ಗುಜರಾತ್ ನಲ್ಲಿ ಕೊಚ್ರಾಬ್ ಆಶ್ರಮದ ಉದ್ಘಾಟನೆ ಮತ್ತು ಸಬರಮತಿ ಆಶ್ರಮ ಯೋಜನೆಯ ಮಾಸ್ಟರ್ ಪ್ಲಾನ್ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಅನುವಾದ

March 12th, 10:45 am

ಪೂಜ್ಯ ಬಾಪು ಅವರ ಸಬರಮತಿ ಆಶ್ರಮವು ನಿರಂತರವಾಗಿ ಸಾಟಿಯಿಲ್ಲದ ಶಕ್ತಿಯನ್ನು ಹೊರಸೂಸುತ್ತಿದೆ, ರೋಮಾಂಚಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇತರ ಅನೇಕರಂತೆ, ನಮಗೆ ಭೇಟಿ ನೀಡುವ ಸುಯೋಗ ಸಿಕ್ಕಾಗಲೆಲ್ಲಾ, ಬಾಪು ಅವರ ಶಾಶ್ವತ ಸ್ಫೂರ್ತಿಯನ್ನು ನಾವು ತೀವ್ರವಾಗಿ ಅನುಭವಿಸುತ್ತೇವೆ. ಸತ್ಯ, ಅಹಿಂಸೆ, ರಾಷ್ಟ್ರಭಕ್ತಿ ಮತ್ತು ದೀನದಲಿತರ ಸೇವೆಯ ಮನೋಭಾವವನ್ನು ಬಾಪೂ ಅವರು ಪೋಷಿಸಿದ ಮೌಲ್ಯಗಳನ್ನು ಸಬರಮತಿ ಆಶ್ರಮವು ಇನ್ನೂ ಎತ್ತಿಹಿಡಿದಿದೆ. ಇಂದು ನಾನು ಸಬರಮತಿ ಆಶ್ರಮದ ಪುನರಾಭಿವೃದ್ಧಿ ಮತ್ತು ವಿಸ್ತರಣೆಗೆ ಶಂಕುಸ್ಥಾಪನೆ ನೆರವೇರಿಸಿರುವುದು ನಿಜಕ್ಕೂ ಶುಭಕರವಾಗಿದೆ. ಇದಲ್ಲದೆ, ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ನಂತರ ಬಾಪು ಅವರು ಆರಂಭದಲ್ಲಿ ವಾಸಿಸುತ್ತಿದ್ದ ಕೊಚ್ರಾಬ್ ಆಶ್ರಮವನ್ನು ಸಹ ನವೀಕರಿಸಲಾಗಿದೆ ಮತ್ತು ಇಂದು ಅದರ ಉದ್ಘಾಟನೆಯನ್ನು ಘೋಷಿಸಲು ನನಗೆ ಸಂತೋಷವಾಗಿದೆ. ಗಾಂಧೀಜಿಯವರು ಮೊಟ್ಟಮೊದಲ ಬಾರಿಗೆ ಚರಕವನ್ನು ನೇಯುವಲ್ಲಿ ತೊಡಗಿಸಿಕೊಂಡರು ಮತ್ತು ಮರಗೆಲಸ ಕೆಲಸವನ್ನು ಕಲಿತದ್ದು ಕೊಚ್ರಾಬ್ ಆಶ್ರಮದಲ್ಲಿ. ಅಲ್ಲಿ ಎರಡು ವರ್ಷಗಳ ವಾಸ್ತವ್ಯದ ನಂತರ, ಗಾಂಧೀಜಿ ಸಬರಮತಿ ಆಶ್ರಮಕ್ಕೆ ತೆರಳಿದರು. ಇದರ ಪುನರ್ನಿರ್ಮಾಣದೊಂದಿಗೆ, ಗಾಂಧೀಜಿಯವರ ಆರಂಭಿಕ ದಿನಗಳ ನೆನಪುಗಳನ್ನು ಕೊಚ್ರಾಬ್ ಆಶ್ರಮದಲ್ಲಿ ಉತ್ತಮವಾಗಿ ಸಂರಕ್ಷಿಸಲಾಗುವುದು. ನಾನು ಪೂಜ್ಯ ಬಾಪೂ ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ. ಈ ಮಹತ್ವದ ಮತ್ತು ಸ್ಪೂರ್ತಿದಾಯಕ ಸ್ಥಳಗಳ ಅಭಿವೃದ್ಧಿಗಾಗಿ ನಾನು ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ.

ಗುಜರಾತ್ ನ ಸಬರಮತಿಯಲ್ಲಿ ಕೊಚ್ರಾಬ್ ಆಶ್ರಮ ಉದ್ಘಾಟಿಸಿದ ಪ್ರಧಾನಮಂತ್ರಿ

March 12th, 10:17 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ಕೊಚ್ರಾಬ್ ಆಶ್ರಮವನ್ನು ಉದ್ಘಾಟಿಸಿದರು ಮತ್ತು ಗಾಂಧಿ ಆಶ್ರಮ ಸ್ಮಾರಕದ ಮಾಸ್ಟರ್ ಪ್ಲಾನ್ ಗೆ ಚಾಲನೆ ನೀಡಿದರು. ಪ್ರಧಾನಮಂತ್ರಿಯವರು ಮಹಾತ್ಮಾ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು ಮತ್ತು ಹೃದಯ್ ಕುಂಜ್ ಗೆ ಭೇಟಿ ನೀಡಿದರು. ಅವರು ವಸ್ತುಪ್ರದರ್ಶನದ ನಡಿಗೆಯನ್ನು ತೆಗೆದುಕೊಂಡು ಸಸಿಯನ್ನು ನೆಟ್ಟರು.

Lokmanya Tilak was a great institution builder and a nurturer of traditions: PM Modi

August 01st, 12:00 pm

PM Modi was conferred the Lokmanya Tilak National Award in Pune. PM Modi described the honour bestowed on him by the place and institution directly linked with the Lokmanya as ‘unforgettable’. He dedicated the Lokmanya Tilak Award to the 140 crore citizens of India. He assured them that the government will leave no stone unturned to help them achieve their dreams and aspirations. The Prime Minister also donated the cash prize to the Namami Gange Project.

ಮಹಾರಾಷ್ಟ್ರದ ಪುಣೆಯಲ್ಲಿ ಪ್ರಧಾನಮಂತ್ರಿಯವರಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

August 01st, 11:45 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಇಂದು ಮಹಾರಾಷ್ಟ್ರದ ಪುಣೆಯಲ್ಲಿ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಲೋಕಮಾನ್ಯ ತಿಲಕರ ಪರಂಪರೆಯನ್ನು ಉತ್ತೇಜಿಸಲು ಹಾಗೂ ಅವರ ಸ್ಮರಣಾರ್ಥ 1983ರಲ್ಲಿ ತಿಲಕ್ ಸ್ಮಾರಕ ಮಂದಿರ ಟ್ರಸ್ಟ್ ಈ ಪ್ರಶಸ್ತಿಯನ್ನು ಸ್ಥಾಪಿಸಿತು. ನಗದು ಬಹುಮಾನವನ್ನು ನಮಾಮಿ ಗಂಗೆ ಯೋಜನೆಗೆ ಪ್ರಧಾನಮಂತ್ರಿ ಕೊಡುಗೆಯಾಗಿ ನೀಡಿದರು.

ನೀರನ್ನು ಉಳಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡಬೇಕು: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

March 27th, 11:00 am

ನನ್ನ ಪ್ರಿಯ ದೇಶಬಾಂಧವರೆ, ಕಳೆದ ವಾರ ನಾವು ಮಾಡಿದ ಸಾಧನೆ ನಮ್ಮನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಭಾರತ ಕಳೆದ ವಾರ 400 ಶತಕೋಟಿ ಡಾಲರ್ ಅಂದರೆ 30 ಲಕ್ಷಕೋಟಿ ರೂಪಾಯಿಗಳ ರಫ್ತಿನ ಗುರಿಯನ್ನು ಸಾಧಿಸಿದೆ ಎಂದು ನೀವು ಕೇಳಿರಬಹುದು. ಮೊದಲ ಬಾರಿಗೆ ಕೇಳಿದಾಗ ಅರ್ಥವ್ಯವಸ್ಥೆಗೆ ಸಂಬಂಧಿಸಿದ ವಿಷಯ ಅನ್ನಿಸಬಹುದು. ಆದರೆ ಇದು ಅರ್ಥವ್ಯವಸ್ಥೆಗೂ ಮೀರಿ ಭಾರತದ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಒಂದು ಕಾಲದಲ್ಲಿ ಭಾರತದ ರಫ್ತಿನ ಅಂಕಿ ಸಂಖ್ಯೆ ಕೆಲವೊಮ್ಮೆ 100 ಶತಕೋಟಿ ಇನ್ನು ಕೆಲವೊಮ್ಮೆ 150 ಶತಕೋಟಿ 200 ಶತಕೋಟಿವರೆಗೂ ತಲುಪುತ್ತಿತ್ತು. ಈಗ ಭಾರತ 400 ಶತಕೋಟಿ ಡಾಲರ್ ತಲುಪಿದೆ. ಇದರರ್ಥ ವಿಶ್ವಾದ್ಯಂತ ಭಾರತದಲ್ಲಿ ತಯಾರಿಸಲಾದ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮತ್ತೊಂದು ಅರ್ಥ ಸರಬರಾಜು ಸರಪಳಿ ದಿನೇ ದಿನೇ ಸಶಕ್ತಗೊಳ್ಳುತ್ತಿದೆ. ಇದರ ಹಿಂದೆ ಒಂದು ಪ್ರಮುಖ ಸಂದೇಶವೂ ನೀಡುತ್ತಿದೆ. ಕನಸುಗಳಿಗಿಂತ ಹಿರಿದಾದ ಸಂಕಲ್ಪವಿದ್ದಾಗ ದೇಶ ಬೃಹತ್ ಹೆಜ್ಜೆಯನ್ನು ಇಡುತ್ತದೆ. ಸಂಕಲ್ಪಗಳ ಪೂರೈಕೆಗೆ ಹಗಲಿರುಳು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಆ ಸಂಕಲ್ಪಗಳನ್ನು ಸಾಧಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಜೀವನದಲ್ಲೂ ಹೀಗೆಯೇ ಆಗುವುದನ್ನು ನೀವು ಕಾಣಬಹುದು. ಯಾರದೇ ಸಂಕಲ್ಪ, ಪ್ರಯತ್ನಗಳು ಅವರ ಕನಸುಗಳನ್ನು ಮೀರಿ ಬೆಳೆಯುತ್ತವೆಯೋ ಆಗ ಸಫಲತೆ ಆತನ ಬಳಿ ತಾನಾಗೇ ಅರಸಿ ಬರುತ್ತದೆ.

ಮನ್ ಕಿ ಬಾತ್' ಸಕಾರಾತ್ಮಕತೆ ಮತ್ತು ಸೂಕ್ಷ್ಮತೆಯನ್ನು ಹೊಂದಿದೆ. ಇದು ಸಾಮೂಹಿಕ ಪಾತ್ರವನ್ನು ಹೊಂದಿದೆ:ಪ್ರಧಾನಿ ಮೋದಿ

July 25th, 09:44 am

ಮನ್ ಕಿ ಬಾತ್ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಟೋಕಿಯೊ ಒಲಿಂಪಿಕ್ಸ್‌ಗಾಗಿ ಭಾರತದ ತುಕಡಿಯೊಂದಿಗೆ ನಡೆಸಿದ ಸಂವಾದವನ್ನು ನೆನಪಿಸಿಕೊಂಡರು ಮತ್ತು ದೇಶವಾಸಿಗಳು ಅವರನ್ನು ಬೆಂಬಲಿಸುವಂತೆ ಕರೆ ನೀಡಿದರು . ಅಮೃತ್ ಮಹೋತ್ಸವ ಕುರಿತು ಮಾತನಾಡಿದ ಪ್ರಧಾನಿ ಮೋದಿ ಅವರು ವಿಶೇಷ ವೆಬ್‌ಸೈಟ್ ಬಗ್ಗೆ ಪ್ರಸ್ತಾಪಿಸಿದರು, ಅಲ್ಲಿ ದೇಶಾದ್ಯಂತದ ನಾಗರಿಕರು ತಮ್ಮದೇ ಗೀತೆಯಲ್ಲಿ ರಾಷ್ಟ್ರಗೀತೆ ದಾಖಲಿಸಬಹುದು. ಅವರು ದೇಶದಾದ್ಯಂತ ಹಲವಾರು ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಂಡರು, ನೀರಿನ ಸಂರಕ್ಷಣೆಯ ಮಹತ್ವವನ್ನು ಮತ್ತು ಹೆಚ್ಚಿನದನ್ನು ಎತ್ತಿ ತೋರಿಸಿದರು!

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಮಹಾನ್ ವ್ಯಕ್ತಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಮಂತ್ರಿ

March 12th, 03:21 pm

ಸ್ವಾತಂತ್ರ್ಯ ಆಂದೋಲನದ ಎಲ್ಲಾ ಚಳವಳಿಗಳು, ದಂಗೆ, ಹೋರಾಟ ಮತ್ತು ಹೋರಾಟಗಾರರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದ ಯಶೋಗಾಥೆಯಲ್ಲಿ ಸರಿಯಾಗಿ ಗುರುತಿಸಲಾಗದ ಚಳವಳಿ, ಹೋರಾಟಗಳು ಮತ್ತು ವ್ಯಕ್ತಿತ್ವಗಳಿಗೆ ಅವರು ವಿಶೇಷ ಗೌರವ ಸಲ್ಲಿಸಿದರು. ಅಹಮದಾಬಾದ್ ನ ಸಾಬರಮತಿ ಆಶ್ರಮದಲ್ಲಿಂದು “ ಸ್ವಾತಂತ್ರ್ಯದ ಅಮೃತ ಮಹೋತ್ಸವ “ಭಾರತ@75” ಉದ್ಘಾಟಿಸಿ ಅವರು ಮಾತನಾಡಿದರು.

“ಅಜಾದಿ ಕಾ ಅಮೃತ್ ಮಹೋತ್ಸವ್” ಪೂರ್ವಭಾವೀ ಕಾರ್ಯಕ್ರಮಗಳ ಉದ್ಘಾಟನಾ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

March 12th, 10:31 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಹಮದಾಬಾದ್ ನ ಸಾಬರಮತಿ ಆಶ್ರಮದಿಂದ ಪಾದಯಾತ್ರೆಗೆ ಹಸಿರು ನಿಶಾನೆ ತೋರಿ, (ಭಾರತ@75), ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭದ ಪೂರ್ವಭಾವಿ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಅವರು ಭಾರತ@75 ಆಚರಣೆ ಕುರಿತ ವಿವಿಧ ಇತರ ಸಾಂಸ್ಕೃತಿಕ ಮತ್ತು ಡಿಜಿಟಲ್ ಉಪಕ್ರಮಗಳನ್ನೂ ಉದ್ಘಾಟಿಸಿದರು. ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್, ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ಶ್ರೀ ಪ್ರಹ್ಲಾದ ಸಿಂಗ್ ಪಟೇಲ್, ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಭಾರತ@75 “ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಪೂರ್ವಭಾವಿ ಚಟುವಟಿಕೆಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ

March 12th, 10:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಹಮದಾಬಾದ್ ನ ಸಾಬರಮತಿ ಆಶ್ರಮದಿಂದ ಪಾದಯಾತ್ರೆಗೆ ಹಸಿರು ನಿಶಾನೆ ತೋರಿ, (ಭಾರತ@75), ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭದ ಪೂರ್ವಭಾವಿ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಅವರು ಭಾರತ@75 ಆಚರಣೆ ಕುರಿತ ವಿವಿಧ ಇತರ ಸಾಂಸ್ಕೃತಿಕ ಮತ್ತು ಡಿಜಿಟಲ್ ಉಪಕ್ರಮಗಳನ್ನೂ ಉದ್ಘಾಟಿಸಿದರು. ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್, ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ಶ್ರೀ ಪ್ರಹ್ಲಾದ ಸಿಂಗ್ ಪಟೇಲ್, ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸಾಬರಮತಿ ಆಶ್ರಮದಿಂದ ಅಮೃತ ಮಹೋತ್ಸವ ಕಾರ್ಯಕ್ರಮ ಆರಂಭ: ಪ್ರಧಾನ ಮಂತ್ರಿ

March 12th, 10:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಹಮದಾಬಾದ್ ನ ಸಾಬರಮತಿ ಆಶ್ರಮದಿಂದ ಆರಂಭವಾಗುವ ಪಾದಯಾತ್ರೆ (ಸ್ವಾತಂತ್ರ್ಯ ನಡಿಗೆ) ಗೆ ಹಸಿರು ನಿಶಾನೆ ತೋರಲಿದ್ದಾರೆ.

