ಮಾರ್ಚ್ 13 ರಂದು ಅನನುಕೂಲಕರ ವಿಭಾಗಗಳಿಗೆ ಸಾಲ ಬೆಂಬಲಕ್ಕಾಗಿ ರಾಷ್ಟ್ರವ್ಯಾಪಿ ವ್ಯಾಪ್ತಿಯನ್ನು ಗುರುತಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ

March 12th, 06:43 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಮಾರ್ಚ್ 13ರಂದು ಸಂಜೆ 4 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅನನುಕೂಲಕರ ವರ್ಗಗಳಿಗೆ ಸಾಲ ಬೆಂಬಲಕ್ಕಾಗಿ ರಾಷ್ಟ್ರವ್ಯಾಪಿ ವ್ಯಾಪ್ತಿಯನ್ನು ಗುರುತಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಮಂತ್ರಿಯವರು ಪ್ರಧಾನ ಮಂತ್ರಿ ಸಮಾಜಿಕ ಉತ್ಥಾನ್ ಎವಮ್ ರೋಜ್ ಗಾರ್ ಆಧಾರ್ ಜನಕಲ್ಯಾಣ (ಪಿಎಂ-ಸೂರಜ್) ರಾಷ್ಟ್ರೀಯ ಪೋರ್ಟಲ್ ಗೆ ಚಾಲನೆ ನೀಡಲಿದ್ದಾರೆ ಮತ್ತು ದೇಶದ ಅನನುಕೂಲಕರ ವರ್ಗಗಳ ಒಂದು ಲಕ್ಷ ಉದ್ಯಮಿಗಳಿಗೆ ಸಾಲ ಬೆಂಬಲವನ್ನು ಮಂಜೂರು ಮಾಡಲಿದ್ದಾರೆ. ಇದಲ್ಲದೆ, ಪರಿಶಿಷ್ಟ ಜಾತಿಗಳು, ಹಿಂದುಳಿದ ವರ್ಗಗಳು ಮತ್ತು ನೈರ್ಮಲ್ಯ ಕಾರ್ಮಿಕರು ಸೇರಿದಂತೆ ಅನನುಕೂಲಕರ ಗುಂಪುಗಳ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಾದ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.