ಡಿಸೆಂಬರ್ 30 ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
December 29th, 12:35 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ರ ಡಿಸೆಂಬರ್ 30 ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11.15ಕ್ಕೆ ಪ್ರಧಾನಮಂತ್ರಿ ಅವರು ಹೌರಾ ರೈಲ್ವೆ ನಿಲ್ದಾಣವನ್ನು ತಲುಪಲಿದ್ದು, ಅಲ್ಲಿ ಅವರು ಹೌರಾದಿಂದ ನ್ಯೂ ಜಲಪಾಯಿಗುರಿಯನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರುವರು. ಅವರು ಕೋಲ್ಕತಾ ಮೆಟ್ರೋದ ನೇರಳೆ ಮಾರ್ಗದ ಜೋಕಾ-ತಾರತಲಾ ವಿಸ್ತರಣೆಯನ್ನು ಉದ್ಘಾಟಿಸಲಿದ್ದಾರೆ ಮತ್ತು ವಿವಿಧ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಪ್ರಧಾನಮಂತ್ರಿ ಅವರು ಐಎನ್ಎಸ್ ನೇತಾಜಿ ಸುಭಾಸ್ ತಲುಪಿ, ನೇತಾಜಿ ಸುಭಾಷ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ ಮತ್ತು ಡಾ. ಶ್ಯಾಮ ಪ್ರಸಾದ್ ಮುಖರ್ಜಿ - ರಾಷ್ಟ್ರೀಯ ನೀರು ಮತ್ತು ನೈರ್ಮಲ್ಯ ಸಂಸ್ಥೆ (ಡಿಎಸ್ ಪಿಎಂ - ಎನ್ಐಡಬ್ಲ್ಯುಎಎಸ್) ಅನ್ನು ಉದ್ಘಾಟಿಸಲಿದ್ದಾರೆ. ಅವರು ಗಂಗಾ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಅಭಿಯಾನದ ಅಡಿಯಲ್ಲಿ ಪಶ್ಚಿಮ ಬಂಗಾಳಕ್ಕಾಗಿ ಅನೇಕ ಒಳಚರಂಡಿ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಮಧ್ಯಾಹ್ನ 12.25ರ ಸುಮಾರಿಗೆ ಪ್ರಧಾನಮಂತ್ರಿ ಅವರು ರಾಷ್ಟ್ರೀಯ ಗಂಗಾ ಮಂಡಳಿಯ ಎರಡನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.ಬಿಹಾರದಲ್ಲಿ ಬಹುಪಯೋಗಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ವೇಳೆ ಪ್ರಧಾನಮಂತ್ರಿ ಮಾಡಿದ ಭಾಷಣದ ಪಠ್ಯ
September 15th, 12:01 pm
ಬಿಹಾರದ ರಾಜ್ಯಪಾಲರಾದ ಶ್ರೀ ಪಗು ಚೌವ್ಹಾಣ್ , ಬಿಹಾರದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್, ನನ್ನ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಹರದೀಪ್ ಸಿಂಗ್ ಪುರಿ, ಶ್ರೀ ರವಿಶಂಕರ್ ಪ್ರಸಾದ್, ಕೇಂದ್ರ ಮತ್ತು ರಾಜ್ಯ ಸಚಿವ ಸಂಪುಟದ ಎಲ್ಲ ಸದಸ್ಯರೇ, ಎಲ್ಲ ಸಂಸದರು, ಶಾಸಕರು ಮತ್ತು ನನ್ನ ನೆಚ್ಚಿನ ಮಿತ್ರರೇಬಿಹಾರದಲ್ಲಿ ‘ನಮಾಮಿ ಗಂಗೆ’ ಮತ್ತು ‘ಅಮೃತ್’ ನಡಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ
September 15th, 12:00 pm
ಬಿಹಾರದಲ್ಲಿ 'ನಮಾಮಿ ಗಂಗೆ' ಮತ್ತು 'ಅಮೃತ್' ಯೋಜನೆ ಅಡಿಯಲ್ಲಿ ವಿವಿಧ ಯೋಜನೆಗಳನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ಇಂದು ಉದ್ಘಾಟನೆಯಾದ ನಾಲ್ಕು ಯೋಜನೆಗಳಲ್ಲಿ ಪಾಟ್ನಾ ನಗರದ ಬ್ಯೂರ್ ಮತ್ತು ಕರಮ್–ಲೀಚಕ್‌ನಲ್ಲಿನ ಒಳಚರಂಡಿ ಸಂಸ್ಕರಣಾ ಘಟಕಗಳು ಮತ್ತು 'ಅಮೃತ್' ಯೋಜನೆಯಡಿ ಸಿವಾನ್ ಮತ್ತು ಛಾಪ್ರಾದಲ್ಲಿ ನೀರು–ಸಂಬಂಧಿತ ಯೋಜನೆಗಳು ಸೇರಿವೆ. ಇದಲ್ಲದೆ, ಮುಂಗೇರ್ ಮತ್ತು ಜಮಾಲ್‌ಪುರದ ನೀರು ಸರಬರಾಜು ಯೋಜನೆಗಳಿಗೆ ಮತ್ತು ನಮಾಮಿ ಗಂಗೆ ಅಡಿಯಲ್ಲಿ ಮುಜಾಫರ್ಪುರದ ನದಿ ತಟದ ಅಭಿವೃದ್ಧಿ ಯೋಜನೆಗಳಿಗೆ ಇಂದು ಶಿಲಾನ್ಯಾಸ ನೆರವೇರಿಸಲಾಯಿತು.ಈ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವುದನ್ನು ಮುಂದುವರಿಸುತ್ತೇವೆ : ಸೋಲಾಪುರದಲ್ಲಿ ಪ್ರಧಾನಿ ಮೋದಿ
January 09th, 11:35 am
ಬಹು ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಿದ ನಂತರ ಸೋಲಾಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ದುರ್ಬಲ ಸಾಮಾನ್ಯ ವಿಭಾಗದ ಮೀಸಲಾತಿಗಾಗಿ 10% ಮಸೂದೆಯನ್ನು ಉಲ್ಲೇಖಿಸಿರುವ ಮೋದಿ, ಲೋಕಸಭೆಯಲ್ಲಿ ನಿನ್ನೆ ಮಸೂದೆಯನ್ನು ಜಾರಿಗೆ ತಂದಿದೆ ಎಂದು ಹೇಳಿದ್ದಾರೆ. 'ಸಬ್ಕಾ ಸಾತ್, ಸಬ್ಕಾ ವಿಕಾಸ್' ಕಡೆಗೆ ಎನ್ಡಿಎ ಸರ್ಕಾರದ ಬದ್ಧತೆಯನ್ನು ಹೈಕೋರ್ಟ್ ಬಿಲ್ ಅಂಗೀಕರಿಸಿದೆ ಎಂದು ಪ್ರಧಾನಿ ಹೇಳಿದರು.ಸಾಮಾನ್ಯ ವರ್ಗದ ಬಡವರಿಗೆ 10 % ಮೀಸಲಾತಿ ವಿಧೇಯಕ ಚಾರಿತ್ರಿಕ ಕ್ರಮ ಮತ್ತು ಸರಕಾರ ಬಡವರ ಬಗ್ಗೆ ಹೊಂದಿರುವ ಬದ್ದತೆಯ ಪ್ರತಿಫಲನ, ಎಂದಿದ್ದಾರೆ ಪ್ರಧಾನಮಂತ್ರಿ.
January 09th, 11:31 am
ಈಶಾನ್ಯ ಮತ್ತು ಅಸ್ಸಾಂನ ಜನರ ಹಕ್ಕುಗಳನ್ನು ರಕ್ಷಿಸಲಾಗುವುದು ಎಂದು ಪ್ರಧಾನಮಂತ್ರಿ ಭರವಸೆ. ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ವಿರುದ್ದ ಸರಕಾರದ ಆಂದೋಲನ ಮುಂದುವರಿಯಲಿದೆ: ಪ್ರಧಾನಮಂತ್ರಿ,We are taking forward Mahatma Gandhi's ideals through Swachhagraha movement: PM Modi
April 10th, 01:32 pm
On the occasion of Mahatma Gandhi’s Champaran Satyagraha centenary, Prime Minister Narendra Modi has addressed 20,000 ‘Swachhagrahis’ in Bihar’s Motihari, which is in the East Champaran district. PM Modi flagged off a number of railway projects, including India’s first 12,000 horsepower high-speed electric locomotive under the Make In India project. Also, he laid the foundation stone for various road projects that will improve connectivity and further the transformation of Bihar.ಸ್ವಚ್ಛಾಗ್ರಹಿಗಳ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಧಾನಿ ಅವರ ಭಾಷಣ, ಮೋತಿಹಾರಿಯಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
April 10th, 01:30 pm
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೋತಿಹಾರಿಯಲ್ಲಿ ನಡೆದ ಸ್ವಚ್ಛಾಗ್ರಹಿಗಳ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದರು. ಚಂಪಾರಣ್ಯದಲ್ಲಿ ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಸತ್ಯಾಗ್ರಹದ ಶತಮಾನೋತ್ಸವದ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಸರಿಯಾದ ಸಂಪರ್ಕವು ಹೆಚ್ಚಿನ ಅಭಿವೃದ್ಧಿಗೆ ಕಾರಣವಾಗಲಿದೆ: ಪ್ರಧಾನಿ ನರೇಂದ್ರ ಮೋದಿ
October 14th, 02:17 pm
ನಮಾಮಿ ಗಾಂಗೆ ಕಾರ್ಯಕ್ರಮದಡಿಯಲ್ಲಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ ಬಳಿಕ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮೊಕಮಾದಲ್ಲಿ ಸಾರ್ವಜನಿಕ ಸಭೆ ನಡೆಸಿದರು. ಬಿಹಾರದ ಮೊಕಾಮಾದಲ್ಲಿ 3,769 ಕೋಟಿ ರೂಪಾಯಿ ಮೌಲ್ಯದ ರಸ್ತೆ ಮತ್ತು ಒಳಚರಂಡಿ ಯೋಜನೆಗಳನ್ನು ಅವರು ಪ್ರಾರಂಭಿಸಿದರು.ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ, ಮೋಕಾಮಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ
October 14th, 02:14 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಬಿಹಾರದ ಮೋಕಾಮಾದಲ್ಲಿ ನಮಾಮಿ ಗಂಗೆ ಕಾರ್ಯಕ್ರಮದ ಅಡಿಯಲ್ಲಿ ನಾಲ್ಕು ಒಳಚರಂಡಿ; ಮತ್ತು ನಾಲ್ಕು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳ ಒಟ್ಟು ಅಂದಾಜು 3700 ಕೋಟಿ ರೂಪಾಯಿ ಆಗಿದೆ. ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಶ್ರೇಷ್ಠ ಕವಿ, ರಾಮಧಾರಿ ಸಿಂಗ್ ದಿನಕರ್ ಅವರು ನಿಕಟ ಸಂಪರ್ಕ ಹೊಂದಿದ್ದ ನಾಡಿಗೆ ಆಗಮಿಸಿರುವುದಕ್ಕೆ ತಮಗೆ ಅತೀವ ಸಂತಸವಾಗಿದೆ ಎಂದರು. ಬಿಹಾರದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ಏನೇನು ಸಾಧ್ಯವೋ ಅದೆಲ್ಲವನ್ನೂ ಮಾಡಲಿವೆ ಎಂದು ಪ್ರತಿಯೊಬ್ಬರಿಗೂ ಭರವಸೆ ನೀಡಿದರು.ನಾಳೆ ಬಿಹಾರಕ್ಕೆ ಭೇಟಿ ನೀಡಲಿದ್ದಾರೆ ಪ್ರಧಾನಿ
October 13th, 04:29 pm
ಅಕ್ಟೋಬರ್ 14, 2017 ರಂದು ಬಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ.