2019 ರ ಜನವರಿ 27 ರಂದು ತಮಿಳುನಾಡಿನ ಮಧುರೈಗೆ ಭೇಟಿ ನೀಡಲಿದ್ದಾರೆ ಪ್ರಧಾನ ಮಂತ್ರಿ

January 25th, 07:20 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019 ರ ಜನವರಿ 27 ರಂದು ತಮಿಳುನಾಡಿನ ಮಧುರೈಗೆ ಭೇಟಿ ನೀಡಲಿದ್ದಾರೆ. ಮಧುರೈಯಲ್ಲಿ ಎ.ಐ.ಐ.ಎಂ.ಎಸ್.ಗೆ ಪ್ರಧಾನಮಂತ್ರಿ ಅವರು ಶಿಲಾನ್ಯಾಸ ಮಾಡಲಿರುವುದರಿಂದ ಮತ್ತು ಅದೇ ದಿನ ಮೂರು ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಗಳ ಅಂಗವಾಗಿ ಮಧುರೈ ರಾಜಾಜಿ ವೈದ್ಯಕೀಯ ಕಾಲೇಜು , ತಂಜಾವೂರು ವೈದ್ಯಕೀಯ ಕಾಲೇಜು, ಮತ್ತು ತಿರುನೆಲ್ವೇಲಿ ವೈದ್ಯಕೀಯ ಕಾಲೇಜುಗಳ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಗಳನ್ನು ಉದ್ಘಾಟಿಸಲಿರುವುದರಿಂದ ಅವರ ಈ ಭೇಟಿ ಮಧುರೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಆರೋಗ್ಯ ರಕ್ಷಣಾ ಸವಲತ್ತು ಮತ್ತು ಸೇವೆಗಳನ್ನು ಒದಗಿಸಲು ಉತ್ತೇಜನ ಕೊಡಲಿರುವುದರಿಂದಾಗಿ ಮಹತ್ವದ ಭೇಟಿಯಾಗಿದೆ. ಈ ಸಂದರ್ಭ ಪ್ರಧಾನಮಂತ್ರಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವರು.