‘Modi Ki Guarantee’ vehicle is now reaching all parts of the country: PM Modi

December 16th, 08:08 pm

PM Modi interacted and addressed the beneficiaries of the Viksit Bharat Sankalp Yatra via video conferencing. Addressing the gathering, the Prime Minister expressed gratitude for getting the opportunity to flag off the Viksit Bharat Sankalp Yatra in the five states of Rajasthan, Madhya Pradesh, Chhattisgarh, Telangana and Mizoram, and remarked that the ‘Modi Ki Guarantee’ vehicle is now reaching all parts of the country

ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳನ್ನು ಉದ್ದೇಶಿಸಿ ಪ್ರಧಾನಿಯವರ ಭಾಷಣ

December 16th, 04:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರು.

ರಿಪಬ್ಲಿಕ್ ಟಿವಿ ಕಾನ್‌ಕ್ಲೇವ್‌ನಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ

April 26th, 08:01 pm

ಅರ್ನಾಬ್ ಗೋಸ್ವಾಮಿ ಅವರೇ, ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ನ ಎಲ್ಲಾ ಸಹೋದ್ಯೋಗಿಗಳೇ, ದೇಶ ಮತ್ತು ವಿದೇಶಗಳಲ್ಲಿನ ರಿಪಬ್ಲಿಕ್ ಟಿವಿಯ ಎಲ್ಲಾ ವೀಕ್ಷಕರೇ, ಮಹಿಳೆಯರೇ ಮತ್ತು ಮಹನೀಯರೇ! ನಾನು ಮೊದಲು, ನನ್ನ ಬಾಲ್ಯದಲ್ಲಿ ಕೇಳಿದ ಒಂದು ಹಾಸ್ಯ ಪ್ರಸಂಗವನ್ನು ಹೇಳಲು ಬಯಸುತ್ತೇನೆ. ʼಒಬ್ಬ ಪ್ರಾಧ್ಯಾಪಕರು ಇದ್ದರು, ಅವರ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಳು, ಜೀವನದಿಂದ ಬೇಸತ್ತಿದ್ದೇನೆ, ಇನ್ನು ಮುಂದೆ ಬದುಕಲು ಬಯಸುವುದಿಲ್ಲ ಎಂದು ಬರೆದ ಪತ್ರವಿತ್ತು. ಏನಾದರು ಕುಡಿದು ಕಂಕರಿಯಾ ಕೆರೆಗೆ ಹಾರಿ ಸಾಯುತ್ತೇನೆ ಎಂದು ಆಕೆ ಬರೆದಿದ್ದಳು. ಮರುದಿನ ಬೆಳಿಗ್ಗೆ, ತನ್ನ ಮಗಳು ಮನೆಯಲ್ಲಿ ಇಲ್ಲದಿರುವುದು ಪ್ರಾಧ್ಯಾಪಕರಿಗೆ ತಿಳಿಯಿತು. ಅವರು ಅವಳ ಕೋಣೆಗೆ ಹೋಗಿ ನೋಡದಾಗ ಪತ್ರ ಸಿಕ್ಕಿತು. ಪತ್ರವನ್ನು ಓದಿದ ಅವರಿಗೆ ತುಂಬಾ ಕೋಪ ಬಂತು. ‘ನಾನು ಪ್ರೊಫೆಸರ್ ಆಗಿದ್ದೇನೆ, ನಾನು ಇಷ್ಟು ವರ್ಷ ಕಷ್ಟಪಟ್ಟು ಕೆಲಸ ಮಾಡಿದ್ದೇನೆ ಮತ್ತು ಆತ್ಮಹತ್ಯೆ ಪತ್ರದಲ್ಲಿ ಅವಳು ಕಂಕಾರಿಯಾ ಕಾಗುಣಿತವನ್ನು ತಪ್ಪಾಗಿ ಬರೆದಿದ್ದಾಳೆ.’ ಅರ್ನಾಬ್ ಉತ್ತಮ ಹಿಂದಿ ಮಾತನಾಡಲು ಪ್ರಾರಂಭಿಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ಅವರು ಏನು ಮಾತುನಾಡುತ್ತಿದ್ದಾರೆ ಎಂದು ನಾನು ಕೇಳಿಸಿಕೊಳ್ಳಲಿಲ್ಲ, ಆದರೆ ಅವರ ಹಿಂದಿ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಗಮನಿಸುತ್ತಿದ್ದೆ. ಬಹುಶಃ, ಮುಂಬೈನಲ್ಲಿ ವಾಸಿಸಿದ ನಂತರ ನಿಮ್ಮ ಹಿಂದಿ ಸುಧಾರಿಸಿದೆ.

