ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಅವರ ಜನ್ಮ ಜಯಂತಿಯಂದು ಪ್ರಧಾನಮಂತ್ರಿ ಅವರಿಂದ ಗೌರವ ನಮನ

November 19th, 08:41 am

ಝಾನ್ಸಿಯ ವೀರ ರಾಣಿ ಲಕ್ಷ್ಮೀಬಾಯಿ ಅವರು ಧೈರ್ಯ ಮತ್ತು ದೇಶಭಕ್ತಿಯ ನಿಜವಾದ ಸಾಕಾರಮೂರ್ತಿ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಇಂದು ಲಕ್ಷ್ಮೀ ಬಾಯಿ ಅವರ ಜಯಂತಿ ಅಂಗವಾಗಿ ಪ್ರಧಾನಮಂತ್ರಿ ಅವರು ಗೌರವ ನಮನ ಸಲ್ಲಿಸಿದರು.

ನವದೆಹಲಿಯ ಕಾರ್ಯಪ್ಪ ಪರೇಡ್ ಮೈದಾನದಲ್ಲಿ ಎನ್‌ಸಿಸಿ ಕೆಡೆಟ್ಸ್ ರಾಲಿ(Rally) ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

January 27th, 05:00 pm

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೆ, ಶ್ರೀ ರಾಜನಾಥ್ ಸಿಂಗ್ ಜಿ, ಶ್ರೀ ಅಜಯ್ ಭಟ್ ಜಿ, ಸಶಸ್ತ್ರ ಪಡೆಗಳ ಮುಖ್ಯಸ್ಥ(ಸಿಡಿಎಸ್)ರಾದ ಜನರಲ್ ಅನಿಲ್ ಚೌಹಾಣ್ ಜಿ, ಎಲ್ಲಾ 3 ಸೇನಾಪಡೆಗಳ ಮುಖ್ಯಸ್ಥರೆ, ರಕ್ಷಣಾ ಕಾರ್ಯದರ್ಶಿ, ಎನ್‌ಸಿಸಿ ಮಹಾನಿರ್ದೇಶಕರೆ, ಇಲ್ಲಿರುವ ಎಲ್ಲಾ ಗಣ್ಯ ಅತಿಥಿಗಳೆ ಮತ್ತು ಎನ್‌ಸಿಸಿಯ ನನ್ನ ಯುವ ಒಡನಾಡಿಗಳೆ!

ದೆಹಲಿಯ ಕಾರ್ಯಪ್ಪ ಪೆರೇಡ್ ಮೈದಾನದಲ್ಲಿ ʻಎನ್‌ಸಿಸಿ ಪಿಎಂ ರ‍್ಯಾಲಿ’ ಉದ್ದೇಶಿಸಿ ಪ್ರಧಾನಿ ಭಾಷಣ

January 27th, 04:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ಕಾರ್ಯಪ್ಪ ಪೆರೇಡ್ ಮೈದಾನದಲ್ಲಿ ವಾರ್ಷಿಕ ʻಎನ್‌ಸಿಸಿ ಪಿಎಂ ರ‍್ಯಾಲಿʼಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಶ್ರೀ ಮೋದಿ ಅವರು ಸಾಕ್ಷಿಯಾದರು. ಅತ್ಯುತ್ತಮ ಕೆಡೆಟ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಎನ್‌ಸಿಸಿ ಬಾಲಕಿಯರ ಮೆಗಾ ಸೈಕ್ಲೋಥಾನ್ ಮತ್ತು ಝಾನ್ಸಿಯಿಂದ ದೆಹಲಿಗೆ ʻನಾರಿಶಕ್ತಿ ವಂದನೆ ಓಟʼಕ್ಕೂ (ಎನ್ಎಸ್‌ವಿಆರ್‌) ಅವರು ಹಸಿರು ನಿಶಾನೆ ತೋರಿದರು.

ರಾಣಿ ಲಕ್ಷ್ಮೀಬಾಯಿ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ

November 19th, 11:11 am

ಭಾರತೀಯ ಮಹಿಳಾ ಶಕ್ತಿಯ ಶೌರ್ಯದ ಪ್ರತೀಕ ರಾಣಿ ಲಕ್ಷ್ಮೀಬಾಯಿ ಅವರ ಜನ್ಮ ವಾರ್ಷಿಕ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಣಿ ಲಕ್ಷ್ಮೀಬಾಯಿ ಅವರಿಗೆ ಹೃತ್ಪೂರ್ವಕ ಗೌರವ ನಮನಗಳನ್ನು ಸಲ್ಲಿಸಿದರು.

ಸ್ವಾತಂತ್ರ್ಯ ಹೋರಾಟಗಾರ್ತಿ‌ ಅಪ್ರತಿಮ ವೀರಮಹಿಳೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಜಯಂತಿಯಂದು ಪ್ರಧಾನಿ ಅವರನ್ನು ಸ್ಮರಿಸಿದರು.

November 19th, 08:58 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಣಿ ಲಕ್ಷ್ಮೀಬಾಯಿ ಅವರ ಜಯಂತಿಯಂದು ಅವರನ್ನು ಸ್ಮರಿಸಿದ್ದಾರೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅಂತಹ ವೀರಮಹಿಳೆಯ ಧೈರ್ಯ ಮತ್ತು ನಮ್ಮ ದೇಶಕ್ಕೆ ನೀಡಿದ ಸ್ಮರಣೀಯ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

76ನೇ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯ ಮೇಲಿನಿಂದ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ

August 15th, 02:30 pm

76ನೇ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯ ಮೇಲಿನಿಂದ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

August 15th, 07:01 am

75ನೇ ಸ್ವಾತಂತ್ರ್ಯ ವರ್ಷ ಪೂರ್ಣವಾಗಿರುವ ಮಹತ್ವದ ಸಂದರ್ಭದಲ್ಲಿ ನನ್ನ ಪ್ರೀತಿಯ ದೇಶವಾಸಿಗಳಿಗೆ ಶುಭಾಶಯಗಳು. ಎಲ್ಲರಿಗೂ ತುಂಬಾ ತುಂಬಾ ಅಭಿನಂದನೆಗಳು!. ಕೇವಲ ಹಿಂದೂಸ್ಥಾನದ ಮೂಲೆ ಮೂಲೆಯಲ್ಲಿ ಅಷ್ಟೇ ಅಲ್ಲ, ವಿಶ್ವದ ವಿವಿಧ ಮೂಲೆಗಳಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಭಾರತೀಯರು ಅಥವಾ ಭಾರತದ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿರುವವರು ಮೂಲಕ ವಿಶ್ವದ ಎಲ್ಲ ಮೂಲೆಯಲ್ಲೂ ನಮ್ಮ ತ್ರಿವರ್ಣಧ್ವಜ ಗೌರವ, ಪ್ರತಿಷ್ಠೆಗಳಿಂದ ರಾರಾಜಿಸುತ್ತಿದೆ. ನಾನು ವಿಶ್ವಾದ್ಯಂತ ಭಾರತ ಪ್ರೇಮಿಗಳಿಗೆ, ಭಾರತೀಯರಿಗೆ ಆಜಾದಿ ಕಾ ಅಮೃತ ಮಹೋತ್ಸವದ ಶುಭಾಶಯ ಸಲ್ಲಿಸುತ್ತೇನೆ. ಈ ದಿನ ಐತಿಹಾಸಿಕ ದಿನವಾಗಿದೆ. ಪುಣ್ಯದ ಹೆಜ್ಜೆ, ಒಂದು ಹೊಸ ದಾರಿ, ಹೊಸ ಸಂಕಲ್ಪ, ಹೊಸ ಸಾಮರ್ಥ್ಯದೊಂದಿಗೆ ಮುಂದಡಿ ಇಡುವ ಶುಭ ಸಂದರ್ಭವಾಗಿದೆ.

ಭಾರತವು 76 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ

August 15th, 07:00 am

ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಶಕ್ತಿ ಅದರ ವೈವಿಧ್ಯತೆಯಲ್ಲಿದೆ ಎಂದು ಒತ್ತಿ ಹೇಳಿದರು. ಅವರು ದೇಶವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಕರೆದರು ಮತ್ತು 'ಅಮೃತ್ ಕಾಲ'ದ 'ಪಂಚ ಪಣ'ವನ್ನು ಎಣಿಸಿದರು - ಅಭಿವೃದ್ಧಿ ಹೊಂದಿದ ಭಾರತದ ಗುರಿ, ವಸಾಹತುಶಾಹಿ ಮನಸ್ಥಿತಿಯ ಯಾವುದೇ ಕುರುಹುಗಳನ್ನು ತೊಡೆದುಹಾಕಲು, ನಮ್ಮ ಸಂಪ್ರದಾಯ, ಏಕತೆ ಮತ್ತು ಕರ್ತವ್ಯ ಪ್ರಜ್ಞೆಯಲ್ಲಿ ಹೆಮ್ಮೆ ಪಡುತ್ತಾರೆ.

ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ಭಾಗಿಯಾದ ಭಾರತೀಯ ಆಟಗಾರರೊಂದಿಗೆ ಪ್ರಧಾನಮಂತ್ರಿಯವರ ಸಂವಾದದ ಇಂಗ್ಲಿಷ್ ಅವತರಣಿಕೆ

August 13th, 11:31 am

ಎಲ್ಲರೊಂದಿಗೂ ಮಾತನಾಡುವುದು ನನಗೆ ತುಂಬಾ ಆಸಕ್ತಿದಾಯಕವಾದರೂ, ಪ್ರತಿಯೊಬ್ಬರ ಜೊತೆ ಮಾತನಾಡಲು ಸಾಧ್ಯವಾಗದು. ಆದರೆ ನಿಮ್ಮಲ್ಲಿ ಅನೇಕರೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಪರ್ಕದಲ್ಲಿರಲು ನನಗೆ ಅವಕಾಶ ದೊರೆಕಿತ್ತು ಮತ್ತು ಬೇರೆ ಬೇರೆ ಸಂದರ್ಭಗಳಲ್ಲಿ ನಿಮ್ಮೊಂದಿಗೆ ಸಂವಾದ ನಡೆಸುವ ಅವಕಾಶವೂ ನನಗೆ ದೊರೆತಿದೆ. ಆದರೆ ಕುಟುಂಬದ ಸದಸ್ಯನಾಗಿ ನನ್ನ ನಿವಾಸಕ್ಕೆ ಬರಲು ನೀವು ಸಮಯ ಮಾಡಿಕೊಂಡುದಕ್ಕಾಗಿ ನನಗೆ ಬಹಳ ಸಂತೋಷವಾಗಿದೆ. ನಿಮ್ಮ ಸಾಧನೆಗಳ ಯಶಸ್ಸಿನ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವುದರಿಂದ, ನಾನು ಸಹ ನಿಮ್ಮೊಂದಿಗೆ ಸಂಬಂಧ ಹೊಂದಲು ಹೆಮ್ಮೆಪಡುತ್ತೇನೆ. ನಿಮಗೆಲ್ಲರಿಗೂ ಇಲ್ಲಿ ಸ್ವಾಗತ.

2022ರ ಕಾಮನ್ ವೆಲ್ತ್ ಗೇಮ್ಸ್ ನ ಭಾರತೀಯ ತಂಡವನ್ನು ಸನ್ಮಾನಿಸಿದ ಪ್ರಧಾನಮಂತ್ರಿ

August 13th, 11:30 am

2022ರ ಕಾಮನ್ ವೆಲ್ತ್ ಗೇಮ್ಸ್ (ಸಿಡಬ್ಲ್ಯೂಜಿ) ನಲ್ಲಿ ಪಾಲ್ಗೊಂಡ ಭಾರತೀಯ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸದಿಲ್ಲಿಯಲ್ಲಿ ಸನ್ಮಾನಿಸಿದರು. ಈ ಸನ್ಮಾನ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳು ಮತ್ತು ಅವರ ತರಬೇತುದಾರರು ಭಾಗವಹಿಸಿದ್ದರು. ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಮತ್ತು ಮಾಹಿತಿ ಹಾಗು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವ ಶ್ರೀ ನಿಸಿತ್ ಪ್ರಾಮಾಣಿಕ್ ಉಪಸ್ಥಿತರಿದ್ದರು.

ಇದು ಭಾರತದ ಬೆಳವಣಿಗೆಯ ಕಥೆಯ ತಿರುವು: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ

November 28th, 11:30 am

ಇಂದು ಮತ್ತೊಮ್ಮೆ ನಾವು ಮನದ ಮಾತಿನಲ್ಲಿ ಒಗ್ಗೂಡುತ್ತಿದ್ದೇವೆ. 2 ದಿನಗಳ ನಂತರ ಡಿಸೆಂಬರ್ ತಿಂಗಳು ಆರಂಭವಾಗುತ್ತಿದೆ. ಡಿಸೆಂಬರ್ ಬರುತ್ತಿದ್ದಂತೆ ಮಾನಸಿಕವಾಗಿ ನಮಗೆ ಅಂತೂ ವರ್ಷ ಮುಗಿಯಿತು ಎಂದೆನ್ನಿಸುತ್ತದೆ. ಇದು ವರ್ಷದ ಕೊನೆಯ ಮಾಸವಾಗಿದೆ. ನವ ವರ್ಷಕ್ಕೆ ಹೊಸ ಯೋಜನೆಗಳನ್ನು ಹೆಣೆಯಲಾರಂಭಿಸುತ್ತೇವೆ. ಇದೇ ತಿಂಗಳು ನೌಕಾಪಡೆ ದಿನ ಮತ್ತು ಸಶಸ್ತ್ರ ಪಡೆಗಳ ಧ್ವಜ ದಿನವನ್ನೂ ದೇಶ ಆಚರಿಸುತ್ತದೆ. ಡಿಸೆಂಬರ್ 16 ರಂದು 1971 ನೇ ವರ್ಷದಲ್ಲಿ ನಡೆದ ಯುದ್ಧದ ಸ್ವರ್ಣ ಜಯಂತಿಯನ್ನು ದೇಶ ಆಚರಿಸುತ್ತಿದೆ ಎಂದು ನಮಗೆಲ್ಲ ತಿಳಿದಿದೆ. ನಾನು ಈ ಎಲ್ಲ ಸಂದರ್ಭಗಳಲ್ಲಿ ದೇಶದ ಸುರಕ್ಷತಾ ಬಲವನ್ನು ಸ್ಮರಿಸುತ್ತೇನೆ. ನಮ್ಮ ಯೋಧರನ್ನು ಸ್ಮರಿಸುತ್ತೇನೆ ಹಾಗೂ ವಿಶೇಷವಾಗಿ ಇಂಥ ಯೋಧರಿಗೆ ಜನ್ಮ ನೀಡಿದ ವೀರ ಮಾತೆಯರನ್ನು ಸ್ಮರಿಸುತ್ತೇನೆ. ಎಂದಿನಂತೆ ಈ ಬಾರಿಯೂ ನನಗೆ ನಮೋ ಆಪ್ ನಲ್ಲಿ ಮತ್ತು ಮೈ ಗೌ ನಲ್ಲಿ ನಿಮ್ಮ ಹಲವಾರು ಸಲಹೆ ಸೂಚನೆಗಳು ದೊರೆತಿವೆ. ನೀವು ನನ್ನನ್ನು ನಿಮ್ಮ ಕುಟುಂಬ ಸದಸ್ಯನಂತೆ ಪರಿಗಣಿಸಿ ಸುಖ ದುಖಃಗಳನ್ನು ಹಂಚಿಕೊಂಡಿದ್ದೀರಿ. ಇದರಲ್ಲಿ ಬಹಳಷ್ಟು ಯುವಜನತೆ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರೂ ಇದ್ದಾರೆ. ಮನದ ಮಾತಿನ ನಮ್ಮ ಈ ಕುಟುಂಬ ನಿರಂತರವಾಗಿ ವೃದ್ಧಿಸುತ್ತಿದೆ ಮತ್ತು ಮನಸ್ಸುಗಳು ಬೆರೆಯುತ್ತಿವೆ ಗುರಿಯೊಂದಿಗೂ ಬೆಸೆಯುತ್ತಿವೆ ಎಂದು ನನಗೆ ಬಹಳ ಸಂತೋಷವೆನಿಸುತ್ತದೆ. ಗಾಢವಾಗಿ ಬೇರೂರುತ್ತಿರುವ ನಮ್ಮ ಸಂಬಂಧಗಳು ನಮ್ಮ ನಡುವೆ ನಿರಂತರವಾಗಿ ಸಕಾರಾತ್ಮಕತೆಯನ್ನು ಪ್ರವಹಿಸುತ್ತಿವೆ.

ಉತ್ತರ ಪ್ರದೇಶದ ಝಾನ್ಸಿಯಲ್ಲಿ “ರಾಷ್ಟ್ರ ರಕ್ಷಾ ಸಮರ್ಪಣ ಪರ್ವ”ದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

November 19th, 05:39 pm

ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ರಾಣಿ ಲಕ್ಷ್ಮೀಬಾಯಿ ಅವರ ನೆಲದ ಜನರಿಗೆ ನಾನು ಕೈಮುಗಿದು ನಮಸ್ಕರಿಸುತ್ತೇನೆ. ಝಾನ್ಸಿಯು ಸ್ವಾತಂತ್ರ್ಯದ ಜ್ವಾಲೆಯನ್ನು, ಕಿಡಿಯನ್ನು ಹಚ್ಚಿತು. ಈ ನೆಲದ ಪ್ರತಿಯೊಂದು ಕಣವೂ ವೀರತ್ವ ಮತ್ತು ದೇಶಪ್ರೇಮದಲ್ಲಿ ಮಿಂದೆದ್ದಿದೆ. ಝಾನ್ಸಿಯ ವೀರ ರಾಣಿ, ರಾಣಿ ಲಕ್ಷ್ಮೀಬಾಯಿ ಅವರಿಗೆ ನಾನು ವಂದಿಸುತ್ತೇನೆ.

ಉತ್ತರ ಪ್ರದೇಶದ ಝಾನ್ಸಿಯಲ್ಲಿ ಆಯೋಜಿಸಿದ ರಾಷ್ಟ್ರ ರಕ್ಷಾ ಸಮರ್ಪಣ್‌ ಪರ್ವ್‌ದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ

November 19th, 05:38 pm

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ರಕ್ಷಾ ಸಂಪರ್ಪಣ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮವನ್ನು ಉತ್ತರ ಪ್ರದೇಶದ ಝಾನ್ಸಿಯಲ್ಲಿ ಆಯೋಜಿಸಲಾಗಿತ್ತು. ದೇಶದ ಭದ್ರತಾಪಡೆಗಳಿಗೆ ಹೊಸ ಯೋಜನೆಗಳನ್ನು ಘೋಷಿಸುತ್ತ, ಝಾನ್ಸಿಯ ಕೋಟೆ ಆವರಣದಲ್ಲಿ ಅದ್ಧೂರಿ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಹೊಸ ಹೆಜ್ಜೆಗಳ ಕುರಿತು ಮಾತನಾಡಿದರು. ಎನ್‌ಸಿಸಿಯ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಆರಂಭಿಸುವುದೂ ಇವುಗಳಲ್ಲಿ ಒಂದಾಗಿತ್ತು. ಪ್ರಧಾನಿ ನರೇಂದ್ರಮೋದಿ ಅವರು ಈ ಸಂಘಕ್ಕೆ ತಾವೇ ಮೊದಲ ಸದಸ್ಯರಾಗಿ ಹೆಸರು ನೊಂದಾಯಿಸಿದರು. ಎನ್‌ಸಿಸಿ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಸಿಮ್ಯುಲೆಷನ್‌ ತರಬೇತಿ ಕಾರ್ಯಕ್ರಮದ ಆರಂಭವನ್ನು ಘೋಷಿಸಲಾಯಿತು. ಸಮರ ವೀರರಿಗೆ ಹುತಾತ್ಮರಾದವರಿಗೆ ರಾಷ್ಟ್ರೀಯ ಸಮರ ಸ್ಮಾರಕದಲ್ಲಿ ನಮನ ಸಲ್ಲಿಸಲು ಕಿಯಾಸ್ಕ್‌ ಅನ್ನು ಸಮರ್ಪಿಸಲಾಯಿತು. ರಾಷ್ಟ್ರೀಯ ಸಮರ ಸ್ಮರಣೆಯ ಮೊಬೈಲ್‌ ಆ್ಯಪ್‌ ಅನ್ನು ಆರಂಭಿಸಲಾಯಿತು. ಡಿಆರ್‌ಡಿಒ ವಿನ್ಯಾಸಗೊಳಿಸಿರುವ, ಅಭಿವೃದ್ಧಿ ಪಡಿಸಿರುವ ವಿದ್ಯುನ್ಮಾನ ಸಮರ ಸ್ಯೂಟ್‌ ಶಕ್ತಿ ಅನ್ನು ಭಾರತೀಯ ನೌಕೆಗಳಿಗೆ ನೀಡಲಾಯಿತು. ಹಗುರ ಸಮರ ಹೆಲಿಕಾಪ್ಟರ್‌, ಡ್ರೋನ್‌ಗಳನ್ನು ಸಮರ್ಪಿಸಲಾಯಿತು. ಉತ್ತರ ಪ್ರದೇಶದ ಕೈಗಾರಿಕಾ ಕಾರಿಡಾರ್‌ನಲ್ಲಿರುವ ಭಾರತ್‌ ಡೈನಾಮಿಕ್ಸ್‌ ಲಿಮಿಟೆಡ್‌ಗೆ 400 ಕೋಟಿ ಮೌಲ್ಯದ ನೂತನ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ರಾಣಿಲಕ್ಷ್ಮೀ ಬಾಯಿ ಜಯಂತಿ ಅಂಗವಾಗಿ ಅವರಿಗೆ ನಮನ ಸಲ್ಲಿಸಿದ ಪ್ರಧಾನಮಂತ್ರಿ

