ಭಾರತಕ್ಕೆ ತಾಂಜಾನಿಯಾ ಅಧ್ಯಕ್ಷರ ರಾಜ್ಯ ಭೇಟಿ ಸಂದರ್ಭದಲ್ಲಿ ಜಂಟಿ ಹೇಳಿಕೆ; ಭಾರತ ಮತ್ತು ತಾಂಜಾನಿಯಾ ನಡುವಿನ ಕಾರ್ಯತಂತ್ರ ಸಹಭಾಗಿತ್ವ ಪ್ರಾರಂಭ (2023 ಅಕ್ಟೋಬರ್ 8-10)

October 09th, 06:57 pm

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಆಹ್ವಾನದ ಮೇರೆಗೆ ತಾಂಜಾನಿಯಾ ಸಂಯುಕ್ತ ಗಣರಾಜ್ಯದ ಅಧ್ಯಕ್ಷೆ ಗೌರವಾನ್ವಿತ ಸಾಮಿಯಾ ಸುಲುಹು ಹಸನ್ ಅವರು 2023 ಅಕ್ಟೋಬರ್ 8ರಿಂದ 10ರ ವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದರು. ಅಧ್ಯಕ್ಷೆ ಸಾಮಿಯಾ ಸುಲುಹು ಹಸನ್ ಅವರು ವಿದೇಶಾಂಗ ವ್ಯವಹಾರಗಳ ಸಚಿವರು ಮತ್ತು ಪೂರ್ವ ಆಫ್ರಿಕಾದ ಸಹಕಾರ ಸಚಿವ ಗೌರವಾನ್ವಿತ ಜನವರಿ ಮಕಾಂಬಾ ಸೇರಿದಂತೆ ಉನ್ನತ ಮಟ್ಟದ ನಿಯೋಗದೊಂದಿಗೆ ಆಗಮಿಸಿದ್ದರು. ವಿವಿಧ ವಲಯಗಳ ಇತರ ಸದಸ್ಯರು, ಹಿರಿಯ ಸರ್ಕಾರಿ ಅಧಿಕಾರಿಗಳು ಹಾಗೂ ತಾಂಜಾನಿಯಾ ಉದ್ಯಮ ಸಮುದಾಯದ ಸದಸ್ಯರು ನಿಯೋಗದಲ್ಲಿದ್ದರು.

​​​​​​​ತಾಂಜಾನಿಯಾ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪತ್ರಿಕಾ ಹೇಳಿಕೆಯ ಅನುವಾದ

October 09th, 12:00 pm

ಮೊದಲನೆಯದಾಗಿ, ನಾನು ಅಧ್ಯಕ್ಷರಿಗೆ ಮತ್ತು ಅವರ ನಿಯೋಗಕ್ಕೆ ಆತ್ಮೀಯ ಸ್ವಾಗತವನ್ನು ಕೋರುತ್ತೇನೆ. ಇದು ತಾಂಜಾನಿಯಾದ ಅಧ್ಯಕ್ಷರಾಗಿ ಭಾರತಕ್ಕೆ ನೀಡಿದ ಮೊದಲ ಭೇಟಿಯಾಗಿದೆ. ಆದರೆ ಅವರು ಭಾರತ ಮತ್ತು ಅದರ ಜನರೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದಾರೆ.