
ಸರ್ ಸೀವೂಸಗೂರ್ ರಾಮಗೂಲಂ ಮತ್ತು ಸರ್ ಅನೆರೂದ್ ಜುಗ್ನಾಥ್ ಅವರ ಸಮಾಧಿಗೆ ಪ್ರಧಾನಮಂತ್ರಿಗಳಿಂದ ಪುಷ್ಪನಮನ
March 11th, 03:04 pm
ಮಾರಿಷಸ್ ದೇಶದ ಪ್ಯಾಂಪ್ಲೆಮಸ್‌ನಲ್ಲಿರುವ ಸರ್ ಸೀವೂಸಗೂರ್ ರಾಮಗೂಲಂ ಸಸ್ಯೋದ್ಯಾನದಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ ಸೀವೂಸಗೂರ್ ರಾಮಗೂಲಂ ಮತ್ತು ಸರ್ ಅನೆರೂದ್ ಜುಗ್ನಾಥ್ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಮಾರಿಷಸ್ ಪ್ರಧಾನಿ ನವೀನ್ ಚಂದ್ರ ರಾಮಗೂಲಂ ಅವರು ಪ್ರಧಾನಮಂತ್ರಿಯವರೊಂದಿಗೆ ಪುಷ್ಪ ನಮನ ಸಲ್ಲಿಸಿದರು. ಮಾರಿಷಸ್ ನ ಪ್ರಗತಿಯಲ್ಲಿ ಹಾಗೂ ಭಾರತ-ಮಾರಿಷಸ್ ಬಾಂಧವ್ಯಕ್ಕೆ ಸದೃಢ ಬುನಾದಿ ಹಾಕಿಕೊಡುವಲ್ಲಿ ಈ ಇಬ್ಬರು ಮಹಾನ್ ನಾಯಕರ ಪರಿಶ್ರಮದ ಬಗ್ಗೆ ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿ ಅವರು ಸ್ಮರಿಸಿದರು.