ವಾಸ್ತವಾಂಶ: ಕ್ವಾಡ್ ನಾಯಕರ ಶೃಂಗಸಭೆ
September 25th, 11:53 am
ಸೆಪ್ಟೆಂಬರ್ 24ರಂದು ಅಧ್ಯಕ್ಷ ಬಿಡೆನ್ ಅವರು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಮಂತ್ರಿ ಯೋಶಿಹಿಡೆ ಸುಗಾ ಅವರಿಗೆ ಶ್ವೇತಭವನದಲ್ಲಿ ಕ್ವಾಡ್ ನ ನಾಯಕರು ಸ್ವಯಂ ಪಾಲ್ಗೊಂಡಿದ್ದ ಪ್ರಪ್ರಥಮ ಶೃಂಗಸಭೆಗೆ ಆತಿಥ್ಯ ನೀಡಿದ್ದರು. ನಾಯಕರು 21ನೇ ಶತಮಾನದ ಸವಾಲುಗಳ ಮೇಲೆ ಪ್ರಾಯೋಗಿಕ ಸಹಕಾರ ಮುಂದುವರಿಸುವ; ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಅವುಗಳು ಲಭ್ಯವಾಗುವಂತೆ ಮಾಡುವುದೂ ಸೇರಿದಂತೆ ಕೋವಿಡ್-19 ಸಾಂಕ್ರಾಮಿಕವನ್ನು ಕೊನೆಗಾಣಿಸುವ; ಅತ್ಯುನ್ನತ ಗುಣಮಟ್ಟದ ಮೂಲಸೌಕರ್ಯವನ್ನು ಉತ್ತೇಜಿಸುವ; ಹವಾಮಾನ ಬಿಕ್ಕಟ್ಟನ್ನು ನಿಗ್ರಹಿಸುವ; ಹೊರಹೊಮ್ಮುವ ತಂತ್ರಜ್ಞಾನಗಳು, ಬಾಹ್ಯಾಕಾಶ ಮತ್ತು ಸೈಬರ್ ಭದ್ರತೆಯಲ್ಲಿ ಸಹಯೋಗ; ಮತ್ತು ನಮ್ಮ ಎಲ್ಲಾ ದೇಶಗಳಲ್ಲಿ ಮುಂದಿನ ಪೀಳಿಗೆಯ ಪ್ರತಿಭೆಗಳನ್ನು ಬೆಳೆಸಲು ನಮ್ಮ ಬಾಂಧವ್ಯಗಳನ್ನು ಬಲಗೊಳಿಸುವ ಮಹತ್ವಾಕಾಂಕ್ಷೆಯ ಉಪಕ್ರಮಗಳನ್ನು ಮುಂದಿಟ್ಟರು.