ನವೆಂಬರ್ 26ರಂದು ʻಸಂವಿಧಾನ ದಿನʼ ಆಚರಣೆಯಲ್ಲಿ ಭಾಗವಹಿಸಲಿರುವ ಪ್ರಧಾನಿ

November 24th, 05:14 pm

1949ರಲ್ಲಿ ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ರಾಷ್ಟ್ರವು ನವೆಂಬರ್ 26ರಂದು ʻಸಂವಿಧಾನ ದಿನʼವನ್ನು ಆಚರಿಸಲಿದೆ. ಈ ಐತಿಹಾಸಿಕ ದಿನಾಂಕದ ಮಹತ್ವಕ್ಕೆ ಸೂಕ್ತ ಮಾನ್ಯತೆ ನೀಡುವ ಪ್ರಧಾನಮಂತ್ರಿಯವರ ದೂರದೃಷ್ಟಿ ಆಧರಿಸಿ, 2015ರಿಂದ ʻಸಂವಿಧಾನ ದಿನʼ ಆಚರಣೆ ಸಂಪ್ರದಾಯವನ್ನು ಪ್ರಾರಂಭಿಸಲಾಯಿತು. 2010ರಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಶ್ರೀ ನರೇಂದ್ರ ಮೋದಿ ಅವರು ಆಯೋಜಿಸಿದ್ದ ಸಂವಿಧಾನ ಗೌರವ ಯಾತ್ರೆಯಲ್ಲಿ ಈ ದೂರದೃಷ್ಟಿಯ ಮೂಲವನ್ನು ಕಾಣಬಹುದು.