ನವದೆಹಲಿಯಲ್ಲಿ ಗಣರಾಜ್ಯ ಶೃಂಗಸಭೆ ಉದ್ದೇಶಿಸಿ ಪ್ರಧಾನಿ ಭಾಷಣ

April 26th, 08:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ತಾಜ್ ಪ್ಯಾಲೇಸ್‌ ಹೋಟೆಲ್‌ನಲ್ಲಿ ಗಣರಾಜ್ಯ ಶೃಂಗಸಭೆ ಉದ್ದೇಶಿಸಿ ಭಾಷಣ ಮಾಡಿದರು.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕ ಮಂತ್ರಿಗಳ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಪ್ರಧಾನಮಂತ್ರಿಯವರ ಭಾಷಣ

August 25th, 04:31 pm

ಚಂಡೀಗಢದ ಆಡಳಿತಾಧಿಕಾರಿ ಶ್ರೀ ಬನ್ವಾರಿ ಲಾಲ್ ಪುರೋಹಿತ್ ಜಿ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾದ ಶ್ರೀ ಭೂಪೇಂದರ್ ಯಾದವ್ ಜಿ ಮತ್ತು ಶ್ರೀ ರಾಮೇಶ್ವರ ತೇಲಿ ಜಿ, ಎಲ್ಲಾ ರಾಜ್ಯಗಳ ಗೌರವಾನ್ವಿತ ಕಾರ್ಮಿಕ ಮಂತ್ರಿಗಳು, ಕಾರ್ಮಿಕ ಕಾರ್ಯದರ್ಶಿಗಳು, ಇತರ ಗಣ್ಯರು, ಮಹಿಳೆಯರೇ ಮತ್ತು ಮಹನೀಯರೆ! ಮೊದಲನೆಯದಾಗಿ, ನಾನು ಭಗವಾನ್ ತಿರುಪತಿ ಬಾಲಾಜಿಯ ಪಾದಗಳಿಗೆ ನಮಸ್ಕರಿಸಲು ಬಯಸುತ್ತೇನೆ. ನೀವೆಲ್ಲರೂ ಇರುವ ಪವಿತ್ರ ಸ್ಥಳವು ಭಾರತದ ಶ್ರಮ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಈ ಸಮ್ಮೇಳನದಿಂದ ಹೊರಹೊಮ್ಮುವ ವಿಚಾರಗಳು ದೇಶದ ಕಾರ್ಮಿಕ ಶಕ್ತಿಯನ್ನು ಬಲಪಡಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರನ್ನು ಮತ್ತು ವಿಶೇಷವಾಗಿ ಕಾರ್ಮಿಕ ಸಚಿವಾಲಯವನ್ನು ಅಭಿನಂದಿಸುತ್ತೇನೆ.

ರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕ ಸಚಿವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ

August 25th, 04:09 pm

ಪ್ರಧಾನಮಂತ್ರಿ ಅವರು ತಿರುಪತಿ ಬಾಲಾಜಿಗೆ ನಮಿಸುವ ಮೂಲಕ ತಮ್ಮ ಭಾಷಣ ಆರಂಭಿಸಿದರು. ಭಾರತದ ಕನಸುಗಳನ್ನು ನನಸು ಮಾಡಲು ಭಾರತದ ಕಾರ್ಮಿಕ ಶಕ್ತಿಯದ್ದು ಬಹುದೊಡ್ಡ ಪಾತ್ರವಿದೆ ಮತ್ತು ಅಮೃತ ಕಾಲದ ನಿರೀಕ್ಷೆಗಳಂತೆ ರಾಷ್ಟ್ರಕಟ್ಟಬೇಕಿದೆ. ಈ ಆಲೋಚನೆಯಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯದ ಕೋಟ್ಯಂತರ ಕಾರ್ಮಿಕರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಒತ್ತಿ ಹೇಳಿದರು.

ಈ ಬಾರಿ ನಾವು 'ಜೀತ್ ಕಾ ಚೌಕಾ'ವನ್ನು ಹೊಡೆಯಲಿದ್ದೇವೆ... ಮೊದಲು 2014 ರಲ್ಲಿ, ನಂತರ 2017, 2019, ಮತ್ತು ಈಗ 2022: ಬಹ್ರೈಚ್‌ನಲ್ಲಿ ಪ್ರಧಾನಿ ಮೋದಿ

February 22nd, 04:00 pm

ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಸಾರ್ವಜನಿಕ ಸಭೆಯಲ್ಲಿ ಭಾರೀ ಜನಸ್ತೋಮವನ್ನು ಕಂಡು ಹರ್ಷ ವ್ಯಕ್ತಪಡಿಸಿದ ಪ್ರಧಾನಿ ಮೋದಿ, “ನೀವು ಬಿಜೆಪಿಯನ್ನು ಆಶೀರ್ವದಿಸಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ, ಈ ಬಾರಿ ನಾವು ‘ಜೀತ್ ಕಾ ಚೌಕ’ವನ್ನು ಹೊಡೆಯಲಿದ್ದೇವೆ... ಮೊದಲು 2014 ರಲ್ಲಿ, ನಂತರ 2017, 2019, ಮತ್ತು ಈಗ 2022. ಯುಪಿಯ ಜನರು 'ಪರಿವಾರವಾದಿಗಳನ್ನು' ತಿರಸ್ಕರಿಸಲು ನಿರ್ಧರಿಸಿದ್ದಾರೆ.

ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ವಿಶಾಲ ಜನಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

February 22nd, 03:59 pm

ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಸಾರ್ವಜನಿಕ ಸಭೆಯಲ್ಲಿ ಭಾರೀ ಜನಸ್ತೋಮವನ್ನು ಕಂಡು ಹರ್ಷ ವ್ಯಕ್ತಪಡಿಸಿದ ಪ್ರಧಾನಿ ಮೋದಿ, “ನೀವು ಬಿಜೆಪಿಯನ್ನು ಆಶೀರ್ವದಿಸಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ, ಈ ಬಾರಿ ನಾವು ‘ಜೀತ್ ಕಾ ಚೌಕ’ವನ್ನು ಹೊಡೆಯಲಿದ್ದೇವೆ... ಮೊದಲು 2014 ರಲ್ಲಿ, ನಂತರ 2017, 2019, ಮತ್ತು ಈಗ 2022. ಯುಪಿಯ ಜನರು 'ಪರಿವಾರವಾದಿಗಳನ್ನು' ತಿರಸ್ಕರಿಸಲು ನಿರ್ಧರಿಸಿದ್ದಾರೆ.

ಭಾರತ ಬೆಳೆದಾಗ ಜಗತ್ತು ಬೆಳೆಯುತ್ತದೆ, ಭಾರತ ಸುಧಾರಿಸಿದಾಗ ಜಗತ್ತು ಬದಲಾಗುತ್ತದೆ: ಪ್ರಧಾನಿ ಮೋದಿ

September 25th, 06:31 pm

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76 ನೇ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ತನ್ನ ಹೇಳಿಕೆಯಲ್ಲಿ , ಪ್ರಧಾನಿ ಮೋದಿ ಕೋವಿಡ್ -19 ಸಾಂಕ್ರಾಮಿಕ, ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆಯಿಂದ ಉಂಟಾದ ಜಾಗತಿಕ ಸವಾಲುಗಳ ಬಗ್ಗೆ ಗಮನಹರಿಸಿದರು. ಸಾಂಕ್ರಾಮಿಕ ರೋಗದ ವಿರುದ್ಧ ಜಾಗತಿಕ ಹಂತದಲ್ಲಿ ಭಾರತ ವಹಿಸಿದ ಪಾತ್ರವನ್ನು ಅವರು ಎತ್ತಿ ತೋರಿಸಿದರು ಮತ್ತು ಭಾರತದಲ್ಲಿ ಲಸಿಕೆಗಳನ್ನು ತಯಾರಿಸಲು ಜಗತ್ತನ್ನು ಆಹ್ವಾನಿಸಿದರು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

