ನವದೆಹಲಿಯಲ್ಲಿ ನಡೆದ ಬಿ-20 ಶೃಂಗಸಭೆ `ಭಾರತ 2023’ ಉದ್ದೇಶಿಸಿ ಪ್ರಧಾನ ಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ
August 27th, 03:56 pm
ಇಡೀ ದೇಶದಾದ್ಯಂತ ನಮ್ಮಲ್ಲಿ ಹಬ್ಬದ ವಾತಾವರಣವಿರುವ ಸಮಯದಲ್ಲಿ ಉದ್ಯಮಿಗಳಾದ ನೀವೆಲ್ಲರೂ ಭಾರತಕ್ಕೆ ಬಂದಿದ್ದೀರಿ. ಭಾರತದಲ್ಲಿ ಸುದೀರ್ಘ ವಾರ್ಷಿಕ ಹಬ್ಬದ ಋತುವನ್ನು ಒಂದು ರೀತಿಯಲ್ಲಿ ಮುಂದೂಡಲಾಗಿದೆ. ಈ ಹಬ್ಬದ ಋತುವೆಂದರೆ, ಅದು ನಮ್ಮ ಸಮಾಜ ಹಾಗೂ ನಮ್ಮ ವ್ಯಾಪಾರಿಗಳು ಸಂಭ್ರಮಾಚರಣೆ ಮಾಡುವ ಸಮಯ. ಈ ಬಾರಿ, ಅದು ಆಗಸ್ಟ್ 23ರಿಂದಲೇ ಪ್ರಾರಂಭವಾಗಿದೆ. ಈ ಆಚರಣೆಯು ಚಂದ್ರನ ಮೇಲೆ ʻಚಂದ್ರಯಾನ-3’ದ ಆಗಮನದ ಪ್ರಯುಕ್ತವಾಗಿದೆ. ನಮ್ಮ ಬಾಹ್ಯಾಕಾಶ ಸಂಸ್ಥೆ ʻಇಸ್ರೋʼ ಭಾರತದ ಚಂದ್ರಯಾನದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ಆದರೆ ಇದೇ ವೇಳೆ, ಭಾರತೀಯ ಉದ್ಯಮವು ಅಪಾರ ಬೆಂಬಲವನ್ನು ನೀಡಿದೆ. ಚಂದ್ರಯಾನದಲ್ಲಿ ಬಳಸಲಾದ ಅನೇಕ ಉಪಕರಣಗಳನ್ನು ನಮ್ಮ ಉದ್ಯಮ, ಖಾಸಗಿ ಕಂಪನಿಗಳು ಮತ್ತು ʻಎಂಎಸ್ಎಂಇʼಗಳು ಅಭಿವೃದ್ಧಿಪಡಿಸಿವೆ ಮತ್ತು ಅಗತ್ಯ ಸಮಯದೊಳಗೆ ಅವು ಇಸ್ರೋಗೆ ಲಭ್ಯವಾಗುವಂತೆ ಮಾಡಿವೆ. ಒಂದು ರೀತಿಯಲ್ಲಿ, ಈ ಯಶಸ್ಸು ವಿಜ್ಞಾನ ಮತ್ತು ಉದ್ಯಮ ಎರಡಕ್ಕೂ ಸೇರಿದೆ. ಈ ಬಾರಿ ಇಡೀ ಜಗತ್ತು ಭಾರತದೊಂದಿಗೆ ಈ ಸಾಧನೆಯನ್ನು ಸಂಭ್ರಮಿಸುತ್ತಿದೆ. ಎಂಬುದು ಸಹ ಮುಖ್ಯವಾಗಿದೆ. ಈ ಸಂಭ್ರಮಾಚರಣೆಯು ʻಜವಾಬ್ದಾರಿಯುತ ಬಾಹ್ಯಾಕಾಶ ಕಾರ್ಯಕ್ರಮʼವನ್ನು ನಡೆಸುವ ಕುರಿತದ್ದಾಗಿದೆ. ಈ ಆಚರಣೆಯು ದೇಶದ ಅಭಿವೃದ್ಧಿಯನ್ನು ವೇಗಗೊಳಿಸುವ ಕುರಿತದ್ದಾಗಿದೆ. ಈ ಆಚರಣೆಯು ನಾವೀನ್ಯತೆ ಕುರಿತದ್ದಾಗಿದೆ. ಈ ಆಚರಣೆಯು ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಸುಸ್ಥಿರತೆ ಮತ್ತು ಸಮಾನತೆಯನ್ನು ತರುವ ಕುರಿತದ್ದಾಗಿದೆ. ಇದು ʻಬಿ-20 ಶೃಂಗಸಭೆ - ರೈಸ್ʼನ ವಿಷಯವೂ ಆಗಿದೆ. ಇದು ಜವಾಬ್ದಾರಿ, ವೇಗವರ್ಧನೆ, ನಾವೀನ್ಯತೆ, ಸುಸ್ಥಿರತೆ ಮತ್ತು ಸಮಾನತೆಯ ಕುರಿತಾದದ್ದು. ಇದು ಮಾನವೀಯತೆಯ ಕುರಿತಾದದ್ದು. ಇದು ʻಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯʼವನ್ನು ಕುರಿತಾದದ್ದು.ವ್ಯಾಪಾರ-20(ಬಿ-20) ಶೃಂಗಸಭೆ ಇಂಡಿಯಾ 2023 ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
August 27th, 12:01 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಬಿ20 ಶೃಂಗಸಭೆ ಇಂಡಿಯಾ-2023 ಉದ್ದೇಶಿಸಿ ಮಾತನಾಡಿದರು. ಬಿ20 ಶೃಂಗಸಭೆ ಇಂಡಿಯಾವು ಬಿ20 ಇಂಡಿಯಾ ವಿಷಯ ಅಥವಾ ಸಂವಹನವನ್ನು ಉದ್ದೇಶಪೂರ್ವಕವಾಗಿ ಚರ್ಚಿಸಲು ವಿಶ್ವಾದ್ಯಂತದಿಂದ ನೀತಿ ನಿರೂಪಕರು, ಉದ್ಯಮ ನಾಯಕರು ಮತ್ತು ತಜ್ಞರನ್ನು ಕರೆತಂದಿದೆ. ಬಿ20 ಇಂಡಿಯಾ ಗೋಷ್ಠಿಯು(ಕಮ್ಯುನಿಕ್) ಜಿ20 ಸದಸ್ಯ ರಾಷ್ಟ್ರಗಳಿಗೆ ಸಲ್ಲಿಸಲು 54 ಶಿಫಾರಸುಗಳು ಮತ್ತು 172 ನೀತಿ ಕ್ರಮಗಳನ್ನು ಒಳಗೊಂಡಿದೆ ಎಂದರು.ಆಗಸ್ಟ್ 27, 2023 ರಂದು ನಡೆಯುವ ಬಿ20 ಶೃಂಗಸಭೆ ಭಾರತ 2023 ಅನ್ನು ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಮಂತ್ರಿ
August 26th, 09:55 pm
ನವದೆಹಲಿಯಲ್ಲಿ 27 ಆಗಸ್ಟ್, 2023 ರಂದು ನಡೆಯುವ ಬಿ20 ಶೃಂಗಸಭೆ ಭಾರತ 2023 ವನ್ನು ಉದ್ದೇಶಿಸಿ ಮಧ್ಯಾಹ್ನ 12 ಗಂಟೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು