ಆಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶ್ರೀ ಸಲಾಹುದ್ದೀನ್ ರಬ್ಬಾನಿ ಅವರಿಂದ ಪ್ರಧಾನಿ ಭೇಟಿ

September 11th, 06:50 pm

ಆಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶ್ರೀ ಸಲಾಹುದ್ದೀನ್ ರಬ್ಬಾನಿ ಅವರಿಂದು ಮಧ್ಯಾಹ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು.ಆಫ್ಘಾನಿಸ್ತಾನದೊಂದಿಗಿನ ಬಾಂಧವ್ಯಕ್ಕೆ ಭಾರತವು ಉನ್ನತ ಆದ್ಯತೆಯನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಸ್ಪಷ್ಟಪಡಿಸಿದರು. ಆಫ್ಘಾನಿಸ್ತಾನ ಮತ್ತು ಅದರ ಜನತೆಯ ಮೇಲೆ ಎರಗಿರುವ ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ಭಾರತದ ಬಲವಾದ ಬೆಂಬಲವನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು.