ಒಂಬತ್ತು ವರ್ಷ ತುಂಬಿದ ಸುಗಮ್ಯ ಭಾರತ ಅಭಿಯಾನವನ್ನು ಆಚರಿಸಿದ ಪ್ರಧಾನಮಂತ್ರಿ
December 03rd, 04:22 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಸುಗಮ್ಯ ಭಾರತ ಅಭಿಯಾನದ 9ನೇ ವರ್ಷವನ್ನು ಆಚರಿಸಿದರು. ದಿವ್ಯಾಂಗ ಸಹೋದರಿಯರು ಮತ್ತು ಸಹೋದರರಿಗೆ ಪ್ರವೇಶಾವಕಾಶ, ಸಮಾನತೆ ಮತ್ತು ಅವಕಾಶವನ್ನು ಮತ್ತಷ್ಟು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ದಿವ್ಯಾಂಗ ಸಹೋದರಿಯರು ಮತ್ತು ಸಹೋದರರ ಧೈರ್ಯ ಮತ್ತು ಸಾಧನೆಗಳನ್ನು ಶ್ಲಾಘಿಸಿದ ಶ್ರೀ ಮೋದಿಯವರು, ಇದು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ ಎಂದರು.