ಶ್ರೀ ಪ್ರಣಬ್ ಮುಖರ್ಜಿಯವರೊಂದಿಗಿನ ಒಡನಾಟ ಅವಿಸ್ಮರಣೀಯ: ಪ್ರಧಾನಮಂತ್ರಿ

December 11th, 09:15 pm

ಶ್ರೀ ಪ್ರಣಬ್ ಮುಖರ್ಜಿಯವರೊಂದಿಗಿನ ತಮ್ಮ ಒಡನಾಟವನ್ನು ಸದಾ ಸ್ಮರಿಸುವುದಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಎಂದು ಹೇಳಿದ್ದಾರೆ. ಶ್ರೀ ಪ್ರಣಬ್ ಮುಖರ್ಜಿಯವರೊಂದಿಗಿನ ತಮ್ಮ ಹಲವು ಸಂವಾದಗಳನ್ನು ನೆನಪು ಮಾಡಿದ ಶರ್ಮಿಷ್ಠಾ ಮುಖರ್ಜಿ ಅವರಿಗೆ ಕೃತಜ್ಞತೆ ಅರ್ಪಿಸಿರುವ ಶ್ರೀ ಮೋದಿ ಅವರು, ಶ್ರೀ ಮುಖರ್ಜಿಯವರ ಆಳವಾದ ಜ್ಞಾನ ಮತ್ತು ಬುದ್ಧಿವಂತಿಕೆಗೆ ಸರಿಸಾಟಿಯಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶರ್ಮಿಷ್ಠಾ ಮುಖರ್ಜಿ ಅವರಿಂದ “ಪ್ರಣಬ್‌ ನನ್ನ ತಂದೆ: ಮಗಳಿಂದ ಸ್ಮರಣೆʼ ಪುಸ್ತಕದ ಪ್ರತಿ ಸ್ವೀಕರಿಸಿದ ಪ್ರಧಾನಮಂತ್ರಿ

January 15th, 07:01 pm

ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರು ಪ್ರಣಬ್‌ ಮೈ ಫಾದರ್:‌ ಎ ಡಾಟರ್‌ ರೆಮೆಂಬರ್ಸ್‌ʼ (ಪ್ರಣಬ್‌ ನನ್ನ ತಂದೆ: ಮಗಳಿಂದ ಸ್ಮರಣೆ) ಪುಸ್ತಕವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ನೀಡಿದರು.