November 19th, 10:31 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಣಿ ಲಕ್ಷ್ಮೀ ಬಾಯಿ ಅವರ ಜಯಂತಿ ಅಂಗವಾಗಿ ಅವರಿಗೆ ನಮನ ಸಲ್ಲಿಸಿದ್ದಾರೆ.

ವಸತಿ, ವಿದ್ಯುತ್, ಶೌಚಾಲಯ, ಅಡುಗೆ ಅನಿಲ, ರಸ್ತೆ, ಆಸ್ಪತ್ರೆ ಮತ್ತು ಶಾಲೆಯಂತಹ ಮೂಲಸೌಕರ್ಯಗಳ ಕೊರತೆಯಿಂದ ಮಹಿಳೆಯರು, ವಿಶೇಷವಾಗಿ ಬಡ ಮಹಿಳೆಯರ ಮೇಲೆ ವ್ಯತಿರಿಕ್ತ ಪರಿಣಾಮ: ಪ್ರಧಾನಮಂತ್ರಿ

August 10th, 10:43 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣ ಕುರಿತು ಸರ್ಕಾರ ಹೊಂದಿರುವ ಸಮಗ್ರ ದೃಷ್ಟಿಕೋನ ಕುರಿತು ವಿಸ್ತೃತ ವಿವರಣೆ ನೀಡಿದರು. ವಸತಿ, ವಿದ್ಯುತ್, ಶೌಚಾಲಯ, ಅಡುಗೆ ಅನಿಲ, ರಸ್ತೆ, ಆಸ್ಪತ್ರೆ ಮತ್ತು ಶಾಲೆಯಂತಹ ಮೂಲಸೌಕರ್ಯಗಳ ಕೊರತೆಯಿಂದ ಮಹಿಳೆಯರು, ವಿಶೇಷವಾಗಿ ಬಡ ಮಹಿಳೆಯರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ. ನಾವೀಗ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆಗೆ ಕಾಲಿಡುತ್ತಿರುವ ಸುಸಂದರ್ಭದಲ್ಲಿ ಕಳೆದ 7 ದಶಕಗಳಲ್ಲಿ ಆಗಿರುವ ದೇಶದ ಪ್ರಗತಿಯನ್ನು ಒಮ್ಮೆ ನೋಡಬೇಕಿದೆ. ಈ ಮೇಲಿನ ಎಲ್ಲಾ ಸಮಸ್ಯೆಗಳನ್ನು ದಶಕಗಳ ಹಿಂದೆಯೇ ಬಗಹರಿಸಬಹುದಿತ್ತು ಎಂಬ ಭಾವನೆ ನಮ್ಮೆಲ್ಲರನ್ನು ಕಾಡುವುದು ಸಹಜ ಎಂದು ಪ್ರಧಾನ ಮಂತ್ರಿ ತಿಳಿಸಿದರು.

ಉಜ್ವಲ ಯೋಜನೆಯಿಂದ ಜೀವನ ಬೆಳಗಿದ ಜನರ ಸಂಖ್ಯೆ, ವಿಶೇಷವಾಗಿ ಮಹಿಳೆಯರ ಸಂಖ್ಯೆ ಅಭೂತಪೂರ್ವ: ಪ್ರಧಾನಿ ಮೋದಿ

August 10th, 12:46 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉಜ್ವಲಾ 2.0 (ಪ್ರಧಾನಮಂತ್ರಿ ಉಜ್ವಲಾ ಯೋಜನೆ – ಪಿಎಂಯುವೈ)ಗೆ ಉತ್ತರಪ್ರದೇಶದ ಮಹೊಬಾದಲ್ಲಿ ಅಡುಗೆ ಅನಿಲ (ಎಲ್ ಪಿಜಿ) ಸಂಪರ್ಕಗಳನ್ನು ನೀಡುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು ಉಜ್ವಲಾ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ಉತ್ತರ ಪ್ರದೇಶದ ಮಹೊಬಾದಲ್ಲಿ ಉಜ್ವಲಾ 2.0 ಗೆ ಚಾಲನೆ ನೀಡಿದ ಪ್ರಧಾನಮಂತ್ರಿ

