ಕೆಂಪು ಕೋಟೆಯಲ್ಲಿ ನಡೆದ “ಪರಾಕ್ರಮ್ ದಿವಸ್” ಆಚರಣೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಹಿಂದಿ ಭಾಷಣದ ಕನ್ನಡ ಅವತರಣಿಕೆ

January 23rd, 06:31 pm

ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಕಿಶನ್ ರೆಡ್ಡಿ ಜಿ, ಶ್ರೀ ಅರ್ಜುನ್ ರಾಮ್ ಮೇಘವಾಲ್ ಜಿ, ಶ್ರೀಮತಿ ಮೀನಾಕ್ಷಿ ಲೇಖಿ ಜಿ, ಶ್ರೀ ಅಜಯ್ ಭಟ್ ಜಿ, ಬ್ರಿಗೇಡಿಯರ್ ಆರ್. ಎಸ್. ಚಿಕಾರಾ ಜಿ, ಐ.ಎನ್.ಎ. ಮುಸ್ಸದ್ದಿ ಲೆಫ್ಟಿನೆಂಟ್ ಆರ್ ಮಾಧವನ್ ಜಿ, ಮತ್ತು ನನ್ನ ಪ್ರೀತಿಯ ದೇಶವಾಸಿಗಳೇ!

​​​​​​​ದಿಲ್ಲಿಯ ಕೆಂಪು ಕೋಟೆಯಲ್ಲಿ ಪರಾಕ್ರಮ ದಿವಸ್ ಆಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ

January 23rd, 06:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಿಲ್ಲಿಯ ಕೆಂಪು ಕೋಟೆಯಲ್ಲಿ ನಡೆದ ಪರಾಕ್ರಮ ದಿವಸ್ ಆಚರಣೆಯಲ್ಲಿ ಪಾಲ್ಗೊಂಡರು. ಗಣರಾಜ್ಯೋತ್ಸವದ ಸ್ತಬ್ಧಚಿತ್ರಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ರಾಷ್ಟ್ರದ ಶ್ರೀಮಂತ ವೈವಿಧ್ಯತೆಯನ್ನು ಪ್ರದರ್ಶಿಸುವ ಭಾರತ್ ಪರ್ವ್ ಗೆ ಅವರು ಚಾಲನೆ ನೀಡಿದರು. ನೇತಾಜಿ ಕುರಿತ ಛಾಯಾಚಿತ್ರಗಳು, ವರ್ಣಚಿತ್ರಗಳು, ಪುಸ್ತಕಗಳು ಮತ್ತು ಶಿಲ್ಪಗಳನ್ನು ಒಳಗೊಂಡ ರಾಷ್ಟ್ರೀಯ ಪತ್ರಾಗಾರದ ತಂತ್ರಜ್ಞಾನ ಆಧಾರಿತ ಸಂವಾದಾತ್ಮಕ ಪ್ರದರ್ಶನವನ್ನು ಪ್ರಧಾನಿ ವೀಕ್ಷಿಸಿದರು ಮತ್ತು ರಾಷ್ಟ್ರೀಯ ನಾಟಕ ಶಾಲೆ ಪ್ರಸ್ತುತಪಡಿಸಿದ ನೇತಾಜಿ ಅವರ ಜೀವನವನ್ನು ಕುರಿತ ಪ್ರೊಜೆಕ್ಷನ್ ಮ್ಯಾಪಿಂಗ್ ನೊಂದಿಗೆ ಸಂಯೋಜಿಸಿ ಮಾಡಿದ ನಾಟಕಕ್ಕೆ ಸಾಕ್ಷಿಯಾದರು. ಐಎನ್ಎ ನಿವೃತ್ತ ಲೆಫ್ಟಿನೆಂಟ್ ಆರ್.ಮಾಧವನ್ ಅವರನ್ನು ಪ್ರಧಾನ ಮಂತ್ರಿ ಸನ್ಮಾನಿಸಿದರು. ಮಾಧವನ್ ಅವರು ಬದುಕಿರುವ ಏಕೈಕ ಐ.ಎನ್.ಎ. ಹಿರಿಯರಾಗಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ಗಣ್ಯರ ಕೊಡುಗೆಯನ್ನು ಗೌರವಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, 2021 ರಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯಂದು ಪರಾಕ್ರಮ್ ದಿವಸ್ ಆಚರಿಸಲಾಗುತ್ತಿದೆ.

ಪ್ರಾಣ ಪ್ರತಿಷ್ಠಾ ಸಮಾರಂಭದ ಶುಭ ಸಂದರ್ಭದಲ್ಲಿ ರಾಮ ಜ್ಯೋತಿಯನ್ನು ಬೆಳಗಿಸುವಂತೆ ನಾಗರಿಕರನ್ನು ಕೋರಿದ ಪ್ರಧಾನಮಂತ್ರಿ

January 22nd, 06:23 pm

ಪ್ರಾಣ ಪ್ರತಿಷ್ಠಾ ಸಮಾರಂಭದ ಶುಭ ಸಂದರ್ಭದಲ್ಲಿ ರಾಮ ಜ್ಯೋತಿಯನ್ನು ಬೆಳಗಿಸಲು ಮತ್ತು ಶ್ರೀ ರಾಮ್ ಲಲ್ಲಾ ಅವರನ್ನು ಸ್ವಾಗತಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.