂಗ್ ಜಿ ಅವರಿಗೆ ನಮನ ಸಲ್ಲಿಸಿದರು ಮತ್ತು ಮಿಥಿಲೆಯ ಪವಿತ್ರ ಭೂಮಿ ಮತ್ತು ಅದರ ಜನರನ್ನು ಶ್ಲಾಘಿಸಿದರು.ಬಿಹಾರದ ಯುವಜನರ ಭವಿಷ್ಯವನ್ನು ಅಸ್ಥಿರಗೊಳಿಸಲು ಘಮಂಡಿಯಾ ಒಕ್ಕೂಟವು ಆಸಕ್ತಿ ಹೊಂದಿದೆ: ಜಮುಯಿಯಲ್ಲಿ ಪ್ರಧಾನಿ ಮೋದಿ
April 04th, 12:01 pm
2024 ರ ಲೋಕಸಭೆ ಚುನಾವಣೆಗೆ ಮುನ್ನ, ಪ್ರಧಾನಿ ಮೋದಿ ಬಿಹಾರದ ಜಮುಯಿಯಲ್ಲಿ ಸಾರ್ವಜನಿಕ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಬಿಹಾರದಲ್ಲಿ ಎನ್‌ಡಿಎ ಪರವಾಗಿ ಎಲ್ಲಾ 40 ಸ್ಥಾನಗಳೊಂದಿಗೆ ಜಮುಯಿಯ ಮನಸ್ಥಿತಿಯು 'ಅಬ್ ಕಿ ಬಾರ್ 400 ಪಾರ್' ಅನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಬಿಹಾರದ ಕಲ್ಯಾಣ ಮತ್ತು ಅದರ ಅಭಿವೃದ್ಧಿಗೆ ಸಮರ್ಪಿತರಾಗಿದ್ದ ದಿವಂಗತ ರಾಮ್‌ವಿಲಾಸ್ ಪಾಸ್ವಾನ್ ಜಿ ಅವರ ಕೊಡುಗೆಗಳಿಗೆ ಅವರು ಗೌರವ ಸಲ್ಲಿಸಿದರು.ಸಾರ್ವಜನಿಕ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿಯವರಿಗೆ ಜಮುಯಿ ಭವ್ಯ ಸ್ವಾಗತ
April 04th, 12:00 pm
2024 ರ ಲೋಕಸಭೆ ಚುನಾವಣೆಗೆ ಮುನ್ನ, ಪ್ರಧಾನಿ ಮೋದಿ ಬಿಹಾರದ ಜಮುಯಿಯಲ್ಲಿ ಸಾರ್ವಜನಿಕ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಬಿಹಾರದಲ್ಲಿ ಎನ್‌ಡಿಎ ಪರವಾಗಿ ಎಲ್ಲಾ 40 ಸ್ಥಾನಗಳೊಂದಿಗೆ ಜಮುಯಿಯ ಮನಸ್ಥಿತಿಯು 'ಅಬ್ ಕಿ ಬಾರ್ 400 ಪಾರ್' ಅನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಬಿಹಾರದ ಕಲ್ಯಾಣ ಮತ್ತು ಅದರ ಅಭಿವೃದ್ಧಿಗೆ ಸಮರ್ಪಿತರಾಗಿದ್ದ ದಿವಂಗತ ರಾಮ್‌ವಿಲಾಸ್ ಪಾಸ್ವಾನ್ ಜಿ ಅವರ ಕೊಡುಗೆಗಳಿಗೆ ಅವರು ಗೌರವ ಸಲ್ಲಿಸಿದರು.ಬಿಹಾರದ ಬೆಟ್ಟಿಯಾದಲ್ಲಿ ನಡೆದ ವಿಕಸಿತ ಭಾರತ-ವಿಕಸಿತ ಬಿಹಾರ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
March 06th, 04:00 pm
ತಾಯಿ ಸೀತಾ ಮತ್ತು ಲವ-ಕುಶರ ಜನ್ಮಸ್ಥಳವಾದ ಮಹರ್ಷಿ ವಾಲ್ಮೀಕಿಯ ಭೂಮಿಯಿಂದ ನಾನು ಎಲ್ಲರಿಗೂ ಶುಭಾಶಯಗಳನ್ನು ಕೋರುತ್ತೇನೆ! ರಾಜ್ಯಪಾಲ ಶ್ರೀ ರಾಜೇಂದ್ರ ಅರ್ಲೇಕರ್ ಜೀ, ಸಂಪುಟದ ನನ್ನ ಸಹೋದ್ಯೋಗಿ ನಿತ್ಯಾನಂದ ರೈ ಜೀ, ಉಪ ಮುಖ್ಯಮಂತ್ರಿಗಳಾದ ವಿಜಯ್ ಕುಮಾರ್ ಸಿನ್ಹಾ ಜೀ ಮತ್ತು ಸಾಮ್ರಾಟ್ ಚೌಧರಿ ಜೀ, ರಾಜ್ಯ ಸರ್ಕಾರದ ಸಚಿವರು, ಹಿರಿಯ ನಾಯಕರಾದ ವಿಜಯ್ ಕುಮಾರ್ ಚೌಧರಿ ಜೀ ಮತ್ತು ಸಂತೋಷ್ ಕುಮಾರ್ ಸುಮನ್ ಜೀ, ಸಂಸದರಾದ ಸಂಜಯ್ ಜೈಸ್ವಾಲ್ ಜೀ, ರಾಧಾ ಮೋಹನ್ ಜೀ, ಸುನಿಲ್ ಕುಮಾರ್ ಜೀ, ರಮಾ ದೇವಿ ಜೀ ಮತ್ತು ಸತೀಶ್ ಚಂದ್ರ ದುಬೆ ಜೀ, ಇತರ ಎಲ್ಲ ಗೌರವಾನ್ವಿತ ಗಣ್ಯರೇ, ಮತ್ತು ಬಿಹಾರದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ!ಬಿಹಾರದ ಬೆಟ್ಟಿಯಾದಲ್ಲಿ “ವಿಕಸಿತ ಭಾರತ ವಿಕಸಿತ ಬಿಹಾರ” ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
March 06th, 03:15 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಿಯಾದಲ್ಲಿಂದು ಸುಮಾರು 12,800 ಕೋಟಿ ರೂಪಾಯಿ ಮೌಲ್ಯದ ರೈಲು, ರಸ್ತೆ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಕ್ಕೆ ಸಂಬಂಧಿಸಿದ ಬಹು ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಿದರು.ಬಿಹಾರದ ಬೇಗುಸರಾಯ್‌ನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ
March 02nd, 08:06 pm
ʻಜೈ ಮಂಗಲ ಘರ್ ಮಂದಿರʼ ಮತ್ತು ನೌಲಾಖಾ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ದೇವತೆಗಳಿಗೆ ನಾನು ನಮಸ್ಕರಿಸುತ್ತೇನೆ. ಇಂದು, ನಾನು 'ವಿಕಸಿತ ಭಾರತ'ಕ್ಕಾಗಿ(ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ) 'ವಿಕಸಿತ ಬಿಹಾರʼದ(ಅಭಿವೃದ್ಧಿ ಹೊಂದಿದ ಬಿಹಾರ) ಅಭಿವೃದ್ಧಿಗೆ ಕೊಡುಗೆ ನೀಡುವ ಸಂಕಲ್ಪದೊಂದಿಗೆ ಬೇಗುಸರಾಯ್‌ಗೆ ಬಂದಿದ್ದೇನೆ. ಇಷ್ಟು ದೊಡ್ಡ ಜನಸಮೂಹವನ್ನು ಭೇಟಿಯಾಗುವುದು ನನ್ನ ಸೌಭಾಗ್ಯ.ಬಿಹಾರದ ಬಿಗುಸರಾಯ್‌ನಲ್ಲಿ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನ ಮಂತ್ರಿ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ
March 02nd, 04:50 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರದ ಬಿಗುಸರಾಯ್‌ನಲ್ಲಿಂದು ಸುಮಾರು 1.48 ಲಕ್ಷ ಕೋಟಿ ರೂಪಾಯಿ ಮೌಲ್ಯದ ಬಹು ತೈಲ ಮತ್ತು ಅನಿಲ ಕ್ಷೇತ್ರದ ಯೋಜನೆಗಳು ಮತ್ತು ಬಿಹಾರದಲ್ಲಿ 13,400 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು.Our govt is engaged in enhancing the capabilities of every poor, tribal, dalit & deprived person of country: PM
March 02nd, 03:00 pm
Prime Minister Narendra Modi dedicated to the nation and laid the foundation stone for multiple development projects worth Rs 21,400 crores in Aurangabad, Bihar. Addressing the gathering, the Prime Minister said that a new chapter of Bihar’s development is being written today on the land of Aurangabad which has given birth to many freedom fighters and great personalities such as Bihar Vibhuti Shri Anugrah Narayan.ಬಿಹಾರದ ಔರಂಗಾಬಾದ್ ನಲ್ಲಿ ಸುಮಾರು 21,400 ಕೋಟಿ ರೂ. ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ
March 02nd, 02:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರದ ಔರಂಗಾಬಾದ್ ನಲ್ಲಿ ಇಂದು ಸುಮಾರು 21,400 ಕೋಟಿ ರೂ. ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇಂದಿನ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ರಸ್ತೆ, ರೈಲ್ವೆ ಮತ್ತು ನಮಾಮಿ ಗಂಗೆ ಮತ್ತಿತರ ಯೋಜನೆಗಳು ಸೇರಿವೆ. ಪ್ರಧಾನಮಂತ್ರಿ ಅವರು ಫೋಟೋ ಗ್ಯಾಲರಿಯಲ್ಲಿ ಓಡಾಡಿ ವೀಕ್ಷಿಸಿದರು.ಶ್ರೀ ಕರ್ಪೂರಿ ಠಾಕೂರ್ ಜಿ ಅವರ ಪುಣ್ಯ ತಿಥಿ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ
February 17th, 07:03 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಕರ್ಪೂರಿ ಠಾಕೂರ್ ಅವರ ಪುಣ್ಯತಿಥಿ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಕರ್ಪೂರಿ ಠಾಕೂರ್ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಪ್ರಧಾನಿ
February 12th, 05:11 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯ ತಮ್ಮ ನಿವಾಸದಲ್ಲಿ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಕರ್ಪೂರಿ ಠಾಕೂರ್ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು.ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ಅವರ ಉತ್ತರದ ಕನ್ನಡ ಅನುವಾದ
February 05th, 05:44 pm
ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಬೆಂಬಲಿಸಲು ನಾನು ಇಲ್ಲಿ ನಿಂತಿದ್ದೇನೆ. ಗೌರವಾನ್ವಿತ ರಾಷ್ಟ್ರಪತಿ ಅವರು, ನಮ್ಮೆಲ್ಲರನ್ನುದ್ದೇಶಿಸಿ ಸಂಸತ್ತಿನ ಹೊಸ ಕಟ್ಟಡದಲ್ಲಿ ಮಾತನಾಡಿದರು ಮತ್ತು ಆಗ ಸೆಂಗೋಲ್ ಘನತೆ ಮತ್ತು ಗೌರವದಿಂದ ಇಡೀ ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿತ್ತು. ನಾವೆಲ್ಲರೂ ಅದರ ಹಿಂದೆ ಸಾಗುತ್ತಿದ್ದೆವು. ಹೊಸ ಸದನದಲ್ಲಿ ಹೊಸ ಪರಂಪರೆ ಭಾರತದ ಸ್ವಾತಂತ್ರ್ಯದ ಸಂಭ್ರಮದ ಪವಿತ್ರ ಕ್ಷಣವನ್ನು ಪ್ರತಿಬಿಂಬಿಸುತ್ತಿತ್ತು. ಇದರಿಂದ ಪ್ರಜಾಪ್ರಭುತ್ವದ ಘನತೆ ಹಲವು ಪಟ್ಟು ಹೆಚ್ಚಾಯಿತು. 75ನೇ ಗಣರಾಜ್ಯೋತ್ಸವದ ನಂತರ ಹೊಸ ಸಂಸತ್ತಿನ ಕಟ್ಟಡ ಮತ್ತು ಸೆಂಗೋಲ್ ಮುನ್ನಡೆಸಿದ್ದು, ಈ ಕ್ಷಣಗಳೆಲ್ಲ ಅತ್ಯಂತ ಆಕರ್ಷಣೀಯವಾಗಿದ್ದವು. ನಾನು ಇಡೀ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಅಂತಹ ಹಿರಿಮೆಯನ್ನು ನಾನೆಲ್ಲೂ ನೋಡಲಿಲ್ಲ. ಆದರೆ ಅಲ್ಲಿಂದ ನಾನು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಅವರ ಘನ ಉಪಸ್ಥಿತಿಯನ್ನು ಹೊಸ ಸಂಸತ್ ನ ಕಟ್ಟಡದಲ್ಲಿ ಗಮನಿಸಿದಾಗ ಆ ಕ್ಷಣವನ್ನು ನಾನು ಸದಾ ಸ್ಮರಿಸುತ್ತೇನೆ. ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತಂತೆ 60ಕ್ಕೂ ಅಧಿಕ ಗೌರವಾನ್ವಿತ ಸದಸ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವುದಕ್ಕೆ ಅವರಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ.ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿಗಳ ಉತ್ತರ
February 05th, 05:43 pm
ಮಾನ್ಯ ರಾಷ್ಟ್ರಪತಿಗಳು ಸಂಸತ್ತಿನಲ್ಲಿ ಭಾಷಣ ಮಾಡಲು ಹೆಮ್ಮೆ ಮತ್ತು ಗೌರವದ ಸೆಂಗೋಲ್ ನೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ್ದು, ಇತರ ಸಂಸತ್ ಸದಸ್ಯರು ಅವರ ನೇತೃತ್ವ ಅನುಸರಿಸಿದ ಸಂದರ್ಭವನ್ನು ಉಲ್ಲೇಖಿಸಿ ಪ್ರಧಾನಮಂತ್ರಿಗಳು ತಮ್ಮ ಮಾತು ಆರಂಭಿಸಿದರು. ಈ ಪರಂಪರೆಯು ಸದನದ ಘನತೆಯನ್ನು ಹೆಚ್ಚಿಸುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಿ ಮೋದಿ, 75 ನೇ ಗಣರಾಜ್ಯೋತ್ಸವ, ಹೊಸ ಸಂಸತ್ ಭವನ ಮತ್ತು ಸೆಂಗೋಲ್ ಪ್ರತಿಷ್ಠಾಪನೆಯು ಅತ್ಯಂತ ಪ್ರಮುಖ ಘಟನೆಗಳಾಗಿವೆ ಎಂದು ಹೇಳಿದರು. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ನೀಡಿದ ಸದನದ ಸದಸ್ಯರಿಗೆ ಅವರು ಕೃತಜ್ಞತೆ ಸಲ್ಲಿಸಿದರು.ನವದೆಹಲಿಯಲ್ಲಿ ಎನ್ ಸಿಸಿ ಮತ್ತು ಎನ್ ಎಸ್ ಎಸ್ ಕೆಡೆಟ್ ಗಳೊಂದಿಗಿನ ಸಂವಾದದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
January 24th, 03:26 pm
ನೀವು ಇಲ್ಲಿ ನೀಡಿದ ಸಾಂಸ್ಕೃತಿಕ ಪ್ರಸ್ತುತಿ ಹೆಮ್ಮೆಯ ಭಾವನೆಯನ್ನು ಹುಟ್ಟುಹಾಕುತ್ತಿದೆ. ನೀವು ರಾಣಿ ಲಕ್ಷ್ಮಿಬಾಯಿಯ ಐತಿಹಾಸಿಕ ವ್ಯಕ್ತಿತ್ವ ಮತ್ತು ಇತಿಹಾಸದ ಘಟನೆಗಳನ್ನು ಕೆಲವೇ ಕ್ಷಣಗಳಲ್ಲಿ ಜೀವಂತಗೊಳಿಸಿದ್ದೀರಿ. ನಾವೆಲ್ಲರೂ ಈ ಘಟನೆಗಳೊಂದಿಗೆ ಪರಿಚಿತರಾಗಿದ್ದೇವೆ, ಆದರೆ ನೀವು ಅದನ್ನು ಪ್ರಸ್ತುತಪಡಿಸಿದ ರೀತಿ ನಿಜವಾಗಿಯೂ ಅದ್ಭುತವಾಗಿದೆ. ನೀವು ಗಣರಾಜ್ಯೋತ್ಸವದ ಮೆರವಣಿಗೆಯ ಭಾಗವಾಗಲಿದ್ದೀರಿ ಮತ್ತು ಈ ಬಾರಿ ಅದು ಎರಡು ಕಾರಣಗಳಿಗಾಗಿ ಇನ್ನಷ್ಟು ವಿಶೇಷವಾಗಿದೆ. ಇದು 75 ನೇ ಗಣರಾಜ್ಯೋತ್ಸವ, ಮತ್ತು ಎರಡನೆಯದಾಗಿ, ಮೊದಲ ಬಾರಿಗೆ, ಗಣರಾಜ್ಯೋತ್ಸವದ ಮೆರವಣಿಗೆಯನ್ನು ದೇಶದ 'ನಾರಿ ಶಕ್ತಿ' (ಮಹಿಳಾ ಶಕ್ತಿ) ಗೆ ಸಮರ್ಪಿಸಲಾಗಿದೆ. ಇಂದು, ನಾನು ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳನ್ನು ನೋಡುತ್ತಿದ್ದೇನೆ. ನೀವು ಇಲ್ಲಿಗೆ ಒಬ್ಬಂಟಿಯಾಗಿ ಬಂದಿಲ್ಲ; ನೀವೆಲ್ಲರೂ ನಿಮ್ಮ ರಾಜ್ಯಗಳ ಪರಿಮಳವನ್ನು, ವಿವಿಧ ಪದ್ಧತಿಗಳು ಮತ್ತು ಸಂಪ್ರದಾಯಗಳ ಅನುಭವಗಳನ್ನು ಮತ್ತು ನಿಮ್ಮ ಸಮಾಜಗಳ ಸಮೃದ್ಧ ಆಲೋಚನೆಗಳನ್ನು ತಂದಿದ್ದೀರಿ. ನಿಮ್ಮೆಲ್ಲರನ್ನೂ ಭೇಟಿಯಾಗುವುದು ಇಂದು ವಿಶೇಷ ಸಂದರ್ಭವಾಗಿದೆ. ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ಇಂದು ಹೆಣ್ಣುಮಕ್ಕಳ ಧೈರ್ಯ, ಉತ್ಸಾಹ ಮತ್ತು ಸಾಧನೆಗಳನ್ನು ಆಚರಿಸುವ ದಿನ. ಹೆಣ್ಣುಮಕ್ಕಳಿಗೆ ಸಮಾಜ ಮತ್ತು ದೇಶವನ್ನು ಉತ್ತಮಗೊಳಿಸುವ ಸಾಮರ್ಥ್ಯವಿದೆ. ಇತಿಹಾಸದ ವಿವಿಧ ಯುಗಗಳಲ್ಲಿ, ಭಾರತದ ಹೆಣ್ಣುಮಕ್ಕಳು ತಮ್ಮ ಧೈರ್ಯಶಾಲಿ ಉದ್ದೇಶಗಳು ಮತ್ತು ಸಮರ್ಪಣೆಯಿಂದ ಅನೇಕ ದೊಡ್ಡ ಬದಲಾವಣೆಗಳಿಗೆ ಅಡಿಪಾಯ ಹಾಕಿದ್ದಾರೆ. ಸ್ವಲ್ಪ ಸಮಯದ ಹಿಂದೆ ನೀವು ನೀಡಿದ ಪ್ರಸ್ತುತಿಯಲ್ಲಿ ಈ ಭಾವನೆಯ ಒಂದು ನೋಟವಿತ್ತು.ಪ್ರಧಾನಮಂತ್ರಿಯವರು ಎನ್ ಸಿಸಿ ಕೆಡೆಟ್ ಗಳು ಮತ್ತು ಎನ್ಎಸ್ಎಸ್ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು
January 24th, 03:25 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಎನ್ ಸಿಸಿ ಕೆಡೆಟ್ ಗಳು ಮತ್ತು ಎನ್ ಎಸ್ ಎಸ್ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಣಿ ಲಕ್ಷ್ಮಿ ಬಾಯಿಯವರ ಜೀವನವನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು ಮತ್ತು ಇದು ಇಂದು ಭಾರತದ ಇತಿಹಾಸವನ್ನು ಜೀವಂತಗೊಳಿಸಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಂಡದ ಶ್ರಮವನ್ನು ಶ್ಲಾಘಿಸಿದ ಅವರು ಈಗ ಗಣರಾಜ್ಯೋತ್ಸವ ಪರೇಡ್ ನ ಭಾಗವಾಗಲಿದ್ದಾರೆ ಎಂದು ಹೇಳಿದರು. ಈ ಸಂದರ್ಭವು 75 ನೇ ಗಣರಾಜ್ಯೋತ್ಸವ ಆಚರಣೆ ಮತ್ತು ಭಾರತದ ನಾರಿ ಶಕ್ತಿಗೆ ಇದು ಸಮರ್ಪಣೆ ಎನ್ನುವ ಎರಡು ಕಾರಣಗಳಿಂದ ವಿಶೇಷವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಭಾರತದಾದ್ಯಂತದ ಭಾಗವಹಿಸುವ ಮಹಿಳೆಯರನ್ನು ಉಲ್ಲೇಖಿಸಿ, ಶ್ರೀ ಮೋದಿ ಅವರು ಇಲ್ಲಿ ಒಬ್ಬಂಟಿಯಾಗಿ ಬಂದಿಲ್ಲ ಜೊತೆಗೆ ತಮ್ಮ ರಾಜ್ಯಗಳ ಸತ್ವ, ಅವರ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಅವರ ಸಮಾಜಗಳ ಮುಂದಾಲೋಚನೆಯನ್ನು ತಂದಿದ್ದಾರೆ ಎಂದು ಹೇಳಿದರು. ಇಂದಿನ ಮತ್ತೊಂದು ವಿಶೇಷ ಸಂದರ್ಭವನ್ನು ಗಮನಿಸಿದ ಪ್ರಧಾನಮಂತ್ರಿಯವರು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ (ರಾಷ್ಟ್ರೀಯ ಬಾಲಿಕಾ ದಿವಸ್) ಬಗ್ಗೆ ಪ್ರಸ್ತಾಪಿಸಿದರು, ಇದು ಅವರ ಧೈರ್ಯ, ದೃಢತೆ ಮತ್ತು ಸಾಧನೆಗಳ ಆಚರಣೆಯಾಗಿದೆ. ಭಾರತದ ಹೆಣ್ಣುಮಕ್ಕಳು ಒಳ್ಳೆಯದಕ್ಕಾಗಿ ಸಮಾಜವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದ ಪ್ರಧಾನಮಂತ್ರಿಯವರು ಇಂದಿನ ಸಾಂಸ್ಕೃತಿಕ ಪ್ರದರ್ಶನದಲ್ಲಿ ಕಂಡಂತೆ ವಿವಿಧ ಐತಿಹಾಸಿಕ ಕಾಲಘಟ್ಟಗಳಲ್ಲಿ ಸಮಾಜಕ್ಕೆ ಅಡಿಪಾಯವನ್ನು ಹಾಕುವಲ್ಲಿ ಮಹಿಳೆಯರ ಕೊಡುಗೆಗಳನ್ನು ಎತ್ತಿ ತೋರಿಸಿದರು. ಶ್ರೀ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಸಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನ ಮಂತ್ರಿಗಳು
January 23rd, 09:19 pm
ಸಾಮಾಜಿಕ ನ್ಯಾಯದ ಹರಿಕಾರರಾದ ಶ್ರೀ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ ನೀಡುವ ನಿರ್ಧಾರಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.