ಶ್ರೀಮತಿ ರೋಹಿಣಿ ಗೋಡ್ಬೋಲೆಯವರ ನಿಧನಕ್ಕೆ ಪ್ರಧಾನಮಂತ್ರಿಯವರಿಂದ ಸಂತಾಪ ಸೂಚನೆ

October 25th, 10:06 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಶ್ರೀಮತಿ ರೋಹಿಣಿ ಗೋಡ್ಬೋಲೆಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಶ್ರೀ ಮೋದಿಯವರು ಶ್ರೀಮತಿ ಗೋಡ್ಬೋಲೆ ಅವರನ್ನು ಪ್ರವರ್ತಕ ವಿಜ್ಞಾನಿ ಮತ್ತು ನಾವೀನ್ಯಕಾರ ಎಂದು ಶ್ಲಾಘಿಸಿದ್ದಾರೆ. ಶ್ರೀಮತಿ ರೋಹಿಣಿ ಗೋಡ್ಬೋಲೆಯವರು ವಿಜ್ಞಾನ ಜಗತ್ತಿನಲ್ಲಿ ಮಹಿಳೆಯರು ಹೆಚ್ಚಾಗಿ ಪಾಲ್ಗೊಳ್ಳುವುದರ ಪ್ರತಿಪಾದಕರಾಗಿದ್ದರು. ಅವರ ಶೈಕ್ಷಣಿಕ ಪ್ರಯತ್ನಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದ್ದಾರೆ.

ಭಾರತದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಪ್ರಧಾನಮಂತ್ರಿ ಗೌರವ ನಮನ ಸಲ್ಲಿಸಿದರು

October 15th, 10:21 am

ಖ್ಯಾತ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮದಿನದ ಅಂಗವಾಗಿ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಅಮೆರಿಕದ ನ್ಯೂಯಾರ್ಕ್‌ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಪ್ರಧಾನ ಮಂತ್ರಿಗಳ ಭಾಷಣದ ಇಂಗ್ಲಿಷ್‌ ಅವತರಿಣಿಕೆ

September 22nd, 10:00 pm

ನಮಸ್ತೆ ಯು.ಎಸ್.! ಈಗ ನಮ್ಮ ನಮಸ್ತೆ” ಕೂಡ ಬಹುರಾಷ್ಟ್ರೀಯವಾಗಿ ಮಾರ್ಪಟ್ಟಿದ್ದು, ಸ್ಥಳೀಯತೆಯಿಂದ ಜಾಗತಿಕವಾಗಿ ಪರಿವರ್ತನೆಯಾಗಿದೆ ಹಾಗೂ ಇದಕ್ಕೆಲ್ಲ ನೀವೇ ಕಾರಣೀಭೂತರು. ಭಾರತವನ್ನು ತಮ್ಮ ಹೃದಯಕ್ಕೆ ಸಮೀಪವಾಗಿಟ್ಟುಕೊಂಡಿರುವ ಪ್ರತಿಯೊಬ್ಬ ಭಾರತೀಯರೂ ಇದನ್ನು ಸಾಧ್ಯವಾಗಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

September 22nd, 09:30 pm

ಪ್ರಧಾನಮಂತ್ರಿ ಅವರನ್ನು ಭಾರತೀಯ ಸಮುದಾಯವು ಅತ್ಯಂತ ಪ್ರೀತಿ, ಗೌರವ, ಆದರ, ಉತ್ಸಾಹದಿಂದ ಬರಮಾಡಿಕೊಂಡಿತು. ಬೃಹತ್‌ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು, ಜಗತ್ತಿನ ಎರಡು ಮಹಾನ್ ಪ್ರಜಾಪ್ರಭುತ್ವಗಳ ರಾಷ್ಟ್ರಗಳ ನಡುವೆ ಬಾಂಧವ್ಯವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುವ ಭಾರತೀಯ ಅಮೆರಿಕನ್ ಸಮುದಾಯದಿಂದ ಭಾರತ-ಯುಎಸ್ ಸಂಬಂಧವು ಇನ್ನಷ್ಟು ಸದೃಢವಾಗಿರುವುದು ಕಾಣುತ್ತಿದೆ. ಹಿಂದಿನ ದಿನ ಡೆಲವೇರ್‌ನಲ್ಲಿರುವ ನಿವಾಸದಲ್ಲಿ ಅಮೆರಿಕ ಅಧ್ಯಕ್ಷ ಬಿಡೆನ್ ಅವರೊಂದಿಗಿನ ಭೇಟಿ ಬಗ್ಗೆಯೂ ಪ್ರಧಾನ ಮಂತ್ರಿಗಳು ಪ್ರಸ್ತಾಪಿಸಿದರು. ಈ ವಿಶೇಷ ಸಂದರ್ಭವು ಭಾರತೀಯ ಸಮುದಾಯವು ಸಂಯುಕ್ತ ರಾಷ್ಟ್ರಗಳೊಂದಿಗಿನ ನಂಬಿಕೆ- ವಿಶ್ವಾಸಾರ್ಹತೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಶ್ಲಾಘಿಸಿದರು.

ದೇಶದ ರೈತರ ಸಬಲೀಕರಣಕ್ಕೆ ಸರ್ಕಾರ ಬದ್ಧ – ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

August 11th, 04:50 pm

ದೆಹಲಿಯಲ್ಲಿಂದು 109 ಹೊಸ ಬೆಳೆ ತಳಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ರಾಷ್ಟ್ರದ ರೈತರ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ಹವಾಮಾನ ಸ್ನೇಹಿ ಮತ್ತು ಹೆಚ್ಚಿನ ಇಳುವರಿಯ ತಳಿಗಳು ರೈತರ ಆದಾಯವನ್ನು ವೃದ್ಧಿಸಬಹುದಾಗಿದೆ ಎಂದೂ ಸಹ ಅವರು ತಿಳಿಸಿದ್ದಾರೆ.

ಹೆಚ್ಚು ಇಳುವರಿ ನೀಡುವ, ಹವಾಮಾನಕ್ಕೆ ಚೇತರಿಸಿಕೊಳ್ಳುವ ಮತ್ತು ಜೈವಿಕ ಬಲವರ್ಧಿತ ಬೆಳೆಗಳ 109 ತಳಿಗಳನ್ನು ಪ್ರಧಾನಮಂತ್ರಿ ಅವರು ಬಿಡುಗಡೆ ಮಾಡಿದರು

August 11th, 02:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ನವದೆಹಲಿಯ ಭಾರತ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಹೆಚ್ಚು ಇಳುವರಿ ನೀಡುವ, ಹವಾಮಾನ ಸ್ಥಿತಿಸ್ಥಾಪಕ ಮತ್ತು ಜೈವಿಕ ಬಲವರ್ಧಿತ ಬೆಳೆಗಳ 109 ತಳಿಗಳನ್ನು ಬಿಡುಗಡೆ ಮಾಡಿದರು.

ಭಾರತವು ತನ್ನ ಪರಂಪರೆಯ ಆಧಾರದ ಮೇಲೆ ಕೃಷಿ ಶಿಕ್ಷಣ ಮತ್ತು ಸಂಶೋಧನೆಯ ದೃಢವಾದ ವ್ಯವಸ್ಥೆಯನ್ನು ಹೊಂದಿದೆ: ಪ್ರಧಾನಿ ಮೋದಿ

August 03rd, 09:35 am

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೃಷಿ ಅರ್ಥಶಾಸ್ತ್ರಜ್ಞರ 32ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ, ಕೃಷಿಯಲ್ಲಿ ಜಾಗತಿಕ ಸಹಕಾರದ ಅಗತ್ಯತೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಮಹತ್ವವನ್ನು ಒತ್ತಿ ಹೇಳಿದರು. ಡಿಜಿಟಲ್ ಕೃಷಿ, ನೀರಿನ ಸಂರಕ್ಷಣೆ ಮತ್ತು ಮಣ್ಣಿನ ಆರೋಗ್ಯ ನಿರ್ವಹಣೆಯಲ್ಲಿ ಭಾರತದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಎತ್ತಿ ತೋರಿಸಿದರು.

ಕೃಷಿ ಅರ್ಥಶಾಸ್ತ್ರಜ್ಞರ 32ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿ

August 03rd, 09:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರ(ಎನ್ಎಎಸ್ಸಿ)ದ ಸಂಕೀರ್ಣದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರ 32ನೇ ಅಂತಾರಾಷ್ಟ್ರೀಯ ಸಮ್ಮೇಳನ(ಐಸಿಎಇ) ಉದ್ಘಾಟಿಸಿದರು. ಈ ವರ್ಷದ ಸಮ್ಮೇಳನದ ನಿರೂಪಣಾ ವಿಷಯ(ಥೀಮ್) ಸುಸ್ಥಿರ ಕೃಷಿ-ಆಹಾರ ವ್ಯವಸ್ಥೆಗಳ ಕಡೆಗೆ ಪರಿವರ್ತನೆ ಎಂಬುದಾಗಿದೆ. ಹವಾಮಾನ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಅವನತಿ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಮತ್ತು ಸಂಘರ್ಷಗಳಂತಹ ಜಾಗತಿಕ ಸವಾಲುಗಳ ಮುಖಾಂತರ ಸುಸ್ಥಿರ ಕೃಷಿಯ ಅಗತ್ಯವನ್ನು ನಿಭಾಯಿಸುವ ಗುರಿಯನ್ನು ಈ ಸಮ್ಮೇಳನ ಹೊಂದಿದೆ. ಸಮ್ಮೇಳನದಲ್ಲಿ ಸುಮಾರು 75 ದೇಶಗಳ ಸುಮಾರು 1,000 ಪ್ರತಿನಿಧಿಗಳು ಭಾಗವಹಿಸಿದ್ದರು.

ಗುರಿ ತಲುಪಿದ ಆದಿತ್ಯ ಎಲ್ – 1 : ಪ್ರಧಾನಮಂತ್ರಿ ಸಂಭ್ರಮ

January 06th, 05:15 pm

ಭಾರತದ ಮೊದಲ ಸೌರ ವೀಕ್ಷಕ ಉಪಗ್ರಹ ಆದಿತ್ಯ ಎಲ್ 1 ಇಂದು ತನ್ನ ನಿಗದಿತ ಗುರಿ ತಲುಪಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.

Today every corner of India is brimming with self-confidence: PM Modi during Mann Ki Baat

December 31st, 11:30 am

In the 108th ‘Mann Ki Baat’ episode, PM Modi highlighted India's achievements, including the Nari Shakti Vandan Act and economic growth. Messages on fitness from Sadhguru, Harmanpreet Kaur, Viswanathan Anand, Akshay Kumar and Rishabh Malhotra were featured. The PM emphasized mental health, showcased health startups, and discussed about Bhashini, the AI for real-time translation. He also paid tribute to Savitribai Phule and Rani Velu Nachiyar.

Congress' anti-women stance has made Rajasthan a hub for crimes against women: PM Modi

November 19th, 11:55 am

PM Modi, in his unwavering election campaign efforts ahead of the Rajasthan assembly election, addressed a public meeting in Taranagar. Observing a massive gathering, he exclaimed, “Jan-Jan Ki Yahi Pukar, Aa Rahi Bhajpa Sarkar”. PM Modi said, “Nowadays, the entire country is filled with the fervour of cricket. In cricket, a batsman comes and scores runs for his team. But among the Congress members, there is such a dispute that scoring runs is far-fetched; these people are engaged in getting each other run out. The Congress government spent five years getting each other run out.”

PM Modi delivers powerful speeches at public meetings in Taranagar & Jhunjhunu, Rajasthan

November 19th, 11:03 am

PM Modi, in his unwavering election campaign efforts ahead of the Rajasthan assembly election, addressed public meetings in Taranagar and Jhunjhunu. Observing a massive gathering, he exclaimed, “Jan-Jan Ki Yahi Pukar, Aa Rahi Bhajpa Sarkar”. PM Modi said, “Nowadays, the entire country is filled with the fervour of cricket. In cricket, a batsman comes and scores runs for his team. But among the Congress members, there is such a dispute that scoring runs is far-fetched; these people are engaged in getting each other run out. The Congress government spent five years getting each other run out.”

