ಅಟಲ್ ನಾವೀನ್ಯತೆ ಅಭಿಯಾನದ ವಿಸ್ತರಣೆಗೆ ಸಂಪುಟದ ಅನುಮೋದನೆ
April 08th, 09:16 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಟಲ್ ನಾವೀನ್ಯತೆ ಅಭಿಯಾನ (ಎಐಎಂ) ಅನ್ನು ಮಾರ್ಚ್ 2023ರವರೆಗೆ ಮುಂದುವರಿಸಲು ತನ್ನ ಅನುಮೋದನೆ ನೀಡಿದೆ. ದೇಶದಲ್ಲಿ ನಾವೀನ್ಯತೆ ಸಂಸ್ಕೃತಿ ಮತ್ತು ಉದ್ಯಮಶೀಲತೆ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಉದ್ದೇಶಿತ ಗುರಿಯ ಮೇಲೆ ಎಐಎಂ ಕೆಲಸ ಮಾಡುತ್ತದೆ. ಇದನ್ನು ಎಐಎಂ ತನ್ನ ವಿವಿಧ ಕಾರ್ಯಕ್ರಮಗಳ ಮೂಲಕ ಮಾಡಲಿದೆ.ಉದ್ಯಮ ಬಂಡವಾಳ ಮತ್ತು ಖಾಸಗಿ ಈಕ್ವಿಟಿ ನಿಧಿ ಕಂಪನಿಗಳ ಪ್ರತಿನಿಧಿಗಳ ಜತೆ ಪ್ರಧಾನ ಮಂತ್ರಿ ದುಂಡು ಮೇಜಿನ ಸಂವಾದ
December 17th, 08:31 pm
ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಯಮ ಬಂಡವಾಳ ಮತ್ತು ಖಾಸಗಿ ಈಕ್ವಿಟಿ ನಿಧಿ ಕಂಪನಿಗಳ ಪ್ರತಿನಿಧಿಗಳ ಜತೆ ದುಂಡು ಮೇಜಿನ ಸಂವಾದ ನಡೆಸಿದರು.