ಭಾರತ- ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ (ಇಂಡ್ ಆಸ್ ಇಸಿಟಿಎ) ಸಹಿ ಹಾಕಿದ ವರ್ಚುವಲ್ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

April 02nd, 10:01 am

ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಇಂದು, ಇದು ನನ್ನ ಸ್ನೇಹಿತ ಸ್ಕಾಟ್‌ ಅವರೊಂದಿಗೆ ನನ್ನ ಮೂರನೇ ಮುಖಾಮುಖಿ ಸಂವಾದವಾಗಿದೆ. ಕಳೆದ ವಾರ ವರ್ಚುವಲ್ ಶೃಂಗಸಭೆಯಲ್ಲಿ ನಾವು ಬಹಳ ಫಲಪ್ರದ ಚರ್ಚೆ ನಡೆಸಿದ್ದೇವು. ಆ ವೇಳೆ, ನಾವು ನಮ್ಮ ತಂಡಗಳಿಗೆ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಶೀಘ್ರವಾಗಿ ಅಂತಿಮಗೊಳಿಸುವಂತೆ ಸೂಚಿಸಿದ್ದೇವೆ ಮತ್ತು ಇಂದು ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಈ ಅಸಾಧಾರಣ ಸಾಧನೆಗಾಗಿ, ನಾನು ಎರಡೂ ದೇಶಗಳ ವಾಣಿಜ್ಯ ಮಂತ್ರಿಗಳು ಮತ್ತು ಅವರ ಅಧಿಕಾರಿಗಳನ್ನು ಹೃದಯ ಪೂರ್ವಕವಾಗಿ ಅಭಿನಂದಿಸುತ್ತೇನೆ.

ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ-ಇಂಡ್ ಆಸ್ ಇಸಿಟಿಎ ಸಹಿಗೆ ಸಾಕ್ಷಿಯಾದ ಪ್ರಧಾನಮಂತ್ರಿ

April 02nd, 10:00 am

ಭಾರತದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಗೌರವಾನ್ವಿತ ಸ್ಕಾಟ್ ಮಾರಿಸನ್ ಅವರ ಸಮಕ್ಷಮದಲ್ಲಿ ಇಂದು ನಡೆದ ವರ್ಚುವಲ್ ಸಮಾರಂಭದಲ್ಲಿ ಭಾರತ ಸರ್ಕಾರದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್ ಮತ್ತು ಆಸ್ಟ್ರೇಲಿಯಾ ಸರ್ಕಾರದ ವ್ಯಾಪಾರ, ಪ್ರವಾಸೋದ್ಯಮ ಮತ್ತು ಬಂಡವಾಳ ಹೂಡಿಕೆ ಸಚಿವ ಶ್ರೀ ಡಾನ್ ಟೆಹಾನ್, ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದಕ್ಕೆ (IndAus ECTA- ಇಂಡ್ ಆಸ್ ಇಸಿಟಿಎ) ಸಹಿ ಹಾಕಿದರು.

2ನೇ ಭಾರತ ಆಸ್ಟ್ರೇಲಿಯಾ ವರ್ಚುವಲ್ ಶೃಂಗಸಭೆ ನಡೆಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಮಾನ್ಯ ಸ್ಕಾಟ್ ಮಾರಿಸನ್

March 21st, 06:08 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಮಾನ್ಯ ಸ್ಕಾಟ್ ಮಾರಿಸನ್ ಅವರಿಂದು 2ನೇ ಭಾರತ- ಆಸ್ಟ್ರೇಲಿಯಾ ವರ್ಚುವಲ್ ಶೃಂಗಸಭೆ ನಡೆಸಿದರು, ಈ ವೇಳೆ, ಅವರು ಎರಡೂ ದೇಶಗಳ ನಡುವಿನ ಬಹುಮುಖಿ ಬಾಂಧವ್ಯದ ಪರಾಮರ್ಶೆ ನಡೆಸಿ, ಪ್ರಾದೇಶಿಕ ಮತ್ತು ಜಾಗತಿಕ ಬೆಳೆವಣಿಗೆಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು.

ಮಾ.21ರಂದು 2ನೇ ಭಾರತ – ಆಸ್ಚ್ರೇಲಿಯಾ ವರ್ಚುವಲ್ ಸಮಾವೇಶ

March 17th, 08:30 pm

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಅವರು 2022 ಮಾ.21ರಂದು ಎರಡನೇ ಭಾರತ-ಆಸ್ಟ್ರೇಲಿಯಾ ವರ್ಚುವಲ್ ಶೃಂಗಸಭೆ ನಡೆಸಲಿದ್ದಾರೆ. 2020 ಜೂನ್ 4ರಂದು ಉಭಯ ರಾಷ್ಟ್ರಗಳ ನಡುವೆ ಜರುಗಿದ ಚೊಚ್ಚಲ ವರ್ಚುವಲ್ ಶೃಂಗಸಭೆಯಲ್ಲಿ ಎರಡೂ ರಾಷ್ಟ್ರಗಳ ಸಂಬಂಧವನ್ನು ಸಮಗ್ರ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತೀಕರಿಸಲಾಗಿತ್ತು. ಈ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುವ ಭಾಗವಾಗಿ, ಮತ್ತಷ್ಟು ಹೆಚ್ಚಿಸುವ ಸಲುವಾಗಿ 2ನೇ ಶೃಂಗಸಭೆ ಜರುಗುತ್ತಿದೆ.

ಕ್ವಾಡ್ ರಾಷ್ಟ್ರಗಳ ನಾಯಕರೊಂದಿಗೆ ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಭಾಗಿ

March 03rd, 10:23 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ಇಂದು ಕ್ವಾಡ್ ನಾಯಕರ ವರ್ಚುವಲ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು.

ಭಾರತದ ಕೊವ್ಯಾಕ್ಸಿನ್ ಲಸಿಕೆಗೆ ಆಸ್ಟ್ರೇಲಿಯಾದ ಮನ್ನಣೆ; ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಅವರಿಗೆ ಧನ್ಯವಾದ ಅರ್ಪಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ

November 01st, 10:40 pm

ಕೋವಿಡ್-19 ಸಾಂಕ್ರಾಮಿಕ ಸೋಂಕು ನಿಯಂತ್ರಣಕ್ಕೆ ಭಾರತ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಗೆ ಆಸ್ಟ್ರೇಲಿಯಾ ಮಾನ್ಯತೆ (ಮನ್ನಣೆ) ನೀಡಿರುವುದಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ವಾಸ್ತವಾಂಶ: ಕ್ವಾಡ್ ನಾಯಕರ ಶೃಂಗಸಭೆ

