ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್ ಸುರಂಗದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
January 13th, 12:30 pm
ಮೊದಲನೆಯದಾಗಿ, ದೇಶದ ಮತ್ತು ಜಮ್ಮು ಮತ್ತು ಕಾಶ್ಮೀರದ ಪ್ರಗತಿಗಾಗಿ ಅತ್ಯಂತ ಕಷ್ಟಕರ ಪರಿಸ್ಥಿತಿಗಳಲ್ಲಿ ಕೆಲಸ ಮಾಡಿದ, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಕಾರ್ಮಿಕರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಏಳು ಕಾರ್ಮಿಕ ಸ್ನೇಹಿತರು ಪ್ರಾಣ ಕಳೆದುಕೊಂಡರು, ಆದರೆ ಇದು ನಮ್ಮ ಸಂಕಲ್ಪದಿಂದ ನಮ್ಮನ್ನು ವಿಮುಖಗೊಳಿಸಲಿಲ್ಲ, ನನ್ನ ಕಾರ್ಮಿಕ ಸ್ನೇಹಿತರು ಧೃತಿಗೆಡಲಿಲ್ಲ. ಯಾವ ಕಾರ್ಮಿಕರೂ ಮನೆಗೆ ಹಿಂತಿರುಗಲಿಲ್ಲ, ಈ ನನ್ನ ಕಾರ್ಮಿಕ ಸಹೋದರರು ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಈ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಮತ್ತು ಇಂದು, ಮೊದಲನೆಯದಾಗಿ, ನಾವು ಕಳೆದುಕೊಂಡಿರುವ ನಮ್ಮ ಏಳು ಕಾರ್ಮಿಕರಿಗೆ ನಾನು ಶ್ರದ್ಧಾಂಜಲಿ ಅರ್ಪಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸೋನಾಮಾರ್ಗ್ ಸುರಂಗವನ್ನು ಉದ್ಘಾಟಿಸಿದರು
January 13th, 12:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಸೋನಾಮಾರ್ಗ್ ಸುರಂಗವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ ಅಭಿವೃದ್ಧಿಗಾಗಿ ಶ್ರಮಿಸಿದ ಮತ್ತು ತಮ್ಮ ಪ್ರಾಣವನ್ನು ಪಣಕ್ಕಿಟ್ಟ ಕಾರ್ಮಿಕರಿಗೆ ಧನ್ಯವಾದ ಅರ್ಪಿಸಿದರು. ಸವಾಲುಗಳ ಹೊರತಾಗಿಯೂ, ನಮ್ಮ ಸಂಕಲ್ಪವು ಚಂಚಲವಾಗಲಿಲ್ಲ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಕಾರ್ಮಿಕರ ಸಂಕಲ್ಪ ಮತ್ತು ಬದ್ಧತೆಗಾಗಿ ಮತ್ತು ಕೆಲಸವನ್ನು ಪೂರ್ಣಗೊಳಿಸಲು ಎಲ್ಲಾ ಅಡೆತಡೆಗಳನ್ನು ನಿವಾರಿಸಿದ್ದಕ್ಕಾಗಿ ಅವರು ಶ್ಲಾಘಿಸಿದರು. 7 ಕಾರ್ಮಿಕರ ನಿಧನಕ್ಕೆ ಅವರು ಸಂತಾಪ ಸೂಚಿಸಿದ್ದಾರೆ.ಉತ್ತರಾಖಂಡ ಸ್ಥಾಪನಾ ದಿವಸದಂದು ಪ್ರಧಾನಮಂತ್ರಿ ಅವರ ಹೇಳಿಕೆಗಳ ಕನ್ನಡ ಅನುವಾದ
November 09th, 11:00 am
ಇಂದು ಉತ್ತರಾಖಂಡದ ರಜತ ಮಹೋತ್ಸವ ವರ್ಷದ ಆರಂಭವನ್ನು ಸೂಚಿಸುತ್ತದೆ. ಅಂದರೆ, ಉತ್ತರಾಖಂಡವು ತನ್ನ 25ನೇ ವರ್ಷಕ್ಕೆ ಕಾಲಿಡುತ್ತಿದೆ. ನಾವು ಮುಂದೆ ನೋಡುತ್ತಿರುವಾಗ, ಉತ್ತರಾಖಂಡದ ಉಜ್ವಲ ಮತ್ತು ಸಮೃದ್ಧ ಭವಿಷ್ಯವನ್ನು ನಿರ್ಮಿಸಲು ಬದ್ಧರಾಗಿ ಮುಂದಿನ 25 ವರ್ಷಗಳ ಪ್ರಯಾಣವನ್ನು ನಾವು ಪ್ರಾರಂಭಿಸಬೇಕು. ಇದರಲ್ಲಿ ಒಂದು ಸಂತೋಷಕರ ಕಾಕತಾಳೀಯವಿದೆ: ನಮ್ಮ ಪ್ರಗತಿಯು ಭಾರತದ ಅಮೃತ ಕಾಲದೊಂದಿಗೆ ಹೊಂದಿಕೆಯಾಗುತ್ತದೆ, ಇದು ರಾಷ್ಟ್ರೀಯ ಬೆಳವಣಿಗೆಗೆ ಮೀಸಲಾಗಿರುವ ಗಮನಾರ್ಹ 25 ವರ್ಷಗಳ ಅವಧಿಯಾಗಿದೆ. ಈ ಸಂಗಮವು ಅಭಿವೃದ್ಧಿ ಹೊಂದಿದ ಭಾರತದ ಭಾಗವಾಗಿ ಅಭಿವೃದ್ಧಿ ಹೊಂದಿದ ಉತ್ತರಾಖಂಡದ ದೃಷ್ಟಿಕೋನವನ್ನು ಬಿಂಬಿಸುತ್ತದೆ, ಈ ಯುಗದಲ್ಲಿ ನಮ್ಮ ಹಂಚಿಕೆಯ ಆಕಾಂಕ್ಷೆಗಳು ಸಾಕಾರಗೊಳ್ಳುತ್ತಿವೆ. ಉತ್ತರಾಖಂಡದ ಜನರು ಮುಂಬರುವ 25 ವರ್ಷಗಳ ಗುರಿಗಳನ್ನು ಕೇಂದ್ರೀಕರಿಸಿ ರಾಜ್ಯದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ನನಗೆ ಸಂತೋಷವಾಗಿದೆ. ಈ ಕಾರ್ಯಕ್ರಮಗಳ ಮೂಲಕ ಉತ್ತರಾಖಂಡದ ಹೆಮ್ಮೆಯನ್ನು ಆಚರಿಸಲಾಗುವುದು ಮತ್ತು ಅಭಿವೃದ್ಧಿ ಹೊಂದಿದ ಉತ್ತರಾಖಂಡದ ದೃಷ್ಟಿಕೋನವು ಪ್ರತಿಯೊಬ್ಬ ನಿವಾಸಿಯಲ್ಲೂ ಪ್ರತಿಧ್ವನಿಸುತ್ತದೆ. ಈ ಮಹತ್ವದ ಸಂದರ್ಭದಲ್ಲಿ ಮತ್ತು ಈ ನಿರ್ಣಾಯಕ ನಿರ್ಣಯಕ್ಕಾಗಿ, ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಕೇವಲ ಎರಡು ದಿನಗಳ ಹಿಂದೆ, ಪ್ರವಾಸಿ ಉತ್ತರಾಖಂಡ್ ಸಮ್ಮೇಳನವನ್ನು ಸಹ ಯಶಸ್ವಿಯಾಗಿ ನಡೆಸಲಾಯಿತು. ನಮ್ಮ ವಲಸಿಗ ಉತ್ತರಾಖಂಡಿಗಳು ರಾಜ್ಯದ ಅಭಿವೃದ್ಧಿಯ ಪಯಣದಲ್ಲಿ ಮಹತ್ವದ ಪಾತ್ರ ವಹಿಸುವುದನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸ ನನಗಿದೆ.ದೇವಭೂಮಿ ಉತ್ತರಾಖಂಡದ ರಜತ ಮಹೋತ್ಸವ ಸಂದರ್ಭದಲ್ಲಿ ಉತ್ತರಾಖಂಡದ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ
November 09th, 10:40 am
ಉತ್ತರಾಖಂಡದ ಸಂಸ್ಥಾಪನಾ ದಿನದಂದು ಅಲ್ಲಿನ ಎಲ್ಲ ಜನತೆಗೆ ಶುಭ ಕೋರಿರುವ ಪ್ರಧಾನಮಂತ್ರಿಯವರು, ಇಂದಿನಿಂದ ಉತ್ತರಾಖಂಡ ರಾಜ್ಯ ರಚನೆಯ ರಜತ ಮಹೋತ್ಸವ ವರ್ಷ ಆರಂಭವಾಗುತ್ತಿರುವುದನ್ನು ಉಲ್ಲೇಖಿಸಿದರು. ಉತ್ತರಾಖಂಡವು ರಾಜ್ಯ ಸ್ಥಾಪನೆಯ 25ನೇ ವರ್ಷಕ್ಕೆ ಪ್ರವೇಶಿಸಿರುವುದನ್ನು ಉಲ್ಲೇಖಿಸಿದ ಶ್ರೀ ಮೋದಿ, ರಾಜ್ಯದ ಮುಂಬರುವ 25 ವರ್ಷಗಳ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುವಂತೆ ಜನರನ್ನು ಆಗ್ರಹಿಸಿದರು. ಉತ್ತರಾಖಂಡದ ಮುಂಬರುವ 25 ವರ್ಷಗಳ ಪ್ರಯಾಣವು ಭಾರತದ ಅಮೃತ್ ಕಾಲ್ ನ 25 ನೇ ವರ್ಷದ ಜೊತೆ ಸರಿಹೊಂದಿಕೆಯಾಗುವಂತಿದೆ. ಇದೊಂದು ಕಾಕತಾಳೀಯ ಎಂದ ಪ್ರಧಾನ ಮಂತ್ರಿ ಅವರು, ಇದು ವಿಕ್ಷಿತ್ ಭಾರತ್ ಗಾಗಿ ವಿಕ್ಷಿತ್ (ಅಭಿವೃದ್ಧಿ ಹೊಂದಿದ) ಉತ್ತರಾಖಂಡವನ್ನು ಸಂಕೇತಿಸುತ್ತದೆ ಎಂದರು. ಈ ಅವಧಿಯಲ್ಲಿ ವಿಕ್ಷಿತ್ ಭಾರತದ ಸಂಕಲ್ಪ ಈಡೇರುವುದಕ್ಕೆ ದೇಶ ಸಾಕ್ಷಿಯಾಗಲಿದೆ ಎಂದು ಶ್ರೀ ಮೋದಿ ಹೇಳಿದರು. ಮುಂಬರುವ 25 ವರ್ಷಗಳಲ್ಲಿ ಸಂಕಲ್ಪಗಳ ಜೊತೆಗೆ ಜನರು ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮಗಳ ಮೂಲಕ ಉತ್ತರಾಖಂಡದ ಹೆಮ್ಮೆಯನ್ನು ಹರಡಲಾಗುವುದು ಮತ್ತು ಅಭಿವೃದ್ಧಿ ಹೊಂದಿದ ಉತ್ತರಾಖಂಡದ ಗುರಿ ರಾಜ್ಯದ ಪ್ರತಿಯೊಬ್ಬ ನಿವಾಸಿಯನ್ನು ತಲುಪಲಿದೆ ಎಂದು ಅವರು ಹೇಳಿದರು. ಈ ಮಹತ್ವದ ಸಂದರ್ಭದಲ್ಲಿ ಮತ್ತು ಈ ಮಹತ್ವದ ನಿರ್ಣಯವನ್ನು ಅಂಗೀಕರಿಸಿದ್ದಕ್ಕಾಗಿ ಶ್ರೀ ಮೋದಿ ಅವರು ರಾಜ್ಯದ ಎಲ್ಲ ನಿವಾಸಿಗಳನ್ನು ಅಭಿನಂದಿಸಿದರು. ಇತ್ತೀಚೆಗೆ ಯಶಸ್ವಿಯಾಗಿ ಆಯೋಜಿಸಲಾದ 'ಪ್ರವಾಸಿ ಉತ್ತರಾಖಂಡ ಸಮ್ಮೇಳನ'ದ ಬಗ್ಗೆಯೂ ಅವರು ಗಮನಸೆಳೆದರು ಮತ್ತು ಉತ್ತರಾಖಂಡದ ಅಭಿವೃದ್ಧಿಯಲ್ಲಿ ಸಾಗರೋತ್ತರ ಉತ್ತರಾಖಂಡದ ಜನರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.ಕಾಂಗ್ರೆಸ್, ಎನ್‌ಸಿ ಮತ್ತು ಪಿಡಿಪಿಯ ಮೂರು ಕುಟುಂಬಗಳ ಆಡಳಿತದಿಂದ ಜಮ್ಮು ಮತ್ತು ಕಾಶ್ಮೀರದ ಜನರು ಬೇಸತ್ತಿದ್ದಾರೆ: ಪ್ರಧಾನಿ ಮೋದಿ
September 28th, 12:35 pm
ಜಮ್ಮುವಿನಲ್ಲಿ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಶಹೀದ್ ಸರ್ದಾರ್ ಭಗತ್ ಸಿಂಗ್ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು, ಲಕ್ಷಾಂತರ ಭಾರತೀಯ ಯುವಕರಿಗೆ ಸ್ಫೂರ್ತಿಯ ಮೂಲವಾಗಿ ಅವರನ್ನು ಗೌರವಿಸಿದರು. J&K ವಿಧಾನಸಭಾ ಚುನಾವಣೆಯ ಅಂತಿಮ ರ್ಯಾಲಿಯಲ್ಲಿ, PM ಮೋದಿ ಅವರು ಕಳೆದ ವಾರಗಳಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ತಮ್ಮ ಭೇಟಿಗಳನ್ನು ಪ್ರತಿಬಿಂಬಿಸಿದರು, ಅವರು ಹೋದಲ್ಲೆಲ್ಲಾ ಬಿಜೆಪಿಯ ಪ್ರಚಂಡ ಉತ್ಸಾಹವನ್ನು ಗಮನಿಸಿದರು.ಜಮ್ಮು ರ್ಯಾಲಿಯಲ್ಲಿ ಸಭಿಕರನ್ನು ಆಕರ್ಷಿಸಿದ ಪ್ರಧಾನಿ ಮೋದಿ
September 28th, 12:15 pm
ಜಮ್ಮುವಿನಲ್ಲಿ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಶಹೀದ್ ಸರ್ದಾರ್ ಭಗತ್ ಸಿಂಗ್ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು, ಲಕ್ಷಾಂತರ ಭಾರತೀಯ ಯುವಕರಿಗೆ ಸ್ಫೂರ್ತಿಯ ಮೂಲವಾಗಿ ಅವರನ್ನು ಗೌರವಿಸಿದರು. J&K ವಿಧಾನಸಭಾ ಚುನಾವಣೆಯ ಅಂತಿಮ ರ್ಯಾಲಿಯಲ್ಲಿ, PM ಮೋದಿ ಅವರು ಕಳೆದ ವಾರಗಳಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ತಮ್ಮ ಭೇಟಿಗಳನ್ನು ಪ್ರತಿಬಿಂಬಿಸಿದರು, ಅವರು ಹೋದಲ್ಲೆಲ್ಲಾ ಬಿಜೆಪಿಯ ಪ್ರಚಂಡ ಉತ್ಸಾಹವನ್ನು ಗಮನಿಸಿದರು.ಬಿಜೆಪಿ ಸರ್ಕಾರ ಉತ್ತರಾಖಂಡದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿದೆ, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ: ಋಷಿಕೇಶದಲ್ಲಿ ಪ್ರಧಾನಿ ಮೋದಿ
April 11th, 12:45 pm
2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಪ್ರಧಾನಿ ಆಗಮನದ ನಂತರ ಋಷಿಕೇಶ ರ‍್ಯಾಲಿಯಲ್ಲಿ ನೆರೆದಿದ್ದ ಎಲ್ಲ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದರು. ಗಂಗಾಮಾತೆಯ ಸಾಮೀಪ್ಯದಲ್ಲಿರುವ ಚಾರ್ ಧಾಮ್‌ನ ಹೆಬ್ಬಾಗಿಲು ಋಷಿಕೇಶದಲ್ಲಿ ನಮ್ಮನ್ನು ಆಶೀರ್ವದಿಸಲು ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ ಎಂದು ಪ್ರಧಾನಿ ಹೇಳಿದರು. ಉತ್ತರಾಖಂಡದ ದೃಷ್ಟಿಕೋನ ಮತ್ತು ಈಗಾಗಲೇ ಸಾಧಿಸಿರುವ ಮೈಲಿಗಲ್ಲುಗಳಿಗೆ ಸಂಬಂಧಿಸಿದ ಹಲವಾರು ಪ್ರಮುಖ ಅಂಶಗಳನ್ನು ಪ್ರಧಾನಮಂತ್ರಿ ಚರ್ಚಿಸಿದರು.ಉತ್ತರಾಖಂಡದ ಋಷಿಕೇಶದಲ್ಲಿ ಸಾರ್ವಜನಿಕ ಸಭೆಯಲ್ಲಿ ಉತ್ಸಾಹಿ ಜನರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
April 11th, 12:00 pm
2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಪ್ರಧಾನಿ ಆಗಮನದ ನಂತರ ಋಷಿಕೇಶ ರ‍್ಯಾಲಿಯಲ್ಲಿ ನೆರೆದಿದ್ದ ಎಲ್ಲ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದರು. ಗಂಗಾಮಾತೆಯ ಸಾಮೀಪ್ಯದಲ್ಲಿರುವ ಚಾರ್ ಧಾಮ್‌ನ ಹೆಬ್ಬಾಗಿಲು ಋಷಿಕೇಶದಲ್ಲಿ ನಮ್ಮನ್ನು ಆಶೀರ್ವದಿಸಲು ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ ಎಂದು ಪ್ರಧಾನಿ ಹೇಳಿದರು. ಉತ್ತರಾಖಂಡದ ದೃಷ್ಟಿಕೋನ ಮತ್ತು ಈಗಾಗಲೇ ಸಾಧಿಸಿರುವ ಮೈಲಿಗಲ್ಲುಗಳಿಗೆ ಸಂಬಂಧಿಸಿದ ಹಲವಾರು ಪ್ರಮುಖ ಅಂಶಗಳನ್ನು ಪ್ರಧಾನಮಂತ್ರಿ ಚರ್ಚಿಸಿದರು.ಗುಜರಾತ್ ನ ದ್ವಾರಕಾದಲ್ಲಿ ವಿವಿಧ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅವತರಣಿಕೆ
February 25th, 01:01 pm
ವೇದಿಕೆಯಲ್ಲಿ ಉಪಸ್ಥಿತರಿರುವ ಗುಜರಾತ್ ನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಮತ್ತು ಗುಜರಾತ್ ರಾಜ್ಯ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಶ್ರೀ ಸಿ.ಆರ್. ಪಾಟೀಲ್, ಇತರ ಗೌರವಾನ್ವಿತ ಗಣ್ಯರು ಮತ್ತು ಗುಜರಾತ್ ನ ನನ್ನ ಸಹೋದರ ಸಹೋದರಿಯರೇ,ಗುಜರಾತ್ ನ ದ್ವಾರಕಾದಲ್ಲಿ 4150 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದ ಪ್ರಧಾನಮಂತ್ರಿಗಳು
February 25th, 01:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ದ್ವಾರಕಾದಲ್ಲಿ 4,150 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಓಖಾ ಮುಖ್ಯ ಭೂಮಿ ಮತ್ತು ಬೇತ್ ದ್ವಾರಕಾವನ್ನು ಸಂಪರ್ಕಿಸುವ ಸುದರ್ಶನ ಸೇತು, ವಾಡಿನಾರ್ ಮತ್ತು ರಾಜ್‌ಕೋಟ್-ಓಖಾದಲ್ಲಿ ಪೈಪ್‌ಲೈನ್ ಯೋಜನೆ, ರಾಜ್‌ಕೋಟ್-ಜೇತಲ್ಸರ್-ಸೋಮನಾಥ್ ಮತ್ತು ಜೇತಲ್ಸರ್-ವನ್ಸ್‌ಜಾಲಿಯಾ ರೈಲು ವಿದ್ಯುದ್ದೀಕರಣ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ರಾಷ್ಟ್ರೀಯ ಹೆದ್ದಾರಿ 927ರ ಧೋರಾಜಿ-ಜಮಕಂದೋರ್ನಾ-ಕಲವಾಡ್ ವಿಭಾಗದ ಅಗಲೀಕರಣ, ಜಾಮ್‌ನಗರದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಜಾಮ್‌ನಗರದ ʻಸಿಕ್ಕಾ ಉಷ್ಣ ವಿದ್ಯುತ್ ಸ್ಥಾವರʼದಲ್ಲಿ ʻಫ್ಲೂ ಗ್ಯಾಸ್ ಡಿಸಲ್ಫರೈಸೇಶನ್ʼ(ಎಫ್‌ಜಿಡಿ) ವ್ಯವಸ್ಥೆಯ ಸ್ಥಾಪನೆಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು.ಡೆಹ್ರಾಡೂನ್‌ನಿಂದ ದೆಹಲಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ ಸಂದರ್ಭದಲ್ಲಿ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಭಾಷಣ
May 25th, 11:30 am
ಉತ್ತರಾಖಂಡದ ಗವರ್ನರ್ ಶ್ರೀ ಗುರ್ಮೀತ್ ಸಿಂಗ್ ಜಿ, ಉತ್ತರಾಖಂಡದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಉತ್ತರಾಖಂಡ ಸರ್ಕಾರದ ಸಚಿವರು, ವಿವಿಧ ಸಂಸದರು, ಶಾಸಕರು, ಮೇಯರ್‌ಗಳು, ಜಿಲ್ಲಾ ಪರಿಷತ್ ಸದಸ್ಯರು, ಇತರ ಗಣ್ಯರು ಮತ್ತು ಉತ್ತರಾಖಂಡದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ ! ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕಾಗಿ ಉತ್ತರಾಖಂಡದ ಎಲ್ಲ ಜನರಿಗೆ ಅಭಿನಂದನೆಗಳು.ಡೆಹ್ರಾಡೂನ್- ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಮಂತ್ರಿ
May 25th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಡೆಹ್ರಾಡೂನ್‌ನಿಂದ ದೆಹಲಿಗೆ ಸಂಚರಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ರೈಲಿಗೆ ಹಸಿರು ನಿಶಾನೆ ತೋರಿದರು. ಹೊಸದಾಗಿ ವಿದ್ಯುದ್ದೀಕರಿಸಿದ ರೈಲು ವಿಭಾಗಗಳನ್ನು ಅವರು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಉತ್ತರಾಖಂಡವನ್ನು ಶೇ.100 ರಷ್ಟು ವಿದ್ಯುದ್ದೀಕರಿಸಿದ ರಾಜ್ಯವೆಂದು ಘೋಷಿಸಿದರು.ಉತ್ತರ ಪ್ರದೇಶದ ಕಾಶಿಯಲ್ಲಿ ಕಾಶಿ ತೆಲುಗು ಸಂಗಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
April 29th, 07:46 pm
ನಿಮ್ಮೆಲ್ಲರಿಗೂ ಗಂಗಾ-ಪುಷ್ಕರಾಳು ಹಬ್ಬದ ಶುಭಾಶಯಗಳು! ನೀವೆಲ್ಲರೂ ಕಾಶಿಗೆ ಬಂದಿರುವುದರಿಂದ ಈ ಭೇಟಿಯಲ್ಲಿ ನೀವೆಲ್ಲರೂ ವೈಯಕ್ತಿಕವಾಗಿ ನನ್ನ ಅತಿಥಿಗಳು. ಅತಿಥಿಗಳು ದೇವರಿಗೆ ಸಮಾನ ಎಂದು ನಾವು ನಂಬುತ್ತೇವೆ. ಕೆಲವು ಕಾರ್ಯ ನಿಮಿತ್ತ ನಿಮ್ಮನ್ನು ಸ್ವಾಗತಿಸಲು ನಾನು ಅಲ್ಲಿ ಹಾಜರಾಗಲು ಸಾಧ್ಯವಾಗಲಿಲ್ಲ, ಆದರೆ ನಾನು ನಿಮ್ಮೆಲ್ಲರ ನಡುವೆ ಇರಬಹುದೆಂದು ಬಯಸುತ್ತೇನೆ. ಈ ಕಾರ್ಯಕ್ರಮಕ್ಕಾಗಿ ನಾನು ಕಾಶಿ-ತೆಲುಗು ಸಮಿತಿ ಮತ್ತು ನನ್ನ ಸಂಸದೀಯ ಸಹೋದ್ಯೋಗಿ ಜಿ.ವಿ.ಎಲ್. ನರಸಿಂಹರಾವ್ ಜಿ ಅವರನ್ನು ಅಭಿನಂದಿಸುತ್ತೇನೆ. ಕಾಶಿಯ ಘಟ್ಟಗಳಲ್ಲಿ ನಡೆಯುವ ಈ ಗಂಗಾ-ಪುಷ್ಕರಾಳು ಉತ್ಸವವು ಗಂಗಾ ಮತ್ತು ಗೋದಾವರಿ ಸಂಗಮದಂತೆ. ಇದು ಭಾರತದ ಪ್ರಾಚೀನ ನಾಗರಿಕತೆಗಳು, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳ ಸಂಗಮದ ಆಚರಣೆಯಾಗಿದೆ. ಕೆಲವು ತಿಂಗಳ ಹಿಂದೆ ಕಾಶಿ-ತಮಿಳು ಸಂಗಮವನ್ನು ಇದೇ ಕಾಶಿ ಭೂಮಿಯಲ್ಲಿ ಆಯೋಜಿಸಿದ್ದು ನಿಮಗೆ ನೆನಪಿರಬಹುದು. ಕೆಲವೇ ದಿನಗಳ ಹಿಂದೆ ಸೌರಾಷ್ಟ್ರ-ತಮಿಳು ಸಂಗಮದಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ಸಿಕ್ಕಿತ್ತು. ಈ ‘ಆಜಾದಿ ಕಾ ಅಮೃತ ಕಾಲ್’ ದೇಶದ ವೈವಿಧ್ಯತೆ ಮತ್ತು ವಿವಿಧ ವಿಚಾರಧಾರೆಗಳ ಸಂಗಮ ಎಂದು ಆಗ ಹೇಳಿದ್ದೆ. ಈ ವೈವಿಧ್ಯಗಳ ಸಂಗಮದಿಂದ ರಾಷ್ಟ್ರೀಯತೆಯ ಅಮೃತವು ಹೊರಹೊಮ್ಮುತ್ತಿದೆ, ಇದು ಭಾರತವನ್ನು ಅನಂತ ಭವಿಷ್ಯದವರೆಗೆ ಜೀವಂತವಾಗಿರಿಸುತ್ತದೆ.ಉತ್ತರ ಪ್ರದೇಶದ ಕಾಶಿಯಲ್ಲಿ ಕಾಶಿ ತೆಲುಗು ಸಂಗಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
April 29th, 07:45 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಸಂದೇಶದ ಮೂಲಕ ಉತ್ತರ ಪ್ರದೇಶದ ಕಾಶಿಯಲ್ಲಿ ಕಾಶಿ ತೆಲುಗು ಸಂಗಮ ಉದ್ದೇಶಿಸಿ ಭಾಷಣ ಮಾಡಿದರು.ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ
March 24th, 05:42 pm
ಇದು ಮಂಗಳಕರ ನವರಾತ್ರಿ ಅವಧಿಯಾಗಿದೆ. ಇಂದು ಚಂದ್ರಘಂಟಾ ಮಾತೆಯ ಆರಾಧನಾ ದಿನವಾಗಿದೆ. ಇಂದು ಕಾಶಿಯ ಈ ಶುಭ ಸಂದರ್ಭದಲ್ಲಿ ನಾನು ನಿಮ್ಮ ನಡುವೆ ಇರುವುದು ನನ್ನ ಸೌಭಾಗ್ಯ. ಚಂದ್ರಘಂಟಾ ಮಾತೆಯ ಆಶೀರ್ವಾದದಿಂದ, ಇಂದು ಬನಾರಸ್‌ನ ಸಂತೋಷ ಮತ್ತು ಸಮೃದ್ಧಿಗೆ ಮತ್ತೊಂದು ಅಧ್ಯಾಯ ಸೇರ್ಪಡೆಯಾಗುತ್ತಿದೆ. ಇಂದು ಇಲ್ಲಿ ಸಾರ್ವಜನಿಕ ಸಾರಿಗೆ ʻರೋಪ್ ವೇʼಗೆ ಶಂಕುಸ್ಥಾಪನೆ ಮಾಡಲಾಗಿದೆ. ಬನಾರಸ್‌ನ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದ ಸಾವಿರಾರು ಕೋಟಿ ರೂಪಾಯಿಗಳ ಇತರ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಅಥವಾ ಶಂಕುಸ್ಥಾಪನೆ ಮಾಡಲಾಗಿದೆ. ಇವುಗಳಲ್ಲಿ ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಗಂಗಾ ಮಾತೆಯ ಸ್ವಚ್ಛತೆ, ಪ್ರವಾಹ ನಿಯಂತ್ರಣ, ಪೊಲೀಸ್ ಘಟಕ, ಕ್ರೀಡಾ ಘಟಕ ಮುಂತಾದ ಅನೇಕ ಯೋಜನೆಗಳು ಸೇರಿವೆ. ಇಂದು, ʻಐಐಟಿ ಬಿಎಚ್‌ಯುʼನಲ್ಲಿ 'ಮೆಷಿನ್ ಟೂಲ್ಸ್ ಡಿಸೈನ್ ಕುರಿತಾದ ಉತ್ಕೃಷ್ಟತಾ ಕೇಂದ್ರʼಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಬನಾರಸ್ ಮತ್ತೊಂದು ವಿಶ್ವದರ್ಜೆಯ ಸಂಸ್ಥೆಯನ್ನು ಪಡೆಯಲಿದೆ. ಈ ಎಲ್ಲಾ ಯೋಜನೆಗಳಿಗಾಗಿ ಬನಾರಸ್ ಮತ್ತು ಪೂರ್ವಾಂಚಲದ ಜನರಿಗೆ ಅನೇಕ ಅಭಿನಂದನೆಗಳು.