ಸಂವಿಧಾನದ ಅಂಗೀಕಾರದ 75ನೇ ವಾರ್ಷಿಕೋತ್ಸವದ ವಿಶೇಷ ಚರ್ಚೆಯಲ್ಲಿ ಲೋಕಸಭೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಅನುವಾದ
December 14th, 05:50 pm
ಇದು ನಮಗೆಲ್ಲರಿಗೂ ಅಪಾರವಾದ ಹೆಮ್ಮೆಯ ಕ್ಷಣವಾಗಿದೆ - ನಮ್ಮ ದೇಶವಾಸಿಗಳಿಗೆ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಪ್ರಜಾಪ್ರಭುತ್ವವನ್ನು ಪ್ರೀತಿಸುವ ನಾಗರಿಕರಿಗೆ, ಪ್ರಜಾಪ್ರಭುತ್ವದ ಹಬ್ಬವನ್ನು ಅತ್ಯಂತ ಹೆಮ್ಮೆಯಿಂದ ಆಚರಿಸುವ ಸಂದರ್ಭವಿದು. ಸಂವಿಧಾನದ ಅಡಿಯಲ್ಲಿ 75 ವರ್ಷಗಳ ಪ್ರಯಾಣವು ಗಮನಾರ್ಹವಾಗಿದೆ ಮತ್ತು ಈ ಪ್ರಯಾಣದ ಹಾದಿಯಲ್ಲಿ ನಮ್ಮ ಸಂವಿಧಾನ-ರಚನಾಕಾರರ ದೈವಿಕ ದೃಷ್ಟಿ ಇದೆ, ಅವರ ಕೊಡುಗೆಗಳು ನಾವು ಮುಂದೆ ಸಾಗುತ್ತಿರುವಾಗ ನಮಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತವೆ. ಸಂವಿಧಾನದ 75 ವರ್ಷಗಳನ್ನು ಪೂರ್ಣಗೊಳಿಸಿದ ಸಂಭ್ರಮಾಚರಣೆ ನಿಜಕ್ಕೂ ಮಹತ್ವದ ಸಂದರ್ಭವಾಗಿದೆ. ಈ ಸಂಭ್ರಮಾಚರಣೆಯಲ್ಲಿ ಸಂಸತ್ತು ಕೂಡ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಭಾಗವಹಿಸುವುದು ನನಗೆ ಅತೀವ ಸಂತಸ ತಂದಿದೆ. ನಾನು ಎಲ್ಲಾ ಗೌರವಾನ್ವಿತ ಸದಸ್ಯರಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಮತ್ತು ಈ ಆಚರಣೆಗಳಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂವಿಧಾನವನ್ನು ಅಂಗೀಕರಿಸಿದ 75ನೇ ವಾರ್ಷಿಕೋತ್ಸವದ ಕುರಿತು ವಿಶೇಷ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು
December 14th, 05:47 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲೋಕಸಭೆಯಲ್ಲಿ ಸಂವಿಧಾನವನ್ನು ಅಂಗೀಕರಿಸಿದ 75ನೇ ವಾರ್ಷಿಕೋತ್ಸವದ ವಿಶೇಷ ಚರ್ಚೆಯನ್ನು ಉದ್ದೇಶಿಸಿ ಮಾತನಾಡಿದರು. ಸದನವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿ ಅವರು, ನಾವು ಈ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸುತ್ತಿರುವುದು ಭಾರತದ ಎಲ್ಲಾ ನಾಗರಿಕರಿಗೆ ಮತ್ತು ಪ್ರಜಾಪ್ರಭುತ್ವವನ್ನು ಗೌರವಿಸುವ ಜಗತ್ತಿನಾದ್ಯಂತ ಇರುವ ಎಲ್ಲಾ ಜನರಿಗೆ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ ಎಂದು ಹೇಳಿದರು. ನಮ್ಮ ಸಂವಿಧಾನದ 75 ವರ್ಷಗಳ ಈ ಗಮನಾರ್ಹ ಮತ್ತು ಮಹತ್ವದ ಪ್ರಯಾಣದಲ್ಲಿ ನಮ್ಮ ಸಂವಿಧಾನದ ರಚನೆಕಾರರ ದೂರದೃಷ್ಟಿ, ಚಿಂತನೆ ಮತ್ತು ಪ್ರಯತ್ನಗಳಿಗೆ ಧನ್ಯವಾದ ಹೇಳಿದ ಅವರು, 75 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ನಂತರ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸುವ ಸಮಯ ಬಂದಿದೆ ಎಂದು ಹೇಳಿದರು. ಸಂಸತ್ತಿನ ಸದಸ್ಯರು ಕೂಡ ಈ ಆಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಶ್ರೀ ಮೋದಿಯವರು, ಅದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸಿದರು ಮತ್ತು ಅಭಿನಂದಿಸಿದರು.ತಮಿಳು ಕವಿ ಸುಬ್ರಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ ಸಂಕಲನ ಬಿಡುಗಡೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ
December 11th, 02:00 pm
ಕೇಂದ್ರ ಸಚಿವರಾದ, ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಜಿ, ರಾವ್ ಇಂದರ್‌ಜಿತ್ ಸಿಂಗ್ ಮತ್ತು ಎಲ್. ಮುರುಗನ್ ಜಿ, ಈ ಕಾರ್ಯಕ್ರಮದ ಕೇಂದ್ರ ವ್ಯಕ್ತಿ, ಸಾಹಿತ್ಯ ವಿದ್ವಾಂಸ ಶ್ರೀ ಸೀನಿ ವಿಶ್ವನಾಥನ್ ಜಿ, ಪ್ರಕಾಶಕ ವಿ. ಶ್ರೀನಿವಾಸನ್ ಜಿ, ಮತ್ತು ಉಪಸ್ಥಿತರಿರುವ ಎಲ್ಲ ಗೌರವಾನ್ವಿತ ಗಣ್ಯರೇ... ಮಹಿಳೆಯರೇ ಮತ್ತು ಮಹನೀಯರೇ,ತಮಿಳು ಶ್ರೇಷ್ಠ ಕವಿ ಸುಬ್ರಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ ಸಂಕಲನ ಬಿಡುಗಡೆ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
December 11th, 01:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಲೋಕ ಕಲ್ಯಾಣ್ ಮಾರ್ಗದ ನಂಬರ್ 7 ನಿವಾಸದಲ್ಲಿ ತಮಿಳು ಮಹಾನ್ ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಬ್ರಮಣ್ಯ ಭಾರತಿ ಅವರ ಸಮಗ್ರ ಕೃತಿಗಳ ಸಂಕಲನ ಬಿಡುಗಡೆ ಮಾಡಿದರು. ತಮಿಳಿನ ಮಹಾನ್ ಕವಿ ಸುಬ್ರಮಣ್ಯ ಭಾರತಿ ಅವರ ಜನ್ಮದಿನದಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ ಅವರು, ಭಾರತದ ಸಂಸ್ಕೃತಿ ಮತ್ತು ಸಾಹಿತ್ಯ, ಭಾರತದ ಸ್ವಾತಂತ್ರ್ಯ ಹೋರಾಟದ ನೆನಪುಗಳು ಮತ್ತು ತಮಿಳುನಾಡಿನ ಹೆಮ್ಮೆಗೆ ಇಂದು ಉತ್ತಮ ಅವಕಾಶವಾಗಿದೆ. ಮಹಾಕವಿ ಸುಬ್ರಹ್ಮಣ್ಯ ಭಾರತಿ ಅವರ ಕೃತಿಗಳ ಪ್ರಕಟಣೆಯ ಮಹಾಪೂರವೇ ಇಂದು ನೆರವೇರಿತು ಎಂದರು.ಅಹಮದಾಬಾದ್‌ನ ರಾಮಕೃಷ್ಣ ಮಠ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ವಿಡಿಯೋ ಕಾನ್ಫರೆನ್ಸ್ ಭಾಷಣ
December 09th, 01:30 pm
ಗೌರವಾನ್ವಿತ ಸ್ವಾಮಿ ಗೌತಮಾನಂದ ಜೀ ಮಹಾರಾಜ್, ದೇಶ ಮತ್ತು ವಿದೇಶಗಳಲ್ಲಿರುವ ರಾಮಕೃಷ್ಣ ಮಿಷನ್ ಮತ್ತು ಮಠದ ಗೌರವಾನ್ವಿತ ಸಾಧು ಸಂತರು, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಮತ್ತು ಈ ಕಾರ್ಯಕ್ರಮಕ್ಕೆ ಭಾಗವಹಿಸಿರುವ ಎಲ್ಲಾ ಗಣ್ಯ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೆ, ನಮಸ್ಕಾರ!ಗುಜರಾತ್‌ನ ರಾಮಕೃಷ್ಣ ಮಠ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
December 09th, 01:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ರಾಮಕೃಷ್ಣ ಮಠದಲ್ಲಿಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಪೂಜ್ಯ ಶ್ರೀಮತ್ ಸ್ವಾಮಿ ಗೌತಮಾನಂದ ಜಿ ಮಹಾರಾಜ್, ಭಾರತ ಮತ್ತು ವಿದೇಶಗಳ ರಾಮಕೃಷ್ಣ ಮಠ ಮತ್ತು ಮಿಷನ್ ನ ಪೂಜ್ಯ ಸಾಧು ಸಂತರು, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಮತ್ತು ಇತರೆ ಗಣ್ಯರಿಗೆ ಶುಭಾಶಯಗಳನ್ನು ತಿಳಿಸಿದರು. ಶ್ರೀ ಮೋದಿ ಅವರು ಶಾರದಾ ದೇವಿ, ಗುರುದೇವ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರಿಗೆ ನಮನ ಸಲ್ಲಿಸಿದರು. ಇಂದಿನ ಕಾರ್ಯಕ್ರಮವನ್ನು ಶ್ರೀಮತ್ ಸ್ವಾಮಿ ಪ್ರೇಮಾನಂದ ಮಹಾರಾಜರ ಜನ್ಮದಿನದಂದು ಆಯೋಜಿಸಲಾಗಿದ್ದು, ಅವರಿಗೂ ನಮನ ಸಲ್ಲಿಸಿದರು.We are working fast in every sector for the development of Odisha: PM Modi at Odisha Parba 2024
November 24th, 08:48 pm
PM Modi addressed Odisha Parba 2024, celebrating Odisha's rich cultural heritage. He paid tribute to Swabhaba Kabi Gangadhar Meher on his centenary, along with saints like Dasia Bauri, Salabega, and Jagannath Das. Highlighting Odisha's role in preserving India's cultural persity, he shared the inspiring tale of Lord Jagannath leading a battle and emphasized faith, unity, and pine guidance in every endeavor.“ಒಡಿಶಾ ಪರ್ಬಾ 2024”ರ ಆಚರಣೆಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
November 24th, 08:30 pm
ನವದೆಹಲಿಯ ಜವಾಹರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ “ಒಡಿಶಾ ಪರ್ಬಾ 2024”ರ ಆಚರಣೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಗವಹಿಸಿದ್ದರು. ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಹೋದಯರಿಯರು ಮತ್ತು ಸಹೋದರರಿಗೆ ಶುಭ ಹಾರೈಸಿದರು. ಈ ವರ್ಷ ಸ್ವಾಭವ್ ಕವಿ ಗಂಗಾಧರ್ ಮೆಹರ್ ಅವರ 100ನೇ ಪುಣ್ಯ ಸ್ಮರಣೆಯಾಗಿದೆ ಮತ್ತು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ. ಭಕ್ತ ದಾಸಿಯಾ ಭೌಹುರಿ, ಭಕ್ತ ಸಲೆಬೆಗ ಮತ್ತು ಒರಿಯಾ ಲೇಖಕರಾದ ಭಗವಂತ, ಶ್ರೀ ಜಗನ್ನಾಥ್ ದಾಸ್ ಅವರಿಗೆ ಪ್ರಧಾನಮಂತ್ರಿಯವರು ಶ್ರದ್ಧಾಂಜಲಿ ಸಲ್ಲಿಸಿದರು.ಗಯಾನಾಕ್ಕೆ ಪ್ರಧಾನಮಂತ್ರಿಯವರ ಅಧಿಕೃತ ಭೇಟಿ (ನವೆಂಬರ್ 19-21, 2024): ಫಲಪ್ರದತೆಯ ಪಟ್ಟಿ
November 20th, 09:55 pm
ಈ ವಿಷಯದಲ್ಲಿನ ಸಹಕಾರವು ಕಚ್ಚಾ ತೈಲದ ಮೂಲ, ನೈಸರ್ಗಿಕ ಅನಿಲದಲ್ಲಿ ಸಹಯೋಗ, ಮೂಲಸೌಕರ್ಯ ಅಭಿವೃದ್ಧಿ, ಸಾಮರ್ಥ್ಯ ವರ್ಧನೆ ಮತ್ತು ಸಂಪೂರ್ಣ ಹೈಡ್ರೋಕಾರ್ಬನ್ ಮೌಲ್ಯ ಸರಪಳಿಯಲ್ಲಿ ಪರಿಣತಿ ಹಂಚಿಕೊಳ್ಳುವುದನ್ನು ಒಳಗೊಂಡಿದೆ.ಮುಂಬೈನಲ್ಲಿ ನಡೆದ ಅಭಿಜತ್ ಮರಾಠಿ ಭಾಷಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
October 05th, 07:05 pm
ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ಸಿ.ಪಿ. ರಾಧಾಕೃಷ್ಣನ್ ಜೀ, ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಜೀ, ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಜೀ ಮತ್ತು ಅಜಿತ್ ಪವಾರ್ ಜೀ, ಕೇಂದ್ರ ಸರ್ಕಾರದ ನನ್ನ ಎಲ್ಲಾ ಸಹೋದ್ಯೋಗಿಗಳು, ತಮ್ಮ ಗಾಯನದಿಂದ ಅನೇಕ ತಲೆಮಾರುಗಳ ಮೇಲೆ ಛಾಪು ಮೂಡಿಸಿರುವ ಆಶಾ ತಾಯಿ ಜೀ, ಪ್ರಸಿದ್ಧ ನಟರಾದ ಭಾಯಿ ಸಚಿನ್ ಜೀ, ನಾಮದೇವ್ ಕಾಂಬ್ಳೆ ಜೀ ಮತ್ತು ಸದಾನಂದ ಮೋರೆ ಜೀ, ಮಹಾರಾಷ್ಟ್ರ ಸರ್ಕಾರದ ಸಚಿವರಾದ ಭಾಯಿ ದೀಪಕ್ ಜೀ ಮತ್ತು ಮಂಗಲ್ ಪ್ರಭಾತ್ ಲೋಧಾ ಜೀ, ಬಿಜೆಪಿಯ ಮುಂಬೈ ಅಧ್ಯಕ್ಷ ಭಾಯ್ ಆಶಿಶ್ ಜೀ, ಇತರ ಗಣ್ಯರು, ಸಹೋದರ ಸಹೋದರಿಯರೇ!ಮಹಾರಾಷ್ಟ್ರದ ಮುಂಬೈಯಲ್ಲಿ ನಡೆದ ಅಭಿಜಿತ್ ಮರಾಠಿ ಭಾಷಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
October 05th, 07:00 pm
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮರಾಠಿ ಭಾಷೆಗೆ ಕೇಂದ್ರ ಸರ್ಕಾರವು ಅಧಿಕೃತವಾಗಿ ಶಾಸ್ತ್ರೀಯ (ಅಭಿಜಾತ) ಭಾಷೆಯ ಸ್ಥಾನಮಾನವನ್ನು ನೀಡಿದೆ ಎಂದರು. ಶ್ರೀ ಮೋದಿ ಅವರು ಈ ಕ್ಷಣದ ಮಹತ್ವವನ್ನು ಒತ್ತಿ ಹೇಳಿದರು, ಇದು ಮರಾಠಿ ಭಾಷೆಯ ಇತಿಹಾಸದಲ್ಲಿ ಸುವರ್ಣ ಮೈಲಿಗಲ್ಲು ಎಂದು ಬಣ್ಣಿಸಿದರು, ಏಕೆಂದರೆ ಮರಾಠಿ ಮಾತನಾಡುವ ಜನರ ದೀರ್ಘಕಾಲದ ಆಕಾಂಕ್ಷೆಗಳನ್ನು ಅವರು ಉಲ್ಲೇಖಿಸಿದರು ಮತ್ತು ಮಹಾರಾಷ್ಟ್ರದ ಕನಸನ್ನು ಈಡೇರಿಸಲು ಕೊಡುಗೆ ನೀಡುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಪ್ರಧಾನಮಂತ್ರಿಯವರು ಮಹಾರಾಷ್ಟ್ರದ ಜನರನ್ನು ಅಭಿನಂದಿಸಿದರು ಮತ್ತು ಈ ಐತಿಹಾಸಿಕ ಸಾಧನೆಯ ಭಾಗವಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಇದಲ್ಲದೆ, ಬಂಗಾಳಿ, ಪಾಲಿ, ಪ್ರಾಕೃತ ಮತ್ತು ಅಸ್ಸಾಮಿ ಭಾಷೆಗಳಿಗೂ ಶಾಸ್ತ್ರೀಯ ಭಾಷೆಗಳ ಸ್ಥಾನಮಾನವನ್ನು ನೀಡಲಾಗಿದೆ ಎಂದು ಪ್ರಧಾನಿ ಘೋಷಿಸಿದರು ಮತ್ತು ಈ ಭಾಷೆಗಳಿಗೆ ಸಂಬಂಧಿಸಿದ ಜನತೆಗೆ ಅಭಿನಂದನೆ ಸಲ್ಲಿಸಿದರು.ದೇಶದ ವೈಜ್ಞಾನಿಕ ಸಮುದಾಯವು ಅವರ ಪ್ರಯತ್ನಗಳಿಗೆ ಸಂಪನ್ಮೂಲಗಳ ಕೊರತೆಯಾಗುವುದಿಲ್ಲ ಎಂಬ ನಂಬಿಕೆಯನ್ನು ಹೊಂದಿರಬೇಕು: ಪ್ರಧಾನಮಂತ್ರಿ
September 10th, 04:43 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಲೋಕ ಕಲ್ಯಾಣ ಮಾರ್ಗದ, 7ರಲ್ಲಿರುವ ತಮ್ಮ ನಿವಾಸದಲ್ಲಿ ಅನುಸಂಧಾನ್ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಆಡಳಿತ ಮಂಡಳಿಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಭೂದೃಶ್ಯ ಮತ್ತು ಸಂಶೋಧನೆ ಹಾಗು ಅಭಿವೃದ್ಧಿ ಕಾರ್ಯಕ್ರಮಗಳ ಮರುವಿನ್ಯಾಸದ ಬಗ್ಗೆ ಚರ್ಚೆ ನಡೆಯಿತು.ಭಾರತವು ತನ್ನ ಪರಂಪರೆಯ ಆಧಾರದ ಮೇಲೆ ಕೃಷಿ ಶಿಕ್ಷಣ ಮತ್ತು ಸಂಶೋಧನೆಯ ದೃಢವಾದ ವ್ಯವಸ್ಥೆಯನ್ನು ಹೊಂದಿದೆ: ಪ್ರಧಾನಿ ಮೋದಿ
August 03rd, 09:35 am
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೃಷಿ ಅರ್ಥಶಾಸ್ತ್ರಜ್ಞರ 32ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ, ಕೃಷಿಯಲ್ಲಿ ಜಾಗತಿಕ ಸಹಕಾರದ ಅಗತ್ಯತೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಮಹತ್ವವನ್ನು ಒತ್ತಿ ಹೇಳಿದರು. ಡಿಜಿಟಲ್ ಕೃಷಿ, ನೀರಿನ ಸಂರಕ್ಷಣೆ ಮತ್ತು ಮಣ್ಣಿನ ಆರೋಗ್ಯ ನಿರ್ವಹಣೆಯಲ್ಲಿ ಭಾರತದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಎತ್ತಿ ತೋರಿಸಿದರು.ಕೃಷಿ ಅರ್ಥಶಾಸ್ತ್ರಜ್ಞರ 32ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿ
August 03rd, 09:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರ(ಎನ್ಎಎಸ್ಸಿ)ದ ಸಂಕೀರ್ಣದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರ 32ನೇ ಅಂತಾರಾಷ್ಟ್ರೀಯ ಸಮ್ಮೇಳನ(ಐಸಿಎಇ) ಉದ್ಘಾಟಿಸಿದರು. ಈ ವರ್ಷದ ಸಮ್ಮೇಳನದ ನಿರೂಪಣಾ ವಿಷಯ(ಥೀಮ್) ಸುಸ್ಥಿರ ಕೃಷಿ-ಆಹಾರ ವ್ಯವಸ್ಥೆಗಳ ಕಡೆಗೆ ಪರಿವರ್ತನೆ ಎಂಬುದಾಗಿದೆ. ಹವಾಮಾನ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಅವನತಿ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಮತ್ತು ಸಂಘರ್ಷಗಳಂತಹ ಜಾಗತಿಕ ಸವಾಲುಗಳ ಮುಖಾಂತರ ಸುಸ್ಥಿರ ಕೃಷಿಯ ಅಗತ್ಯವನ್ನು ನಿಭಾಯಿಸುವ ಗುರಿಯನ್ನು ಈ ಸಮ್ಮೇಳನ ಹೊಂದಿದೆ. ಸಮ್ಮೇಳನದಲ್ಲಿ ಸುಮಾರು 75 ದೇಶಗಳ ಸುಮಾರು 1,000 ಪ್ರತಿನಿಧಿಗಳು ಭಾಗವಹಿಸಿದ್ದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಿಮ್ ಸ್ಟೆಕ್ (BIMSTEC) ವಿದೇಶಾಂಗ ಸಚಿವರು
July 12th, 01:52 pm
ಬಿಮ್ ಸ್ಟೆಕ್ (BIMSTEC) ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಒಟ್ಟಾಗಿ ಭೇಟಿ ಮಾಡಿದರು.ವಾರಾಣಸಿಯ ಬಿಎಚ್ ಯುನಲ್ಲಿ ನಡೆದ ಸನ್ಸದ್ ಸಂಸ್ಕೃತಿ ಪ್ರತಿಯೋಗಿತಾ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
February 23rd, 11:00 am
ಕುಟುಂಬದ ಎಲ್ಲ ಸದಸ್ಯರಿಗೆ ನನ್ನ ಶುಭಾಶಯಗಳು, ಎಲ್ಲ ವಿದ್ವಾಂಸರ ನಡುವೆ ವಿಶೇಷವಾಗಿ ಯುವ ವಿದ್ವಾಂಸರ ನಡುವೆ ಮಹಾಮಾನದ ಈ ಪವಿತ್ರ ಸಂದರ್ಭದಲ್ಲಿ ಜ್ಞಾನದ ನದಿಯಲ್ಲಿ ಮಿಂದೇಳುತ್ತಿರುವಂತಹ ಅನುಭವ ನನಗಾಗುತ್ತಿದೆ. ಒಂದು ಕಾಲದಲ್ಲಿ ವಿದ್ವತ್ತಿಗೆ ಹೆಸರಾದ ಕಾಶಿಯನ್ನು ನಮ್ಮ ಆಧುನಿಕ ಯುವಜನತೆ ಅದರೊಂದಿಗೆ ಬೆಸೆದುಕೊಂಡಿರುವ ಅಸ್ಮಿತೆಯನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆ. ಇದು ಹೃದಯಕ್ಕೆ ತೃಪ್ತಿ ತರುವುದಷ್ಟೇ ಅಲ್ಲದೆ, ಹೆಮ್ಮೆಯ ಭಾವನೆಯನ್ನು ಮೂಡಿಸುತ್ತದೆ ಮತ್ತು ಅಮೃತಕಾಲದ ಸಮಯದಲ್ಲಿ ದೇಶದ ಭವಿಷ್ಯವನ್ನು ಮತ್ತಷ್ಟು ಎತ್ತರಕ್ಕೆ ನಮ್ಮ ಯುವಜನತೆ ಕೊಂಡೊಯ್ಯಲಿದ್ದಾರೆ ಎಂಬ ನಂಬಿಕೆ ಪುನಃ ಖಚಿತವಾಗಿದೆ ಮತ್ತು ಕಾಶಿ ಜ್ಞಾನದ ರಾಜಧಾನಿಯಾಗಿದೆ. ಇಂದು ಕಾಶಿಯ ಸಾಮರ್ಥ್ಯವನ್ನು ಮತ್ತೊಮ್ಮೆ ನಿರೂಪಿಸಲಾಗುತ್ತಿದೆ. ಇದು ಇಡೀ ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ ಮತ್ತು ನನಗೆ ಕಾಶಿ ಸಂಸದ್ ಸಂಸ್ಕೃತ ಪ್ರತಿಯೋಗಿತ, ಕಾಶಿ ಸಂಸದ್ ಗ್ಯಾನ್ ಪ್ರತಿಯೋಗಿತ ಮತ್ತು ಕಾಶಿ ಸಂಸದ್ ಫೋಟೋಗ್ರಫಿ ಪ್ರತಿಯೋಗಿತ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸುವ ಅವಕಾಶ ನನಗೆ ದೊರೆತಿದೆ. ಎಲ್ಲ ವಿಜೇತರಿಗೆ ಅವರ ಪರಿಶ್ರಮಕ್ಕೆ, ಅವರ ಪ್ರತಿಭೆಗೆ ನಾನು ಅಭಿನಂದನೆಗಳನ್ನು ಹೇಳಲು ಬಯಸುತ್ತೇನೆ. ಜತೆಗೆ ಅವರ ಕುಟುಂಬದವರೂ ಹಾಗೂ ಅವರ ಮಾರ್ಗದರ್ಶಿಗಳನ್ನೂ ಸಹ ನಾನು ಅಭಿನಂದಿಸುತ್ತೇನೆ. ಸಾಧನೆಗೆ ಕೆಲವೇ ಮೆಟ್ಟಿಲುಗಳು ಹಿಂದುಳಿದಿರುವಂತಹವರು, 