ವಿಶ್ವ ಟಿ20 ಚಾಂಪಿಯನ್ಸ್ ಭಾರತ ಕ್ರಿಕೆಟ್ ತಂಡದೊಂದಿಗೆ ಪ್ರಧಾನ ಮಂತ್ರಿಯವರು ನಡೆಸಿದ ಸಂವಾದದ ಇಂಗ್ಲೀಷ್ ಅನುವಾದ

ವಿಶ್ವ ಟಿ20 ಚಾಂಪಿಯನ್ಸ್ ಭಾರತ ಕ್ರಿಕೆಟ್ ತಂಡದೊಂದಿಗೆ ಪ್ರಧಾನ ಮಂತ್ರಿಯವರು ನಡೆಸಿದ ಸಂವಾದದ ಇಂಗ್ಲೀಷ್ ಅನುವಾದ

July 05th, 04:00 pm

ಪ್ರಧಾನ ಮಂತ್ರಿ: ಸ್ನೇಹಿತರೇ, ಸ್ವಾಗತ! ನೀವು ದೇಶವನ್ನು ಉತ್ಸಾಹ ಮತ್ತು ಸಂಭ್ರಮದಿಂದ ಬೀಗುವಂತೆ ಮಾಡಿರುವುದನ್ನು ನೋಡಲು ನಮಗೆ ತುಂಬಾ ಸಂತೋಷವಾಗುತ್ತದೆ. ನೀವು ನಮ್ಮ ಎಲ್ಲಾ ದೇಶವಾಸಿಗಳ ಭರವಸೆ ಮತ್ತು ಆಶಯಗಳನ್ನು ಗೆದ್ದಿದ್ದೀರಿ. ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು! ಸಾಮಾನ್ಯವಾಗಿ, ನಾನು ಕಚೇರಿಯಲ್ಲಿ ತಡರಾತ್ರಿಯವರೆಗೆ ಕೆಲಸ ಮಾಡುತ್ತೇನೆ, ಆದರೆ ಈ ಬಾರಿ ಟಿವಿ ಆನ್ ಆಗಿತ್ತು ಮತ್ತು ನಾನು ಕಡತಗಳ ಮೇಲೆ ಗಮನಹರಿಸಲು ಸಾಧ್ಯವಾಗಲಿಲ್ಲ. ನೀವು ಅದ್ಭುತವಾದ ತಂಡ ಮನೋಭಾವ, ಪ್ರತಿಭೆ ಮತ್ತು ತಾಳ್ಮೆಯನ್ನು ಪ್ರದರ್ಶಿಸಿದ್ದೀರಿ. ನಿಮ್ಮ ತಾಳ್ಮೆಯನ್ನು ನಾನು ನೋಡಿದೆ; ಯಾವುದೇ ಆತುರ ಇರಲಿಲ್ಲ. ನಿಮ್ಮಲ್ಲಿ ಅಪಾರವಾದ ಆತ್ಮವಿಶ್ವಾಸ ತುಂಬಿತ್ತು. ಹಾಗಾಗಿ ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು.

ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಪ್ರಧಾನಮಂತ್ರಿ ಮೋದಿಯವರು  ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸಿದರು

ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಪ್ರಧಾನಮಂತ್ರಿ ಮೋದಿಯವರು ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸಿದರು

June 30th, 02:06 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೂರವಾಣಿ ಮೂಲಕ ಮಾತನಾಡಿ, ಐಸಿಸಿ ಪುರುಷರ ಟಿ20 ವಿಶ್ವಕಪ್ನಲ್ಲಿ ಜಯಗಳಿಸಿದ ಭಾರತೀಯ ಪುರುಷರ ಕ್ರಿಕೆಟ್ ತಂಡವನ್ನು ಅಭಿನಂದಿಸಿದರು. ಪಂದ್ಯಾವಳಿಯಲ್ಲಿ ತಂಡದ ಸದಸ್ಯರು ತೋರಿದ ಅನುಕರಣೀಯ ಕೌಶಲ್ಯ ಮತ್ತು ಸ್ಪೂರ್ತಿಯನ್ನು ಶ್ರೀ ಮೋದಿಯವರು ಶ್ಲಾಘಿಸಿದರು.