ಗಗನಯಾನದ ಟಿವಿ ಡಿ1 ಮಿಷನ್ ನ ಪ್ರಯೋಗಾರ್ಥ ಪರೀಕ್ಷೆ ಯಶಸ್ಸಿಗೆ ಪ್ರಧಾನಮಂತ್ರಿ ಶ್ಲಾಘನೆ

October 21st, 12:56 pm

ಗಗನಯಾನದ ಟಿವಿ ಡಿ1 ಮಿಷನ್ ನ ಪ್ರಯೋಗಾರ್ಥ ಪರೀಕ್ಷೆ ಯಶಸ್ಸಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ ಮತ್ತು ಇದು ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವನ್ನು ಸಾಕಾರಗೊಳಿಸಲು ದೇಶವನ್ನು ಒಂದು ಹೆಜ್ಜೆ ಸನಿಹಕ್ಕೆ ಕೊಂಡೊಯ್ಯಲು ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.

Chandrayaan Mission and PM Modi’s Penchant Towards Space Tech

September 03rd, 02:25 pm

Prime Minister Narendra Modi always had a keen interest in technology and an inclination towards space-tech long before he became the PM. In 2006, when Shri Modi was the Chief Minister of Gujarat, he accompanied the then President APJ Abdul Kalam to the Space Applications Centre (SAC), ISRO, Ahmedabad.

ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದ್ದಕ್ಕಾಗಿ ವಿಜ್ಞಾನಿಗಳು ಮತ್ತು ಇಂಜಿನಿಯರ್ ಗಳನ್ನು ಅಭಿನಂದಿಸಿದ ಪ್ರಧಾನಮಂತ್ರಿ

August 31st, 09:45 pm

ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಕ್ಕಾಗಿ ವಿಜ್ಞಾನಿಗಳು ಮತ್ತು ಎಂಜಿನಿಯರ್ ಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಗುಜರಾತಿನ ಮೊದಲ ಅತಿ ದೊಡ್ಡ ಸ್ವದೇಶಿ 700 ಎಂ.ಡಬ್ಲ್ಯೂ.ಇ “ಕಕ್ರಾಪರ್ ಪರಮಾಣು ವಿದ್ಯುತ್ ಸ್ಥಾವರ” ಇದರ ಘಟಕ-3 ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

‘ಮನದ ಮಾತು’ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 27.08.2023 ರಂದು ಮಾಡಿದ ‘ಮನ್ ಕಿ ಬಾತ್’ – 104 ನೇ ಸಂಚಿಕೆಯ ಕನ್ನಡ ಅವತರಣಿಕೆ

August 27th, 11:30 am

ನನ್ನ ಪ್ರಿಯ ಕುಟುಂಬದ ಸದಸ್ಯರೆ, ನಮಸ್ಕಾರ. ಮನದ ಮಾತಿನ ಆಗಸ್ಟ್ ಸಂಚಿಕೆಗೆ ಮತ್ತೊಮ್ಮೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಶ್ರಾವಣ ಮಾಸದಲ್ಲಿ ಹಿಂದೆಂದೂ ಎರಡು ಬಾರಿ ‘ಮನದ ಮಾತು’ ಕಾರ್ಯಕ್ರಮ ನಡೆದಿದ್ದು ನನಗೆ ನೆನಪಿಲ್ಲ, ಆದರೆ, ಈ ಬಾರಿ ಅದು ಸಾಧ್ಯವಾಗಿದೆ. ಶ್ರಾವಣ ಎಂದರೆ ಮಹಾಶಿವನ ಮಾಸ, ಸಂಭ್ರಮಾಚರಣೆ ಮತ್ತು ಸಂತೋಷದ ತಿಂಗಳಿದು. ಚಂದ್ರಯಾನದ ಯಶಸ್ಸು ಈ ಸಂಭ್ರಮದ ವಾತಾವರಣಕ್ಕೆ ಮತ್ತಷ್ಟು ಕಳೆ ತಂದಿದೆ. ಚಂದ್ರಯಾನ ಚಂದ್ರನನ್ನು ತಲುಪಿ ಮೂರು ದಿನಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಈ ಯಶಸ್ಸು ಎಷ್ಟು ಮಹತ್ತರವಾದದ್ದು ಎಂದರೆ ಅದರ ಬಗ್ಗೆ ಎಷ್ಟು ಚರ್ಚೆ ಮಾಡಿದರೂ ಕಡಿಮೆಯೇ ಅನ್ನಿಸುತ್ತದೆ. ಇಂದು ನಿಮ್ಮೊಂದಿಗೆ ಮಾತನಾಡುವಾಗ ಹಳೆಯ ನನ್ನ ಕವಿತೆಯ ಕೆಲವು ಸಾಲುಗಳು ನೆನಪಿಗೆ ಬರುತ್ತಿವೆ.