ಉತ್ತರ ಪ್ರದೇಶದ ವಾರಾಣಸಿಯಲ್ಲಿ ಪ್ರಧಾನಮಂತ್ರಿಯವರು 1780 ಕೋಟಿ ರೂ.ಗೂ ಹೆಚ್ಚು ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದರು
March 24th, 01:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರಾಣಸಿಯಲ್ಲಿ 1780 ಕೋಟಿ ರೂ.ಗೂ ಹೆಚ್ಚು ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಿದರು. ವಾರಾಣಸಿ ಕಂಟೋನ್ಮೆಂಟ್ ನಿಲ್ದಾಣದಿಂದ ಗೋಡೋಲಿಯಾವರೆಗಿನ ಪ್ರಯಾಣಿಕರ ರೋಪ್‌ವೇಗೆ ಶಂಕುಸ್ಥಾಪನೆ, ನಮಾಮಿ ಗಂಗಾ ಯೋಜನೆಯಡಿ ಭಗವಾನ್‌ಪುರದಲ್ಲಿ 55 ಎಂಎಲ್‌ಡಿ ಒಳಚರಂಡಿ ಸಂಸ್ಕರಣಾ ಘಟಕ, ಸೇವಾಪುರಿಯ ಇಸರ್ವಾರ್ ಗ್ರಾಮದಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಿಂದ ನಿರ್ಮಾಣಗೊಳ್ಳಲಿರುವ ಎಲ್‌ಪಿಜಿ ಬಾಟ್ಲಿಂಗ್ ಘಟಕ, ಸಿಗ್ರಾ ಸ್ಟೇಡಿಯಂನ 2 ಮತ್ತು 3 ನೇ ಹಂತಗಳ ಪುನರಾಭಿವೃದ್ಧಿ, ಭರ್ತರಾ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಬಟ್ಟೆ ಬದಲಾಯಿಸುವ ಕೊಠಡಿಗಳೊಂದಿಗೆ ತೇಲುವ ಜೆಟ್ಟಿ ಈ ಯೋಜನೆಗಳಲ್ಲಿ ಸೇರಿವೆ. ಪ್ರಧಾನಮಂತ್ರಿಯವರು ಜಲ ಜೀವನ್ ಮಿಷನ್ ಅಡಿಯಲ್ಲಿ 19 ಕುಡಿಯುವ ನೀರಿನ ಯೋಜನೆಗಳನ್ನು ಲೋಕಾರ್ಪಣೆ ಮಾಡಿದರು, ಇದು 63 ಗ್ರಾಮ ಪಂಚಾಯತ್‌ಗಳ 3 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಮಿಷನ್ ಅಡಿಯಲ್ಲಿ 59 ಕುಡಿಯುವ ನೀರಿನ ಯೋಜನೆಗಳ ಶಂಕುಸ್ಥಾಪನೆಯನ್ನೂ ಅವರು ನೆರವೇರಿಸಿದರು. ಹಣ್ಣುಗಳು ಮತ್ತು ತರಕಾರಿಗಳ ಶ್ರೇಣೀಕರಣ, ವಿಂಗಡಣೆ ಮತ್ತು ಸಂಸ್ಕರಣೆಗಾಗಿ ಕಾರ್ಖಿಯಾನ್‌ನಲ್ಲಿ ನಿರ್ಮಿಸಿರುವ ಸಮಗ್ರ ಪ್ಯಾಕ್ ಹೌಸ್ ಅನ್ನು ಅವರು ದೇಶಕ್ಕೆ ಸಮರ್ಪಿಸಿದರು. ವಾರಾಣಸಿ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ವಿವಿಧ ಯೋಜನೆಗಳನ್ನು ಪ್ರಧಾನಿ ಲೋಕಾರ್ಪಣೆ ಮಾಡಿದರು.ಸುಳ್ಳು ಭರವಸೆ ನೀಡುವುದು ಕಾಂಗ್ರೆಸ್‌ನ ಹಳೆಯ ತಂತ್ರ: ಹಿಮಾಚಲ ಪ್ರದೇಶದ ಸುಂದರ್ ನಗರದಲ್ಲಿ ಪ್ರಧಾನಿ ಮೋದಿ
November 05th, 05:00 pm
ಇಂದು ಪ್ರಧಾನಿ ನರೇಂದ್ರ ಮೋದಿ; ಹಿಮಾಚಲ ಪ್ರದೇಶದ ಸುಂದರ್ ನಗರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಂಡಿಯಿಂದಲೇ ಮೊದಲ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವುದಾಗಿ ಮಂಡಿ ಜನತೆಗೆ ನೀಡಿದ ಭರವಸೆಯನ್ನು ಎತ್ತಿ ಹಿಡಿಯುವ ಮೂಲಕ ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. ಹವಾಮಾನ ವೈಪರೀತ್ಯದಿಂದಾಗಿ ಈ ಹಿಂದೆ ಮಂಡಿಯ ಜನರನ್ನು ಖುದ್ದಾಗಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.ಪ್ರಧಾನಿ ಮೋದಿ ಅವರು ಹಿಮಾಚಲ ಪ್ರದೇಶದ ಸುಂದರ್ ನಗರ ಮತ್ತು ಸೋಲನ್‌ನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು
November 05th, 04:57 pm
ಇಂದು ಪ್ರಧಾನಿ ನರೇಂದ್ರ ಮೋದಿ; ಹಿಮಾಚಲ ಪ್ರದೇಶದ ಸುಂದರ್ ನಗರ ಮತ್ತು ಸೋಲನ್‌ನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಡಬಲ್ ಇಂಜಿನ್ ಸರ್ಕಾರದ ಅಡಿಯಲ್ಲಿ ಹಿಮಾಚಲ ಪ್ರದೇಶವು ಹೇಗೆ ಪ್ರಗತಿ ಸಾಧಿಸಿದೆ ಎಂಬುದರ ಕುರಿತು ಪ್ರಧಾನಿ ಮಾತನಾಡಿದರು.ಉತ್ತರಾಖಂಡದ ರುದ್ರಪುರದಲ್ಲಿ ವಿಜಯ್ ಸಂಕಲ್ಪ ರ್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು
February 12th, 01:31 pm
ತಮ್ಮ ಚುನಾವಣಾ ಪ್ರಚಾರದ ಅಬ್ಬರವನ್ನು ಮುಂದುವರೆಸಿದ ಪ್ರಧಾನಿ ಮೋದಿ ಉತ್ತರಾಖಂಡದ ರುದ್ರಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯದ ಜನರನ್ನು ಶ್ಲಾಘಿಸಿದ ಪ್ರಧಾನಿ ಮೋದಿ, “ಉತ್ತರಾಖಂಡ್ ದಾಖಲೆ ಸಮಯದಲ್ಲಿ 100% ಏಕ ಡೋಸ್ ಲಸಿಕೆಯನ್ನು ಸಾಧಿಸಿದೆ. ಈ ಅರಿವು ಮತ್ತು ನಿಷ್ಠೆಗಾಗಿ ನಾನು ಇಲ್ಲಿನ ಜನರನ್ನು ಅಭಿನಂದಿಸುತ್ತೇನೆ. ನಾನು ನಿಮ್ಮ ಯುವ ಮುಖ್ಯಮಂತ್ರಿ ಧಾಮಿ ಜಿ ಅವರನ್ನು ಅಭಿನಂದಿಸುತ್ತೇನೆ. ಗುಡ್ಡಗಾಡು ಪ್ರದೇಶಗಳಿಗೆ ಲಸಿಕೆ ಸಿಗುವುದಿಲ್ಲ ಎಂದು ಹೇಳುತ್ತಿದ್ದವರ ಬಾಯಿ ಮುಚ್ಚಿಸಲು ನಿಮ್ಮ ಮುಖ್ಯಮಂತ್ರಿ ಕೆಲಸ ಮಾಡಿದೆ.ಭಾರತವನ್ನು ರಾಷ್ಟ್ರವೆಂದು ಪರಿಗಣಿಸಲು ಕಾಂಗ್ರೆಸ್ ಸಿದ್ಧವಿಲ್ಲ: ಪ್ರಧಾನಿ ಮೋದಿ
February 12th, 01:30 pm
ತಮ್ಮ ಚುನಾವಣಾ ಪ್ರಚಾರದ ಅಬ್ಬರವನ್ನು ಮುಂದುವರೆಸಿದ ಪ್ರಧಾನಿ ಮೋದಿ ಉತ್ತರಾಖಂಡದ ರುದ್ರಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯದ ಜನರನ್ನು ಶ್ಲಾಘಿಸಿದ ಪ್ರಧಾನಿ ಮೋದಿ, “ಉತ್ತರಾಖಂಡ್ ದಾಖಲೆ ಸಮಯದಲ್ಲಿ 100% ಏಕ ಡೋಸ್ ಲಸಿಕೆಯನ್ನು ಸಾಧಿಸಿದೆ. ಈ ಅರಿವು ಮತ್ತು ನಿಷ್ಠೆಗಾಗಿ ನಾನು ಇಲ್ಲಿನ ಜನರನ್ನು ಅಭಿನಂದಿಸುತ್ತೇನೆ. ನಾನು ನಿಮ್ಮ ಯುವ ಮುಖ್ಯಮಂತ್ರಿ ಧಾಮಿ ಜಿ ಅವರನ್ನು ಅಭಿನಂದಿಸುತ್ತೇನೆ. ಗುಡ್ಡಗಾಡು ಪ್ರದೇಶಗಳಿಗೆ ಲಸಿಕೆ ಸಿಗುವುದಿಲ್ಲ ಎಂದು ಹೇಳುತ್ತಿದ್ದವರ ಬಾಯಿ ಮುಚ್ಚಿಸಲು ನಿಮ್ಮ ಮುಖ್ಯಮಂತ್ರಿ ಕೆಲಸ ಮಾಡಿದೆ.