September 25th, 11:53 am

ಸೆಪ್ಟೆಂಬರ್ 24ರಂದು ಅಧ್ಯಕ್ಷ ಬಿಡೆನ್ ಅವರು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಮಂತ್ರಿ ಯೋಶಿಹಿಡೆ ಸುಗಾ ಅವರಿಗೆ ಶ್ವೇತಭವನದಲ್ಲಿ ಕ್ವಾಡ್ ನ ನಾಯಕರು ಸ್ವಯಂ ಪಾಲ್ಗೊಂಡಿದ್ದ ಪ್ರಪ್ರಥಮ ಶೃಂಗಸಭೆಗೆ ಆತಿಥ್ಯ ನೀಡಿದ್ದರು. ನಾಯಕರು 21ನೇ ಶತಮಾನದ ಸವಾಲುಗಳ ಮೇಲೆ ಪ್ರಾಯೋಗಿಕ ಸಹಕಾರ ಮುಂದುವರಿಸುವ; ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಅವುಗಳು ಲಭ್ಯವಾಗುವಂತೆ ಮಾಡುವುದೂ ಸೇರಿದಂತೆ ಕೋವಿಡ್-19 ಸಾಂಕ್ರಾಮಿಕವನ್ನು ಕೊನೆಗಾಣಿಸುವ; ಅತ್ಯುನ್ನತ ಗುಣಮಟ್ಟದ ಮೂಲಸೌಕರ್ಯವನ್ನು ಉತ್ತೇಜಿಸುವ; ಹವಾಮಾನ ಬಿಕ್ಕಟ್ಟನ್ನು ನಿಗ್ರಹಿಸುವ; ಹೊರಹೊಮ್ಮುವ ತಂತ್ರಜ್ಞಾನಗಳು, ಬಾಹ್ಯಾಕಾಶ ಮತ್ತು ಸೈಬರ್ ಭದ್ರತೆಯಲ್ಲಿ ಸಹಯೋಗ; ಮತ್ತು ನಮ್ಮ ಎಲ್ಲಾ ದೇಶಗಳಲ್ಲಿ ಮುಂದಿನ ಪೀಳಿಗೆಯ ಪ್ರತಿಭೆಗಳನ್ನು ಬೆಳೆಸಲು ನಮ್ಮ ಬಾಂಧವ್ಯಗಳನ್ನು ಬಲಗೊಳಿಸುವ ಮಹತ್ವಾಕಾಂಕ್ಷೆಯ ಉಪಕ್ರಮಗಳನ್ನು ಮುಂದಿಟ್ಟರು.

ಕ್ವಾಡ್ ನಾಯಕರ ಜಂಟಿ ಹೇಳಿಕೆ

September 25th, 11:41 am

ಕ್ವಾಡ್ ರಾಷ್ಟ್ರಗಳಾದ ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕದ ನಾಯಕರಾದ ನಾವು ಇದೇ ಮೊದಲ ಬಾರಿಗೆ ಮುಖಾಮುಖಿ ಭೇಟಿಯಾಗಿದ್ದೇವೆ. ಈ ಐತಿಹಾಸಿಕ ಸಂದರ್ಭದಲ್ಲಿ ಪಾಲುದಾರಿಕೆಗೆ ನಾವು ಬದ್ಧವೆಂದು ಘೋಷಿಸುತ್ತಿದ್ದೇವೆ ಮತ್ತು ಮುಕ್ತ ಮತ್ತು ಸ್ವತಂತ್ರ ಇಂಡೋ-ಪೆಸಿಫಿಕ್ ನ ಎಲ್ಲರನ್ನೊಳಗೊಂಡ ಸ್ಥಿತಿ ಸ್ಥಾಪಕತ್ವ, ಸುರಕ್ಷತೆ ಮತ್ತು ಸಮೃದ್ಧಿಗೆ ಸಮಾನ ಆದ್ಯತೆ ನೀಡುತ್ತಿದ್ದೇವೆ. ಆರು ತಿಂಗಳ ಹಿಂದೆಯಷ್ಟೇ ನಮ್ಮ ಹಿಂದಿನ ಸಭೆ ನಡೆದಿತ್ತು. ಮಾರ್ಚ್ ನಿಂದೀಚೆಗೆ ಕೋವಿಡ್-19 ಸಾಂಕ್ರಾಮಿಕ ಸಾಕಷ್ಟು ಜಾಗತಿಕ ಸಂಕಷ್ಟವನ್ನು ಮುಂದುವರಿಸಿದೆ. ಹವಾಮಾನ ಬಿಕ್ಕಟ್ಟು ವೃದ್ಧಿಯಾಗಿದೆ ಮತ್ತು ಪ್ರಾದೇಶಿಕ ಸುರಕ್ಷತೆ ಮತ್ತಷ್ಟು ಸಂಕೀರ್ಣವಾಗಿದೆ. ವೈಯಕ್ತಿಕವಾಗಿ ನಮ್ಮೆಲ್ಲಾ ರಾಷ್ಟ್ರಗಳು ಪರೀಕ್ಷೆಗಳನ್ನು ಎದುರಿಸುತ್ತಿವೆ ಮತ್ತು ಒಟ್ಟಾಗಿ ಹೋರಾಡುತ್ತಿವೆ. ಆದರೆ ನಮ್ಮ ಸಹಕಾರದಲ್ಲಿ ಕಿಂಚಿತ್ತೂ ಬದಲಾಗಿಲ್ಲ.

ಭಾರತ-ಅಮೇರಿಕಾ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಮಂತ್ರಿಯವರ ಆರಂಭಿಕ ಮಾತುಗಳು

September 24th, 11:48 pm

ಮಾನ್ಯ ಅಧ್ಯಕ್ಷರೇ, 2016 ರಲ್ಲಿ ಮತ್ತು ಅದಕ್ಕೂ ಮುನ್ನ 2014 ರಲ್ಲಿ ನಾವು ವಿವರವಾಗಿ ಚರ್ಚೆ ನಡೆಸುವ ಅವಕಾಶ ಪಡೆದಿದ್ದೆವು. ಆ ಸಮಯದಲ್ಲಿ ನೀವು ಭಾರತ ಮತ್ತು ಅಮೇರಿಕಾ ನಡುವಿನ ಸಂಬಂಧಗಳ ಬಗ್ಗೆ ನಿಮ್ಮ ದೃಷ್ಟಿಕೋನವನ್ನು ರೂಪಿಸಿದ್ದಿರಿ. ನೀವು ಅದನ್ನು ಬಹಳ ವಿವರವಾಗಿ ಸ್ಪಷ್ಟಪಡಿಸಿದ್ದಿರಿ ಮತ್ತು ನಿಜವಾಗಿಯೂ ಅದೊಂದು ಸ್ಫೂರ್ತಿದಾಯಕ ದೂರದೃಷ್ಟಿಯಾಗಿತ್ತು. ಇಂದು ಅಧ್ಯಕ್ಷರಾಗಿ ಆ ದೃಷ್ಟಿಕೋನವನ್ನು ಕಾರ್ಯಗತಗೊಳಿಸಲು, ನೀವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೀರಿ ಮತ್ತು ಆ ಕುರಿತು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೀರಿ. ಅದನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.

ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆ ವೇಳೆ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

September 23rd, 11:31 pm

ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆ ವೇಳೆ 2021ರ ಸೆಪ್ಟಂಬರ್ 23ರಂದು ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಸ್ಕಾಟ್ ಮಾರಿಸನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

ಅಮೆರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಪ್ರಧಾನಮಂತ್ರಿಯವರ ನಿರ್ಗಮನ ಹೇಳಿಕೆ

September 22nd, 10:37 am

ಅಮೆರಿಕಾದ ಅಧ್ಯಕ್ಷ ಗೌರವಾನ್ವಿತ ಜೋ ಬೈಡೆನ್ ಅವರ ಆಹ್ವಾನದ ಮೇರೆಗೆ 2021ರ ಸೆಪ್ಟಂಬರ್ 22ರಿಂದ 25ರವರೆಗೆ ಅಮೆರಿಕಾಕ್ಕೆ ಭೇಟಿ ನೀಡುತ್ತಿದ್ದೇನೆ.

ಕ್ವಾಡ್ ರಾಷ್ಟ್ರಗಳ ನಾಯಕರ ಮೊದಲ ವರ್ಚುವಲ್ ಶೃಂಗಸಭೆ

March 11th, 11:23 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೊಶಿಹಿದೆ ಸುಗಾ ಮತ್ತು ಅಮೆರಿಕಾ ಅಧ್ಯಕ್ಷ ಜೊಸೆಫ್ ಆರ್. ಸ್ಟಾಲಿನ್ ಅವರೊಂದಿಗೆ 2021ರ ಮಾರ್ಚ್ 12ರಂದು ವರ್ಚುವಲ್ ರೂಪದಲ್ಲಿ ಕ್ವಾಡ್ರಿಲ್ಯಾಟರಲ್ ಚೌಕಟ್ಟಿನಲ್ಲಿ ನಡೆಯಲಿರುವ ನಾಯಕರ ಮೊದಲ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ಬೆಂಗಳೂರು ಟೆಕ್ ಶೃಂಗಸಭೆಗೆ ನವೆಂಬರ್ 19 ರಂದು ಪ್ರಧಾನಿ ಚಾಲನೆ

