ಸ್ಕ್ವಾಷ್ ನ ಪ್ರಸಿದ್ಧ ಆಟಗಾರರಾದ ಶ್ರೀ ರಾಜ್ ಮಂಚಂದಾ ಅವರ ನಿಧನಕ್ಕೆ ಪ್ರಧಾನಮಂತ್ರಿಯವರಿಂದ ಸಂತಾಪ ಸೂಚನೆ
December 04th, 03:42 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಶ್ರೀ ರಾಜ್ ಮಂಚಂದಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಶ್ರೀ ಮಂಚಂದಾ ಅವರು ತಮ್ಮ ಸಮರ್ಪಣೆ ಮತ್ತು ಉತ್ಕೃಷ್ಟತೆಗೆ ಹೆಸರುವಾಸಿಯಾದ ಭಾರತೀಯ ಸ್ಕ್ವಾಷ್ ಆಟದ ನಿಜವಾದ ದಂತಕಥೆ ಎಂದು ಶ್ರೀ ಮೋದಿಯವರು ಶ್ಲಾಘಿಸಿದ್ದಾರೆ. ಶ್ರೀ ಮಂಚಂದಾ ಅವರು ಮಿಲಿಟರಿಯಲ್ಲಿ ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಯನ್ನು ಪ್ರಧಾನಿಯವರು ಶ್ಲಾಘಿಸಿದ್ದಾರೆ.