4ನೇ ಸ್ಥಾನ ತಲುಪಿದಂತವರನ್ನೂ ಸಹ ನಾನು ಅಭಿನಂದಿಸುತ್ತೇನೆ. ಜ್ಞಾನ ಪರಂಪರೆಯ ಕಾಶಿಯಲ್ಲಿ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಒಂದು ಹೆಮ್ಮೆಯ ವಿಷಯವಾಗಿದೆ. ಇಲ್ಲಿ ಯಾರೊಬ್ಬರೂ ಸೋತಿಲ್ಲ ಅಥವಾ ಹಿಂದೆ ಬಿದ್ದಿಲ್ಲ, ಈ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ನೀವು ಸಾಕಷ್ಟು ಕಲಿತಿದ್ದೀರಿ ಮತ್ತು ಹಲವು ಹೆಜ್ಜೆಗಳನ್ನು ಮುಂದಿಟ್ಟಿದ್ದೀರಿ. ಆದ್ದರಿಂದ ಈ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಕೂಡ ಅಭಿನಂದನೆಗಳಿಗೆ ಅರ್ಹರಾಗಿದ್ದೀರಿ.ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸ್ವತಂತ್ರ ಸಭಾಗರ್ ನಲ್ಲಿ ಸಂಸದ್ ಸಂಸ್ಕೃತ ಪ್ರತಿಯೋಗಿತಾ ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸಿದರು
February 23rd, 10:20 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸ್ವತಂತ್ರ ಸಭಾಗರ್ ನಲ್ಲಿ ಸಂಸದ್ ಸಂಸ್ಕೃತ ಪ್ರತಿಯೋಗಿತಾ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದರು. ಅವರು ಕಾಶಿ ಸಂಸದ್ ಪ್ರತಿಯೋಗಿತಾ ಕಿರುಪುಸ್ತಕ ಮತ್ತು ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಿದರು . ಪ್ರಧಾನಮಂತ್ರಿಯವರು ಕಾಶಿ ಸಂಸದ್ ಜ್ಞಾನ ಪ್ರತಿಯೋಗಿತಾ, ಕಾಶಿ ಸಂಸದ್ ಛಾಯಾಗ್ರಹಣ ಪ್ರತಿಯೋಗಿತಾ ಮತ್ತು ಕಾಶಿ ಸಂಸದ್ ಸಂಸ್ಕೃತ ಪ್ರತಿಯೋಗಿತಾ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು ಮತ್ತು ವಾರಣಾಸಿಯ ಸಂಸ್ಕೃತ ವಿದ್ಯಾರ್ಥಿಗಳಿಗೆ ಪುಸ್ತಕಗಳು, ಸಮವಸ್ತ್ರ, ಸಂಗೀತ ಉಪಕರಣಗಳು ಮತ್ತು ಮೆರಿಟ್ ವಿದ್ಯಾರ್ಥಿವೇತನವನ್ನು ವಿತರಿಸಿದರು. ಅವರು ಕಾಶಿ ಸಂಸದ್ ಛಾಯಾಗ್ರಹಣ ಪ್ರತಿಯೋಗಿತಾ ಗ್ಯಾಲರಿಗೆ ಭೇಟಿ ನೀಡಿದರು ಮತ್ತು ಸನ್ವರ್ತಿ ಕಾಶಿ ವಿಷಯದ ಕುರಿತು ತಮ್ಮ ತಮ್ಮ ಸ್ವೀಕರಿಸಲ್ಪಟ್ಟ ಛಾಯಾಚಿತ್ರಗಳ ಜೊತೆ ಇದ್ದ ಭಾಗವಹಿಸುವವರೊಂದಿಗೆ ಮಾತನಾಡಿದರು.ಸ್ವಾಮಿ ದಯಾನಂದ ಸರಸ್ವತಿ ಅವರ ಜನ್ಮದಿನ; ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಮಂತ್ರಿ ಭಾಷಣ
February 11th, 12:15 pm
ದೇಶವು ಸ್ವಾಮಿ ದಯಾನಂದ ಸರಸ್ವತಿ ಅವರ 200ನೇ ಜನ್ಮ ವಾರ್ಷಿಕೋತ್ಸವ ಆಚರಿಸುತ್ತಿದೆ. ಸ್ವಾಮಿಜಿ ಅವರ ಜನ್ಮಸ್ಥಳ ಟಂಕರಾವನ್ನು ಖುದ್ದಾಗಿ ತಲುಪುವುದು ನನ್ನ ಬಯಕೆಯಾಗಿತ್ತು, ಆದರೆ ಇದು ಸಾಧ್ಯವಾಗಲಿಲ್ಲ. ಅದೇನೇ ಇದ್ದರೂ, ನಾನು ಹೃದಯ ಮತ್ತು ಆತ್ಮದಿಂದ ನಿಮ್ಮೆಲ್ಲರ ನಡುವೆ ಇದ್ದೇನೆ. ಸ್ವಾಮೀಜಿ ಅವರ ಕೊಡುಗೆಗಳನ್ನು ಸ್ಮರಿಸಲು ಮತ್ತು ಅವರ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಲು ಆರ್ಯ ಸಮಾಜವು ಈ ಹಬ್ಬವನ್ನು ಆಚರಿಸುತ್ತಿರುವುದು ನನಗೆ ಸಂತಸ ತಂದಿದೆ. ಕಳೆದ ವರ್ಷ ಈ ಉತ್ಸವದ ಉದ್ಘಾಟನೆಯಲ್ಲಿ ಭಾಗವಹಿಸುವ ಅವಕಾಶ ನನಗೆ ಸಿಕ್ಕಿತ್ತು. ಅಂತಹ ಅಗಾಧವಾದ ಆಚರಣೆಯು ಅಪ್ರತಿಮ ಕೊಡುಗೆಯನ್ನು ಹೊಂದಿರುವ ಮಹಾನ್ ಆತ್ಮದೊಂದಿಗೆ ಸಂಬಂಧ ಹೊಂದುವುದು ಸಹಜ. ಈ ಘಟನೆಯು ನಮ್ಮ ಹೊಸ ಪೀಳಿಗೆಗೆ ಮಹರ್ಷಿ ದಯಾನಂದರ ಜೀವನವನ್ನು ಪರಿಚಯಿಸಲು ಪರಿಣಾಮಕಾರಿ ಮಾಧ್ಯಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ನಾನು ನಂಬುತ್ತೇನೆ.ಮಹರ್ಷಿ ದಯಾನಂದ ಸರಸ್ವತಿ ಅವರ 200ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
February 11th, 11:50 am
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತಿನ ಮೊರ್ಬಿಯಲ್ಲಿರುವ ಸ್ವಾಮಿ ದಯಾನಂದ ಅವರ ಜನ್ಮಸ್ಥಳ ಟಂಕರದಲ್ಲಿಂದು ಆಯೋಜಿಸಲಾದ ಸ್ವಾಮಿ ದಯಾನಂದ ಸರಸ್ವತಿ ಅವರ 200ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ವೀಡಿಯೊ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು.ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿಯವರ ಉತ್ತರದ ಕನ್ನಡ ಪಠ್ಯಾಂತರ
February 07th, 02:01 pm
ಈ 75ನೇ ಗಣರಾಜ್ಯೋತ್ಸವವು ಸ್ವತಃ ಒಂದು ಮಹತ್ವದ ಮೈಲುಗಲ್ಲಾಗಿದೆ. ಸಂವಿಧಾನದ ಪ್ರಯಾಣದ ಈ ನಿರ್ಣಾಯಕ ಹಂತದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳ ಭಾಷಣವು ಐತಿಹಾಸಿಕ ಮಹತ್ವವನ್ನು ಪಡೆದಿದೆ. ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಭಾರತದ ಆತ್ಮವಿಶ್ವಾಸದ ಬಗ್ಗೆ ಮಾತನಾಡಿದ್ದಾರೆ, ಭಾರತದ ಉಜ್ವಲ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮತ್ತು ಲಕ್ಷಾಂತರ ಭಾರತೀಯರ ಸಾಮರ್ಥ್ಯವನ್ನು ಸಂಸತ್ತಿನ ಮುಖಾಂತರ ಬಹಳ ಸಂಕ್ಷಿಪ್ತವಾಗಿ, ಆದರೆ ಭವ್ಯವಾದ ರೀತಿಯಲ್ಲಿ ರಾಷ್ಟ್ರದ ಮುಂದೆ ಪ್ರಸ್ತುತಪಡಿಸಿದ್ದಾರೆ. ಗೌರವಾನ್ವಿತ ರಾಷ್ಟ್ರಪತಿಗಳಿಗೆ ಈ ಸ್ಪೂರ್ತಿದಾಯಕ ಭಾಷಣಕ್ಕಾಗಿ, ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಿದ್ದಕ್ಕಾಗಿ ಹಾಗೂ ʻವಿಕಸಿತ ಭಾರತ'ದ ಕಡೆಗೆ ಭಾರತದ ಸಂಕಲ್ಪವನ್ನು ಸಶಕ್ತಗೊಳಿಸಿದ್ದಕ್ಕಾಗಿ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.