ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಅಬುಧಾಬಿ ಯುವರಾಜರ ಸ್ವಾಗತ

September 09th, 08:40 pm

ನವದೆಹಲಿಯಲ್ಲಿಂದು ಅಬುಧಾಬಿ ಯುವರಾಜ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಗತಿಸಿದರು. ಉಭಯ ನಾಯಕರು ವಿವಿಧ ವಿಷಯಗಳ ಕುರಿತು ಫಲಪ್ರದ ಮಾತುಕತೆ ನಡೆಸಿದರು.

ಫಲಿತಾಂಶಗಳ ಪಟ್ಟಿ ಪಟ್ಟಿ: ಭಾರತಕ್ಕೆ ಅಧಿಕೃತ ಭೇಟಿ ನೀಡಿದ ಅಬುಧಾಬಿಯ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್

September 09th, 07:03 pm

ಎಮಿರೇಟ್ಸ್ ನ್ಯೂಕ್ಲಿಯರ್ ಎನರ್ಜಿ ಕಂಪನಿ (ಇಎನ್ಇಸಿ) ಮತ್ತು ನ್ಯೂಕ್ಲಿಯರ್ ಪವರ್ ಕೋಆಪರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ ಪಿಸಿಐಎಲ್) ನಡುವೆ ಬರಾಕಾ ಪರಮಾಣು ವಿದ್ಯುತ್ ಸ್ಥಾವರ ಕಾರ್ಯಾಚರಣೆ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ತಿಳಿವಳಿಕಾ ಒಪ್ಪಂದ.

ಅಬುಧಾಬಿಯ ಯುವರಾಜ ಗೌರವಾನ್ವಿತ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಭಾರತ ಭೇಟಿ (ಸೆಪ್ಟೆಂಬರ್ 9-10, 2024)

September 09th, 07:03 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ, ಅಬುಧಾಬಿಯ ಯುವರಾಜ ಗೌರವಾನ್ವಿತ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು 2024 ಸೆಪ್ಟೆಂಬರ್ 9-10ರ ವರೆಗೆ ಅಧಿಕೃತ ಭಾರತ ಭೇಟಿಯಲ್ಲಿದ್ದಾರೆ. ಯುವರಾಜ ಶೇಖ್ ಖಲೀದ್ ಅವರು ಭಾರತಕ್ಕೆ ನೀಡುತ್ತಿರುವ ಮೊದಲ ಅಧಿಕೃತ ಭೇಟಿ ಇದಾಗಿದೆ. ನಿನ್ನೆ ದೆಹಲಿಗೆ ಆಗಮಿಸಿದ ಅವರನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಬರಮಾಡಿಕೊಂಡರು, ನಂತರ ಅವರಿಗೆ ವಿಧ್ಯುಕ್ತ ಗೌರವ ವಂದನೆ ನೀಡಲಾಯಿತು. ಅವರ ಜೊತೆಯಲ್ಲಿ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ದೊಡ್ಡ ಉದ್ಯಮ ದಿಗ್ಗಜರ ನಿಯೋಗ ಆಗಮಿಸಿದೆ.

ದುಬೈ 2020 ಎಕ್ಸ್ ಪೋ ದಲ್ಲಿ ಭಾರತೀಯ ಪೆವಿಲಿಯನ್ ನಲ್ಲಿದ್ದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

October 01st, 08:55 pm

ದುಬೈ 2020 ಎಕ್ಸ್ ಪೋ ದ ಭಾರತೀಯ ಪೆವಿಲಿಯನ್ ಗೆ ನಿಮಗೆ ಸ್ವಾಗತ. ಇದು ಐತಿಹಾಸಿಕ ಎಕ್ಸ್ ಪೋ. ಇದು ಮಧ್ಯ ಪೂರ್ವ, ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ನಡೆಯುತ್ತಿರುವ ಮೊದಲನೇಯದ್ದಾಗಿದೆ. ಭಾರತ ಅತಿ ದೊಡ್ಡ ಪೆವಿಲಿಯನ್ ನೊಂದಿಗೆ ಎಕ್ಸ್ ಪೋದಲ್ಲಿ ಭಾಗವಹಿಸುತ್ತಿದೆ. ಈ ಎಕ್ಸ್ ಪೋ ಸಂಯುಕ್ತ ಅರಬ್ ಎಮಿರೇಟ್ಸ್ ಮತ್ತು ದುಬೈ ನಡುವಿನ ನಮ್ಮ‌ ಆಳವಾದ ಮತ್ತು ಐತಿಹಾಸಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ದೀರ್ಘ ಕಾಲದಲ್ಲಿ ನೆರವಾಗಲಿದೆ. ಯುಎಇ ಅಧ್ಯಕ್ಷರು ಮತ್ತು ಅಬು ಧಾಬಿಯ ದೊರೆ ಗೌರವಾನ್ವಿತ ಷೇಕ್ ಖಾಲೀಫಾ ಬಿನ್ ಜೈಯದ್ ಬಿನ್ ಅಲ್ ನಹ್ಯಾನ್ ಅವರಿಗೆ ಭಾರತದ ಜನತೆ ಮತ್ತು ಸರ್ಕಾರದ ಪರವಾಗಿ ಶುಭಾಶಯಗಳೊಂದಿಗೆ ಮಾತು ಆರಂಭಿಸೋಣ.

ದುಬೈನ ಎಕ್ಸ್‌ ಪೋ 2020ರ ಭಾರತ ಪೆವಿಲಿಯನ್‌ ನಲ್ಲಿ ಪ್ರಧಾನಮಂತ್ರಿಯವರ ಸಂದೇಶ

October 01st, 08:54 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದುಬೈನ ಎಕ್ಸ್‌ ಪೋ -2020ಯ ಭಾರತ ಪೆವಿಲಿಯನ್‌ ಗೆ ನೀಡಿದ ಸಂದೇಶದಲ್ಲಿ, ಎಕ್ಸ್‌ ಪೋವನ್ನು ಐತಿಹಾಸಿಕ ಎಂದು ಬಣ್ಣಿಸಿದ್ದು ಇದು ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ನಡೆಯುತ್ತಿರುವ ಮೊಟ್ಟ ಮೊದಲನೆಯದು ಎಂದು ತಿಳಿಸಿದ್ದಾರೆ. ಯುಎಇ ಮತ್ತು ದುಬೈ ಜೊತೆಗಿನ ನಮ್ಮ ಆಳವಾದ ಮತ್ತು ಐತಿಹಾಸಿಕ ಬಾಂಧವ್ಯಗಳನ್ನು ಇದು ಮತ್ತಷ್ಟು ಬಲಪಡಿಸುವಲ್ಲಿ ಬಹು ದೂರ ಹೋಗುತ್ತದೆ ಎಂಬ ವಿಶ್ವಾಸ ತಮಗಿದೆ ಎಂದು ತಿಳಿಸಿದ್ದಾರೆ. ಯುಎಇ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಘನತೆವೆತ್ತ ಶೇಖ್ ಖಲೀಫಾ ಬಿನ್ ಜಾಯೆದ್ ಬಿನ್ ಅಲ್ ನಹ್ಯಾನ್ ಮತ್ತು ಯುಎಇಯ ಪ್ರಧಾನಮಂತ್ರಿ ಮತ್ತು ಉಪಾಧ್ಯಕ್ಷ ಮತ್ತು ದುಬೈ ಆಡಳಿತಗಾರ ಘನತೆವೆತ್ತ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು. ಅಬುಧಾಬಿಯ ರಾಜಕುಮಾರ ಘನತೆವೆತ್ತ ಶೇಖ್ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಶುಭಾಶಯಗಳನ್ನು ಪ್ರಧಾನಮಂತ್ರಿಯವರು ತಿಳಿಸಿದರು, ನಮ್ಮ ವ್ಯೂಹಾತ್ಮಕ ಪಾಲುದಾರಿಕೆಯಲ್ಲಿ ನಾವು ಸಾಧಿಸಿದ ಪ್ರಗತಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ನಮ್ಮ ಎರಡೂ ದೇಶಗಳ ಪ್ರಗತಿ ಮತ್ತು ಏಳಿಗೆಗಾಗಿ ನಮ್ಮ ಕೆಲಸವನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ. ಎಂದು ತಿಳಿಸಿದ್ದಾರೆ.