September 25th, 06:30 pm

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76 ನೇ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ತನ್ನ ಟೀಕೆಗಳಲ್ಲಿ, ಪ್ರಧಾನಿ ಮೋದಿ ಕೋವಿಡ್ -19 ಸಾಂಕ್ರಾಮಿಕ, ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆಯಿಂದ ಉಂಟಾದ ಜಾಗತಿಕ ಸವಾಲುಗಳ ಬಗ್ಗೆ ಗಮನಹರಿಸಿದರು. ಸಾಂಕ್ರಾಮಿಕ ರೋಗದ ವಿರುದ್ಧ ಜಾಗತಿಕ ಹಂತದಲ್ಲಿ ಭಾರತ ವಹಿಸಿದ ಪಾತ್ರವನ್ನು ಅವರು ಎತ್ತಿ ತೋರಿಸಿದರು ಮತ್ತು ಭಾರತದಲ್ಲಿ ಲಸಿಕೆಗಳನ್ನು ತಯಾರಿಸಲು ಜಗತ್ತನ್ನು ಆಹ್ವಾನಿಸಿದರು.

ಮಹತ್ವಾಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮಕ್ಕೆ ಯುಎನ್‌ಡಿಪಿ ವರದಿ ಶ್ಲಾಘನೆ, ವಿಶ್ವದ ಇತರ ಭಾಗಗಳಲ್ಲೂ ಅನುಷ್ಠಾನಕ್ಕೆ ಶಿಫಾರಸು

June 11th, 07:21 pm

ಇಂದು ಬಿಡುಗಡೆಯಾದ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಸ್ವತಂತ್ರ ಮೌಲ್ಯಮಾಪನ ವರದಿಯು, ಭಾರತದ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮವನ್ನು (ಎಡಿಪಿ) 'ಸ್ಥಳೀಯ ಪ್ರದೇಶ ಅಭಿವೃದ್ಧಿಯ ಅತ್ಯಂತ ಯಶಸ್ವಿ ಮಾದರಿ' ಎಂದು ಶ್ಲಾಘಿಸಿದೆ. ಹಲವಾರು ಕಾರಣಗಳಿಂದಾಗಿ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮಾನತೆಗಳಿರುವ ಹಲವಾರು ದೇಶಗಳು ಈ ಮಾದರಿಯನ್ನು ಅಳವಡಿಸಿಕೊಳ್ಳಬಹುದು ಎಂದೂ ವರದಿ ಹೇಳಿದೆ.

ಅಸ್ಸಾಂನ ಸೋನಿತ್ಪುರ್ ಜಿಲ್ಲೆಯಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ವೇಳೆ ಪ್ರಧಾನಿ ಭಾಷಣ

February 07th, 11:41 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಸ್ಸಾಂನಲ್ಲಿ ಎರಡು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಶಂಕುಸ್ಥಾಪನೆ ಮತ್ತು ಸೋನಿತ್ಪುರ್ ಜಿಲ್ಲೆಯ ದೇಕೈಜುಲಿಯ ಪ್ರಮುಖ ಜಿಲ್ಲಾ ರಸ್ತೆಗಳು ಮತ್ತು ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವ ‘ಅಸೋಮ್ ಮಾಲಾ’ಗೆ ಚಾಲನೆ ನೀಡಿದರು. ಅಸ್ಸಾಂ ಮುಖ್ಯಮಂತ್ರಿ ಶ್ರೀ ಸರ್ಬಾನಂದ ಸೋನೋವಾಲ್, ಕೇಂದ್ರ ಸಚಿವ ಶ್ರೀ ರಾಮೇಶ್ವರ್ ತೇಲಿ, ಅಸ್ಸಾಂ ಸರ್ಕಾರದ ಸಚಿವರೇ ಮತ್ತು ಬೋಡೋಲ್ಯಾಂಡ್ ಭೌಗೋಳಿಕ ಪ್ರದೇಶ ಮಂಡಳಿಯ ಮುಖ್ಯಸ್ಥ ಶ್ರೀ ಪ್ರಮೋದ್ ಬೊರೊ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಸ್ಸಾಂನಲ್ಲಿ ಎರಡು ಆಸ್ಪತ್ರೆಗಳಿಗೆ ಶಂಕುಸ್ಥಾಪನೆ ಮತ್ತು ‘ಅಸೋಮ್ ಮಾಲಾ’ಗೆ ಪ್ರಧಾನಿ ಚಾಲನೆ

