ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ʻಸಾಯಿ ಹಿರಾ ಗ್ಲೋಬಲ್ ಕನ್ವೆನ್ಷನ್ ಸೆಂಟರ್ʼ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ
July 04th, 11:00 am
ಪುಟ್ಟಪರ್ತಿಗೆ ಹಲವು ಬಾರಿ ಭೇಟಿ ನೀಡುವ ಸೌಭಾಗ್ಯ ನನಗೆ ದೊರೆತಿದೆ. ನಾನು ಮತ್ತೊಮ್ಮೆ ನಿಮ್ಮೆಲ್ಲರ ನಡುವೆ ಇರಲು ಬಯಸಿದ್ದೆ, ನಿಮ್ಮನ್ನು ಭೇಟಿಯಾಗಲು ಮತ್ತು ಇಂದು ಅಲ್ಲಿ ಉಪಸ್ಥಿತರಿರುವ ಮೂಲಕ ಈ ಕಾರ್ಯಕ್ರಮದ ಭಾಗವಾಗಲು ಬಯಸಿದ್ದೆ. ಆದರೆ, ನನ್ನ ಬಿಡುವುರಹಿತ ವೇಳಾಪಟ್ಟಿಯಿಂದಾಗಿ, ನನಗೆ ಇದು ಸಾಧ್ಯವಾಗಲಿಲ್ಲ. ನನ್ನನ್ನು ಆಹ್ವಾನಿಸುವಾಗ, ಭಾಯಿ ರತ್ನಾಕರ್ ಅವರು 'ನೀವು ಒಮ್ಮೆ ಬಂದು ಆಶೀರ್ವಾದ ನೀಡಬೇಕು' ಎಂದು ಹೇಳಿದರು. ರತ್ನಾಕರ್ ಅವರ ಹೇಳಿಕೆಯನ್ನು ಸರಿಪಡಿಸುವ ಅಗತ್ಯವಿದೆ ನಾನು ಭಾವಿಸುತ್ತೇನೆ. ನಾನು ಖಂಡಿತವಾಗಿಯೂ ಅಲ್ಲಿಗೆ ಬರುತ್ತೇನೆ, ಆದರೆ ಆಶೀರ್ವಾದ ನೀಡಲು ಅಲ್ಲ, ಬದಲಾಗಿ ಆಶೀರ್ವಾದ ಪಡೆಯಲು. ತಂತ್ರಜ್ಞಾನದ ಸಹಾಯದಿಂದ ನಾನು ಇಂದು ನಿಮ್ಮೆಲ್ಲರ ನಡುವೆ ಇದ್ದೇನೆ. ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ಜೊತೆ ಸಂಬಂಧ ಹೊಂದಿರುವ ಎಲ್ಲಾ ಸದಸ್ಯರು ಮತ್ತು ಸತ್ಯ ಸಾಯಿ ಬಾಬಾ ಅವರ ಎಲ್ಲಾ ಭಕ್ತರನ್ನು ಇಂದು ಈ ಕಾರ್ಯಕ್ರಮಕ್ಕಾಗಿ ನಾನು ಅಭಿನಂದಿಸುತ್ತೇನೆ. ಈ ಇಡೀ ಕಾರ್ಯಕ್ರಮದಲ್ಲಿ ಶ್ರೀ ಸತ್ಯ ಸಾಯಿ ಅವರ ಸ್ಫೂರ್ತಿ ಮತ್ತು ಆಶೀರ್ವಾದ ನಮ್ಮೊಂದಿಗಿದೆ. ಈ ಪವಿತ್ರ ಸಂದರ್ಭದಲ್ಲಿ ಶ್ರೀ ಸತ್ಯ ಸಾಯಿ ಬಾಬಾ ಅವರ ಧ್ಯೇಯದ ವಿಸ್ತರಣೆಯನ್ನು ನೋಡಿ ನನಗೆ ಸಂತಸವಾಗಿದೆ. ದೇಶವು ʻಶ್ರೀ ಹಿರಾ ಗ್ಲೋಬಲ್ ಕನ್ವೆನ್ಷನ್ ಸೆಂಟರ್ʼ ರೂಪದಲ್ಲಿ ಪ್ರಮುಖ ಚಿಂತಕರ ಚಾವಡಿಯನ್ನು ಪಡೆಯುತ್ತಿದೆ. ನಾನು ಈ ಸಮಾವೇಶ ಕೇಂದ್ರದ ಚಿತ್ರಗಳನ್ನು ಮತ್ತು ಅದರ ಇಣುಕುನೋಟಗಳನ್ನು ಈಗ ಪ್ರದರ್ಶಿಸಲಾದ ಕಿರುಚಿತ್ರದಲ್ಲಿ ನೋಡಿದ್ದೇನೆ. ಇದು ಆಧುನಿಕತೆಯ ಸ್ಪರ್ಶದೊಂದಿಗೆ ಆಧ್ಯಾತ್ಮಿಕ ಅನುಭವವನ್ನು ಒದಗಿಸುತ್ತದೆ. ಇದು ಸಾಂಸ್ಕೃತಿಕ ದೈವತ್ವದ ಜೊತೆಗೆ, ಬೌದ್ಧಿಕ ಭವ್ಯತೆಯನ್ನು ಒಳಗೊಂಡಿದೆ. ಈ ಕೇಂದ್ರವು ಆಧ್ಯಾತ್ಮಿಕ ಸಮ್ಮೇಳನಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಪ್ರಪಂಚದಾದ್ಯಂತದ ವಿವಿಧ ಕ್ಷೇತ್ರಗಳ ವಿದ್ವಾಂಸರು ಮತ್ತು ತಜ್ಞರು ಇಲ್ಲಿ ಒಟ್ಟುಗೂಡುತ್ತಾರೆ. ಈ ಕೇಂದ್ರವು ಯುವಕರಿಗೆ ಹೆಚ್ಚಿನ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ.ಆಂಧ್ರ ಪ್ರದೇಶದ ಪುಟ್ಟಪರ್ತಿಯಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಾಯಿ ಹಿರಾ ಗ್ಲೋಬಲ್ ಕನ್ವೆನ್ಷನ್ ಸೆಂಟರ್ ಉದ್ಘಾಟಿಸಿದ ಪ್ರಧಾನಿ
July 04th, 10:36 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಂಧ್ರ ಪ್ರದೇಶದ ಪುಟ್ಟಪರ್ತಿಯಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಶ್ರೀ ಸಾಯಿ ಹಿರಾ ಜಾಗತಿಕ ಸಮ್ಮೇಳನ ಸಭಾಂಗಣ (ಗ್ಲೋಬಲ್ ಕನ್ವೆನ್ಷನ್ ಸೆಂಟರ್) ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭವು ವಿಶ್ವದಾದ್ಯಂತದಿಂದ ಆಗಮಿಸಿರುವ ಪ್ರಮುಖ ಗಣ್ಯರು ಮತ್ತು ಭಕ್ತರ ಉಪಸ್ಥಿತಿಗೆ ಸಾಕ್ಷಿಯಾಯಿತು.ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಂದ ಜುಲೈ 4 ರಂದು ಪುಟ್ಟಪರ್ತಿಯಲ್ಲಿ ಸಾಯಿ ಹಿರಾ ಗ್ಲೋಬಲ್ ಕನ್ವೆನ್ಷನ್ ಸೆಂಟರ್ ಉದ್ಘಾಟನೆ
July 03rd, 06:29 pm
ಶ್ರೀ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ಪುಟ್ಟಪರ್ತಿಯ ಪ್ರಶಾಂತಿ ನಿಲಯದಲ್ಲಿ ಸಾಯಿ ಹಿರಾ ಗ್ಲೋಬಲ್ ಕನ್ವೆನ್ಷನ್ ಸೆಂಟರ್ ನಿರ್ಮಿಸಿದೆ. ಪ್ರಶಾಂತಿ ನಿಲಯವು ಶ್ರೀ ಸತ್ಯಸಾಯಿ ಬಾಬಾರವರ ಮುಖ್ಯ ಆಶ್ರಮವಾಗಿದೆ.