ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

December 04th, 12:35 pm

ಉತ್ತರಾಖಂಡದ ರಾಜ್ಯಪಾಲರಾದ ಶ್ರೀ ಗುರ್ಮೀತ್ ಸಿಂಗ್ ಜೀ, ಜನಪ್ರಿಯ, ಉತ್ಸಾಹಿ ಮುಖ್ಯಮಂತ್ರಿ ಶ್ರೀ ಪುಷ್ಕರ ಸಿಂಗ್ ಧಾಮೀ ಜೀ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾಗಿರುವ ಪ್ರಹ್ಲಾದ್ ಜೋಶೀ ಜೀ ಮತ್ತು ಅಜಯ್ ಭಟ್ ಜೀ, ಉತ್ತರಾಖಂಡದ ಸಚಿವರಾಗಿರುವ ಸತ್ಪಾಲ್ ಮಹಾರಾಜ್ ಜೀ, ಹರಾಕ್ ಸಿಂಗ್ ರಾವತ್ ಜೀ, ಮತ್ತು ರಾಜ್ಯ ಸಂಪುಟದ ಇತರ ಸದಸ್ಯರೇ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಯಾಗಿರುವ ನಿಶಾಂಕ್ ಜೀ, ತೀರತ್ ಸಿಂಗ್ ರಾವತ್ ಜೀ,ಇತರ ಸಂಸತ್ ಸದಸ್ಯರೇ, ತ್ರಿವೇಂದ್ರ ಸಿಂಗ್ ರಾವತ್ ಜೀ, ವಿಜಯ ಬಹುಗುಣ ಜೀ, ರಾಜ್ಯ ವಿಧಾನ ಸಭೆಯ ಇತರ ಸದಸ್ಯರೇ, ಜಿಲ್ಲಾ ಪಂಚಾಯತ್ ಸದಸ್ಯರೇ, ಮದನ್ ಕೌಶಿಕ್ ಜೀ, ಮತ್ತು ನನ್ನ ಪ್ರೀತಿಯ ಸಹೋದರರೇ ಹಾಗು ಸಹೋದರಿಯರೇ,

ಡೆಹರಾಡುನ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 18 ಸಾವಿರ ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಿದರು

December 04th, 12:34 pm

ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು ಏಳು ಯೋಜನೆಗಳನ್ನು ಉದ್ಘಾಟಿಸಿದರು. ಈ ಯೋಜನೆಗಳ ಮುಖ್ಯ ಉದ್ದೇಶ ಸುರಕ್ಷಿತ ಪ್ರಾಯಣವೇ ಆಗಿದೆ. ಈ ಭೂಪ್ರದೇಶದಲ್ಲಿ ಆಗುವ ಭೂ ಕುಸಿತವನ್ನು ತಡೆಹಿಡಿಯಲು ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ದೇವಪ್ರಯಾಗದಿಂದ ಶ್ರೀಕೋಟದವರೆಗೆ ರಸ್ತೆ ಅಗಲೀಕರಣ, ಬ್ರಹ್ಮಪುರಿಯಿಂದ ಕೋಡಿಯಾಳ ರಾಷ್ಟ್ರೀಯ ಹೆದ್ದಾರಿ 58ರ ಅಗಲೀಕರಣ, 120 ಮೆಗಾವಾಟ್ಸ್‌ ಸಾಮರ್ಥ್ಯದ ಜಲವಿದ್ಯುತ್‌ ಯೋಜನೆಯನ್ನು ಯಮುನಾ ನದಿಯ ಮೇಲಿನ ನಿರ್ಮಾಣಗಳು, ಡೆಹರಾಡುನ್‌ನಲ್ಲಿ ಹಿಮಾಲಯನ್‌ ಸಾಂಸ್ಕೃತಿಕ ಕೇಂದ್ರ, ರಾಜ್ಯದ ಸುಗಂಧದ್ರವ್ಯ ಕಲೆಯ ರಾಜ್ಯದಲ್ಲಿ ಸುಗಂಧ ಮತ್ತು ಸುಗಂಧ ದ್ರವ್ಯ ಸಸ್ಯಗಳ ಅಭಿವೃದ್ಧಿಗೆ ಪ್ರಯೋಗಾಲಯ ಸ್ಥಾಪನೆಗಳೂ ಒಳಗೊಂಡಿವೆ.

ಡಿಸೆಂಬರ್ 4ರಂದು ಡೆಹ್ರಾಡೂನ್‌ನಲ್ಲಿ 18,000 ಕೋಟಿ ರೂಪಾಯಿ ವೆಚ್ಚದ ಬಹುಹಂತದ ಯೋಜನೆಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

December 01st, 12:06 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ರ ಡಿಸೆಂಬರ್ 4 ರಂದು ಸುಮಾರು 18,000 ಕೋಟಿ ರೂಪಾಯಿ ಮೊತ್ತದ ಬಹು ಹಂತದ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಪ್ರಧಾನಮಂತ್ರಿಯವರ ಈ ಭೇಟಿಯಿಂದ ಈ ಭಾಗದ ರಸ್ತೆ ವಲಯದ ಮೂಲ ಸೌಲಭ್ಯ ಸುಧಾರಣೆ ಮತ್ತು ಪ್ರವಾಸಿಗರ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಸಹಕಾರಿಯಾಗಲಿದೆ. ಒಂದು ಕಾಲದಲ್ಲಿ ದೂರದ ಪ್ರದೇಶಗಳೆಂದು ಪರಿಗಣಿಸಲ್ಪಟ್ಟ ಪ್ರದೇಶಗಳಲ್ಲಿ ಸಂಪರ್ಕ ಹೆಚ್ಚಿಸುವ ಪ್ರಧಾನಮಂತ್ರಿ ಅವರ ದೂರದೃಷ್ಟಿಗೆ ಈ ಯೋಜನೆಗಳು ಅನುಗುಣವಾಗಿವೆ.