ಸೆಪ್ಟೆಂಬರ್ 8ರಂದು ಇಂಡಿಯಾ ಗೇಟ್‌ನಲ್ಲಿ 'ಕರ್ತವ್ಯ ಪಥ' ಉದ್ಘಾಟನೆ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣಗೊಳಿಸಲಿರುವ ಪ್ರಧಾನಮಂತ್ರಿ

September 07th, 01:49 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ಸೆಪ್ಟೆಂಬರ್ 8ರಂದು ಸಂಜೆ 7 ಗಂಟೆಗೆ 'ಕರ್ತವ್ಯ ಪಥ' ಉದ್ಘಾಟಿಸಲಿದ್ದಾರೆ. ಇದು ಹಿಂದಿನ ರಾಜಪಥವನ್ನು ಕರ್ತವ್ಯ ಮಾರ್ಗವಾಗಿ ಪರಿವರ್ತಿಸಲಿದ್ದು, ಆಡಳಿತ ಅಥವಾ ಅಧಿಕಾರದ ಚಿತ್ರಾತ್ಮಕ ಸಂಕೇತವಾಗಿ, ಸಾರ್ವಜನಿಕ ಮಾಲೀಕತ್ವ ಮತ್ತು ಸಬಲೀಕರಣದ ಉದಾಹರಣೆಯಾಗಿ ಹೊಸ ಬದಲಾವಣೆಯನ್ನು ಸಂಕೇತಿಸುತ್ತದೆ. ಇದೇ ಸಂದರ್ಭದಲ್ಲಿ ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ಪ್ರಧಾನಿ ಅವರು ಅನಾವರಣಗೊಳಿಸಲಿದ್ದಾರೆ. ಈ ಕ್ರಮಗಳು ಅಮೃತ ಕಾಲಘಟ್ಟದ ನವ ಭಾರತ ಕಟ್ಟುವ ಪ್ರಧಾನ ಮಂತ್ರಿ ಅವರ 2ನೇ 'ಪಂಚ ಪ್ರಾಣ' ಸೂತ್ರಕ್ಕೆ ಅನುಗುಣವಾಗಿವೆ: 'ವಸಾಹತುಶಾಹಿ ಮನಸ್ಥಿತಿಯ ಯಾವುದೇ ಕುರುಹುಗಳನ್ನು ಇಲ್ಲಿಂದ ತೆಗೆದುಹಾಕಲಾಗುತ್ತಿದೆ'.

ಭಾರತೀಯ ಸಂಸ್ಕೃತಿಯ ಕಂಪನವು ಯಾವಾಗಲೂ ಪ್ರಪಂಚದಾದ್ಯಂತದ ಜನರನ್ನು ಆಕರ್ಷಿಸುತ್ತದೆ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ

January 30th, 11:30 am

ಸ್ನೇಹಿತರೆ, ಆಜಾದಿ ಕೆ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ದೇಶ ಇಂಥ ಪ್ರಯತ್ನಗಳ ಮೂಲಕ ರಾಷ್ಟ್ರೀಯ ಪ್ರತಿಷ್ಠೆಯನ್ನು ಪುನಃ ಪ್ರತಿಸ್ಥಾಪಿಸುತ್ತಿದೆ. ಇಂಡಿಯಾ ಗೇಟ್ ಬಳಿಯ ‘ಅಮರ ಜವಾನ್ ಜ್ಯೋತಿ’ ಯನ್ನು ಹತ್ತಿರವೇ ‘ರಾಷ್ಟ್ರೀಯ ಯುದ್ಧ ಸ್ಮಾರಕ’ ದ ಜ್ಯೋತಿಗಳಲ್ಲಿ ಲೀನಗೊಳಿಸಿದ್ದೇವೆ ಎಂಬುದನ್ನು ನಾವು ನೋಡಿದ್ದೇವೆ. ಇಂಥ ಭಾವನಾತ್ಮಕ ಸಂದರ್ಭದಲ್ಲಿ ಬಹಳಷ್ಟು ದೇಶವಾಸಿಗಳು ಮತ್ತು ಹುತಾತ್ಮ ಕುಟುಂಬದವರ ಕಣ್ಣಲ್ಲಿ ನೀರು ಜಿನುಗಿತ್ತು. ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ವಾತಂತ್ರ್ಯಾ ನಂತರ ಹುತಾತ್ಮರಾದ ಎಲ್ಲ ಯೋಧರ ಹೆಸರುಗಳನ್ನು ಬರೆಯಲಾಗಿದೆ. ನನಗೆ ಸೇನೆಯ ಕೆಲವು ಮಾಜಿ ಯೋಧರು ಪತ್ರ ಬರೆದು ಹೀಗೆ ಹೇಳಿದ್ದಾರೆ – “ಹುತಾತ್ಮರ ನೆನಪುಗಳೆದುರು ಪ್ರಜ್ವಲಿಸುತ್ತಿರುವ ‘ಅಮರ ಜವಾನ್ ಜ್ಯೋತಿ’ ಹುತಾತ್ಮರು ಅಮರರಾಗಿರುವುದಕ್ಕೆ ಸಾಕ್ಷಿಯಾಗಿದೆ.” ಅಮರ ಜವಾನ್ ಜ್ಯೋತಿ’ ಯಂತೆ ಹುತಾತ್ಮರ ತ್ಯಾಗ ಮತ್ತು ಬಲಿದಾನವೂ ಅಮರವಾಗಿದೆ. ಅವಕಾಶ ಸಿಕ್ಕಾಗಲೆಲ್ಲ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಎಂದು ನಿಮ್ಮೆಲ್ಲರಿಗೂ ಹೇಳಬಯಸುತ್ತೇನೆ. ನಿಮ್ಮ ಕುಟುಂಬ ಮತ್ತು ಮಕ್ಕಳನ್ನು ಕರೆದುಕೊಂಡು ಹೋಗಿ. ಇಲ್ಲಿ ನಿಮಗೆ ಒಂದು ವಿಭಿನ್ನವಾದ ಶಕ್ತಿ ಮತ್ತು ಪ್ರೇರಣೆಯ ಅನುಭವವಾಗುತ್ತದೆ.

Glimpses from 73rd Republic Day celebrations at Rajpath New Delhi

January 26th, 01:00 pm

India marked 73rd Republic Day with immense fervour and enthusiasm. The country's perse culture, prowess of the Armed Forces were displayed at Rajpath in New Delhi. President Ram Nath Kovind, Prime Minister Narendra Modi and other dignitaries attended the iconic parade.

ನವದೆಹಲಿಯ ರಾಜಪಥದಲ್ಲಿ 72 ನೇ ಗಣರಾಜ್ಯೋತ್ಸವದ ಸಂಭ್ರಮದ ಕೆಲವು ಕ್ಷಣದರ್ಶನ

January 26th, 12:16 pm

ಭಾರತ 72 ನೇ ಗಣರಾಜ್ಯೋತ್ಸವವನ್ನು ಬಹಳ ಉತ್ಸಾಹದಿಂದ ಆಚರಿಸಿತು. ನವದೆಹಲಿಯ ರಾಜಪಥದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಧ್ವಜಾರೋಹಣ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಸಮರ್ ಸ್ಮಾರಕ್ ನಲ್ಲಿ ಹುತಾತ್ಮರಿಗೆ ಅವರ ತ್ಯಾಗಕ್ಕಾಗಿ ಗೌರವ ಸಲ್ಲಿಸಿದರು.

‘ಹುನರ್ ಹಾತ್’: ಪ್ರಧಾನ ಮಂತ್ರಿ ಭೇಟಿ

February 19th, 03:52 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು “ಹುನರ್ ಹಾತ್” ಗೆ ಭೇಟಿ ನೀಡಿ, ದೇಶಾದ್ಯಂತ ಪಾಲ್ಗೊಂಡಿರುವ ಕುಶಲಕರ್ಮಿಗಳು, ಕರಕುಶಲಗಾರರು ಮತ್ತು ಪಾಕಶಾಲೆ ತಜ್ಞರ ಮಳಿಗೆಗಳನ್ನು ವೀಕ್ಷಿಸಿದರು.