November 17th, 04:12 pm

ಬೆಂಗಳೂರು ಟೆಕ್ ಶೃಂಗಸಭೆ- 2020 ನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 19 ರಂದು ಮಧ್ಯಾಹ್ನ 12:00 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.

List of the documents announced/signed during India - Australia Virtual Summit

June 04th, 03:54 pm

List of the documents announced/signed during India - Australia Virtual Summit, June 04, 2020

India is committed to strengthening ties with Australia: PM Modi

June 04th, 10:54 am

At the India-Australia virtual summit, PM Narendra Modi said, India is committed to strengthening its relations with Australia, it is not only important for our two nations but also for the Indo-Pacific region and the whole world. During the summit, both the countries elevated their bilateral ties to a Comprehensive Strategic Partnership.

PM Modi, Australian PM Morrison take part in virtual summit

June 04th, 10:53 am

At the India-Australia virtual summit, PM Narendra Modi said, India is committed to strengthening its relations with Australia, it is not only important for our two nations but also for the Indo-Pacific region and the whole world. During the summit, both the countries elevated their bilateral ties to a Comprehensive Strategic Partnership.

Telephone Conversation between PM and Prime Minister of the Commonwealth of Australia

April 06th, 02:37 pm

Prime Minister Shri Narendra Modi had a telephonic conversation today with H.E. Scott Morrison, Prime Minister of the Commonwealth of Australia.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಸ್ಕಾಟ್ ಮಾರಿಸನ್ ಅವರೊಂದಿಗೆ ದೂರವಾಣಿ ಸಮಾಲೋಚನೆ

January 03rd, 07:38 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಸ್ಕಾಟ್ ಮಾರಿಸನ್ ಅವರೊಂದಿಗೆ ದೂರವಾಣಿ ಸಮಾಲೋಚನೆ ನಡೆಸಿದರು.

ಆಸ್ಟ್ರೇಲಿಯಾದ ಪ್ರಧಾನಮಂತ್ರಿಯವರೊಂದಿಗೆ ಪ್ರಧಾನಮಂತ್ರಿಗಳ ಭೇಟಿ

November 04th, 07:59 pm

2019ರ ನವೆಂಬರ್ 4ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ – ಆಸಿಯಾನ್ ಮತ್ತು ಪೂರ್ವ ಏಷ್ಯಾ ಶೃಂಗಸಭೆ 2019ರ ವೇಳೆ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಸ್ಕಾಟ್ ಮಾರಿಸನ್ ಅವರನ್ನು ಬ್ಯಾಂಕಾಕ್ ನಲ್ಲಿ ಭೇಟಿ ಮಾಡಿದರು.

"ಸಿಂಗಾಪುರದಲ್ಲಿ ಪೂರ್ವ ಏಷ್ಯಾದ ಶೃಂಗಸಭೆಯ ನಡುವೆ ಪ್ರಧಾನಮಂತ್ರಿಯವರ ಸಭೆಗಳು "

November 14th, 12:35 pm

ಪ್ರಧಾನಿ ನರೇಂದ್ರ ಮೋದಿ ಸಿಂಗಪುರದಲ್ಲಿ ಪೂರ್ವ ಏಷ್ಯಾದ ಶೃಂಗಸಭೆಯ ನಡುವೆ ಹಲವಾರು ವಿಶ್ವ ನಾಯಕರೊಂದಿಗೆ ಮಾತುಕತೆ ನಡೆಸಿದರು.