August 10th, 12:41 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉಜ್ವಲಾ 2.0 (ಪ್ರಧಾನಮಂತ್ರಿ ಉಜ್ವಲಾ ಯೋಜನೆ – ಪಿಎಂಯುವೈ)ಗೆ ಉತ್ತರಪ್ರದೇಶದ ಮಹೊಬಾದಲ್ಲಿ ಅಡುಗೆ ಅನಿಲ (ಎಲ್ ಪಿಜಿ) ಸಂಪರ್ಕಗಳನ್ನು ನೀಡುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು ಉಜ್ವಲಾ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಮಹಾನ್ ವ್ಯಕ್ತಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಮಂತ್ರಿ

March 12th, 03:21 pm

ಸ್ವಾತಂತ್ರ್ಯ ಆಂದೋಲನದ ಎಲ್ಲಾ ಚಳವಳಿಗಳು, ದಂಗೆ, ಹೋರಾಟ ಮತ್ತು ಹೋರಾಟಗಾರರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದ ಯಶೋಗಾಥೆಯಲ್ಲಿ ಸರಿಯಾಗಿ ಗುರುತಿಸಲಾಗದ ಚಳವಳಿ, ಹೋರಾಟಗಳು ಮತ್ತು ವ್ಯಕ್ತಿತ್ವಗಳಿಗೆ ಅವರು ವಿಶೇಷ ಗೌರವ ಸಲ್ಲಿಸಿದರು. ಅಹಮದಾಬಾದ್ ನ ಸಾಬರಮತಿ ಆಶ್ರಮದಲ್ಲಿಂದು “ ಸ್ವಾತಂತ್ರ್ಯದ ಅಮೃತ ಮಹೋತ್ಸವ “ಭಾರತ@75” ಉದ್ಘಾಟಿಸಿ ಅವರು ಮಾತನಾಡಿದರು.

“ಅಜಾದಿ ಕಾ ಅಮೃತ್ ಮಹೋತ್ಸವ್” ಪೂರ್ವಭಾವೀ ಕಾರ್ಯಕ್ರಮಗಳ ಉದ್ಘಾಟನಾ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

March 12th, 10:31 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಹಮದಾಬಾದ್ ನ ಸಾಬರಮತಿ ಆಶ್ರಮದಿಂದ ಪಾದಯಾತ್ರೆಗೆ ಹಸಿರು ನಿಶಾನೆ ತೋರಿ, (ಭಾರತ@75), ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭದ ಪೂರ್ವಭಾವಿ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಅವರು ಭಾರತ@75 ಆಚರಣೆ ಕುರಿತ ವಿವಿಧ ಇತರ ಸಾಂಸ್ಕೃತಿಕ ಮತ್ತು ಡಿಜಿಟಲ್ ಉಪಕ್ರಮಗಳನ್ನೂ ಉದ್ಘಾಟಿಸಿದರು. ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್, ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ಶ್ರೀ ಪ್ರಹ್ಲಾದ ಸಿಂಗ್ ಪಟೇಲ್, ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಭಾರತ@75 “ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಪೂರ್ವಭಾವಿ ಚಟುವಟಿಕೆಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ

March 12th, 10:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಹಮದಾಬಾದ್ ನ ಸಾಬರಮತಿ ಆಶ್ರಮದಿಂದ ಪಾದಯಾತ್ರೆಗೆ ಹಸಿರು ನಿಶಾನೆ ತೋರಿ, (ಭಾರತ@75), ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭದ ಪೂರ್ವಭಾವಿ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಅವರು ಭಾರತ@75 ಆಚರಣೆ ಕುರಿತ ವಿವಿಧ ಇತರ ಸಾಂಸ್ಕೃತಿಕ ಮತ್ತು ಡಿಜಿಟಲ್ ಉಪಕ್ರಮಗಳನ್ನೂ ಉದ್ಘಾಟಿಸಿದರು. ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್, ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ಶ್ರೀ ಪ್ರಹ್ಲಾದ ಸಿಂಗ್ ಪಟೇಲ್, ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.