ಚಂದ್ರಯಾನ -3 ಮಿಷನ್ ಯಶಸ್ಸಿನ ಕುರಿತು ಇಸ್ರೊ ತಂಡವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

August 26th, 08:15 am

ಇಂದು, ನಿಮ್ಮೆಲ್ಲರ ನಡುವೆ ನಾನು ಹೊಸ ರೀತಿಯ ಸಂತೋಷವನ್ನು ಅನುಭವಿಸುತ್ತಿದ್ದೇನೆ. ಬಹುಶಃ ಬಹಳ ಅಪರೂಪದ ಸಂದರ್ಭಗಳಲ್ಲಿ ಒಬ್ಬರು ಅಂತಹ ಸಂತೋಷವನ್ನು ಅನುಭವಿಸುತ್ತಾರೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಒಬ್ಬರ ಮನಸ್ಸು ಸಂಪೂರ್ಣವಾಗಿ ಸಂತೋಷದಿಂದ ತುಂಬಿದಾಗ ಮತ್ತು ಅದರ ಪರಿಣಾಮವಾಗಿ ಅವನು ಪ್ರಕ್ಷುಬ್ಧನಾಗುವಾಗ ಇಂತಹ ಘಟನೆಗಳು ಸಂಭವಿಸುತ್ತವೆ. ಈ ಬಾರಿ ನನಗೂ ಅದೇ ರೀತಿಯದ್ದೊಂದು ಸಂಭವಿಸಿತು, ಮತ್ತು ನಾನು ತುಂಬಾ ಪ್ರಕ್ಷುಬ್ಧನಾಗಿದ್ದೆ. ನಾನು ದಕ್ಷಿಣ ಆಫ್ರಿಕಾದಲ್ಲಿದ್ದೆ, ಮತ್ತು ನಂತರ ಗ್ರೀಸ್ ನಲ್ಲಿ ಒಂದು ಕಾರ್ಯಕ್ರಮವಿತ್ತು. ಆದ್ದರಿಂದ ನಾನು ಅಲ್ಲಿರಬೇಕಾಗಿತ್ತು ಆದರೆ ನನ್ನ ಮನಸ್ಸು ಸಂಪೂರ್ಣವಾಗಿ ನಿಮ್ಮ ಮೇಲೆ ಕೇಂದ್ರೀಕೃತವಾಗಿತ್ತು. ಆದರೆ ಕೆಲವೊಮ್ಮೆ ನಾನು ನಿಮ್ಮೆಲ್ಲರಿಗೂ ಅನ್ಯಾಯ ಮಾಡುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ. ನನ್ನ ಚಡಪಡಿಕೆ ನಿಮಗೆ ಸಮಸ್ಯೆಯನ್ನು ಸೃಷ್ಟಿಸುತ್ತದೆ. ನೀವು ಮುಂಜಾನೆ ಇಲ್ಲಿಗೆ ಬರಬೇಕಾಯಿತು ಆದರೆ ನಾನು ಬಂದು ನಿಮಗೆ ನಮಸ್ಕರಿಸಲು ಬಯಸುತ್ತೇನೆ. ಇದು ನಿಮಗೆ ಅನಾನುಕೂಲವಾಗಿರಬೇಕು, ಆದರೆ ನಾನು ಭಾರತಕ್ಕೆ ಬಂದಿಳಿದ ಕೂಡಲೇ ನಿಮ್ಮನ್ನು ನೋಡಲು ಬಯಸುತ್ತೇನೆ. ನಾನು ನಿಮ್ಮೆಲ್ಲರಿಗೂ ನಮಸ್ಕರಿಸಲು, ನಿಮ್ಮ ಕಠಿಣ ಪರಿಶ್ರಮಕ್ಕೆ ನಮಸ್ಕರಿಸಲು, ನಿಮ್ಮ ತಾಳ್ಮೆಗೆ ನಮಸ್ಕರಿಸಲು, ನಿಮ್ಮ ಉತ್ಸಾಹಕ್ಕೆ ವಂದಿಸಲು, ನಿಮ್ಮ ಚೈತನ್ಯಕ್ಕೆ ವಂದಿಸಲು ಮತ್ತು ನಿಮ್ಮ ಸ್ಫೂರ್ತಿಗೆ ವಂದಿಸಲು ಬಯಸುತ್ತೇನೆ. ನೀವು ದೇಶವನ್ನು ಯಾವ ಎತ್ತರಕ್ಕೆ ಕೊಂಡೊಯ್ದಿದ್ದೀರಿ ಎಂಬುದು ಸಾಮಾನ್ಯ ಯಶಸ್ಸಲ್ಲ. ಇದು ಅನಂತ ಬಾಹ್ಯಾಕಾಶದಲ್ಲಿ ಭಾರತದ ವೈಜ್ಞಾನಿಕ ಸಾಮರ್ಥ್ಯದ ಘೋಷಣೆಯಾಗಿದೆ.

ಚಂದ್ರಯಾನ-3ರ ಯಶಸ್ಸಿನ ಕುರಿತು ಇಸ್ರೋ ತಂಡವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ

August 26th, 07:49 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗ್ರೀಸ್ ನಿಂದ ಆಗಮಿಸಿದ ನಂತರ ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ (ISTRAC) ಗೆ ಭೇಟಿ ನೀಡಿದರು ಮತ್ತು ಚಂದ್ರಯಾನ-3 ರ ಯಶಸ್ಸಿನ ಕುರಿತು ಇಸ್ರೋ ತಂಡವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನ ಮಂತ್ರಿಯವರು ಚಂದ್ರಯಾನ-3 ಮಿಷನ್ ನಲ್ಲಿ ಭಾಗಿಯಾಗಿರುವ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಿದರು ಮತ್ತು ಅವರೊಂದಿಗೆ ಸಂವಾದ ನಡೆಸಿದರು, ಅಲ್ಲಿ ಅವರಿಗೆ ಚಂದ್ರಯಾನ-3 ಮಿಷನ್ ನಲ್ಲಿನ ಸಂಶೋಧನೆಗಳು ಮತ್ತು ಪ್ರಗತಿಯ ಬಗ್ಗೆ ವಿವರಿಸಲಾಯಿತು.

ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ ರಾಷ್ಟ್ರಗಳಿಗೆ ಭೇಟಿ ನೀಡಿ ಭಾರತಕ್ಕೆ ಹಿಂದಿರುಗಿದ ತಕ್ಷಣ, ಆಗಸ್ಟ್ 26 ರಂದು ಬೆಂಗಳೂರಿನಲ್ಲಿ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್‌ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ.

August 25th, 08:10 pm

ಆಗಸ್ಟ್ 26 , 2೦23 ರಂದು ಬೆಳಿಗ್ಗೆ 7:15 ರ ಸುಮಾರಿಗೆ ಬೆಂಗಳೂರಿನಲ್ಲಿ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ಐ.ಎಸ್.ಟಿ.ಆರ್.ಎ.ಸಿ) ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದಾರೆ. ಅವರು ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ ಪ್ರವಾಸದಿಂದ ಭಾರತಕ್ಕೆ ಹಿಂದಿರುಗಿದ ನಂತರ ತಕ್ಷಣವೇ ಬೆಂಗಳೂರು ತಲುಪಲಿದ್ದಾರೆ.

ಚಂದ್ರಯಾನ-3 ಯಶಸ್ಸಿಗೆ ಶುಭ ಕೋರಿದ ವಿಶ್ವ ನಾಯಕರಿಗೆ ಪ್ರಧಾನಿ ಧನ್ಯವಾದ

August 24th, 10:03 am

ಚಂದ್ರಯಾನ-3 ಮಿಷನ್ ಅಡಿ ವಿಕ್ರಂ ಲ್ಯಾಂಡರ್ ನ ಯಶಸ್ವೀ ಲ್ಯಾಂಡಿಂಗ್‌ಗೆ ಅನೇಕ ವಿಶ್ವ ನಾಯಕರು ಭಾರತವನ್ನು ಅಭಿನಂದಿಸಿದ್ದಾರೆ. ಅವರ ಆಶಯಗಳಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರಣಿ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.