February 07th, 11:40 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಸ್ಸಾಂನಲ್ಲಿ ಎರಡು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಶಂಕುಸ್ಥಾಪನೆ ಮತ್ತು ಸೋನಿತ್ಪುರ್ ಜಿಲ್ಲೆಯ ದೇಕೈಜುಲಿಯ ಪ್ರಮುಖ ಜಿಲ್ಲಾ ರಸ್ತೆಗಳು ಮತ್ತು ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವ ‘ಅಸೋಮ್ ಮಾಲಾ’ಗೆ ಚಾಲನೆ ನೀಡಿದರು. ಅಸ್ಸಾಂ ಮುಖ್ಯಮಂತ್ರಿ ಶ್ರೀ ಸರ್ಬಾನಂದ ಸೋನೋವಾಲ್, ಕೇಂದ್ರ ಸಚಿವ ಶ್ರೀ ರಾಮೇಶ್ವರ್ ತೇಲಿ, ಅಸ್ಸಾಂ ಸರ್ಕಾರದ ಸಚಿವರೇ ಮತ್ತು ಬೋಡೋಲ್ಯಾಂಡ್ ಭೌಗೋಳಿಕ ಪ್ರದೇಶ ಮಂಡಳಿಯ ಮುಖ್ಯಸ್ಥ ಶ್ರೀ ಪ್ರಮೋದ್ ಬೊರೊ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಧ್ಯಪ್ರದೇಶದ ಬೀದಿ ಬದಿ ವ್ಯಾಪಾರಿಗಳೊಂದಿಗೆ ಪ್ರಧಾನಮಂತ್ರಿಯವರ ಸಂವಾದದ ಕನ್ನಡ ರೂಪಾಂತರ

September 09th, 11:01 am

ನನ್ನ ಸಚಿವ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಹರ್ದೀಪ್ ಸಿಂಗ್ ಪುರಿ ಅವರೇ, ಮಧ್ಯಪ್ರದೇಶ ಮುಖ್ಯಮಂತ್ರಿ ಸೋದರ ಶಿವರಾಜ್ ಅವರೇ, ರಾಜ್ಯ ಸಚಿವ ಸಂಪುಟದ ಇತರ ಸದಸ್ಯರೇ ಆಡಳಿತಕ್ಕೆ ಸೇರಿದ ಇತರ ಸದಸ್ಯರೇ, ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಎಲ್ಲ ಫಲಾನುಭವಿಗಳೇ ಮತ್ತು ಮಧ್ಯಪ್ರದೇಶ ಮತ್ತು ಮಧ್ಯಪ್ರದೇಶದ ಹೊರಗಿನಿಂದ ಇದರಲ್ಲ ಪಾಲ್ಗೊಂಡಿರುವ ನನ್ನ ಪ್ರೀತಿಯ ಸೋದರ ಮತ್ತು ಸೋದರಿಯರೇ..

ಮಧ್ಯಪ್ರದೇಶದ ಬೀದಿ ಬದಿ ವ್ಯಾಪಾರಿಗಳೊಂದಿಗೆ ‘ಸ್ವನಿಧಿ ಸಂವಾದ’ ನಡೆಸಿದ ಪ್ರಧಾನಿ

September 09th, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಬೀದಿ ಬದಿ ವ್ಯಾಪಾರಿಗಳೊಂದಿಗೆ ಸ್ವನಿಧಿ ಸಂವಾದ ನಡೆಸಿದರು. ಭಾರತ ಸರ್ಕಾರ, ಕೋವಿಡ್ 19ರಿಂದ ಬಾಧಿತರಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ಜೀವನೋಪಾಯ ಪುನಾರಂಭಿಸಲು ನೆರವಾಗುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯನ್ನು 2020ರ ಜೂನ್ 1ರಂದು ಆರಂಭಿಸಿದೆ. 4.5 ಲಕ್ಷ ಬೀದಿ ಬದಿ ವ್ಯಾಪಾರಿಗಳು ಮಧ್ಯಪ್ರದೇಶದಲ್ಲಿ ನೋಂದಾಯಿಸಿಕೊಂಡಿದ್ದು, ಸುಮಾರು 1.4 ಲಕ್ಷ ಬೀದಿ ಬದಿ ವ್ಯಾಪಾರಿಗಳನ್ನು ಅನುಮೋದಿಸಿ ಒಟ್ಟು 140 ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಮತ್ತೆ ಪುಟಿದೆದ್ದ ಬೀದಿ ಬದಿ ವ್ಯಾಪಾರಿಗಳ ಪ್ರಯತ್ನ ಮತ್ತು ಆತ್ಮ ವಿಶ್ವಾಸ, ದೃಢತೆ ಮತ್ತು ಕಠಿಣ ಪರಿಶ್ರಮವನ್ನು ಶ್ಲಾಘಿಸಿದರು.

Inspired by Pt. Deendayal Upadhyaya, 21st century India is working for Antyodaya: PM Modi

February 16th, 01:01 pm

PM Modi unveiled the statue of Deendayal Upadhyaya in Varanasi. He flagged off the third corporate train Mahakaal Express which links 3 Jyotirling Pilgrim Centres – Varanasi, Ujjain and Omkareshwar. The PM also inaugurated 36 development projects and laid foundation stone for 14 new projects.

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸ್ಮಾರಕ ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಮಂತ್ರಿ

February 16th, 01:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಾರಣಾಸಿಯಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸ್ಮಾರಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ದೀನ್ ದಯಾಳ್ ಉಪಾಧ್ಯಾಯ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಪ್ರಧಾನಿ ಅವರು, ವಾರಣಾಸಿ, ಉಜ್ಜಯನಿ ಮತ್ತು ಓಂಕಾರೇಶ್ವರದಲ್ಲಿರುವ ಮೂರು ಜ್ಯೋತಿರ್ಲಿಂಗ ಯಾತ್ರಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಮೂರನೇ ಕಾರ್ಪೊರೇಟ್ ರೈಲು ‘ಮಹಾಕಾಲ ಎಕ್ಸ್ ಪ್ರೆಸ್ ರೈಲಿ’ಗೆ ಹಸಿರು ನಿಶಾನೆ ತೋರಿದರು. ಪ್ರಧಾನಿ ಅವರು, 430 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ಸೇರಿದಂತೆ 36 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು 14 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿದರು.

ಬಿಜೆಪಿ ಸರ್ಕಾರ ಸದಾ ಬಡವರು ಮತ್ತು ಮಹಿಳೆಯರ ಏಳಿಗೆಗಾಗಿ ಕೆಲಸ ಮಾಡುತ್ತಿದೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

February 04th, 03:09 pm

ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದ್ವಾರಕದಲ್ಲಿಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬೃಹತ್ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ದೆಹಲಿಯ ಜನ ಬಿಜೆಪಿಯ ಪರ ಇದ್ದಾರೆ ಎಂದರು. ಪ್ರತಿಪಕ್ಷಗಳು ರಾತ್ರಿ ಇಡೀ ನಿದ್ದೆ ಮಾಡುತ್ತಿಲ್ಲ ಎಂದು ಅವರು ಹೇಳಿದರು.

ದೆಹಲಿಯ ದ್ವಾರಕದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿದ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

February 04th, 03:08 pm

ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದ್ವಾರಕದಲ್ಲಿಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬೃಹತ್ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ದೆಹಲಿಯ ಜನ ಬಿಜೆಪಿಯ ಪರ ಇದ್ದಾರೆ ಎಂದರು. ಪ್ರತಿಪಕ್ಷಗಳು ರಾತ್ರಿ ಇಡೀ ನಿದ್ದೆ ಮಾಡುತ್ತಿಲ್ಲ ಎಂದು ಅವರು ಹೇಳಿದರು.

32 ನೇ PRAGATI ಸಂವಾದದ ಅಧ್ಯಕ್ಷತೆ ವಹಿಸಿದ ಪ್ರಧಾನ ಮಂತ್ರಿಗಳು

January 22nd, 05:36 pm

ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಇಂದು 2020 ನೇ ಸಾಲಿನ ಪ್ರಥಮ PRAGATI ಸಭೆಯ ಅಧ್ಯಕ್ಷತೆ ವಹಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒಳಗೊಂಡ, ಸಕಾಲದಲ್ಲಿ ಅನುಷ್ಠಾನ ಮತ್ತು ಸಕಾರಾತ್ಮಕ ಆಡಳಿತಕ್ಕಾಗಿ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆಯಾದ ಪ್ರಗತಿಯ ಮೂಲಕ ಪ್ರಧಾನ ಮಂತ್ರಿಗಳ 32 ನೇ ಸಂವಾದವನ್ನು ಇದು ಬಿಂಬಿಸಿತು.