​​​​​​​ವಾರಾಣಸಿಯ ಬಿಎಚ್ ಯುನಲ್ಲಿ ನಡೆದ ಸನ್ಸದ್ ಸಂಸ್ಕೃತಿ ಪ್ರತಿಯೋಗಿತಾ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

February 23rd, 11:00 am

ಕುಟುಂಬದ ಎಲ್ಲ ಸದಸ್ಯರಿಗೆ ನನ್ನ ಶುಭಾಶಯಗಳು, ಎಲ್ಲ ವಿದ್ವಾಂಸರ ನಡುವೆ ವಿಶೇಷವಾಗಿ ಯುವ ವಿದ್ವಾಂಸರ ನಡುವೆ ಮಹಾಮಾನದ ಈ ಪವಿತ್ರ ಸಂದರ್ಭದಲ್ಲಿ ಜ್ಞಾನದ ನದಿಯಲ್ಲಿ ಮಿಂದೇಳುತ್ತಿರುವಂತಹ ಅನುಭವ ನನಗಾಗುತ್ತಿದೆ. ಒಂದು ಕಾಲದಲ್ಲಿ ವಿದ್ವತ್ತಿಗೆ ಹೆಸರಾದ ಕಾಶಿಯನ್ನು ನಮ್ಮ ಆಧುನಿಕ ಯುವಜನತೆ ಅದರೊಂದಿಗೆ ಬೆಸೆದುಕೊಂಡಿರುವ ಅಸ್ಮಿತೆಯನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆ. ಇದು ಹೃದಯಕ್ಕೆ ತೃಪ್ತಿ ತರುವುದಷ್ಟೇ ಅಲ್ಲದೆ, ಹೆಮ್ಮೆಯ ಭಾವನೆಯನ್ನು ಮೂಡಿಸುತ್ತದೆ ಮತ್ತು ಅಮೃತಕಾಲದ ಸಮಯದಲ್ಲಿ ದೇಶದ ಭವಿಷ್ಯವನ್ನು ಮತ್ತಷ್ಟು ಎತ್ತರಕ್ಕೆ ನಮ್ಮ ಯುವಜನತೆ ಕೊಂಡೊಯ್ಯಲಿದ್ದಾರೆ ಎಂಬ ನಂಬಿಕೆ ಪುನಃ ಖಚಿತವಾಗಿದೆ ಮತ್ತು ಕಾಶಿ ಜ್ಞಾನದ ರಾಜಧಾನಿಯಾಗಿದೆ. ಇಂದು ಕಾಶಿಯ ಸಾಮರ್ಥ್ಯವನ್ನು ಮತ್ತೊಮ್ಮೆ ನಿರೂಪಿಸಲಾಗುತ್ತಿದೆ. ಇದು ಇಡೀ ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ ಮತ್ತು ನನಗೆ ಕಾಶಿ ಸಂಸದ್ ಸಂಸ್ಕೃತ ಪ್ರತಿಯೋಗಿತ, ಕಾಶಿ ಸಂಸದ್ ಗ್ಯಾನ್ ಪ್ರತಿಯೋಗಿತ ಮತ್ತು ಕಾಶಿ ಸಂಸದ್ ಫೋಟೋಗ್ರಫಿ ಪ್ರತಿಯೋಗಿತ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸುವ ಅವಕಾಶ ನನಗೆ ದೊರೆತಿದೆ. ಎಲ್ಲ ವಿಜೇತರಿಗೆ ಅವರ ಪರಿಶ್ರಮಕ್ಕೆ, ಅವರ ಪ್ರತಿಭೆಗೆ ನಾನು ಅಭಿನಂದನೆಗಳನ್ನು ಹೇಳಲು ಬಯಸುತ್ತೇನೆ. ಜತೆಗೆ ಅವರ ಕುಟುಂಬದವರೂ ಹಾಗೂ ಅವರ ಮಾರ್ಗದರ್ಶಿಗಳನ್ನೂ ಸಹ ನಾನು ಅಭಿನಂದಿಸುತ್ತೇನೆ. ಸಾಧನೆಗೆ ಕೆಲವೇ ಮೆಟ್ಟಿಲುಗಳು ಹಿಂದುಳಿದಿರುವಂತಹವರು, 4ನೇ ಸ್ಥಾನ ತಲುಪಿದಂತವರನ್ನೂ ಸಹ ನಾನು ಅಭಿನಂದಿಸುತ್ತೇನೆ. ಜ್ಞಾನ ಪರಂಪರೆಯ ಕಾಶಿಯಲ್ಲಿ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಒಂದು ಹೆಮ್ಮೆಯ ವಿಷಯವಾಗಿದೆ. ಇಲ್ಲಿ ಯಾರೊಬ್ಬರೂ ಸೋತಿಲ್ಲ ಅಥವಾ ಹಿಂದೆ ಬಿದ್ದಿಲ್ಲ, ಈ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ನೀವು ಸಾಕಷ್ಟು ಕಲಿತಿದ್ದೀರಿ ಮತ್ತು ಹಲವು ಹೆಜ್ಜೆಗಳನ್ನು ಮುಂದಿಟ್ಟಿದ್ದೀರಿ. ಆದ್ದರಿಂದ ಈ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಕೂಡ ಅಭಿನಂದನೆಗಳಿಗೆ ಅರ್ಹರಾಗಿದ್ದೀರಿ.

ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸ್ವತಂತ್ರ ಸಭಾಗರ್ ನಲ್ಲಿ ಸಂಸದ್ ಸಂಸ್ಕೃತ ಪ್ರತಿಯೋಗಿತಾ ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸಿದರು

February 23rd, 10:20 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸ್ವತಂತ್ರ ಸಭಾಗರ್ ನಲ್ಲಿ ಸಂಸದ್ ಸಂಸ್ಕೃತ ಪ್ರತಿಯೋಗಿತಾ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದರು. ಅವರು ಕಾಶಿ ಸಂಸದ್ ಪ್ರತಿಯೋಗಿತಾ ಕಿರುಪುಸ್ತಕ ಮತ್ತು ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಿದರು . ಪ್ರಧಾನಮಂತ್ರಿಯವರು ಕಾಶಿ ಸಂಸದ್ ಜ್ಞಾನ ಪ್ರತಿಯೋಗಿತಾ, ಕಾಶಿ ಸಂಸದ್ ಛಾಯಾಗ್ರಹಣ ಪ್ರತಿಯೋಗಿತಾ ಮತ್ತು ಕಾಶಿ ಸಂಸದ್ ಸಂಸ್ಕೃತ ಪ್ರತಿಯೋಗಿತಾ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು ಮತ್ತು ವಾರಣಾಸಿಯ ಸಂಸ್ಕೃತ ವಿದ್ಯಾರ್ಥಿಗಳಿಗೆ ಪುಸ್ತಕಗಳು, ಸಮವಸ್ತ್ರ, ಸಂಗೀತ ಉಪಕರಣಗಳು ಮತ್ತು ಮೆರಿಟ್ ವಿದ್ಯಾರ್ಥಿವೇತನವನ್ನು ವಿತರಿಸಿದರು. ಅವರು ಕಾಶಿ ಸಂಸದ್ ಛಾಯಾಗ್ರಹಣ ಪ್ರತಿಯೋಗಿತಾ ಗ್ಯಾಲರಿಗೆ ಭೇಟಿ ನೀಡಿದರು ಮತ್ತು ಸನ್ವರ್ತಿ ಕಾಶಿ ವಿಷಯದ ಕುರಿತು ತಮ್ಮ ತಮ್ಮ ಸ್ವೀಕರಿಸಲ್ಪಟ್ಟ ಛಾಯಾಚಿತ್ರಗಳ ಜೊತೆ ಇದ್ದ ಭಾಗವಹಿಸುವವರೊಂದಿಗೆ ಮಾತನಾಡಿದರು.