ಮಾರ್ಚ್ 12 ರಂದು ʻಸ್ವಾತಂತ್ರ್ಯದ ಅಮೃತ ಮಹೋತ್ಸವʼಕ್ಕೆ (ಆಜಾದಿ ಕಾ ಅಮೃತ್ ಮಹೋತ್ಸವ್) ಸಂಬಂಧಿಸಿದ ಕಾರ್ಯಕ್ರಮಗಳನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ

March 11th, 03:30 pm

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2021ರ ಮಾರ್ಚ್ 12 ರಂದು ಅಹಮದಾಬಾದ್‌ನ ಸಾಬರಮತಿ ಆಶ್ರಮದಿಂದ 'ಪಾದಯಾತ್ರೆʼಗೆ (ಸ್ವಾತಂತ್ರ್ಯ ಜಾಥಾ) ಚಾಲನೆ ನೀಡಲಿದ್ದಾರ. ಜೊತೆಗೆ, 'ಸ್ವಾತಂತ್ರ್ಯದ ಅಮೃತ ಮಹೋತ್ಸವ'ದ (ಭಾರತ @ 75) ಪ್ರಾರಂಭೋತ್ಸವ ಕಾರ್ಯಕ್ರಮಗಳನ್ನು ಅವರು ಉದ್ಘಾಟನೆ ಮಾಡಲಿದ್ದಾರೆ. ʻಭಾರತ@75ʼ ಅಂಗವಾಗಿ ಇತರ ಸಾಂಸ್ಕೃತಿಕ ಮತ್ತು ಡಿಜಿಟಲ್ ಉಪಕ್ರಮಗಳಿಗೂ ಚಾಲನೆ ನೀಡಲಿರುವ ಪ್ರಧಾನಿ ಸಾಬರಮತಿ ಆಶ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬೆಳಗ್ಗೆ 10: 30 ಕ್ಕೆ ಪ್ರಾರಂಭವಾಗಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಹಾಯಕ ಸಚಿವ (ಸ್ವತಂತ್ರ್ಯ ನಿರ್ವಹಣೆ) ಶ್ರೀ ಪ್ರಹಲಾದ್‌ ಸಿಂಗ್ ಪಟೇಲ್ ಮತ್ತು ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಉಪಸ್ಥಿತರಿರಲಿದ್ದಾರೆ.

PM Modi and President Trump visit Sabarmati Ashram

February 24th, 12:46 pm

PM Narendra Modi, US President Donald Trump and the First Lady, Melania Trump visited the Sabarmati Ashram in Ahmedabad. They paid tribute to Mahatma Gandhi.

ಮಹಾತ್ಮ ಗಾಂಧಿ ಪರಂಪರೆಯನ್ನು ಗೌರವಿಸಿ

February 21st, 02:53 pm

ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಂದಿನಿಂದಲೇ, ಮಹಾತ್ಮ ಗಾಂಧಿಯವರ ಆದರ್ಶಗಳು, ತತ್ವಗಳು ಮತ್ತು ಬೋಧನೆಗಳು ಭಾರತ ಮತ್ತು ವಿದೇಶಗಳಲ್ಲಿ, ಅವರ ಭಾಷಣಗಳು ಮತ್ತು ಕಾರ್ಯಗಳ ಮೂಲಕ ಉನ್ನತ ಮಟ್ಟದಲ್ಲಿ ನಡೆಯುತ್ತವೆ ಎಂದು ಖಾತ್ರಿಪಡಿಸಿಕೊಳ್ಳಲು ನರೇಂದ್ರ ಮೋದಿ ಒಂದು ಉದ್ದೇಶವನ್ನು ಹೊಂದಿದ್ದಾರೆ.

Strong intent leads to good ideas, good ideas power innovation & innovation builds New India: PM Modi

January 17th, 03:15 pm

PM Narendra Modi and Israeli PM Benjamin Netanyahu today inaugurated iCreate - International Centre for Entrepreneurship and Technology at Ahmedabad, Gujarat. Encouraging the youngsters to innovate, the PM said that the Government was working to make the country’s system innovation-friendly. He said, “Intent leads to ideas, ideas have the power to drive innovation and innovation ultimately will lead to the creation of a New India.”

ಐ ಕ್ರಿಯೇಟ್ ಅನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ, ಇಸ್ರೇಲ್ ಪ್ರಧಾನಿ ನೆತನ್ಯಾಹು

January 17th, 03:14 pm

ಪ್ರಧಾನಮಂತ್ರಿ ಮೋದಿ ಮತ್ತು ಇಸ್ರೇಲ್ ಪ್ರಧಾನಮಂತ್ರಿ ನೆತನ್ಯಾಹು ಅವರಿಂದು ಅಹ್ಮದಾಬಾದ್ ನ ಹೊರ ವಲಯದಲ್ಲಿ ಸ್ಥಾಪನೆಯಾಗಿರುವ ಐ ಕ್ರಿಯೇಟ್ ಸೌಲಭ್ಯವನ್ನು ದೇಶಕ್ಕೆ ಸಮರ್ಪಿಸಿದರು. ಐ ಕ್ರಿಯೇಟ್, ಸೃಜನಶೀಲತೆ, ನಾವಿನ್ಯತೆ, ಎಂಜಿನಿಯರಿಂಗ್, ಉತ್ಪನ್ನ ವಿನ್ಯಾಸ ಮತ್ತು ಆಹಾರ ಭದ್ರತೆ, ಜಲ, ಸಂಪರ್ಕ, ಸೈಬರ್ ಸುರಕ್ಷತೆ, ಐಟಿ ಮತ್ತು ವಿದ್ಯುನ್ಮಾನ, ಇಂಧನ, ಜೈವಿಕ – ವೈದ್ಯಕೀಯ ಸಲಕರಣೆ ಮತ್ತು ಸಾಧನಗಳು ಇತ್ಯಾದಿ ಪ್ರಮುಖ ವಿಷಯಗಳ ನಿರ್ವಹಣೆಗೆ ಹೊರಹೊಮ್ಮುತ್ತಿರುವ ಹೊಸ ತಂತ್ರಜ್ಞಾನ ಬಳಕೆಯ ಉದ್ದೇಶದೊಂದಿಗೆ ರೂಪುಗೊಂಡ ಒಂದು ಸ್ವತಂತ್ರ ಕೇಂದ್ರವಾಗಿದೆ. ಐ ಕ್ರಿಯೇಟ್ ಭಾರತದಲ್ಲಿ ಗುಣಮಟ್ಟದ ಉದ್ಯಮಶೀಲತೆಯನ್ನು ಸೃಷ್ಟಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

ಪ್ರಧಾನಿ ಮೋದಿ, ಇಸ್ರೇಲಿ ಪ್ರಧಾನ ಮಂತ್ರಿ ನೇತನ್ಯಾಹು ಅವರನ್ನು ಗುಜರಾತ್ ಸ್ವಾಗತಿಸಿದೆ

January 17th, 01:22 pm

ಶುಕ್ರವಾರ ಪ್ರಧಾನಿ ಮೋದಿ, ಇಸ್ರೇಲಿ ಪ್ರಧಾನಮಂತ್ರಿ ನೇತನ್ಯಾಹು ಮತ್ತು ಅವರ ಹೆಂಡತಿಯನ್ನು ಗುಜರಾತ್ ಜನರು ಸ್ವಾಗತಿಸಿದರು.ಪ್ರಧಾನ ಮಂತ್ರಿ ಮೋದಿ ಮತ್ತು ಪ್ರಧಾನಮಂತ್ರಿ ನೇತನ್ಯಾಹು ಸಬರಮತಿ ಆಶ್ರಮಕ್ಕೆ ತೆರಳುತ್ತಿದ್ದಂತೆ, ನಾಯಕರ ನೋಟವನ್ನು ನೋಡಲು ಜನರು ಬೀದಿಗಳಲ್ಲಿ ಸೇರಿದ್ದರು . ಹಬ್ಬದ ಉತ್ಸಾಹ ನಗರದಲ್ಲಿ ಮತ್ತು ವಿವಿಧ ವೈವಿಧ್ಯತೆಗಳನ್ನು ಹೋಲುವ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಲಾಯಿತು .

ಸರ್ದಾರ್ ಪಟೇಲ್ ಪ್ರಯತ್ನದಿಂದಾಗಿ 'ಏಕ್ ಭಾರತ್, ಶ್ರೇಷ್ಠ ಭಾರತ್' ಕನಸನ್ನು ನಾವು ಅರಿತುಕೊಂಡಿದ್ದೇವೆ : ಪ್ರಧಾನಿ ಮೋದಿ

September 17th, 12:26 pm

ಗುಜರಾತ್ ನ ದಭೋಯಿ ನಲ್ಲಿ ರಾಷ್ಟ್ರೀಯ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಮ್ಯೂಸಿಯಂಗಾಗಿ ಮೋದಿ ಇಂದು ಶಂಕುಸ್ಥಾಪನೆ ಮಾಡಿದರು . ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಸಾಹತುಶಾಹಿಗಳಿಗೆ ವಿರುದ್ಧ ಬಲವಾದ ಹೋರಾಟವನ್ನು ನೀಡಿದ ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ನೆನಪಿಸುತ್ತೇವೆ ಎಂದು ಹೇಳಿದರು.

ಸರ್ದಾರ್ ಸರೋವರ ಜಲಾಶಯವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ; ರಾಷ್ಟ್ರೀಯ ಬುಡಕಟ್ಟು ಸ್ವಾತಂತ್ರ್ಯ ಯೋಧರ ವಸ್ತುಸಂಗ್ರಹಾಲಯದ ಶಂಕುಸ್ಥಾಪನೆ ಮಾಡಿದರು

September 17th, 12:25 pm

ದಬೋಯ್ ನಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ, ಪ್ರಧಾನಮಂತ್ರಿಯವರು ರಾಷ್ಟ್ರೀಯ ಬುಡಕಟ್ಟು ಸ್ವಾತಂತ್ರ್ಯ ಯೋಧರ ವಸ್ತುಸಂಗ್ರಹಾಲಯದ ಶಂಕುಸ್ಥಾಪನೆ ಅಂಗವಾಗಿ ಶಿಲಾನ್ಯಾಸ ನೆರವೇರಿಸಿದರು . ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಸಾಹತುಶಾಹಿಗಳಿಗೆ ಬಲವಾದ ಹೋರಾಟವನ್ನು ನೀಡಿದ ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುತ್ತೇವೆ ಎಂದು ಹೇಳಿದರು.

ಹೆಚ್ಚು ವೇಗದ ಸಂಪರ್ಕದೊಂದಿಗೆ ಹೆಚ್ಚು ಉತ್ಪಾದಕತೆ ನಮ್ಮ ಗುರಿ : ಪ್ರಧಾನಿ ಮೋದಿ

September 14th, 04:55 pm

ಮುಂಬೈ ಮತ್ತು ಅಹಮದಾಬಾದ್ ನಡುವೆ ಭಾರತದ ಪ್ರಥಮ ಹೈ ಸ್ಪೀಡ್ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಧಾನ ಮಂತ್ರಿ ಶಿಂಜೋ ಅಬೆ ಜಂಟಿಯಾಗಿ ಶಂಕುಸ್ಥಾಪನೆ ಮಾಡಿದರು . ಯೋಜನೆಗೆ ಜಪಾನ್ ಹೂಡಿಕೆ ಮಾಡುತ್ತಿದೆ ಮತ್ತು 'ಮೇಕ್ ಇನ್ ಇಂಡಿಯಾ', ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಪ್ರಮುಖ ಉತ್ತೇಜನವನ್ನು ನೀಡಲಿದೆ .

ಜಪಾನ್ ನ ಪ್ರಧಾನಿಯವರ ಭಾರತದ ಭೇಟಿ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಪತ್ರಿಕಾ ಹೇಳಿಕೆ

September 14th, 02:17 pm

ಪ್ರಧಾನಿ ಮೋದಿ ಮತ್ತು ಜಪಾನ್ ನ ಪ್ರಧಾನಿ ಅಬೆ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ , ಕ್ರೀಡೆ, ಶಿಕ್ಷಣ ಸೇರಿದಂತೆ ಹದಿನೈದು ಕ್ಷೇತ್ರದಲ್ಲಿ ಪ್ರಮುಖ ಒಪ್ಪಂದಗಳಿಗೆ ಸಹಿ ಮಾಡಲಾಯಿತು . ಜಪಾನಿ ಮಾರುಕಟ್ಟೆಯಿಂದ ಎಫ್ ಡಿಐ ಹೆಚ್ಚಿಸುವ ವಿಷಯವನ್ನು ಕೂಡ ಮೋದಿ ವ್ಯಕ್ತಪಡಿಸಿದ್ದಾರೆ.