ರೋ-ರೋ ಫೆರ್ರಿ ಸರ್ವಿಸ್ ಗುಜರಾತ್ ಜನರ ಕನಸು ನನಸಾಗಿದೆ : ಪ್ರಧಾನಿ ಮೋದಿ
October 23rd, 10:35 am
ಮೋದಿ ಇಂದು ಘೋಗಾ ಮತ್ತು ದಹೇಜ್ ನಡುವೆ ರೋ-ರೋ ಫೆರ್ರಿ ಸೇವೆಯನ್ನು ಉದ್ಘಾಟಿಸಿದರು. ಈ ಸೇವೆಯ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಫೆರ್ರಿ ಸೇವೆಯು ಮೊದಲ ವಿಧವಾಗಿದೆ, ಅದರ ಕನಸು ಗುಜರಾತ್ ಜನರಿಗೆ ನಿಜವಾಗಿದೆ.ಘೋಘಾ ಮತ್ತು ದೆಹೇಜ್ ನಡುವೆ ರೋರೋ ದೋಣಿ ಸೇವೆಯ ಪ್ರಥಮ ಹಂತವನ್ನು ಉದ್ಘಾಟಿಸಿದ ಪ್ರಧಾನಿ, ಸೇವೆಯ ಪ್ರಥಮ ಪಯಣದಲ್ಲಿ ಯಾನ
October 22nd, 11:39 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಘೋಘಾ ಮತ್ತು ದಹೇಜ್ ನಡುವೆ ರೋರೋ (ರೋಲ್ ಆನ್ ಮತ್ತು ರೋಲ್ ಆಫ್) ದೋಣಿ ಸೇವೆಯ ಪ್ರಥಮ ಹಂತವನ್ನು ಉದ್ಘಾಟಿಸಿದರು. ಈ ದೋಣಿ ಸೇವೆಯು ಸೌರಾಷ್ಟ್ರದ ಘೋಘಾ ಮತ್ತು ದಕ್ಷಿಣ ಗುಜರಾತ್ ನ ದಹೇಜ್ ನಡುವಿನ ಪ್ರಯಾಣದ ಅವಧಿಯನ್ನು 7-8 ಗಂಟೆಯಿಂದ ಕೇವಲ 1 ಗಂಟೆಗೆ ಇಳಿಸಲಿದೆ. ಇಂದು ಉದ್ಘಾಟನೆಗೊಂಡ ಪ್ರಥಮ ಹಂತ, ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡಲಿದೆ. ಯೋಜನೆ ಪೂರ್ಣವಾಗಿ ಕಾರ್ಯಗತವಾದ ಬಳಿಕ, ವಾಹನಗಳ ಸಂಚಾರಕ್ಕೂ ಅವಕಾಶ ಕಲ್ಪಿಸಲಿದೆ.ಗುಜರಾತ್ ಗೆ ಭೇಟಿ ನೀಡಲಿರುವ ಪ್ರಧಾನಿ, ಘೋಗಾ ಮತ್ತು ದಹೇಜ್ ನಡುವೆ ರೋ ರೋ ದೋಣಿ ಸೇವೆಯ ಮೊದಲ ಹಂತಕ್ಕೆ ನೀಡಲಿದ್ದಾರೆ ಚಾಲನೆ
October 21st, 06:17 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಾಳೆ – 2017ರ ಅಕ್ಟೋಬರ್ 22ರಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ. ಘೋಗಾದಲ್ಲಿ ಸಾರ್ವಜನಿಕ ಸಭೆಯಲ್ಲಿ, ಪ್ರಧಾನಮಂತ್ರಿ ಅವರು ರೋ ರೋ (ರೋಲ್ ಆನ್ ರೋಲ್ ಆಫ್) ಘೋಗಾ ಮತ್ತು ದಹೇಜ್ ನಡುವಿನ ದೋಣಿ ಸೇವೆಯ ಮೊದಲ ಹಂತವನ್ನು ಉದ್ಘಾಟಿಸಲಿದ್ದಾರೆ.